"ಹುಣ್ಣಿಮೆಯ ಮಂದಹಾಸ"
ಕರ್ತೃ ಡಾ. ಪ್ರಭಕಾರ Belavadi
ಚಂದಿರ ನಗುತ ಪಯಣ
ಮಾಡಿದರೆ,
ಆಗಸದ ತಾರೆಗಳು ಮಿಡಿದು ನೃತ್ಯ ಮಾಡಿದವೆ,
ರವಿ ಜಾರಿ ಗೋಧೂಳಿ ಸ್ಪರ್ಶಿಸಿದರೆ,
ಜನಪದ ಹಾಡು ಮನದ ಹೊಳೆಯಲ್ಲಿ ಹರಿದವೆ.
ಮೋಡವೆಂಬ ಪರದೆ ತಾನೇ
ಸರಿದರೆ,
ಕರತಾಡನ ಚಂದಿರನ ಮುಟ್ಟಿದವೆ,
ಮಧುಚಂದ್ರದ ನರ್ತನಕೆ,
ಹೃದಯ ಹಾಕಿದ ತಾಳ!"
"ಮನೋಲ್ಲಾಸಕೆ ಹಾಕಿದ ಗಾಳ,
ಅಗೋ ತಾಳಕ್ಕೆ ತಕ್ಕ ಹಿಮ್ಮೇಳ!"
