ದಾಸರ ಸಂತೆ ಬಂತಂತೆ
ರಚಕ: ಡಾ. ಪ್ರಭಾಕರ್ ಬೆಳವಾಡಿ
ಊರಿಗೆ ಬಂತೆ ದಾಸರ ಸಂತೆ
ಇಂದಿನ ಸಂತೆ ವಿಶೇಷವಂತೆ II ಪಲ್ಲವಿ II
ಇದ್ದವರೆಲ್ಲಾ ನೂರಾರು ಚಿಂತೆ
ತಪ್ಪದೆ ಸಂತೆಗೆ ಬರಬೇಕಂತೆ II ಅನುಪಲ್ಲವಿ II
ಕಾಸಿನ ಚಿಂತೆ ಕೂಸಿನ ಚಿಂತೆ
ಸತಿಪತಿ ದಂಪತಿ ಸಮ್ಮತಿ ಚಿಂತೆ II 1 II
ಪರಿವಾರ ಚಿಂತೆ ಪರಿಹಾರವಂತೆ
ದಾಸರ ದಂಡೇ ಬಂದಿಹುದಂತೆ II 2 II
ನಂದ ಮುಕುಂದನ ನೋಡುವ ಚಿಂತೆ
ಹರಿ ಗೋವಿಂದನ ಕೂಡುವ ಚಿಂತೆ II 3 II
ಎಲ್ಲಕೂ ಇಲ್ಲಿ ಔಷಧಿಯಂತೆ
ತಪ್ಪದೇ ನೀವು ಪಾಲಿಸಿದಂತೆ II 4 II
ಪುರಂದರದಾಸನ ವಿಚಾರವಂತೆ
ಕನಕದಾಸನ ಆಚಾರದಂತೆ II 5 II
ವಿಜಯವಿಠ್ಠಲನ ಸುವಿಚಾರವಂತೆ
ಗೋಪಾಲದಾಸನ ವ್ಯವಹಾರದಂತೆ II 6 II
ಸಾವಿನ ನೋವಿನ ಚಿಂತೆಗೆ ಬಂತೆ
ದಾಸ ಮಹಿಮರ ಔಷಧಿ ಕಂತೆ II 7 II
ಕಾಸಿಲ್ಲವಂತೆ ಕೊಸರಿಲ್ಲವಂತೆ
ಭಕ್ತಿಯೇ ಇಲ್ಲಿ ಪ್ರಧಾನವಂತೆ II 8 II
ದಾಸರ ಪದಗಳೇ ಸಿಹಿಮದ್ದಂತೆ
ಪ್ರಭಾಕರ ಶರ್ಮ ತಿಳಿಸಿರುವಂತೆ II ಮಂಗಳ II
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ