ಕನ್ನಡ ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 6, 2025

‘ಚಿಟ್ಟೆ ಕೊಟ್ಟ ನೀತಿ ಪಾಠ’

 


ಚಿಟ್ಟೆ ಕೊಟ್ಟ ನೀತಿ ಪಾಠ’

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ದೆ

ರಸವನು ಹೀರಲು ಚಂದದ ಹೂಗಳ ತರಿಸಿ ಜೋಡಿಸಿ ಇಟ್ಟಿದ್ದೆ

ಹಾಗೇ ಸುಮ್ಮನೆ ಮುಂಜಾನೆ ಮಂಜಲಿ ಸ್ನಾನಕೆ ಹೋಗಿದ್ದೆ

ಹಾಗೇ ಹಾರುತ ತೂರುತ ಬಣ್ಣದ ಹೂಗಳ ಕಂಡು ಬಂದಿದ್ದೆ

ಅಂದದ ಚಿಟ್ಟೆ ಚೆಂದದ ಚಿಟ್ಟೆ ಹೇಳೇ ಸುಮ್ಮನೆ ಏತಕೆ ಹೋಗಿದ್ದೆ

ನಿನ್ನನು ತೋರಿಸೆ ನಲಿಯುವ ಮಕ್ಕಳ ಕರೆದು ಕೂರಿಸಿ ಬಿಟ್ಟಿದ್ದೆ

ಪಕ್ಕದ ಚಲುವೆಯ ಸುಂದರ ವನಕೆ, ನಾನು ಮಾರು ಹೋಗಿದ್ದೆ

ಗಿಡದಲಿ ಬಿಟ್ಟಿಹ ತಾಜಾ ಹೂವಿನ ರಸವನು ಸವಿಯಲು ಬಯಸಿದ್ದೆ

ಓಹೋ ಚಿಟ್ಟೆ ಹೌದೇ ಚಿಟ್ಟೆ ಮಕ್ಕಳ ಕೂಡಿ ನಾನೂ ಅಲ್ಲಿಗೆ ಬರುತಿದ್ದೆ

ಗೆಳತಿಯ ಸಂಗಡ ಕುಣಿಯುತ ನಲಿಯುತ, ನಾನು ತಿಳಿಸಲು ಮರೆತಿದ್ದೆ

ಹೌದೇ, ಚಿಟ್ಟೆ ರಂಗಿನ ಬಟ್ಟೆ, ಬೇಗನೇ ಹೇಳೇ, ಇನ್ನೇನು ಮಾಡಿದ್ದೆ

ಹೊರಗೇ ಹಾರುತ, ಬಳಗವ ಸೇರಿ ಗೆಳೆಯರ ಕೂಡಿ ಹಾಡನು ಹಾಡಿದ್ದೆ

ರೆಕ್ಕೆಯ ಬಡಿದು ಮೇಲಕೆ ಏರಿ ನೀಲಿಯ ಬಾನಲಿ ನೃತ್ಯವ ಮಾಡಿದ್ದೆ

ಬಳಗವ ತೊರೆದ, ಗೆಳೆಯರ ಕಾಣದ, ನಿಮ್ಮನು ನೋಡಿ ಬೇಸರ ಪಟ್ಟಿದ್ದೆ

ಜಾಣ ಚಿಟ್ಟೆಯ ನೀತಿಯ ಪಾಠವ ಕೇಳುತ, ನಾನೂ ಬದಲಾಗಿ ಹೋಗಿದ್ದೆ

ಬಳಗವ ಕರೆದು ಗೆಳೆಯರ ಸೆಳೆದು ಹಾಡುತ ಪಾಡುತ ನಲಿವುದ ಕಲಿತಿದ್ದೆ.

ಸೋಮವಾರ, ಏಪ್ರಿಲ್ 21, 2025

“ತಾನನ ತನಾ ಬಾಳು ನಂದನ”

 

“ತಾನನ ತನಾ ಬಾಳು ನಂದನ”

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಅಂಬಿಕಾತನಯದತ್ತ

ನಾ ಬರೆದೇನ ಮತ್ತ

ಎತ್ತ ಬೇಡ ನೀ ಬೆತ್ತ

ಎಲ್ಲಾ ನಿನ್ನದೇ ಚಿತ್ತ

ತಾನನ ತನಾ ಬಾಳು ನಂದನ

 

ನಾನು ವರ ನೀನು ವಧು

ನಾನು ಮೆದು ನೀನು ಮೃದು

ಅರಿತು ಬಾಳೋಣ

ಬೆರೆತು ಆಡೋಣ

ತಾನನ ತನಾ ಬಾಳು ನಂದನ

 

 

ನಾನು ಗಿಣ್ಣು ನೀನು ಹಣ್ಣು  

ಮೆದ್ದು ನೋಡು ಬಾ

ನಾನು ಉಣ್ಣೆ ಸೀತ ಹೆಣ್ಣೆ

ಹೊದ್ದು ನೋಡು ಬಾ

ತಾನನ ತನಾ ಬಾಳು ನಂದನ

 

 

ನಾನು ಗಿಡ ನೀನು ಬುಡ

ನೀರ ಹರಿಸೆ ಬಾ

ನಾನು ತಾಟು ನೀನು ಸೌಟು

ಊಟ ಬಡಿಸೆ ಬಾ

ತಾನನ ತನಾ ಬಾಳು ನಂದನ

 

 

ನಾನು ಘಮ ನೀನು ಸುಮ

ಜಗವ ರಮಿಸೆ ಬಾ

ನಾನು ಜಡೆ ನೀನು ಬಿಡೆ   

ಮಾಲೆ ಮುಡಿಸೆ ಬಾ

ತಾನನ ತನಾ ಬಾಳು ನಂದನ

 

ನಾನು ನಾರಿ ನೀನು ಸೀರಿ

ಉಡಿಸಿ ತೊಡಿಸೆ ಬಾ

ನಾನು ಹಾಲು ನೀನು ಜೇನು

ಬೆರೆಸಿ ತಣಿಸೆ ಬಾ

ತಾನನ ತನಾ ಬಾಳು ನಂದನ

Let The Earth Breathe

  [ Folk Tune Adaptation] [“Let the Earth Breathe”] [Dr Belavadi Prabhakar] [Refrain (Chorus)] Let the earth breathe, let the earth ...