ಭಾನುವಾರ, ಮಾರ್ಚ್ 30, 2025

ಭವ್ಯರಾಗಿ ಬಾಳುವರಾಗಿ

 


ಭವ್ಯರಾಗಿ ಬಾಳುವರಾಗಿ

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ I I ಪಲ್ಲವಿ I I

ಯೋಗ್ಯರಾಗಿ ಭಾಗ್ಯವಂತರಾಗಿ

ವಿಧ್ಯಾವಿನಯ ಸಂಪನ್ನರಾಗಿ

ಗುರುಹಿರಿಯರ ನಮಿಪವರಾಗಿ

ನೀತಿನಿಯಮಗಳ ಪಾಲಿಪರಾಗಿ I 1 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ನಿತ್ಯವೂ ಸತ್ಯವ ನುಡಿಯುವರಾಗಿ

ದೇಶಸೇವೆಯ ಮಾಡುವರಾಗಿ

ದೇಶದ ಧ್ವಜಕೆ ಬಾಗುವರಾಗಿ

ಬಂಧು ಮಿತ್ರರ ಕೂಡುವರಾಗಿ I 2 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ಕಾಮ ಕ್ರೋಧಗಳ ಬಿಟ್ಟವರಾಗಿ

ಭಕ್ತಿ ಮಾರ್ಗದಿ ನಡೆಯುವರಾಗಿ

ಸ್ಪೂರ್ತಿವಂತರಾಗಿ ಕೀರ್ತಿವಂತರಾಗಿ

ಗುರುಕುಲಕೆ ಹೆಸರ ತರಿಸುವರಾಗಿ I 3 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ಹಸಿದು ಬಂದವರ ಉಸಿರಾಗಿ

ಅನ್ನದಾನವ ಮಾಡುವರಾಗಿ

ಹಿಂಸೆಯ ಹಿಸುಕಿ ಬಡಿದವರಾಗಿ

ಅಹಿಂಸೆ ಮಾರ್ಗವ ಹಿಡಿದವರಾಗಿ I 4 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ಮಾಡುವ ಕೆಲಸಕೆ ನಿಷ್ಠರಾಗಿ

ಮಾತಲಿ ಎಂದೂ ಸ್ಪಷ್ಠರಾಗಿ

ದುಃಖ ದುಮ್ಮಾನಗಳ ಮೆಟ್ಟುವರಾಗಿ

ಕಷ್ಟ ಕಾರ್ಪಣ್ಯಗಳ ಸಹಿಸುವರಾಗಿ I 5 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ಏನೇ ಎತ್ತರದಿ ಕುಳಿತವರಾಗಿ

ಹೆಂಡತಿ ಮಕ್ಕಳ ಸಲಹುವರಾಗಿ

ತಂದೆ ತಾಯಿಗಳ ಸಾಕುವರಾಗಿ

ಅಭಿಮಾನಿಗಳ ಅಭಿವಂದನರಾಗಿ I 6 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ಪ್ರಾಣಿ ಪಕ್ಷಿಗಳಿಗೆ ಬಸಿರಾಗಿ

ಗಿಡ ಮರ ಬಳ್ಳಿಗೆ ಹಸಿರಾಗಿ

ವೇದಶಾಸ್ತ್ರಗಳ ಅರಿತವರಾಗಿ

ಜ್ಞಾನಭಂಡಾರದಿ ನುರಿತವರಾಗಿ I 7 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ಸಜ್ಜನ ಸಂಘವ ಮಾಡಿಪರಾಗಿ

ಸರಳತೆಯ ಸಂವರ್ಧನರಾಗಿ

ದುರಳತೆಯ ಸಂಹಾರಕರಾಗಿ

ಶಿಸ್ತು ಸಂಯಮ ಸಾಕಾರರಾಗಿ I 8 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ದೇವರ ದಯೆವುಳ್ಳವರಾಗಿ

ಭಕ್ತಿಯ ಶಕ್ತಿಯ ಕೋರುವರಾಗಿ

ಮನದ ಮದವ ತೊರೆಯುವರಾಗಿ

ತನುವಲಿ ಮುದವ ತೋರುವರಾಗಿ I 9 I

ದಿವ್ಯ ಮಂತ್ರವ ಕಲಿಸುವರಾಗಿ

ಭವ್ಯರಾಗಿ ಬಾಳುವರಾಗಿ

ಪ್ರಭಾಕರ ಶರ್ಮ ತಂದಿಹರಾಗಿ

ಎಲ್ಲರ ಆರೋಗ್ಯವರ್ಧನರಾಗಿ

ಮಾನವರಾಗಿ ಮಾನವಂತರಾಗಿ

ಪತ್ಯವೆನಿಸಿದರೆ ತಲೆಬಾಗುವರಾಗಿ I 10 I

ನಿಮ್ಮ ಬಾಗಿಲಿಗೆ ಬಂದಿಹರಾಗಿ  

ಪುರಂದರದಾಸರೆ ಬೆಳೆಸಿಹರಾಗಿ

ನಿಮ್ಮ ಬಾಗಿಲಿಗೆ ಬಂದಿಹರಾಗಿ  

ಪುರಂದರದಾಸರೆ ಬೆಳೆಸಿಹರಾಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಭವ್ಯರಾಗಿ ಬಾಳುವರಾಗಿ

  ಭವ್ಯರಾಗಿ ಬಾಳುವರಾಗಿ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ದಿವ್ಯ ಮಂತ್ರವ ಕಲಿಸುವರಾಗಿ ಭವ್ಯರಾಗಿ ಬಾಳುವರಾಗಿ I I ಪಲ್ಲವಿ I I ಯೋಗ್ಯರಾಗಿ ಭಾಗ್ಯವಂತರಾಗಿ ...