ಶ್ರೀ ವರಸಿದ್ಧಿ ವಿನಾಯಕ ಪೂಜಾ ವಿಧಾನ (ಸರಳ ಹಾಗೂ ಸೂಕ್ತ ಮಾರ್ಗದರ್ಶನದೊಂದಿಗೆ )
ಪೂಜೆಗೆ ಸಿದ್ದತೆಗಳು :
ಪೂಜೆಗೆ ಆಡಂಬರ, ಪ್ರದರ್ಶನಗಳಿಗಿಂತ ಮುಖ್ಯವಾಗಿ ನಿಷ್ಥೆ, ಭಕ್ತಿ
ಪ್ರಾಧಾನ್ಯ. ಜೊತೆಗೆ ನಿರ್ವಿಘ್ನವಾಗಿ ನಡೆಸುವುದೂ ಅತ್ಯಮೂಲ್ಯ .ಆದ್ದರಿಂದ ಸಕಲ
ಸಿದ್ದತೆಗಳನ್ನೂ ಮುಂಚೆಯೇ ಮಾಡಿಕೊಳ್ಳುವುದು
ಅನಿವಾರ್ಯ. ಇದರಿಂದ ಸುಗುಮವಾಗಿ ಕಾರ್ಯ ನಡೆಯುವುದು. ಕಾಲ ಹಾಗೂ
ಪ್ರದೇಶಕ್ಕನುಗುಣವಾಗಿ ಪೂಜಾ ದ್ರವ್ಯಗಳನ್ನು
ಬಳಸಲೇಬೇಕಾದರೂ, ಕೆಲವು ವೈದಿಕ ಮಂತ್ರಗಳು ಜೊತೆಗೆ ಪದ್ದತಿಗಳು ನಮ್ಮ ಸಂಸ್ಕೃತಿಗೆ ಶೋಭೆಯನ್ನು ತರುತ್ತವೆ.
ಆಯಾ ವೇದ, ಗೋತ್ರ, ಮನೆತನದ
ಸಂಪ್ರದಾಯ ಸ್ವಲ್ಪ ವಿಭಿನ್ನವಾದರೂ ಬಹಳಷ್ಟು ಅನುಕರಣೆಗಳು ಸಾಮಾನ್ಯವಾಗಿ ಒಂದೇ ಆಗಿರುತ್ತವೆ.
ಸ್ನಾನ, ಸಂಧ್ಯಾವಂದನೆ ಮುಗಿಸಿ, ಹಣೆಗೆ ಕುಂಕುಮವನ್ನು ಇಟ್ಟುಕೊಂಡು ಶುಬ್ರವಾದ ವಸ್ತ್ರಗಳನ್ನು ಧರಿಸಿ ಪೂಜಾ ಮಂಟಪವನ್ನು ಸ್ವಚ್ಚವಾದ ಬಟ್ಟೆಯಲ್ಲಿ ವರೆಸಿ ಅದರ
ಮೇಲೆ ಅಕ್ಕಿ ಅಥವಾ ಗೋಧಿಯನ್ನು ಹರಡಿ ಕಳಶ ಮತ್ತು ದೇವತಾ ಮೂರ್ತಿಯನ್ನು ಇಟ್ಟುಕೊಳ್ಳಬೇಕು.
ಸಲಕರಣೆಗಳು
- ಅರಿಶಿನ
- ಕುಂಕುಮ
- ಮಂತ್ರಾಕ್ಷತೆ
- ಚಂದನ
- ಗಂಧ
- ತಟ್ಟೆಗಳು
- ಉದ್ಧರಣೆ (ಪಂಚಪಾತ್ರೆ)
- ಅರ್ಘ್ಯ
ಪಾತ್ರೆ
- ಕಳಶದ
ಚಂಬುಗಳು
- ಕುಳಿತುಕೊಳ್ಳಲು
ಮಣೆ ಅಥವಾ ಚಾಪೆ ಅಥವಾ
ಮ್ಯಾಟು
- ಹಸುವಿನ ಹಸಿ ಹಾಲು
- ಬೆಣ್ಣೆ
ಕಾಯಿಸಿದ ತುಪ್ಪ (ಹಸುವಿನಿನ ಹಾಲಿನಿಂದ ತಯಾರಿಸಿದ್ದಾದರೆ ಉತ್ತಮ)
- ಮೊಸರು
- ದೀಪದ
ಎಣ್ಣೆ
- ಸಕ್ಕರೆ
- ಜೇನುತುಪ್ಪ
- ಪಂಚಾಮೃತ (ಮೇಲೆ
ತೋರಿಸಿದ ಹಾಲು,ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ ಇವುಗಳನ್ನು ಸ್ವಲ್ಪ ಸ್ವಲ್ಪ ಪ್ರತ್ಯೇಕವಾಗಿ ಮಿಶ್ರಣ
ಮಾಡಿಮಾಡಿಟ್ಟುಕೊಳ್ಳುವುದು)
- ತೆಂಗಿನ ಕಾಯಿನ
ಎಳನೀರು
- ಗೆಜ್ಜೆವಸ್ತ್ರ
ಜೊತೆ
- ಮೂರೆಳೆ
ಜನಿವಾರ
- ಕರ್ಪೂರ
- ಮಾವಿನ ಎಲೆ , ಬಾಳೆ ಕಂಬ ,
ತೋರಣ, ಮಂಟಪದ ಅಲಂಕಾರಿಕ ವಸ್ತುಗಳು
- ವೀಳ್ಯದ
ಎಲೆ
- ಅಡಿಕೆ
- ಅಗರಬತ್ತಿ/ಊದುಬತ್ತಿ
- ಪರಿಮಳ ದ್ರವ್ಯ
- ವಿವಿಧ
ಬಗೆಯ ಬಿಡಿ ಹೂವುಗಳು ಮತ್ತು ಎರಡು ಹೂಮಾಲೆ ,
- ಕನಿಷ್ಠ ೨೧
ಗರಿಕೆ ಹುಲ್ಲು (ಹುಟ್ಟುತ್ತಿರುವ ಮರಿ ಹುಲ್ಲು)
- ಪತ್ರೆಗಳು
(ವಿವಿಧ ರೀತಿಯ ಎಲೆಗಳು) , ತುಳಸಿ ದಳಗಳು ಇರಲೇ ಬೇಕು .
- ತುಪ್ಪದಲ್ಲಿ
ನೆನೆಸಿದ ಹತ್ತಿಯ ಬತ್ತಿಗಳು
(ಕೆಲವು ಮೂರು ,ಕೆಲವು ಐದು ಜೋಡಿಯಾಗಿ)
- ತಿಳಿನೀರಿನಲ್ಲಿ
ಕುಂಕುಮ/ಅರಿಶಿನ ಕದಡಿ
ಆರತಿಗೆ ಇಟ್ಟುಕೊಳ್ಳಿ
- ತೆಂಗಿನಕಾಯಿ
- ಬಾಳೆಹಣ್ಣು
ಸಾಕಷ್ಟು
- ಖರ್ಜೂರ
- ದ್ರಾಕ್ಷಿ
- ಐದು ರೀತಿಯ
ಹಣ್ಣುಗಳು
- ಬಾಳೆ ಎಲೆ
- ದಕ್ಷಿಣೆ
- ದೀಪದ
ಕಂಬಗಳು
- ಕಡ್ಡಿ
ಪೆಟ್ಟಿಗೆ
- ಗಣೇಶನ
ಮಣ್ಣಿನ ಪ್ರತಿಮೆ (ಚಿಕ್ಕದಾದರು
ಭಿನ್ನವಾಗಿರಬಾರದು) ಅಥವಾ ನಿಮ್ಮ
ಮನೆಯ ಪದ್ದತಿಯಂತೆ
- ಇಪ್ಪತ್ತೊಂದು ಎಳೆ ಮತ್ತು
ಇಪ್ಪತ್ತೊಂದು ಹಿಡಿಯ ಹತ್ತಿಯ ಅಲಂಕಾರಿಕ ಹಾರ
- ಮೋದಕ ೨೧
- ಘಂಟೆ
- ಶುದ್ಧವಾದ
ನೀರು
- ಮಹಾ
ನೈವೇದ್ಯಕ್ಕೆ ವಿವಿಧ
ಬಗೆಯ ಭಕ್ಷ್ಯಗಳು ( ಚಕ್ಲಿ, ಕರಗಡಬು, ಚಿಗಳಿ ,ತಂಬಿಟ್ಟು, ಪಾಯಸ ಜೊತೆಗೆ
ವಿವಿಧ ಭಕ್ಷ್ಯಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ – ಕನಿಷ್ಠ ಐದು ತರಹ )
- ಪುಟ್ಟ ಬೆಳ್ಳಿಯ ಗಣೇಶನ
ವಿಗ್ರಹ ಮತ್ತು ಅದನ್ನಿಡಲು ತಟ್ಟೆ
- ಅನುಕೂಲವಿದ್ದರೆ ವಿಗ್ರಹಕ್ಕೆ
ಹಾಕಲು ಬಂಗಾರದ ಸರ
- ಹಲಗಾರತಿ
- ಉಪಾಯನ
ದಾನಕ್ಕೆ ಅಕ್ಕಿ, ತೆಂಗಿನಕಾಯಿ 2, ವೀಳ್ಯದೆಲೆ,ಅಡಿಕೆ, ದಕ್ಷಿಣೆ, ಮುಚ್ಚಲು ಬಾಳೆ ಎಲೆ
ಅಥವಾ ತಟ್ಟೆ .
- ರಂಗೋಲಿ
ದೀಪ ಸ್ಥಾಪನಾ (ದೀಪದ ಕಂಬಗಳಲ್ಲಿ ಹೂಬತ್ತಿಯನ್ನು ಇಟ್ಟು ಎಣ್ಣೆಯನ್ನು ಹಾಕಿ ಮೊದಲು ಬಲ ಭಾಗದ ದೀಪವನ್ನು ಹಚ್ಚುವುದು)
ಧ್ಯಾನ (ಕೈ ಮುಗಿದುಕೊಂಡಿರುವುದು)
ಅಥ ದೇವಸ್ಯ ವಾಮ ಭಾಗೇ ದೀಪ ಸ್ಥಾಪನಂ ಕರಿಷ್ಯೇ,
ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ.
ದೀಪೇನ
ಸಾಧ್ಯತೇ ದೀಪಂ ದೀಪಂ
ನಮೋಸ್ತುತೇ.
ಶುಭಂ ಭವತು ಕಲ್ಯಾಣಿ ಆರೋಗ್ಯಂ ಧನ ಸಂಪದಃ.
ಶತೃ ಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೇ.
(ಸೂಚನೆ
: ಪೂಜಾ ವಿಧಿ ಮುಗಿಯುವವೆರೆಗೂ ಮಂಟಪದ ಮುಂದಿನ ದೀಪಗಳು ಉರಿಯುತ್ತಿರಬೇಕು . ಆದ್ದರಿಂದ ಮಧ್ಯೇ ಮಧ್ಯೇ ಅದಕ್ಕೆ ಎಣ್ಣೆ ಹಾಕುತ್ತಾ ಇರುವುದು)
ಪೂಜೆಗೆ
ಸೂಕ್ತ ಸಮಯದ ಘೋಷಣೆ
ತದೇವ ಲಗ್ನಂ ಸುದಿನಂ ತದೇವ, ತಾರಾಬಲಂ ಚಂದ್ರಬಲಂ ತದೇವ,
ವಿದ್ಯಾಬಲಂ, ದೈವಬಲಂ ತದೇವ ಲಕ್ಷ್ಮೀಪತೇ, ತೇoಘ್ರೀಯುಗಂ
ಸ್ಮರಾಮಿ.
ಘಂಟಾರ್ಚನೆ (ಘಂಟೆಗೆ ಒಂದು ಉದ್ದರಣೆ ನೀರನ್ನು ಸಿಂಪಡಿಸಿ, ಗಂಧವನ್ನಿಟ್ಟು ನಾದವನ್ನು
ಮಾಡುತ್ತಾ ಈ ಶ್ಲೋಕ ಹೇಳುವುದು)
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ.
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ.
ಇತಿ ಘಂಟಾನಾದಂ ಕೃತ್ವಾ.
ಅಪಸರ್ಪಂತು ತೇ ಭೂತಾ ಯೇ ಭೂತಾ, ಭೂಮಿ ಸಂಸ್ಥಿತಾಃ
ಯೇ ಭೂತಾ, ವಿಘ್ನ ಕರ್ತಾರಃ ತೇ ನಶ್ಯಂತು ಶಿವಾಜ್ನಯಾ.
ಅಪಕ್ರಾಮಂತು ಭೂತಾಧ್ಯಾಃ ಸರ್ವೇತೇ ಭೂಮಿಭಾರಕಾಃ
ಸರ್ರ್ವೇಷಾಮ ವಿರೋಧೇನಾ ದೇವಕರ್ಮಸಮಾರಭೇ.
ಪೃಥಿವ್ಯಾಃ ಮೇರುಪೃಷ್ಟ ಋಷಿಃ, ಕೂರ್ಮೊದೇವತಾಃ
ಸುತಲಂಛಂದಃ.
ಸಕಲ ಪೂಜಾರ್ಥೆ ಅಕ್ಷತಾಂ ಸಮರ್ಪಯಾಮಿ.
(ಸ್ವಲ್ಪ ಅಕ್ಷತೆಯನ್ನು ಘಂಟೆಗೆ ಪೂಜಿಸುವುದು)
ಸರ್ವ ದೇವತಾ ಪ್ರಾರ್ಥನೆ (ನಿಮ್ಮ ಮನೆ ದೇವರ ಮುಂದೆ ಕೈ ಮುಗಿದು ನಿಂತುಕೊಂಡು
ಪ್ರಾರ್ಥನೆ ಮಾಡಿ)
ಓಂ ಶ್ರೀಮಾನ್ ಮಹಾಗಣಾಧಿಪತೆಯೇ ನಮಃ, ಓಂ ಶ್ರೀ
ಸರಸ್ವತ್ಯೈ ನಮಃ,
ಓಂ ಶ್ರೀ ವೇದಾಯ ನಮಃ,
ಓಂ ವೇದ ಪುರುಷಾಯ
ನಮಃ,
ಓಂ ಇಷ್ಟ ದೇವತಾಭ್ಯೋ ನಮಃ, ಓಂ ಕುಲ ದೇವತಾಭ್ಯೋ ನಮಃ,
ಓಂ ಸ್ಥಾನ ದೇವತಾಭ್ಯೋ ನಮಃ, ಓಂ ಗ್ರಾಮ ದೇವತಾಭ್ಯೋ ನಮಃ,
ಓಂ ಪ್ರಾಣ ದೇವತಾಭ್ಯೋ ನಮಃ, ಓಂ ಮಾತಾ ಪಿತೃಭ್ಯಾo ನಮಃ,
ಓಂ ಸರ್ವೇಭ್ಯೋ ಶ್ರೀ ಗುರುಭ್ಯೋ ನಮಃ, ಓಂ ಸರ್ವೇಭ್ಯೋ
ಬ್ರಾಹ್ಮಣೇಭ್ಯೋ ನಮಃ,
ಓಂ ಸರ್ವೇಭ್ಯೋ
ದೇವೇಭ್ಯೋ ನಮೋ ನಮಃ, ಯೇತದ್ಕರ್ಮ ಪ್ರಧಾನ ದೇವತಾಭ್ಯೋ ನಮಃ,
ಪ್ರಾರಂಭ ಕಾರ್ಯಂ ನಿರ್ವಿಘ್ನಮಸ್ತು,
ಶುಭಂ
ಶೋಭನಮಸ್ತು, ಇಷ್ಠದೇವತಾ ಕುಲದೇವತಾ ಸುಪ್ರಸನ್ನಾ ವರದಾ ಭವತು, ಅನುಜ್ಞಾಂ ದೇಹಿ. ಅವಿಘ್ನಮಸ್ತುಃ.
ಸುಮುಖಶ್ಚ ಏಕದಂತಶ್ಚ ಕಪಿಲೋ ಗಜಕರ್ಣಕಃ,
ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ.
ಧೂಮ್ರಕೇತುರ್ ಗಣಾಧ್ಯಕ್ಷೋ ಬಾಲಚಂದ್ರೋ ಗಜಾನನಃ,
ದ್ವಾದಶೈತಾನಿ ನಾಮಾನಿ ಪಠೇಥ್ ಶ್ರುಣು ಯಾದಪಿ
ವಿಧ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ,
ಸಂಗ್ರಾಮೇ ಸಂಕಟೇಚೈವ ವಿಘ್ನಃ ತಸ್ಯ ನಜಾಯತೇ .
ಶುಕ್ಲಾoಭರಧರಂ ದೇವಂ ಶಶಿವರ್ಣಂ ಚತುರ್ಭುಜಂ,
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತೆಯೇ.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ,
ಶರಣ್ಯೇ
ತ್ರಯಂಬಕೇ ದೇವೀ ನಾರಾಯಣೀ ನಮೋಸ್ತುತೇ
ಸರ್ವದಾ ಸರ್ವ ಕಾರ್ಯೇಷು ನಾಸ್ತಿ ತೇಷಾಂ ಅಮಂಗಲಂ, ಯೇಷಾಂ
ಹೃದಿಸ್ಥ್ಯೋ ಭಗವಾನ್ ಮಂಗಲಾಯತನೋ ಹರಿಃ
(ನೀವು ಪೂಜೆಗೆ ಅಣಿ ಮಾಡಿಕೊಂಡಿರುವ ಮಂಟಪದ ಮುಂಭಾಗದಲ್ಲಿ ಮಣೆ ಅಥವಾ
ಚಾಪೆ ಮೇಲೆ ಪೂರ್ವ ಅಥವಾ ಉತ್ತರಕ್ಕೆ ಮುಖವಾಗಿ
ಕುಳಿತುಕೊಳ್ಳುವುದು)
ಆಚಮನ ( ಒಂದು ಬಟ್ಟಲಿನಲ್ಲಿ ಶುದ್ಧವಾದ ನೀರನ್ನು ಇಟ್ಟುಕೊಂಡು ಅದರಲ್ಲಿ
ಒಂದು ಉದ್ದರಣೆ ಇಟ್ಟುಕೊಳ್ಳುವುದು. ಈ ನೀರನ್ನು ಆಚಮನ ಮಾಡುವುದಕ್ಕೆ ಉಪಯೋಗಿಸುವುದು. ಆಚಮನದ
ನೀರನ್ನು ಹಾಕಲು ಒಂದು ತಟ್ಟೆಯನ್ನು ಇಟ್ಟುಕೊಳ್ಳುವುದು)
ಸೂಚನೆ (ರೂಡಿಯಿಲ್ಲದಲ್ಲಿ ಕೇವಲ ಮಂತ್ರಗಳನ್ನು ಹೇಳಬಹುದು)
ಓಂ ಕೇಶವಾಯ
ಸ್ವಾಹಃ (ಒಂದು ಉದ್ದರಣೆ
ಆಚಮನದ ನೀರನ್ನು ಬಲಗೈಯಲ್ಲಿ ಹಾಕಿಕೊಂಡು ಸೇವಿಸುವುದು),
ಓಂ ನಾರಾಯಣಾಯ ಸ್ವಾಹಃ (ಒಂದು ಉದ್ದರಣೆ ಆಚಮನದ ನೀರನ್ನು ಬಲಗೈಯಲ್ಲಿ
ಹಾಕಿಕೊಂಡು ಸೇವಿಸುವುದು),
ಓಂ ಮಾಧವಾಯ ಸ್ವಾಹಃ (ಒಂದು ಉದ್ದರಣೆ ಆಚಮನದ ನೀರನ್ನು ಬಲಗೈಯಲ್ಲಿ ಹಾಕಿಕೊಂಡು ಸೇವಿಸುವುದು),
ಓಂ ಗೋವಿoದಾಯ ನಮಃ (ಒಂದು
ಉದ್ದರಣೆ ಆಚಮನದ ನೀರನ್ನು ಬಲಗೈನ ನಾಲ್ಕೂ ಬೆರಳುಗಳ ಮೂಲಕ ಒಂದು ತಟ್ಟೆ ಅಥವಾ ಪಾತ್ರೆಗೆ ಬಿಡುವುದು),
ಓಂ ವಿಷ್ಣವೇ ನಮಃ (ಒದ್ದೆಯಾದ ಬಲಗೈಯನ್ನು ಎಡಗೈನಿಂದ ಒರೆಸಿಕೊಳ್ಳುವುದು),
ಓಂ ಮಧುಸೂಧನಾಯ ನಮಃ (ಬಲಅಂಗೈನಿಂದ ಮೇಲ್ತುಟಿಯನ್ನು ಸ್ಪರ್ಶಿಸುವುದು),
ಓಂ ತ್ರಿವಿಕ್ರಮಾಯ ನಮಃ (ಬಲಅಂಗೈನಿಂದ ಕೆಳತುಟಿಯನ್ನು
ಸ್ಪರ್ಶಿಸುವುದು),
ಓಂ ವಾಮನಾಯ ನಮಃ (ಬಲ ಅಂಗೈಯನ್ನು ಬಲ ಕೆನ್ನೆಗೆ
ಸ್ಪರ್ಶಿಸುವುದು),
ಓಂ ಶ್ರಿಧರಾಯ ನಮಃ (ಬಲ ಅಂಗೈಯನ್ನು ಎಡ ಕೆನ್ನೆಗೆ ಸ್ಪರ್ಶಿಸುವುದು),
ಓಂ ಹೃಷೀಕೇಶಾಯಾ ನಮಃ (ಆಚಮನದ ನೀರಿನಿಂದ ಎರಡೂ ಕೈಗಳನ್ನು ತೊಳೆದು ಕೊಳ್ಳುವುದು),
ಓಂ ಪದ್ಮನಾಭಾಯ ನಮಃ (ಬಲ ಅಂಗೈಯಲ್ಲಿ ಎರಡೂ ಕಾಲುಗಳ ಪಾದಗಳನ್ನು
ಸ್ಪರ್ಶಿಸುವುದು),
ಓಂ ದಾಮೋದರಾಯ ನಮಃ (ಬಲ ಅಂಗೈಯಲ್ಲಿ ಶಿರವನ್ನು ಸ್ಪರ್ಶಿಸುವುದು),
ಓಂ ಸಂಕರ್ಷಣಾಯ ನಮಃ (ಬಲ ಅಂಗೈಯಲ್ಲಿ ನಿಮ್ಮ ಮೂಗಿನ ಮೇಲ್ಭಾಗದ
ತುದಿಯನ್ನು ಸ್ಪರ್ಶಿಸುವುದು),
ಓಂ ವಾಸುದೇವಾಯ ನಮಃ (ಬಲ ಅಂಗೈಯಲ್ಲಿ ಮೂಗಿನ ಬಲ ಭಾಗವನ್ನು ಸ್ಪರ್ಶಿಸುವುದು),
ಓಂ ಪ್ರದ್ಯುಮ್ನಾಯ
ನಮಃ (ಬಲ ಅಂಗೈಯಲ್ಲಿ ಮೂಗಿನ ಎಡ
ಭಾಗವನ್ನು ಸ್ಪರ್ಶಿಸುವುದು),
ಓಂ ಅನಿರುದ್ಧಾಯ ನಮಃ (ಬಲ ಅಂಗೈಯಲ್ಲಿ ನಿಮ್ಮ
ಬಲ ಕಣ್ಣನ್ನು ಸ್ಪರ್ಶಿಸುವುದು),
ಓಂ ಪುರುಶೋತ್ಥಮಾಯ ನಮಃ (ಬಲ ಅಂಗೈಯಲ್ಲಿ ನಿಮ್ಮ ಎಡ ಕಣ್ಣನ್ನು ಸ್ಪರ್ಶಿಸುವುದು),
ಓಂ ಅಧೋಕ್ಷಾಯ ನಮಃ (ಬಲ ಅಂಗೈಯಲ್ಲಿ ನಿಮ್ಮ ಬಲ ಕಿವಿಯನ್ನು ಸ್ಪರ್ಶಿಸುವುದು),
ಓಂ ನಾರಸಿoಹಾಯ ನಮಃ (ಬಲ ಅಂಗೈಯಲ್ಲಿ
ನಿಮ್ಮ ಎಡ ಕಿವಿಯನ್ನು
ಸ್ಪರ್ಶಿಸುವುದು),
ಓಂ ಅಚ್ಚ್ಯುತಾಯನಮಃ (ಬಲ ಅಂಗೈಯಲ್ಲಿ ನಿಮ್ಮ ಹೊಕ್ಕಳನ್ನು ಸ್ಪರ್ಶಿಸುವುದು),
ಓಂ ಜನಾರ್ಧನಾಯ ನಮಃ (ಬಲ ಅಂಗೈಯಲ್ಲಿ ನಿಮ್ಮ ಹೃದಯವನ್ನು
ಸ್ಪರ್ಶಿಸುವುದು),
ಓಂ ಉಪೇoದ್ರಾಯ ನಮಃ (ಬಲ ಅಂಗೈಯಲ್ಲಿ
ನಿಮ್ಮ ಶಿರವನ್ನು
ಸ್ಪರ್ಶಿಸುವುದು),
ಓಂ ಹರೆಯೇ ನಮಃ (ಬಲ ಅಂಗೈಯಲ್ಲಿ ನಿಮ್ಮ ಬಲ ಭುಜವನ್ನು
ಸ್ಪರ್ಶಿಸುವುದು),
ಓಂ ಶ್ರೀಕ್ರಿಷ್ಷ್ಣಾಯ ನಮಃ (ಬಲ ಅಂಗೈಯಲ್ಲಿ ನಿಮ್ಮ ಎಡ ಭುಜವನ್ನು ಸ್ಪರ್ಶಿಸುವುದು).
ಇಲ್ಲಿಗೆ ಮೊದಲನೆ ಆಚಮನ ಮುಗಿಯಿತು.
ದ್ವಿರಾಚಮ್ಯ (ಇನ್ನೊಂದು ಸಾರಿ ಮೇಲೆ ತಿಳಿಸಿದಂತೆ ಆಚಮನವನ್ನು ಮಾಡುವುದು)
ಪ್ರಾಣಾಯಾಮ
ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ, ಪರಮಾತ್ಮಾ ದೇವತಾ
ದೈವೀ ಗಾಯತ್ರೀಚ್ಚಂಧಃ, ಪ್ರಾಣಾಯಾಮೇ
ವಿನಿಯೋಗಃ
ಓಂ ಭೂಃ, ಓಂ ಭುವಃ, ಓಂ ಸುವಃ, ಓಂ ಮಹಃ,
ಓಂ ಜನಃ,
ಓಂ ತಪಃ,
ಓಂ ಸತ್ಯಂ, ತತ್ಸವಿತುರ್ವರೇಣಿಯಂ, ಭರ್ಗೋದೇವಸ್ಯ ಧೀಮಹಿ, ಧೀಯೋ ಯೋ ನಃ ಪ್ರಚೋದಯಾತ್.
ಪೂಜೆಗೆ ಸೂಕ್ತ ಸಮಯದ ಘೋಷಣೆ (ಪಾಶ್ಚಿಮಾತ್ಯ ದೇಶದಲ್ಲಿರುವವರು ಆಯಾ ಖಂಡ, ದ್ವೀಪ, ಅರಣ್ಯ, ನದಿಗಳ
ಹೆಸರುಗಳನ್ನು ಸೇರಿಸಿಕೊಳ್ಳುವುದು)
ತದೇವ ಲಗ್ನಂ ಸುದಿನಂ ತದೇವ, ತಾರಾಬಲಂ ಚಂದ್ರಬಲಂ ತದೇವ,
ವಿದ್ಯಾಬಲಂ, ದೈವಬಲಂ ತದೇವ, ಲಕ್ಷ್ಮೀಪತೇ, ತೇoಘ್ರಿಯುಗಂ ಸ್ಮರಾಮಿ.
ಶುಭೇ ಶೋಭನೇ ಮುಹೂರ್ತೆ, ಆದ್ಯ ಬ್ರಹ್ಮಣೋ, ದ್ವಿತೀಯ
ಪರಾರ್ಧೇ, ಶ್ವೇತವರಾಹ ಕಲ್ಪೆ, ವೈವಸ್ವತ ಮನ್ವಂತರೇ,ಕಲಿಯುಗೇ, ಪ್ರಥಮ ಪಾದೇ, ಭರತ ವರ್ಷೇ,
ಭರತ ಖಂಡೇ,
ಜಂಬೂ ದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾಃ, ದಕ್ಷಿಣೇ ತೀರೇ, ಶಾಲಿವಾಹನ ಶಕೇ, ಬೌದ್ಧಾವತಾರೆ ರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೆ, ವ್ಯಾವಹಾರಿಕೇ, ಚಾಂದ್ರಮಾನೇನ
ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಮಧ್ಯೇ, ------------------------------ನಾಮ ಸಂವತ್ಸರೇ ,
ದಕ್ಷಿಣಾಯನೇ
ವರ್ಷ ಋತೌ, ಭಾದ್ರಪದ ಮಾಸೇ, ಶುಕ್ಲ ಪಕ್ಷ್ಯೇ ಚತುರ್ಥಿ ತಿಥೌ, ------------------
------------------ವಾಸರಯುಕ್ತಾಯಾಂ, ಶುಭ ನಕ್ಷತ್ರೇ, ಶುಭ ಯೋಗ, ಶುಭ ಕರಣ ಏವಂ ಗುಣ, ವಿಶೇಷಣ ವಿಶಿಷ್ಥಾಯಾಂ, ಶುಭ ತಿಥೌ, ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರಾ ಶ್ರೀ. ಪರಮೇಶ್ವರ ಪ್ರೀತ್ಯರ್ಥಂ. ಮಮ ಸಕುಟುಂಬಸ್ಯ ಕ್ಷೇಮ, ಸ್ಥೈರ್ಯ, ಆಯುರಾರೋಗ್ಯ, ಚತುರ್ವಿಧ ಪುರುಷಾರ್ಥ
ಸಿದ್ಧ್ಯರ್ಥಂ ಶ್ರೀ ವರಸಿದ್ದಿ
ವಿನಾಯಕ ದೇವತಾಂ ಉದ್ಧಿಷ್ಯ ಶ್ರೀ
ವರಸಿದ್ದಿ ವಿನಾಯಕ ದೇವತಾ ಪ್ರೀತ್ಯರ್ಥಂ, ಯಥಾ ಶಕ್ತಿ, ಧ್ಯಾನಾವಾಹನಾದಿ ಷೋಡಶೋಪಚಾರ ಪೂಜನಂ ಕರಿಷ್ಯೇ. ಇದಂ ಫಲಂ ಮಯಾ ದೇವ ಸ್ಥಾಪಿತಂ ಪುರಸ್ತವ. ತೇನ ಮೇ ಸುಫಲಾವಾಪ್ತಿರ್ ಭವೇತ್
ಜನ್ಮನಿ ಜನ್ಮನಿ .
(ಒಂದು
ಫಲವನ್ನು ದೇವರ ಮಂಟಪದ ಮುಂದೆ ಇಟ್ಟು ನಮಸ್ಕರಿಸುವುದು)
ಸಂಕಲ್ಪ (ಕೈಯಲ್ಲಿ ಸ್ವಲ್ಪ ಮಂತ್ರಾಕ್ಷತೆ ಹಿಡಿದುಕೊಂಡು ಹೀಗೆ ಹೇಳುವುದು) .
----------------------------------ಗೋತ್ರದ, ನಾನು ಶ್ರೀ ---------------------------------------
ನನ್ನ ಹಾಗೂ ನನ್ನ ಕುಟುಂಬದ ಸಕಲ ಇಷ್ಟಾರ್ಥಗಳ ಸಿದ್ಧಿಗಾಗಿ ಇಂದು ಈ ವರ ಸಿದ್ಧಿ ವಿನಾಯಕ ಪೂಜೆಯನ್ನು ಶ್ರುತಿ, ಸ್ಮೃತಿ ಹಾಗೂ ಪುರಾಣೋಕ್ತ
ಮಾಡಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೇನೆ.
(ಕೈಯಲ್ಲಿರುವ ಮಂತ್ರಾಕ್ಷತೆಗೆ ಒಂದು ಉದ್ದರಣೆ ನೀರು ಹಾಕಿ ಅರ್ಘ್ಯ
ಪಾತ್ರೆಗೆ ಬಿಡುವುದು)
ಕಳಶ ಪೂಜೆ :
ಕಳಶಂ ಗಂಧಾಕ್ಷತ ಪತ್ರ ಪುಷ್ಪೈರಭ್ಯರ್ಚ್ಯ, ಇತಿ ಕಳಶಂ ಪ್ರತಿಷ್ಟಯಾಮಿ.
ಸಕಲ ಪೂಜಾರ್ಥೆ ಅಕ್ಷತಾನ್ ಸಮರ್ಪಯಾಮಿ. .......
(ಅಕ್ಷತೆಯನ್ನು ಕಳಶಕ್ಕೆ ನಿವೇದಿಸುವುದು)
(ಈಗ ಎಡಗೈಯನ್ನು ನಿಮ್ಮ ಮುಂದಿರುವ ಕಳಶದ ಮೇಲಿಟ್ಟು ಅದರ ಮೇಲೆ
ಬಲಗೈಯನ್ನು ಇಟ್ಟು ಈ ಮಂತ್ರವನ್ನು ಹೇಳುವುದು) ಕಳಶಸ್ಯ ಮುಖೇ ವಿಷ್ಣುಃ
ಕಂಠೇ ರುದ್ರಃ ಸಮಾಶ್ರಿತಃ,
ಮೂಲೇ ತತ್ರ ಸ್ಥಿತೌ ಬ್ರಂಹಾ ಮಧ್ಯೇ ಮಾತೃಗಣಾಸ್ಮ್ರುತಾಃ,
ಕುಕ್ಷೌತು ಸಾಗರಾಸ್ಸರ್ವೇ ಸಪ್ತದ್ವೀಪಾ ವಸುಂಧರಾ,
ಋಗ್ವೇದೊಥಯಜುರ್ವೇದಸ್ಸಾಮವೇದೊಹ್ಯಥರ್ವಣಃ
ಅಂಗೈಶ್ಚಸಹಿತಾಸ್ಸರ್ವೆ ಕಳಶಾಂಬು ಸಮಾಶ್ರಿತಾಃ,
ಆಯಾಂತು ದೇವಪೂಜಾರ್ಥಂ ದುರಿತಕ್ಷಯಕಾರಿಕಾಃ.
ಗಂಗೇ ಚ ಯಮುನೇಚೈವ ಗೋದಾವರೀ ಸರಸ್ವತೀ, ನರ್ಮದೇ,
ಸಿಂಧು, ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು.
ಕಳಶ ಪ್ರಾರ್ಥನೆ :
(ಕೈಯಲ್ಲಿ ಒಂದು
ಹೂವು ಅಕ್ಷತೆ ಹಿಡಿದುಕೊಂಡು ಕೈ ಮುಗಿದು ಈ ಮಂತ್ರವನ್ನು ಉಚ್ಚರಿಸುವುದು)
ಕಳಶಃ
ಕೀರ್ತಿಮಾಯುಷ್ಯಂ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಂ,
ಯೋಗ್ಯತಾಂ ಪಾಪಹಾನಿಂ ಚ ಪುಣ್ಯಂ ವೃದ್ದಿಂ ಚ ಸಾಧಯೇತ್.
ಸರ್ವ ತೀರ್ಥಮಯೋ ಯಸ್ಮಾತ್ ಸರ್ವ ದೇವಮಯೋ ಯತಃ,
ಅತಃ ಹರಿಪ್ರಿಯೋಸಿ ತ್ವಂ ಪೂರ್ಣ ಕುಂಭಂ ನಮೋಸ್ತುತೇ. (ಕೈಯಲ್ಲಿರುವ ಹೂವು ಮತ್ತ್ತು
ಅಕ್ಷತೆಯನ್ನು ಕಳಶಕ್ಕೆ ಹಾಕುವುದು)
ಕಳಶ ಪೂಜಾಂ ಸಮರ್ಪಯಾಮಿ.
ಕಳಶೋಧಕ
ಪ್ರೋಕ್ಷಣೆ (ಕೆಳಗಿಟ್ಟುಕೊಂಡಿರುವ
ಕಳಶದಿಂದ ನೀರನ್ನು ಉದ್ಧರಣೆಯಲ್ಲಿ ತೆಗೆದುಕೊಂಡು ಒಂದು ತುಳಸಿ ಅಥವಾ ಹೂವಿನಿಂದ ಈ ಮಂತ್ರ ಹೇಳುವಾಗ ದೇವರ ಮೇಲೂ, ಪೂಜಾ ದ್ರವ್ಯಗಳ ಮೇಲೂ ಮತ್ತು ನಿಮ್ಮ ಮೇಲೂ ಪ್ರೋಕ್ಷಣೆ ಮಾಡಿಕೊಳ್ಳುವುದು).
ಕಳಶೋಧಕೇನ ಪೂಜಾ ದ್ರವ್ಯಾಣಿ ಸಂಪ್ರೋಕ್ಷ್ಯ, ದೇವಂ ಆತ್ಮಾನಂಚ
ಪ್ರೋಕ್ಷಯೇತ್,
(ಈ ತುಳಸಿ ಅಥವಾ ಹೂವನ್ನು ಉತ್ತರ ದಿಕ್ಕಿಗೆ ಹಾಕಿಬಿಡುವುದು).
ಪ್ರಾಣಪ್ರತಿಷ್ಥಾಪನೆ
ಏಕದಂತಂ
ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಂ,
ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿ ವಿನಾಯಕಂ.
ಅಸ್ಯಶ್ರೀ ವರಸಿದ್ಧಿ ವಿನಾಯಕ ದೇವತಾ ಪ್ರಾಣಪ್ರತಿಷ್ಥಾಪನ ಮಹಾಮಂತ್ರಸ್ಯ
ಬ್ರಹ್ಮಾ ವಿಷ್ಣು ಮಹೇಶ್ವರಾ ಋಷಯಃ.
ಋಗ್ಯಜುಸ್ಸಾಮಾಥರ್ವಣ ಛಂದಾಂಸಿ ಪ್ರಾಣಶಕ್ತಿಃ
ಪರಾದೇವತಾ ಹ್ರಾಂ ಬೀಜಂ, ಹ್ರೈಂ ಶಕ್ತಿಃ, ಹ್ರೂಂ ಕೀಲಕಂ,
ಮಮ ಶ್ರೀ ವರಸಿದ್ಧಿ ವಿನಾಯಕ ಪ್ರಾಣಪ್ರತಿಷ್ಥಾ ಸಿದ್ದ್ಯರ್ಥೇ ಜಪೇ ವಿನಯೋಗಃ
ಕರನ್ಯಾಸ
ಓಂ ಹ್ರಾಂ ಅಂಗುಷ್ಟಾಭ್ಯಾಂ ನಮಃ ( ಎರಡೂ ಕೈಗಳ ತೋರು ಬೆರಳಿನಿಂದ ಆಯಾ ಹೆಬ್ಬೆಟ್ಟಿನ ಕೆಳ ಭಾಗವನ್ನು ಸ್ಪರ್ಶಿಸಿ )
ಓಂ ಹ್ರೀಂ
ತರ್ಜನೀಭ್ಯಾಂ ನಮಃ ( ಎರಡೂ ಕೈಗಳ
ಹೆಬ್ಬೆಟ್ಟಿನಿಂದ ತೋರು ಬೆರಳುಗಳ ಕೆಳ ಭಾಗವನ್ನು ಸ್ಪರ್ಶ್ಸಿಸಿ )
ಓಂ ಹ್ರೂಂ ಮಧ್ಯಮಾಭ್ಯಾಂ ನಮಃ ( ಎರಡೂ ಕೈಗಳ ಹೆಬ್ಬೆಟ್ಟಿನಿಂದ ಮದ್ಯದ ಬೆರಳುಗಳ ಕೆಳ ಭಾಗವನ್ನು
ಸ್ಪರ್ಶ್ಸಿಸಿ )
ಓಂ ಹ್ರೈಂ
ಅನಾಮಿಕಾಭ್ಯಾಂ ನಮಃ ( ಎರಡೂ ಕೈಗಳ
ಹೆಬ್ಬೆಟ್ಟಿನಿಂದ ಉಂಗುರದ ಬೆರಳುಗಳ ಕೆಳ ಭಾಗವನ್ನು ಸ್ಪರ್ಶ್ಸಿಸಿ )
ಓಂ ಹ್ರೌಂ ಕನಿಷ್ಥಿಕಾಭ್ಯಾಂ ನಮಃ ( ಎರಡೂ ಕೈಗಳ ಹೆಬ್ಬೆಟ್ಟಿನಿಂದ ಕಿರು ಬೆರಳುಗಳ ಕೆಳ ಭಾಗವನ್ನು
ಸ್ಪರ್ಶ್ಸಿಸಿ )
ಓಂ ಹ್ರಃ
ಕರತಲಕರಪೃಷ್ಥಾಭ್ಯಾಂ ನಮಃ
( ಎರಡೂ ಕೈಗಳ ಅಂಗೈ ಹಸ್ತದ ಒಳ ಭಾಗವನ್ನು ಮೊದಲು
ಬಲಗೈನಿಂದ ನಂತರ ಎಡಗೈನಿಂದ
ಸ್ಪರ್ಶ್ಸಿಸಿ ).
ಅಂಗನ್ಯಾಸ :
ಓಂ ಹ್ರಾಂ ಹೃದಯಾಯ ನಮಃ ( ಬಲಗೈನಿಂದ
ನಿಮ್ಮ ಹೃದಯವನ್ನು/ಎದೆ ಸ್ಪರ್ಶಿಸಿ )
ಓಂ ಹ್ರೀಂ ಶಿರಸೇ ಸ್ವಾಹಾ (ಬಲಗೈನಿಂದ ನಿಮ್ಮ ಶಿರವನ್ನು/ತಲೆ ಸ್ಪರ್ಶಿಸಿ ) ,
ಓಂ ಹ್ರೂಂ ಶಿಖಾಯ್ಯೆವೌಷಟ್ (ಬಲಗೈನಿಂದ ನಿಮ್ಮ ಜುಟ್ಟಿನ ಭಾಗವನ್ನು ಸ್ಪರ್ಶಿಸಿ )
ಓಂ ಹ್ರೈಂ ಕವಚಾಯ
ಹುಂ (ನಿಮ್ಮ ಎಡಗೈ ಹೃದಯದ ಮೇಲೆ ಬರುವಂತೆ ಬಲ ಭುಜವನ್ನು ಮುಟ್ಟಿಕೊಂಡು ಅದರ ಮೇಲೆ ಬಲಗೈನಿಂದ
ನಿಮ್ಮ ಎಡ ಭುಜವನ್ನು
ಸ್ಪರ್ಶಿಸಿ )
ಓಂ ಹ್ರೌಂ ನೇತ್ರತ್ರಯಾಯವೌಷಟ್ (ಬಲಗೈನ
ನಿಮ್ಮ ತೋರು ಬೆರಳು
ಬಲಗಣ್ಣಿನ ಮೇಲೂ, ಉಂಗುರದ ಬೆರಳು ಎಡಗಣ್ಣಿನ ಮೇಲೆ ಬರುವಂತೆ ಹಾಗೂ ಮದ್ಯದ ಬೆರಳು ಮೂಗು ಹಾಗೂ ಹಣೆಯ ಮದ್ಯದಲ್ಲಿ ಬರುವಂತೆ ಇಡಿ
)
ಓಂ ಹ್ರಃ ಅಸ್ತ್ರಾಯ ಫಟ್ (ಬಲಗೈಯನ್ನು ನಿಮ್ಮ ಬಲ ಕಿವಿಯ ಮೇಲ್ಗಡೆಯಿಂದ ತಂದು ನಿಮ್ಮ ಎಡಗೈನ ಅಂಗೈಗೆ
ಜೋರಾಗೆ ಇಟ್ಟು ಚಪ್ಪಾಳೆ ತರಹ ತಟ್ಟಿ )
ಓಂ ಭೂರ್ಭುಸ್ವರೋಮಿತಿ ದಿಗ್ಭಂದ್ಧಃ. ( ಬಲಗೈಯನ್ನು ನಿಮ್ಮ ಬಲಬದಿಯಿಂದ ತಲೆಯ ಸುತ್ತ ಸುತ್ತಿಸಿ ಪರಿಕ್ರಮಣ ಮಾಡಿಸುವುದು ).
( ದಿಗ್ಬಂಧನ ಹಾಕುವ
ಉದ್ದೇಶ: ನಾವು ಪೂಜೆ ಮಾಡುವ ಜಾಗದಲ್ಲಿ ಯಾವುದೇ ದುಷ್ಯಭ್ದ , ದುರ್ವರ್ತನೆ ಅಥವಾ ಯಾವುದೇ ಅನುಚಿತ ಘಟನೆಗಳು ನಡೆದರೂ ನಮ್ಮ
ಪೂಜಾ ಕ್ರಿಯೆಗೆ
ಅಡಚಣೆ ಆಗದಿರಲೆಂದೂ ಹಾಗೂ ಅದರ ಕಡೆ ನಮ್ಮ ಗಮನ ಹರಿಯದಂತೆ ಏಕಾಗ್ರಚಿತ್ತದಿಂದ ಇರಲು ಮಾಡಿಕೊಳ್ಳುವ ಒಂದು ವಿಧಾನ ).
ರಕ್ತಾಂಬೋಧಿಸ್ಥ ಪೋತೋಲ್ಲಸದುರಣ ಸರೋಜಾಧಿರೂಢಾ.
ಕರಾಬ್ಜೈಃ ಪಾಶಂ ಕೊದಂಡಮಿಕ್ಶುೂದ್ಭವ ಮಣಿಗಣಮಪ್ಯಂಕುಶಂ
ಪಂಚಬಾರ್ಣಾ ಬಿಭ್ರಾಣಾಸೃಕ್ಕಪಾಲಂ
ತ್ರಿನಯನವಿಲಸಿತ್ ಪೀನವಕ್ಶೋರುಹಾಢಾೄ.
ದೇವೀ ಬಾಲಾರ್ಕವರ್ಣಾಭವತು, ಸುಖಕರೀ ಪ್ರಾಣ ಶಕ್ತಿಃ, ಪರಾನಃ.
ಹ್ರಾಂ, ಹ್ರೀಂ, ಕೋಂ, ಯಂ,
ರಂ, ಲಂ, ವಂ, ಶಂ,
ಷಂ, ಸಂ, ಹೋಂ,
ಓಂ ಶ್ರೀ ವರ ಸಿದ್ಧಿ ವಿನಾಯಕ ಪ್ರಾಣಃ ಮಮ ಪ್ರಾಣಃ,
ಓಂ ಮಹಾ ಗಣಪತಿ ಜೀವಃ
ಮಮ ಜೀವಃ,
ವಾಂಗ್ಮನಃ, ಶ್ರೋತ್ರ, ಜಿಹ್ವಾಘ್ಹ್ರಾಣ್ಯೇ ಉಚ್ಚ್ವಾಸ ನಿಶ್ವಾಸ ರೂಪೇಣ ಬಹಿರಾಗತ್ಯ
ಆಸ್ಮಿನ್ ಬಿಂಬೇ (ಆಸ್ಮಿನ್ ಕಳಶೆ ಆಸ್ಯಾಂ ಪ್ರತಿಮಾಯಾಂ)
ಸುಖೇನ ಚಿರಂ ತಿಷ್ಟ್ಹಂತು ಸ್ವಾಹಾ.
(ಹೂವು ಅಕ್ಷತೆ
ಹಿಡಿದುಕೊಂಡು ಗಣಪತಿಯ ವಿಗ್ರಹದ
ಮೇಲೆ ಕೈಯನ್ನು ಇಟ್ಟುಕೊಳ್ಳುವುದು)
ಸ್ವಾಮಿನ್ ಸರ್ವ ಜಗನ್ನಾಥ ಯಾವತ್ಪೂಜಾವಸಾನಕಂ.
ತಾವತ್ವಂ ಪ್ರೀತಿಭಾವೇನ ಬಿಂಬೇಸ್ಮಿನ್ ಸನ್ನಿಧಿಂ ಕುರು.
(ಹೂವು ಅಕ್ಷತೆಯನ್ನು ದೇವರ ಪಕ್ಕದಲ್ಲಿ ಇಡುವುದು)
(ಈಗ ಕೈಯಲ್ಲಿ ಒಂದು ಬಾಳೆಹಣ್ಣನ್ನು ಹಿಡಿದು
ಈ ಮಂತ್ರವನ್ನು ಹೇಳಿ ದೇವರ ಪಕ್ಕದಲ್ಲಿಡುವುದು)
ಆವಾಹಿತೋ ಭವ, ಸ್ಥಾಪಿತೋ ಭವ,
ಸುಪ್ರಸನ್ನೋ ಭವ, ವರದೋ ಭವ,
ಅವಕುಂಠಿತೋ ಭವ, ಮಮ ಸರ್ವಾಭೀಷ್ಟ ಫಲ ಪ್ರದೋ ಭವ.
ಯತ್ಕಿಂಚಿನ್ನಿವೇದನಂ ಕುರ್ಯಾತ್.
ಸಕಲ ಪೂಜಾರ್ಥೆ ಅಕ್ಷತಾನ್ ಸಮರ್ಪಯಾಮಿ. (ಸ್ವಲ್ಪ ಅಕ್ಷತೆಯನ್ನು ವಿಗ್ರಹದ ಮುಂದೆ ಹಾಕಿ)
ದ್ವಾರ
ಪಾಲಕ ಪೂಜೆ
(ನಮಃ ಎಂದು ಹೇಳಿದಾಗ ಆಯಾ ದಿಕ್ಕುಗಳಿಗೆ ಅಕ್ಷತೆಯನ್ನು ಹಾಕುವುದು)
ದ್ವಾರಪಾಲಾನ್ಮಹಾಭಾಗಾನ್ ವಿಷ್ಣುಸಾನ್ನಿಧ್ಯವರ್ತಿನಃ,
ಲೋಕಸಂರಕ್ಷಕಾನ್ ಸದಾ,
ಪೂರ್ವ
ದ್ವಾರೇ ಇಂದ್ರಾಯ ನಮಃ,
ದಕ್ಷಿಣ
ದ್ವಾರೇ ಗೌರೀಪತೆಯೇ ನಮಃ,
ಪಶ್ಚಿಮ
ದ್ವಾರೇ ರತ್ನ್ಯೈ ನಮಃ,
ಉತ್ತರ
ದ್ವಾರೇ ಮನ್ಯೈ ನಮಃ,
ದ್ವಾರಪಾಲಕಾನ್ ನಮಸ್ಕೃತ್ಯ.
ಇತಿ ದ್ವಾರಪಾಲಕ ಪೂಜಾನ್ ಸಮರ್ಪಯಾಮಿ.
ಪೀಠ ಪೂಜೆ (ನಮಃ ಎಂದು ಹೇಳಿದಾಗ ಮಂಟಪದ ಆಯಾ ದಿಕ್ಕುಗಳಿಗೆ ಅಕ್ಷತೆಯನ್ನು
ಹಾಕುವುದು)
ಪೀಠಸ್ಯ ಅಧೋಭಾಗೇ ಆಧಾರ ಶಕ್ತ್ಯೈ ನಮಃ,
ಪೃಥಿವ್ಯೈನಮಃ, ಕ್ಷೀರಸಾಗರಾಯನಮಃ,
ಸಪ್ತಕುಲಪರ್ವತೇಭ್ಯೋನಮಃ, ಭೂಮಂಡಲಾಯನಮಃ,
ವೇದಿಕಾಯೈನಮಃ, ನೀಲಾಯ ನಮಃ,
ಪೂರ್ವ
ದಿಶೇ ಗಂ ಗಣಪತಯೇ ನಮಃ,
ದಕ್ಷಿಣ
ದಿಶೇ ಸುo ಸರಸ್ವತ್ಯೈ ನಮಃ,
ಪಶ್ಚಿಮ
ದಿಶೇ ವಾಸ್ತು ಪುರುಷಾಯ ನಮಃ,
ಉತ್ತರ
ದಿಶೇ ಮಹಾ ಲಕ್ಷ್ಮ್ಯೈ ನಮಃ,
ದಂ ದುರ್ಗಾಯೈ ನಮಃ, ಕ್ಷಂ ಕ್ಷೇತ್ರಪಾಲಕಾಯ ನಮಃ,
ಪಂ ಪರಮಾತ್ಮನೇ ನಮಃ, ಜಾತಕಮಲೈಃ,
ಹೈರಣ್ಯ ಸೋಪಾನ ಕೈರ್ಯುಕ್ತಂ
ಕಾಂಚನ ನಿರ್ಮಿತೈಶ್ಚ ಸಿಂಹಾಸನಂ ಧ್ಯಾತ್ವಾ.
ಇತಿ ರತ್ನಸಿಂಹಾಸನಾಯ
ನಮಃ,
ಇತಿ ಪೀಠ ಪೂಜಾಂ ಸಮರ್ಪಯಾಮಿ.
ಮಂಟಪ ಪೂಜೆ
ಚಿತ್ರ ಮಂಟಪಾಯ ನಮಃ, ಪುಷ್ಪ ಮಂಟಪಾಯ ನಮಃ,
ಪ್ರವಾಳ ಮಂಟಪಾಯ ನಮಃ, ಮೌಕ್ತಿಕ ಮಂಟಪಾಯ ನಮಃ,
ರತ್ನ
ಮಂಟಪಾಯ ನಮಃ, ಮಾಣಿಕ್ಯ ಮಂಟಪಾಯ ನಮಃ,
ವಜ್ರ
ಮಂಟಪಾಯ ನಮಃ, ವೈಡೂರ್ಯ ಮಂಟಪಾಯ ನಮಃ,
ಗೋಮೇಧಿಕ ಮಂಟಪಾಯ ನಮಃ, ಕದಲೀ ಮಂಟಪಾಯ ನಮಃ,
ಮಂಟಪ ಪೂಜಾಂ ಸಮರ್ಪಯಾಮಿ.
ಧ್ಯಾನ (ನೀವು ತಂದಿರುವ ಗಣಪತಿ ವಿಗ್ರಹವನ್ನು ಮಂಟಪದ ಮೇಲೆ ಒಂದು ಬಾಳೆ ಎಲೆ
ಅಥವಾ ತಟ್ಟೆಯಲ್ಲಿ ನುಚ್ಚಿರದ ಅಕ್ಕಿಯನ್ನು ಹರಡಿ ಅದರ ಮೇಲೆ ಇಡುವುದು. ಜೊತೆಗೆ ಇನ್ನೊಂದು ತಟ್ಟೆಯಲ್ಲಿ ನಿಮ್ಮ ಮನೆಯಲ್ಲಿರುವ ಬೆಳ್ಳಿ
ಅಥವಾ ಪಂಚಲೋಹದ ಮೂರ್ತಿಯನ್ನು ನಿಮ್ಮ
ಮುಂದೆ ಕೆಳ ಬಾಗದಲ್ಲಿ ಸ್ವಲ್ಪ ಅಕ್ಷತೆ ಹಾಕಿ ಒಂದು ಸಣ್ಣ ಮಣೆಯ ಮೇಲೆ ಇಟ್ಟುಕೊಳ್ಳುವುದು.
ಇದರಲ್ಲಿ ಅಕ್ಕಿ ಹರಡುವ
ಅವಶ್ಯಕತೆಯಿಲ್ಲ) (ಕೈ ಮುಗಿದುಕೊಳ್ಳುವುದು)
ಏಕದಂತಂ
ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಂ,
ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿ ವಿನಾಯಕಂ.
ಧ್ಯಾಯೇದ್ದೇವಂ ಮಹಾಕಾಯಂ ತಪ್ತಕಾಂಚನ ಸಂನಿಭಂ,
ಮೊದಕಾಸಕ್ತ ಶುoಡಾಗ್ರಂ ಏಕದಂತಂ ವಿನಾಯಕಂ,
ಶ್ರೀ
ವರಸಿದ್ಧಿ ವಿನಾಯಕಾಯನಮಃ, ಧ್ಯಾಯಾಮಿ, ಧ್ಯಾನಂ ಸಮರ್ಪಯಾಮಿ.
ಆವಾಹನೆ (ಎರಡೂ ಕೈಗಳನ್ನು ಚಾಚಿ ಹಸ್ತಗಳನ್ನು ಜೋಡಿಸಿ , ಹಸ್ತಗಳನ್ನು ನಿಮ್ಮ ಕಡೆ
ತಿರುಗಿಸಿ ದೇವರನ್ನು ಆಹ್ವಾನಿಸುವುದು)
ಆವಾಹಯಾಮಿ ವಿಘ್ನೇಶ ಸುರರಾಜಾರ್ಚಿತೇಶ್ವರ,
ಅನಾಥನಾಥ ಸರ್ವಜ್ಞ ಪೂಜಾರ್ಥಂ ಗಣನಾಯಕ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಆವಾಹಯಾಮಿ.
ಆಸನ
(ಮಂಟಪವನ್ನು ಬೆರಳುಗಳಿಂದ ಮುಟ್ಟುವುದು)
ಅನೇಕ ರತ್ನ ಸಂಯುಕ್ತಂ ಮುಕ್ತಾಮಣಿ ವಿಭೂಶಿತಮ್,
ಸ್ವರ್ಣ ಸಿಂಹಾಸನಂ ಚಾರು ಪ್ರೀತ್ಯರ್ಥಂ ಪ್ರತಿಗೃಹ್ಯತಾಂ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಆಸನಂ ಸಮರ್ಪಯಾಮಿ.
ಪಾದ್ಯ (ಕಳಶದ ನೀರಿನಿಂದ ಒಂದು ಉದ್ಧರಣೆ ನೀರು ಅರ್ಘ್ಯ ಪಾತ್ರೆಗೆ ಬಿಡುವುದು)
ವಿನಾಯಕ ನಮಸ್ತೇಸ್ತು ಶಂಕರ ಪ್ರಿಯ ಸಿದ್ಧಿದಂ,
ಭಕ್ತಾ ಪಾದ್ಯಂ ಮಯಾದತ್ತಂ ಗೃಹಾಣ ಪ್ರಣತ ಪ್ರಿಯ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ ಪಾದ್ಯಂ ಸಮರ್ಪಯಾಮಿ.
ಅರ್ಘ್ಯ (ಕಳಶದ ನೀರಿನಿಂದ ಒಂದು ಉದ್ಧರಣೆ ನೀರು ಅರ್ಘ್ಯ ಪಾತ್ರೆಗೆ ಬಿಡುವುದು)
ಗಜವಕ್ತ್ರ ನಮಸ್ತೇಸ್ತು ಗಂಧ ಪುಷ್ಪಾಕ್ಷತೈರ್ಯುತಂ,
ಅರ್ಘ್ಯಂ ಗೃಹಾಣ ದೇವೇಶ ಸರ್ವ ಸಿದ್ಧಿ ಪ್ರದಾಯಕ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಅರ್ಘ್ಯಂ ಸಮರ್ಪಯಾಮಿ.
ಆಚಮನ (ಆಚಮನಕ್ಕೆ ಇಟ್ಟು ಕೊಂಡಿರುವ ನೀರಿನಿಂದ ಒಂದು ಉದ್ಧರಣೆ ನೀರನ್ನು
ಅರ್ಘ್ಯ ಪಾತ್ರೆಗೆ ಬಿಡುವುದು)
ಗಣನಾಥ
ಮಯಾ ದತ್ತಂ ಜಗತ್ಪಾವನ ಕಾರಣಂ,
ಗೃಹಾಣಾಚಮನಂ ದೇವ ಪೂಜಿತೊ ಯಃ ಸುರೈರಪಿ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಆಚಮನಂ ಸಮರ್ಪಯಾಮಿ .
ಪಂಚಾಮೃತ ಸ್ನಾನ (ಕೆಳಗೆ ಇಟ್ಟು ಕೊಂಡಿರುವ ಗಣೇಶನ ಬೆಳ್ಳಿಯ ಮೂರ್ತಿಯ ಮೇಲೆ, ಕ್ರಮಾನುಸಾರವಾಗಿ ಪಂಚಾಮೃತದ ವಿವಿದ ಪದಾರ್ಥಗಳನ್ನು ಒಂದು ಉದ್ಧರಣೆಯಿಂದ, ಮಂತ್ರಗಳನ್ನು ಹೇಳಿದ ಹಾಗೇ ಹಾಕುತ್ತಾ ಇರುವುದು)
ಕ್ಷೀರ
ಸ್ನಾನ (ಕಾಯಿಸಿರದ ಹಸಿ ಹಾಲು):
ಸುರಭೇಸ್ತು ಸಮುತ್ಪನ್ನಂ ದೇವಾನಾಂ ಅಪಿ ದುರ್ಲಭಂ,
ಪಯೋ ದಧಾಮಿ ದೇವೇಷಾ ಪ್ರೀತ್ಯರ್ಥಂ ಪ್ರತಿಗೃಹ್ಯತಾಂ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಪಯಃ ಸ್ನಾನಂ ಸಮರ್ಪಯಾಮಿ .
ದಧಿ ಸ್ನಾನ (ಮೊಸರು)
ಚಂದ್ರ ಮಂಡಲ ಸಂಕಾಶಂ ಸರ್ವ ದೇವ ಪ್ರಿಯಂ ಹಿ ಯತ್,
ದಧಿ ದಧಾಮಿ ದೇವೇಷಾ ಸ್ನಾನಾರ್ಥಂ ಪ್ರತಿಗೃಹ್ಯತಾಂ,
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ದಧಿ ಸ್ನಾನಂ ಸಮರ್ಪಯಾಮಿ .
ಘೃತ ಸ್ನಾನ (ತುಪ್ಪ)
ಆಜ್ಯಂ
ಸುರಾನಾಂ ಆಹಾರಂ ಆಜ್ಯಂ ಯಜ್ಞಂ ಪ್ರತಿಷ್ಥಿತಂ,
ಆಜ್ಯಂ
ಪವಿತ್ರಂ ಪರಮಂ ಸ್ನಾನಾರ್ಥಂ ಪ್ರತಿಗೃಹ್ಯತಾಂ ,
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಘೃತ ಸ್ನಾನಂ ಸಮರ್ಪಯಾಮಿ .
ಮಧು ಸ್ನಾನ (ಜೇನು ತುಪ್ಪ)
ಸರ್ವೌಷಧಿ ಸಮುತ್ಪನ್ನಂ ಪೀಯುಷ ಸದೃಶಂ
ಮಧು,
ಸ್ನಾನಾರ್ಥಂತೇ ಮಯಾ ದತ್ತಂ ಗೃಹಾಣ ಪರಮೇಶ್ವರ .
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಮಧು ಸ್ನಾನಂ ಸಮರ್ಪಯಾಮಿ.
ಶರ್ಕರಾ ಸ್ನಾನ (ಸಕ್ಕರೆ)
ಇಕ್ಷು
ಧಂಡಾತ್ ಸಮುತ್ಪನ್ನಾ, ರಸ ಸ್ನಿಗ್ಧ ಧರಾ ಶುಭಾ,
ಶರ್ಕರೇಯ ಮಯಾ ದತ್ತಾ, ಸ್ನಾನಾರ್ಥಂ ಪ್ರತಿಗೃಹ್ಯತಾಂ,
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಶರ್ಕರಾ ಸ್ನಾನಂ ಸಮರ್ಪಯಾಮಿ.
(ಹೀಗೆ ಪೂಜಿಸಿದ ಪಂಚಾಮೃತವನ್ನು ಒಂದು ಪಾತ್ರೆಗೆ
ಹಾಕಿಟ್ಟುಕೊಳ್ಳುವುದು, ಪೂಜಾನಂತರ
ತೆಗೆದುಕೊಳ್ಳಲು ಬೇಕಾಗುತ್ತದೆ
).
ಫಲೋದಕ (ತೆಂಗಿನಕಾಯಿ ಒಡೆದು ಅದರಲ್ಲಿನ ಎಳನೀರನ್ನು ಹಾಕುವುದು)
ಯಾಃ ಫಲಿನೀರ್ಯಾ ಅಫಲಾ ಅಪುಷ್ಪಾಯಾಶ್ಚ ಪುಷ್ಪಿನೀ,
ಬೃಹಸ್ಪತಿ ಪ್ರಸೂತಾಸ್ತ ನೋಮುಂ ಚಂತ್ವನ್ಗಮ್ಹಸಃ
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಫಲೋದಕ ಸ್ನಾನಂ ಸಮರ್ಪಯಾಮಿ .
ಉಷ್ಣೋದಕ ಸ್ನಾನ (ಉದ್ಧರಣೆಯಲ್ಲಿ ಕಳಶದ ನೀರು ತೆಗೆದುಕೊಂಡು ದೀಪದ ಮೇಲೆ ಬೆಚ್ಚಗೆ ಮಾಡಿ ಮೂರ್ತಿಯ ಮೇಲೆ ಬಿಡುವುದು)
ನಾನಾ ತೀರ್ಥದಾಹೃತಂ ಚ ತೋಯಂ ಉಷ್ಣಂ ಮಯಾ ಕೃತಂ,
ಸ್ನಾನಾರ್ಥಂತೆ ಪ್ರಯಚ್ಚಾಮಿ ಸ್ವೀಕುರುಶ್ವ
ದಯಾನಿಧೇ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಉಷ್ನೋದಕ ಸ್ನಾನಂ ಸಮರ್ಪಯಾಮಿ.
ಶುದ್ಧೋದಕ ಸ್ನಾನ (ಕಳಶದಲ್ಲಿನ ನೀರನ್ನು ಉದ್ಧರಣೆಯಿಂದ
ಎರಡು, ಮೂರು ಬಾರಿ
ಹಾಕುವುದು)
ಗಂಗಾದಿ ಸರ್ವ ತೀರ್ಥೇಭ್ಯೋ ಆಹ್ರುತೈರಮಲೈರ್ಜಲೈ,
ಸ್ನಾನಂ ಕುರುಷ್ವ ಭಗವನ್ನುಮಾಪುತ್ರ ನಮೋಸ್ತುತೇ,
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಶುದ್ಧೋದಕ ಸ್ನಾನಂ ಸಮರ್ಪಯಾಮಿ.
(ಉಷ್ಣೋದಕ, ಶುದ್ಧೋದಕ ಹಾಗೂ ಫಲೋದಕಗಳನ್ನು ಇನ್ನೊಂದು ಪಾತ್ರೆಗೆ ಹಾಕಿಟ್ಟುಕೊಳ್ಳುವುದು. ಇದನ್ನು
ಪೂಜೆಯ ನಂತರ ಎಲ್ಲರೂ ತೆಗೆದುಕೊಳ್ಳಲು ಬೇಕಾಗುತ್ತದೆ)
ಆಚಮನ (ಒಂದು ಉದ್ಧರಣೆ ನೀರನ್ನು ಅರ್ಘ್ಯ ಪಾತ್ರೆಗೆ ಬಿಡುವುದು) (ಹೀಗೆ ಪೂಜಿಸಿದ ಬೆಳ್ಳಿಯ ಗಣೇಶನ
ವಿಗ್ರಹವನ್ನು ಒಂದು ಸ್ವಚ್ಚವಾದ ಬಟ್ಟೆಯಿಂದ ಶುಭ್ರವಾಗಿ ಒರೆಸಿ ಮಂಟಪದಲ್ಲಿ ವಿಗ್ರಹದ
ಮುಂಬದಿಯಲ್ಲಿ ಸಣ್ಣ ತಟ್ಟೆಯಲ್ಲಿ ಗಂಧ, ಕುಂಕುಮವನ್ನು ಹಚ್ಚಿ ಇಡುವುದು) (ಈಗ ಮಂಟಪದ ಮೇಲಿಟ್ಟಿರುವ ದೇವರ
ಮೂರ್ತಿಗೆ ಕುಂಕುಮವನ್ನು ಇಟ್ಟು ಒಂದು ಲಕ್ಷಣವಾದ ಹೂವನ್ನು ಶಿರದ ಮೇಲಿಡುವುದು. ಇನ್ನು ಮುಂದಿನ ಪೂಜಾ
ವಿಧಿಗಳನ್ನು ಈ ಮೂರ್ತಿಗೆ ಮಾಡುವುದು)
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಆಚಮನಂ ಸಮರ್ಪಯಾಮಿ.
ವಸ್ತ್ರದ್ವಯ (ಒಂದು ಜೊತೆ ಗೆಜ್ಜೆ ವಸ್ತ್ರವನ್ನು ಏರಿಸುವುದು)
ನವ ವಸ್ತ್ರ ದ್ವಯಂ
ರಕ್ತಂ ದೇವಾನಾಂ ಸದೃಶಪ್ರಭಂ,
ಭಕ್ತ್ಯಾ ದತ್ತಂ ಗೃಹಾಣೇದಂ ಲಂಬೋದರ ನಮೋಸ್ತುತೇ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ವಸ್ತ್ರದ್ವಯಂ ಸಮರ್ಪಯಾಮಿ.
ಯಜ್ನೋ ಪವೀತ (ಬಿಡಿಸಿಟ್ಟಿಕೊಂಡಿರುವ ಒಂದು ಜನಿವಾರವನ್ನು
ಮೂರು ಕಡೆ ಅರಿಶಿನ ಹಚ್ಚ್ಚಿ ಮಂತ್ರ ಹೇಳಿದ ನಂತರ ಬಲಭುಜದ ಮೇಲಿಂದ ಏರಿಸುವುದು)
ರಾಜಿತಂ ಬ್ರಂಹಸೂತ್ರಂ ಚ ಕಾಂಚನಂಚೋತ್ತರೀಯಕಂ,
ಗೃಹಾಣ
ಚಾರು ಸರ್ವಜ್ಞ ಭಕ್ತಾನಾಮಿಷ್ಟದಾಯಕ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಯಜ್ನೋ ಪವೀತಂ ಸಮರ್ಪಯಾಮಿ.
ಆಭರಣ (ದೇವರ ಮೂರ್ತಿಗೆ ಇದ್ದರೆ ಬಂಗಾರದ ಸರ ಹಾಕುವುದು. ಇಲ್ಲವಾದರೆ ಅಲಂಕಾರವಾದ ಹೂಮಾಲೆಯನ್ನು ಹಾಕುವುದು)
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಅಲಂಕಾರಣಾರ್ಥಂ ಆಭರಣಂ ಸಮರ್ಪಯಾಮಿ.
ಗಂಧ
(ಗಂಧದ ಕೊರಡಿನಿಂದ ಮೊದಲೇ ತೇಯ್ದಿಟ್ಟುಕೊಂಡಿರುವ ಹಸಿಯಾಗಿರುವ ಗಂಧ, ಇಲ್ಲವಾದರೆ ಗಂಧದ
ಪುಡಿಯನ್ನು ಹಸಿ ಮಾಡಿ ಹೊಕ್ಕಳಿಗೆ ಗಂಧ
ಇಡುವುದು) (ಕೆಲವರು ಗಣೇಶನ ವಿಗ್ರಹದ ಹೊಟ್ಟೆಗೆ ಗಂಧವನ್ನು ಇಟ್ಟು ಅದರ ಮೇಲೆ ಒಂದು ಸಣ್ಣ
ನಾಣ್ಯವನ್ನು ಇಡುವುದುಂಟು)
ಗಂಧ ಕರ್ಪೂರ ಸಂಯುಕ್ತಂ ದಿವ್ಯ ಚಂದನಂ ಉತ್ತಮಂ,
ವಿಲೇಪನಂ ಸುರಶ್ರೇಷ್ಠ ಪ್ರೀತ್ಯರ್ಥಂ ಪ್ರತಿ ಗೃಹ್ಯತಾಂ .
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಗಂಧಂ ಸಮರ್ಪಯಾಮಿ.
ಅಕ್ಷತ (ಅಕ್ಷತೆಯನ್ನು ಹಾಕುವುದು)
ರಕ್ತಾಕ್ಷತಾಂಶ್ಚ ದೇವೇಶ ಗೃಹಾಣ ದ್ವಿರದಾನನ,
ಲಲಾಟ ಪಟಲೇ ಚಂದ್ರಸ್ತ ಸ್ಯೋಪರಿ ವಿಧಾಯತಾಂ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಅಕ್ಷತಾಂ ಸಮರ್ಪಯಾಮಿ.
ಪರಿಮಳ ದ್ರವ್ಯ (ಒಳ್ಳೆಯ ಘಮಘಮಿಸುವ ಪರಿಮಳ ದ್ರವ್ಯವನ್ನು, ಇಲ್ಲದಿದ್ದರೆ ಹೆಚ್ಚು ಪರಿಮಳವುಳ್ಳ ಹೂವನ್ನು ಕಳಶದ ನೀರಿನಲ್ಲಿ ಅದ್ದಿ ಸಿಂಪಡಿಸುವುದು)
ಫಾಲಚಂದ್ರ ನಮಸ್ತುಭ್ಯಂ ನಮಸ್ತೇ ವಿಶ್ವರೂಪಿಣೆ,
ನಾನ ಪರಿಮಳ ದ್ರವ್ಯಾನ್ ಗೃಹಾಣ ಪರಮೇಶ್ವರ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ನಾನಾ ವಿಧ ಪರಿಮಳ ದ್ರವ್ಯಾಣಿ ಸಮರ್ಪಯಾಮಿ.
ಪುಷ್ಪಾಣಿ (ಸುಗಂಧಯುತವಾದ ಹೂವನ್ನು ಪೂಜೆ ಮಾಡುವುದು)
ಸುಗಂಧೀನಿ ಸುಪುಷ್ಪಾಣಿ ವರಸಿದ್ಧಿ ಪ್ರದಾಯಕ.
ಗಣನಾಥ ನಮಸ್ತುಭ್ಯಂ ಗೃಹಾಣ ವರದೋ ಭವ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಸುಗಂಧ ಪುಷ್ಪಾಣಿ ಸಮರ್ಪಯಾಮಿ.
ಅಥಾಂಗ ಪೂಜೆ (ಪೂಜಯಾಮಿ ಎಂದು ಹೇಳಿದಾಗ ಅಕ್ಷತೆಯಿಂದ ವಿಗ್ರಹಕ್ಕೆ ಪೂಜಿಸುತ್ತಾ
ಇರುವುದು)
ಓಂ ಗಣೇಶಾಯ ನಮಃ ಪಾದೌ (ಪಾದಗಳು) ಪೂಜಯಾಮಿ,
ಓಂ ಏಕದಂತಾಯ ನಮಃ ಗುಲ್ಫೌ (ಹಿಮ್ಮಡಿ) ಪೂಜಯಾಮಿ,
ಓಂ ಶೂರ್ಪಕರ್ಣಾಯ ನಮಃ ಜಾನುನೀ (ಮೊಣಕಾಲು) ಪೂಜಯಾಮಿ,
ಓಂ ವಿಘ್ನರಾಜಾಯ ನಮಃ ಜಂಘೇ (ಹಿಂಭಾಗ) ಪೂಜಯಾಮಿ,
ಓಂ ಅಖುವಾಹನಾಯ ನಮಃ ಊರೂ (ತೊಡೆ) ಪೂಜಯಾಮಿ,
ಓಂ ಹೇರಂಬಾಯ ನಮಃ ಕಟಿಂ (ನಡು) ಪೂಜಯಾಮಿ,
ಓಂ ಲಂಬೋದರಾಯ ನಮಃ ಉದರಂ (ಹೊಟ್ಟೆ) ಪೂಜಯಾಮಿ,
ಓಂ ಗಣನಾಥಾಯ ನಮಃ ನಾಭಿಂ (ಹೊಕ್ಕಳು) ಪೂಜಯಾಮಿ,
ಓಂ ಗಣೇಶಾಯ ನಮಃ ಹೃದಯಂ (ಎದೆ) ಪೂಜಯಾಮಿ,
ಓಂ ಸ್ಥೂಲಕಂಠಾಯ ನಮಃ ಕಂಠಂ (ಕತ್ತು) ಪೂಜಯಾಮಿ,
ಓಂ ಸ್ಕಂದಾಗ್ರಜಾಯ ನಮಃ ಸ್ಕಂಧೌ (ಗಂಟಲು) ಪೂಜಯಾಮಿ,
ಓಂ ಪಾಶಹಸ್ತಾಯ ನಮಃ ಹಸ್ತೌ (ಕೈಗಳು) ಪೂಜಯಾಮಿ,
ಓಂ ಗಜವಕ್ತ್ರಾಯ ನಮಃ ವಕ್ತ್ರಂ (ಮುಖ) ಪೂಜಯಾಮಿ,
ಓಂ ವಿಘ್ನಹನ್ತ್ರೇ ನಮಃ ನೇತ್ರೇ (ಕಣ್ಣುಗಳು) ಪೂಜಯಾಮಿ,
ಓಂ ಈಶ ಪುತ್ರಾಯ ನಮಃ ಕರ್ಣೌ (ಕಿವಿಗಳು) ಪೂಜಯಾಮಿ,
ಓಂ ಫಾಲಚಂದ್ರಾಯ ನಮಃ ಲಲಾಟಂ (ಹಣೆ) ಪೂಜಯಾಮಿ,
ಓಂ ಉಮಾ ಪುತ್ರಾಯ ನಮಃ ಶಿರಃ (ತಲೆ) ಪೂಜಯಾಮಿ,
ಓಂ ಸರ್ವೇಶ್ವರಾಯ ನಮಃ ಸರ್ವಾಂಗಾಣಿ (ಎಲ್ಲಾ
ಅಂಗಗಳು) ಪೂಜಯಾಮಿ.
ಪತ್ರ ಪೂಜೆ (ವಿವಿದ ಬಗೆಯ ಎಲೆಗಳಿಂದ/ಪತ್ರೆಗಳಿಂದ ಪೂಜೆ ಮಾಡುವುದು)
ಓಂ ಸುಮುಖಾಯ ನಮಃ ಮಾಚೀ ಪತ್ರಂ ಪೂಜಯಾಮಿ,
ಓಂ ಗಣಾಧಿಪಾಯ ನಮಃ ಬೃಹತೀ ಪತ್ರಂ ಪೂಜಯಾಮಿ,
ಓಂ ಉಮಾಧಿಪಾಯ ನಮಃ ಬಿಲ್ವ ಪತ್ರಂ ಪೂಜಯಾಮಿ,
ಓಂ ಗಜಾನನಾಯ ನಮಃ ದೂರ್ವಾಯುಗ್ಮ ಪತ್ರಂ ಪೂಜಯಾಮಿ,
ಓಂ ಹರಸೂನವೇ ನಮಃ ದತ್ತೂರ ಪತ್ರಂ ಪೂಜಯಾಮಿ,
ಓಂ ಲಂಬೋದರಾಯ ನಮಃ ಬದರೀ ಪತ್ರಂ ಪೂಜಯಾಮಿ,
ಓಂ ಗುಹಾಗ್ರಜಾಯ ನಮಃ ಅಪಾಮಾರ್ಗ ಪತ್ರಂ ಪೂಜಯಾಮಿ,
ಓಂ ಗಜಕರ್ಣಾಯ ನಮಃ ತುಳಸೀ ಪತ್ರಂ ಪೂಜಯಾಮಿ,
ಓಂ ಏಕ ದಂತಾಯ ನಮಃ ಚೂತ ಪತ್ರಂ ಪೂಜಯಾಮಿ,
ಓಂ ವಿಕಟಾಯ ನಮಃ ಕರವೀರ ಪತ್ರಂ ಪೂಜಯಾಮಿ,
ಓಂ ಭಿನ್ನ ದಂತಾಯ ನಮಃ ವಿಷ್ಣು ಕ್ರಾಂತಿ ಪತ್ರಂ ಪೂಜಯಾಮಿ,
ಓಂ ವಟವೇ ನಮಃ ದಾಡಿಮೀ ಪತ್ರಂ ಪೂಜಯಾಮಿ,
ಓಂ ಸರ್ವೇಶ್ವರಾಯ ನಮಃ ದೇವದಾರು ಪತ್ರಂ ಪೂಜಯಾಮಿ,
ಓಂ ಫಾಲಚಂದ್ರಾಯ ನಮಃ ಮರುವಕ ಪತ್ರಂ ಪೂಜಯಾಮಿ,
ಓಂ ಹೇರಂಬಾಯ ನಮಃ ಸಿಂಧುವಾರ ಪತ್ರಂ ಪೂಜಯಾಮಿ,
ಓಂ ಶೂರ್ಪಕರ್ಣಾಯ ನಮಃ ಜಾಜೀ ಪತ್ರಂ ಪೂಜಯಾಮಿ,
ಓಂ ಸುರಾಗ್ರಜಾಯ ನಮಃ ಗಣಕೀ ಪತ್ರಂ ಪೂಜಯಾಮಿ,
ಓಂ ಇಭವಕ್ತ್ರಾಯ ನಮಃ ಶಮೀ ಪತ್ರಂ ಪೂಜಯಾಮಿ,
ಓಂ ವಿನಾಯಕಾಯ ನಮಃ ಅಶ್ವಥ್ಹ ಪತ್ರಂ ಪೂಜಯಾಮಿ,
ಓಂ ಸುರ ಸೇವಿತಾಯ ನಮಃ ಅರ್ಜುನ ಪತ್ರಂ ಪೂಜಯಾಮಿ,
ಓಂ ಕಪಿಲಾಯ ನಮಃ ಆರ್ಕ ಪತ್ರಂ ಪೂಜಯಾಮಿ,
ಓಂ ಶ್ರೀ ವರಸಿದ್ಧಿ ವಿನಾಯಕಾಯ ನಮಃ, ನಾನಾ ವಿಧ ಪತ್ರಾಣಿ ಪೂಜಯಾಮಿ.
ದೂರ್ರ್ವಾಯುಗ್ಮ ಪೂಜೆ (ಗರಿಕೆ ಹುಲ್ಲನ್ನು ಎರಡೆರಡಾಗಿ ಹತ್ತು ಬಾರಿ ಮತ್ತು
ಒಂದನ್ನು ಹನ್ನೊಂದನೇ ಬಾರಿ ಒಟ್ಟು
೨೧ ಗರಿಕೆ ಹುಲ್ಲು ಪೂಜಿಸುವುದು)
ಗಣಾಧಿಪಾಯ ನಮಃ ದೂರ್ವಾಯುಗ್ಮಂ
ಪೂಜಯಾಮಿ,
ಉಮಾಪುತ್ರಾಯ ನಮಃ ದೂರ್ವಾಯುಗ್ಮಂ ಪೂಜಯಾಮಿ,
ಅಖುವಾಹನಾಯ ನಮಃ ದೂರ್ವಾಯುಗ್ಮಂ ಪೂಜಯಾಮಿ,
ವಿನಾಯಕಾಯ ನಮಃ ದೂರ್ವಾಯುಗ್ಮಂ
ಪೂಜಯಾಮಿ,
ಈಶಪುತ್ರಾಯ ನಮಃ ದೂರ್ವಾಯುಗ್ಮಂ
ಪೂಜಯಾಮಿ,
ಸರ್ವ ಸಿದ್ಧಿ ಪ್ರದಾಯಕಾಯ ನಮಃ ದೂರ್ವಾಯುಗ್ಮಂ ಪೂಜಯಾಮಿ,
ಏಕ ದಂತಾಯ ನಮಃ ದೂರ್ವಾಯುಗ್ಮಂ ಪೂಜಯಾಮಿ,
ಇಭ ವಕ್ತ್ರಾಯ ನಮಃ ದೂರ್ವಾಯುಗ್ಮಂ ಪೂಜಯಾಮಿ,
ಮೂಷಕವಾಹನಾಯ ನಮಃ ದೂರ್ವಾಯುಗ್ಮಂ ಪೂಜಯಾಮಿ,
ಕುಮಾರ ಗುರುವೇ ನಮಃ ದೂರ್ವಾಯುಗ್ಮಂ ಪೂಜಯಾಮಿ ,
ಅಘನಾಷಿನೇ ನಮಃ ದೂರ್ವಾಯುಗ್ಮಂ ಪೂಜಯಾಮಿ ,
ಓಂ ಶ್ರೀ ವರಸಿದ್ಧಿ ವಿನಾಯಕಾಯ ನಮಃ ದೂರ್ವಾ ಪೂಜಾಂ ಸಮರ್ಪಯಾಮಿ .
ಅಷ್ಟೋತ್ತರ ಪೂಜೆ (ವಿಗ್ರಹಕ್ಕೆ ನಮಃ ಎಂದಾಗ ಅಕ್ಷತೆಯನ್ನು ಹಾಕುತ್ತಾ
ಪೂಜಿಸುವುದು)
ಓಂ ಅವ್ಯಾಯ ನಮಃ , ಓಂ ಅಗ್ನಿಗರ್ವಚ್ಚಿದೇ ನಮಃ , ಓಂ ಅಕಲ್ಮಷಾಯ ನಮಃ, ಓಂ ಅವ್ಯಕ್ತಾಯ ನಮಃ, ಓಂ ಅಬ್ಜೋತ್ಫಲಕರಾಯ ನಮಃ,, ಓಂ ಅಮರೇಶ್ವರಾಯ ನಮಃ, ಓಂ ಅಗ್ರಗಣ್ಯಾಯ ನಮಃ, ಓಂ ಅಚ್ಯುತಾಯ ನಮಃ, ಓಂ ಅಮೂರ್ತಯೇನಮಃ, ಓಂ ಇಂದ್ರ ಶ್ರೀ
ಪ್ರದಾಯ ನಮಃ, ಓಂ ಇಕ್ಷುಚಾಪಧ್ರುತೇ ನಮಃ,
ಓಂ ಏಕದಂತಾಯ ನಮಃ, ಓಂ ಕಾಮಿನೇ ನಮಃ, ಓಂ ಕೃತಿನೇ ನಮಃ, ಓಂ ಕಲಾದ್ರಿಭೃತೇ ನಮಃ, ಓಂ ಕಾಂತಾಯ ನಮಃ, ಓಂ ಕೃತಾಗಮಾಯ ನಮಃ, ಓಂ ಕೇವಲಾಯ ನಮಃ, ಓಂ ಗೌರೀ ಪುತ್ರಾಯ ನಮಃ, ಓಂ ಗಣೇಶ್ವರಾಯ ನಮಃ, ಓಂ ಗಜಾನನಾಯ ನಮಃ, ಓಂ ಗೃಹ ಪತೆಯೇ ನಮಃ, ಓಂ ಗುಣಾತೀತಾಯ ನಮಃ, ಓಂ ಗದಿನೇ ನಮಃ, ಓಂ ಗ್ರಾಮಣ್ಯೇ ನಮಃ, ಓಂ ಗಣಪಾಯ ನಮಃ, ಓಂ ಚತುರ್ಭಾಹವೇ ನಮಃ, ಓಂ ಚತುರಾಯ ನಮಃ, ಓಂ ಚಂಡಾಯ ನಮಃ, ಓಂ ಚಕ್ರಿಣೆ ನಮಃ, ಓಂ ಚಂದ್ರಚೂಡಾಯನಮಃ, ಓಂ ಜಟಿನೇ ನಮಃ,
ಓಂ ಪೂತಾಯ ನಮಃ, ಓಂ ಪುರುಶೋತ್ತಮಾಯ
ನಮಃ, ಓಂ ಪಾಪಹಾರಿಣೆ ನಮಃ, ಓಂ ಪ್ರಮರ್ಥದೈತ್ಯ
ಭಯದಾಯ ನಮಃ, ಓಂ ಪಾರ್ವತಿ ಶಂಕರೋತ್ಸಂಗ ಖೇಲನೋತ್ಸವಲಾಲನಾಯ ನಮಃ, ಓಂ ಪ್ರಸನ್ನಾತ್ಮನೇ ನಮಃ, ಓಂ ಬ್ರಂಹ್ಮವಿತ್ತಮಾಯ
ನಮಃ, ಓಂ ಬೀಜಾಪುರ ಕರಾಯ ನಮಃ, ಓಂ ಬ್ರಂಹ್ಮಿಷ್ಟ್ಹಾಯ
ನಮಃ, ಬುದ್ಧಿಪ್ರಿಯಾಯ
ನಮಃ, ಓಂ ಬ್ರಂಹ್ಮಚಾರಿಣೆ ನಮಃ ,ಓಂ ಭಯವರ್ಜಿತಾಯ ನಮಃ, ಓಂ ಭಕ್ತಕಾಂಕ್ಷಿತದಾಯ
ನಮಃ, ಓಂ ಭಕ್ತ ವಿಘ್ನ
ವಿನಾಶನಾಯ ನಮಃ , ಓಂ ಮುನಿಸ್ತುತ್ಯಾಯ ನಮಃ, ಓಂ ಮಾಯಾಯುಕ್ತಾಯ
ನಮಃ, ಓಂ ತ್ರಯೀಕರ್ತ್ರೇ ನಮಃ, ಓಂ ದಕ್ಷಾಧ್ಯಕ್ಷಾಯ
ನಮಃ, ಓಂ ದ್ವಿಜ ಪ್ರಿಯಾಯ ನಮಃ, ಓಂ ದೇವಾನೀಕಾರ್ಚಿತಾಯ
ನಮಃ, ಓಂ ದ್ವೈಮಾತುರಾಯ ನಮಃ, ಓಂ ದೂರ್ವಾಬಿಲ್ವ
ಪ್ರಿಯಾಯ ನಮಃ, ಓಂ ದಾಂತಾಯ ನಮಃ, ಓಂ ನಿರಂಜನಾಯ ನಮಃ, ಓಂ ನಾಗಯಜ್ನೋಪವೀತಿನೇ ನಮಃ, ಓಂ ರಾಮಾರ್ಚಿತಪದಾಯ ನಮಃ ,ಓಂ ಲಂಬೋದರಾಯ ನಮಃ, ಓಂ ವಿನಾಯಕಾಯ ನಮಃ, ಓಂ ವಿಘ್ನರಾಜಾಯ ನಮಃ, ಓಂ ವರದಾಯ ನಮಃ, ಓಂ ವಾಣೀಬಲಪ್ರದಾಯ ನಮಃ, ಓಂ ವಿದ್ವತ್ಪ್ರಿಯಾಯ
ನಮಃ, ಓಂ ವೀತಭಯಾಯ ನಮಃ, ಓಂ ವೃದ್ಧಿದಾಯ ನಮಃ, ಓಂ ವ್ರತಿನೇ ನಮಃ, ಓಂ ವಾಗೀಶಾಯ ನಮಃ, ಓಂ ವಕ್ರತುಂಡಾಯ ನಮಃ, ಓಂ ವ್ಯಕ್ತಮೂರ್ತಯೇ
ನಮಃ, ಓಂ ವರಮೂಷಕವಾಹನಾಯ ನಮಃ, ಓಂ ಶರ್ವತನಯಾಯ ನಮಃ, ಓಂ ಶರ್ವರೀಪ್ರಿಯಾಯ ನಮಃ, ಓಂ ಶಿವಾಯ ನಮಃ, ಓಂ ಶುದ್ಧಾಯ ನಮಃ, ಓಂ ಶಾಂತಾಯ ನಮಃ, ಓಂ ಶಕ್ತಿಸಂಯುತಾಯ ನಮಃ, ಓಂ ಶೂರ್ಪಕರ್ಣಾಯ ನಮಃ, ಓಂ ಶಾಶ್ವತಾಯ ನಮಃ, ಓಂ ಶ್ರೀಶಾಯ ನಮಃ, ಓಂ ಶ್ರಿಪತಯೇ ನಮಃ, ಓಂ ಶ್ರಿಕಾಂತಾಯ ನಮಃ, ಓಂ ಶೂರಾಯ ನಮಃ, ಓಂ ಶ್ರೀಪ್ರದಾಯ ನಮಃ, ಓಂ ಸ್ಕಂದಾಗ್ರಜಾಯ
ನಮಃ, ಓಂ ಸರ್ವಸಿದ್ಧಿಪ್ರದಾಯ ನಮಃ, ಓಂ ಸರ್ವಾತ್ಮಕಾಯ
ಸೃಷ್ಥಿಕರ್ತ್ರೆ ನಮಃ, ಓಂ ಸ್ವಯಂ ಸಿದ್ಧಾರ್ಚಿತಪದಾಯ ನಮಃ, ಓಂ ಸೋ ಮಸೂರ್ಯಾಗ್ನಿಲೋಚನಾಯ ನಮಃ, ಓಂ ಸ್ತುತಿಹರ್ಷಿತಾಯ
ನಮಃ, ಓಂ ಸ್ಥೂಲಕಂಠಾಯ ನಮಃ, ಓಂ ಸಾಮಘೋಷಪ್ರಿಯಾಯ
ನಮಃ, ಓಂ ಸ್ಥೂಲತುಂಡಾಯ ನಮಃ, ಓಂ ಸ್ಥಿರಾಯ ನಮಃ, ಓಂ ಸುಭಗಾಯ ನಮಃ, ಓಂ ಸಿದ್ಧಿದಾಯಕಾಯ
ನಮಃ, ಓಂ ಸಮಾಹಿತಾಯ ನಮಃ, ಓಂ ಸೌಮ್ಯಾಯ ನಮಃ ಓಂ ಸಿದ್ಧಾಯ ನಮಃ, ಓಂ ಸಚ್ಚಿದಾನಂದ ವಿಗ್ರಹಾಯ ನಮಃ, ಓಂ ಸಮಸ್ತ ಜಗದಾಧಾರಾಯ ನಮಃ, ಓಂ ಸರ್ವ
ಸಿದ್ಧಿಪ್ರದಾಯಕಾಯ,
ಇತಿ ಶ್ರೀ ವರಸಿದ್ಧಿ
ವಿನಾಯಕ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ.
ಪುಷ್ಪ ಮಾಲಿಕೆ (ಒಂದು
ಹೂವಿನ ಮಾಲೆಯನ್ನು ಮೂರ್ತಿಗೆ ಹಾಕುವುದು)
ಮಾಲ್ಯಾನಿ ಚ ಸುಗಂಧೀನಿ, ಮಾಲತ್ಯಾದೀನಿ ಚ ಪ್ರಭೋ,
ಮಯಾಹೃತಾನಿ ಪೂಜಾರ್ಥಂ, ಗೃಹಾಣ ಗಣ ನಾಯಕ.
ಧೂಪ
(ಧೂಪ ಇಲ್ಲದಿದ್ದರೆ ಅಗರ/ಊದು
ಬತ್ತಿಯನ್ನು ಹಚ್ಚಿಕೊಂಡು ಮೂರ್ತಿಯ ಮುಂದೆ
ಮೂರು ಬಾರಿ ಎಡ ಬದಿಯಿಂದ ಬಲ
ಬದಿಗೆ ಗಡಿಯಾರದ ಮುಳ್ಳಿನ ಚಲನೆಯ ರೀತಿ ಬಲಗೈಯಿಂದ ಹಿಡಿದು ಘಂಟೆ ಬಾರಿಸುತ್ತಾ ಚಲಿಸುವುದು)
ದಶಾಂಗಂ ಗುಗ್ಗುಲಂ ಧೂಪಂ ಸುಗಂಧಂಚ ಮನೋಹರಂ,
ಉಮಾಸುತ ನಮಸ್ತುಭ್ಯಂ ಗೃಹಾಣ ವರದೋ ಭವ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಧೂಪಂ ದರ್ಶಯಾಮಿ.
ದೀಪ (ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಮೂರು ಹೂಬತ್ತಿಯನ್ನು ಇಟ್ಟು ಹಚ್ಚಿಕೊಳ್ಳುವುದು. ನಿಮ್ಮ ಕೈಯಲ್ಲಿ ಸ್ವಲ್ಪ
ಅಕ್ಷತೆ, ಒಂದು ಹೂವು ಮತ್ತು ಹಲಗಾರತಿ ಹಿಡಿದು ಎಡಗೈಯಲ್ಲಿ ಘಂಟೆ ಬಾರಿಸುತ್ತಾ ಹೇಳಿದಂತೆ ಮೂರು ಬಾರಿ ಆರತಿ ಮಾಡಿ. ಕರ್ಪೂರದಿಂದಲೂ ಮಾಡಬಹುದು. ಆದರೆ ಕೆಲವು ದೇಶದಲ್ಲಿರಿವುವರು ಕರ್ಪೂರದಲ್ಲಿ ಮಾಡಲು ಸಾಧ್ಯವಾಗದಿರಬಹುದು)
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾಯೋಜಿತಂ ಮಯಾ,
ಗೃಹಾಣ ಮಂಗಳಂ ದೀಪಂ ಈಶಪುತ್ರ ನಮೋಸ್ತುತೇ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ದೀಪಂ
ದರ್ಶಯಾಮಿ.
ಮಹಾ ನೈವೇದ್ಯ (ಮಂಟಪದ ಮುಂದೆ ಸ್ವಚ್ಚವಾದ
ಜಾಗದಲ್ಲಿ ಕಳಶದ ನೀರಿನಿಂದ ಒಂದು
ಮಂಡಲವನ್ನು ಮಾಡಿ ಅದರ ಮೇಲೆ
ಸ್ವಲ್ಪ ಅಕ್ಷತೆ ಹಾಕುವುದು,
ಐದು ವಿವಿಧ ಬಗೆಯ ಹಣ್ಣುಗಳನ್ನು ತಟ್ಟೆಯಲ್ಲಿ ಎರಡು ವೀಳ್ಯದ ಎಲೆಯ ಮೇಲೆ ಇಡುವುದು. ವೀಳ್ಯದೆಲೆ ಮೇಲೆ ಸ್ವಲ್ಪ ಅಡಕೆಯನ್ನು ಇಡಲು ಮರೆಯದಿರಿ. ಇದೇ ರೀತಿ ಇನ್ನೊಂದು
ಮಂಡಲವನ್ನು ಮಾಡಿ, ಅಕ್ಷತೆ ಹಾಕಿ ತಟ್ಟೆಯಲ್ಲಿ ವಿವಿಧ ಬಗೆಯ ಭಕ್ಷ್ಯಗಳನ್ನು ಸ್ವಲ್ಪ ಸ್ವಲ್ಪ ಇಡುವುದು. ಎರಡೂ ತಟ್ಟೆಗಳ ಮೇಲೆ ತುಳಸಿ ದಳಗಳನ್ನು
ಹಾಕಿ . ಬಲಗೈನಲ್ಲಿ ಸ್ವಲ್ಪ ಕಳಶದ ನೀರನ್ನು ಹಾಕಿಕೊಂಡು ಎರಡೂ ತಟ್ಟೆಗಳ ಸುತ್ತ ಹಾಕುವುದು.
ಸ್ವಲ್ಪ ನೀರನ್ನು ತಟ್ಟೆಗಳ ಮೇಲೆ ಚುಮುಕಿಸಿ . ವೀಳ್ಯದ ಎಲೆಯ ತುದಿಯನ್ನು ಮತ್ತು ಒಂದು ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಮುರಿಯುವುದು. ಮಂತ್ರ ಹೇಳುವಾಗ ಸ್ವಾಹಾ ಎಂದಾಗಲೆಲ್ಲಾ ಎರಡೂ ಕೈಗಳ ಅಂಗೈಯನ್ನು ತಟ್ಟೆಯಿಂದ ದೇವರ
ಮೂರ್ತಿಯ ಕಡೆಗೆ ಚಲಿಸುವುದು)
ಸುಗಂಧಾನ್, ಸುಕ್ರುತಾಂಶ್ಚೈವ್ಯ ಮೋದಕಾನ್
ಘ್ರುತಪಾಚಿತಾನ್. ನೈವೇದ್ಯಂ ಗೃಹ್ಯತಾಂ ದೇವ
ಚನಮುಘ್ಧೈಹಿ ಪ್ರಕಲ್ಪಿತಾಂ. ಭಕ್ಷ್ಯಂ
ಬ್ಹೊಜ್ಯಂ ಚ ಲೇಹ್ಯಂ ಚ
ಚೋಷ್ಯಂ ಪಾನೀಯಮೇವ ಚ, ಇದಂ ಗೃಹಾಣ ನೈವೇದ್ಯಂ ಮಯಾ ದತ್ತಂ ವಿನಾಯಕ.
ದೇವಸವಿತಃ ಪ್ರಸುವ ಸತ್ಯಂತ್ವರ್ತಿನ
ಪರಿಷೀಂಚಾಮಿ
ಅಮೃತಮಸ್ತು, ಅಮೃತೋಪಸ್ತರಣಮಸಿ ಸ್ವಾಹಾ,
ಓಂ ಪ್ರಾಣಾಯಸ್ವಾಹಾ, ಅಪಾನಾಯ ಸ್ವಾಹಾ,
ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ,
ಸಮಾನಾಯ ಸ್ವಾಹಾ, ಬ್ರಂಹ್ಮಣೇ ಸ್ವಾಹಾ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಮಹಾ ನೈವೇದ್ಯಂ ಸಮರ್ಪಯಾಮಿ.
ಫಲಾಷ್ಟಕ (ತಟ್ಟೆಯಲ್ಲಿರುವ ಒಂದು ಹಣ್ಣಿನ ಮೇಲ್ಭಾಗವನ್ನು ಸ್ವಲ್ಪ ತೆಗೆದು, ಹಣ್ಣು ತೆಂಗಿನಕಾಯಿಯನ್ನು ದೇವರಿಗೆ ತೋರಿಸುವುದು)
ನಾರಿಕೇಲಂಚ ನಾರಂಗ ಕದಲೀ ಮತುಲುಂಗಕಂ
ಇಕ್ಷು ಖಂಡಂ ಗೃಹಾಣೇಶ ಪ್ರೀತ್ಯರ್ಥಂ ಪ್ರತಿಗೃಹ್ಯತಾಂ.
ದಾಡಿಂಬ ಬದರೀ ಜಂಬೂ ಕಪಿತ್ಥಂ ಪ್ರಭ್ರತೀನಿ ಚ,
ದ್ರಾಕ್ಷ್ಯಾ ಖರ್ಜೂರ ಪನಸ ಫಲಾನಿ ಪ್ರತಿಗೃಹ್ಯತಾಂ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಫಲಾಷ್ಟಕಂ ಸಮರ್ಪಯಾಮಿ.
ತಾಂಬೂಲ (ತಟ್ಟೆಯಲ್ಲಿರುವ ವೀಳ್ಯದೆಲೆ, ಅಡಿಕೆಯನ್ನು ತೋರಿಸುವುದು)
ಫೂಗೀಫಲ ಸಮಾಯುಕ್ತಂ ನಾಗವಲ್ಲೀದಲೈರ್ಯುತಂ,
ಯೇಲಾ, ಲವಂಗ, ಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಂ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ,
ತಾಂಬೂಲಂ ಸಮರ್ಪಯಾಮಿ.
ದಕ್ಷಿಣೆ (ವೀಳ್ಯದೆಲೆಯ ಮೇಲೆ ಇಟ್ಟಿರುವ ದಕ್ಷಿಣೆ ತೋರಿಸುವುದು)
ಸೌವರ್ಣಂ ರಜತಂ ಚೈವ ನಿಕ್ಷಿಪ್ತಂಚ ತವಾಗ್ರತಃ,
ಸುವರ್ಣ ಪುಷ್ಪಂ ದೇವೇಶ ಸರ್ವ ವಿಘ್ನ ಹರೋಭವ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ,
ಸುವರ್ಣಪುಷ್ಪ ದಕ್ಷಿಣಾಂ ಸಮರ್ಪಯಾಮಿ.
ಮಹಾ ಮಂಗಳಾರತಿ (ಒಂದು ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಐದು ಹೂಬತ್ತಿಗಳನ್ನು
ಇಟ್ಟುಕೊಳ್ಳುವುದು. ಈ ಹಲಗಾರತಿಯನ್ನು
ಒಂದು ತಟ್ಟೆಯಲ್ಲಿ ಇಟ್ಟುಕೊಂಡರೆ ಕೈಗೆ ಬಿಸಿ ತಾಕುವುದಿಲ್ಲ. ಹಲಗಾರತಿಯ ಇನ್ನೊಂದು ತುದಿಯಲ್ಲಿ
ಸ್ವಲ್ಪ ಹೂವು, ಅಕ್ಷತೆಯನ್ನು ಇಟ್ಟುಕೊಳ್ಳುವುದು, (ಕೆಲವರು ಇದರ ಮೇಲೆ ಒಂದು ಉದ್ದರಣೆ ನೀರು ಹಾಕುವುದುಂಟು). ಇದು ಮಹಾ
ಮಂಗಳಾರತಿ ಆದ್ದರಿಂದ ಮನೆಯಲ್ಲಿರುವವರನ್ನೆಲ್ಲ ಒಟ್ಟಿಗೆ ನಿಂತುಕೊಂಡು ಕೈ ಮುಗಿದುಕೊಳ್ಳಲು ಹೇಳುವುದು. ಬಲಗೈಯಲ್ಲಿ ತಟ್ಟೆ ಹಿಡಿದುಕೊಂಡು ಬತ್ತಿಗಳನ್ನು ಹಚ್ಚಿಕೊಳ್ಳುವುದು. ಎಡಗೈಯಲ್ಲಿ ಘಂಟೆ
ಹಿಡಿದು ಬಾರಿಸುತ್ತಾ ದೇವರ ಎಡಗಡೆಯಿಂದ
ಗಡಿಯಾರದ ಮುಳ್ಳಿನ ರೀತಿ ಮೇಲಿಂದ ಕೆಳಗೆ, ಸುತ್ತಲೂ ಕೈಯನ್ನು ಚಲಿಸುತ್ತಾ ಮಂಗಳಾರತಿಯನ್ನು ಕನಿಷ್ಠ ಮೂರು/ಐದು ಬಾರಿ ಮಾಡುವುದು) (ಮಹಾ
ಮಂಗಳಾರತಿ ಮಾಡುವಾಗ ಗಣಪತಿಯ ಸ್ತೋತ್ರಗಳನ್ನು ಹೇಳಿಕೊಂಡು ನಿಧಾನವಾಗಿ ಮಾಡುವುದು)
ಘ್ರುತವರ್ತಿ ಸಹಸ್ರೈಶ್ಚ ಕರ್ಪೂರಶಕಲೈಸ್ತಥಾ,
ನೀರಾಜನಂ ಮಯಾದತ್ತಂ ಗೃಹಾಣ ವರದೊಭವ,
ಶ್ರೀ ವರಸಿದ್ಧಿ ವಿನಾಯಕನಮಃ ಮಹಾ ನೀರಾಜನಂ ಸಮರ್ಪಯಾಮಿ,
ಮಹಾ ನೀರಾಜನಂ ನಂತರಂ ಆಚಮನೀಯಂ ಸಮರ್ಪಯಾಮಿ. (ಒಂದು ಉದ್ಧರಣೆ ಆಚಮನದ
ನೀರನ್ನು ಪಾತ್ರೆಗೆ ಬಿಟ್ಟು ನೀವು ಮೊದಲು ಮಂಗಳಾರತಿಯನ್ನು ತೆಗೆದುಕೊಂಡು ನಂತರ ಉಳಿದವರಿಗೆಲ್ಲಾ
ಕೊಡುವುದು)
ಪ್ರದಕ್ಷಿಣೆ (ಎಲ್ಲರೂ ಮೂರು ಬಾರಿ ಪ್ರದಕ್ಷಿಣೆ ಹಾಕುವುದು)
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ,
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ.
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ,
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಗಜಾನನ.
ಓಂ ಶ್ರೀ ವರಸಿದ್ಧಿ ವಿನಾಯಕಾಯ ನಮಃ, ಪ್ರದಕ್ಷಿಣಾನ್ ಸಮರ್ಪಯಾಮಿ.
ಸಾಷ್ಟಾಂಗ ನಮಸ್ಕಾರ (ಎರಡೂ ಕೈಗಳನ್ನು ಜೋಡಿಸಿ ಸಾಷ್ಟಾಂಗ ಮಲಗಿ ಕಾಲುಗಳನ್ನು ಚಾಚಿ
ನಮಸ್ಕಿರಿಸುವುದು)
ನಮಃ ಸರ್ವ ಹಿತಾರ್ಥಾಯ ಜಗದಾಧಾರ ಹೇತವೇ,
ಸಾಷ್ಟಾಂಗೋಯಂ ಪ್ರಣಾಮಸ್ತೇ ಪ್ರಯತ್ನೇನ ಮಯಾ ಕೃತಃ,
ಶಾತ್ಯೇನಾಪಿ ನಮಸ್ಕಾರಾನ್ ಕುರ್ವತಃ ಶಾಂಘ್ಯಪಾಣಯೇ
ಶತ ಜನ್ಮಾರ್ಚಿತಂ ಪಾಪಂ ತತ್ಕ್ಷಣಾಮೇವ ನಶ್ಯತಿ.
ಶ್ರೀ ವರಸಿದ್ಧಿ ವಿನಾಯಕಾಯ ನಮಃ, ನಮಸ್ಕಾರಾನ್ ಸಮರ್ಪಯಾಮಿ.
ಮಾಲಾರ್ಪಣೆ (ನೀವು ಮಾಡಿಕೊಂಡಿರುವ ಅಲಂಕೃತ ಹತ್ತಿಯ ಅಥವಾ ಹೂವಿನ ಮಾಲೆಯನ್ನು ಮೂರ್ತಿಗೆ ಹಾಕಬಹುದು)
ಪುನಃ ಪೂಜೆ (ಈಗ ದೇವರಿಗೆ
ಮತ್ತೊಮ್ಮೆ ವಿಶೇಷ ರಾಜೋಪಚಾರಗಳನ್ನು ಮಾಡಿ ಪೂಜೆಯನ್ನು ಅಂತ್ಯಗೊಳಿಸಬೇಕು)
ಗೃಹಾಣ
ಪರಮೆಶಾನ ಸರತ್ನೆ ಛತ್ರ ಚಾಮರೆ ದರ್ಪಣಂ
ವ್ಯಜನಂಚೈವ ರಾಜಭೋಗಾಯ ಯತ್ನತಃ,
ಶ್ರೀ
ವರಸಿದ್ಧಿ ವಿನಾಯಕಾಯ ನಮಃ, ಪುನಃ
ಪೂಜಾಂ ಕರಿಷ್ಯೇ.
ಓಂ ಶ್ರೀ ಸಿದ್ಧಿ ವಿನಾಯಕಾಯ ನಮಃ, ಛತ್ರಂ ಸಮರ್ಪಯಾಮಿ,
ಚಾಮರಂ
ಸಮರ್ಪಯಾಮಿ, ಗೀತಂ
ಸಮರ್ಪಯಾಮಿ,
ನೃತ್ಯಂ
ಸಮರ್ಪಯಾಮಿ, ವಾದ್ಯಂ
ಸಮರ್ಪಯಾಮಿ,
ದರ್ಪಣಂ
ಸಮರ್ಪಯಾಮಿ, ವ್ಯಜನಂ
ಸಮರ್ಪಯಾಮಿ,
ಆಂದೋಳಿಕಂ ಸಮರ್ಪಯಾಮಿ, ಅಶ್ವಾರೋಹಣಂ ಸಮರ್ಪಯಾಮಿ,
ಗಜಾರೋಹಣಂ ಸಮರ್ಪಯಾಮಿ, ರಥಾರೋಹಣಂ ಸಮರ್ಪಯಾಮಿ,
ಸಮಸ್ತ
ರಾಜೋಪಚಾರ, ಭಕ್ತ್ಯೋಪಚಾರ, ಶಕ್ತ್ಯೋಪಚಾರ,
ಶೋಡಷೋಪಚಾರ ಪೂಜಾಂ ಸಮರ್ಪಯಾಮಿ,
ಸಮಸ್ತ
ರಾಜೋಪಚಾರಾರ್ಥೇ ಅಕ್ಷತಾಂ ಸಮರ್ಪಯಾಮಿ (ಸ್ವಲ್ಪ ಅಕ್ಷತೆಯನ್ನು ಪೂಜೆ ಮಾಡುವುದು)
ಪುಷ್ಪ ಸಮರ್ಪಣೆ ಮತ್ತು ಕ್ಷಮಾಪಣೆ (ಕೈಯಲ್ಲಿ ಹೂವನ್ನು ಹಿಡಿದು ನಿಂತು ಕೊಳ್ಳುವುದು)
ಯಸ್ಯಸ್ಮ್ರುತ್ಯಾಚ ನಾಮೊಕ್ತ್ಯಾ ತಪಃ ಪೂಜಾ ಕ್ರಿಯಾದಿಷು,
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ,
ಮಂತ್ರ ಹೀನಂ, ಕ್ರಿಯಾ ಹೀನಂ,ಭಕ್ತಿ ಹೀನಂ ಗಣಾಧಿಪ,
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತುಮೇ.
ಅನೇನ ಶ್ರೀ ವರಸಿದ್ಧಿ ವಿನಾಯಕ ಪೂಜಾ ವಿಧಾನೇನ ಭಗವಾನ್ ಸರ್ವಾತ್ಮಕಃ
ತತ್ಸರ್ವಂ ಶ್ರೀ ಸಿದ್ಧಿವಿನಾಯಕಃ ಪ್ರೀಣಾತು
ಮಧ್ಯೇ ಮಧ್ಯೇ ಮಂತ್ರ, ತಂತ್ರ, ಸ್ವರ, ವರ್ಣ, ಲೋಪ ದೋಷ
ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೇ,
ಅಚ್ಯುತಾಯನಮಃ,
ಅನಂತಾಯನಮಃ, ಗೋವಿಂದಾಯನಮಃ,
ಅಚ್ಯುತಾಯನಮಃ,
ಅನಂತಾಯನಮಃ, ಗೋವಿಂದಾಯನಮಃ,
ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯನಮಃ,
ಅಚ್ಯುತಾನಂದಗೊವಿಂದೇಭ್ಯೋ ನಮಃ.
ವಿದ್ಯಾ ಬುದ್ಧಿ ಧನೈಷ್ವರ್ಯ ಪುತ್ರ ಪೌತ್ರಾದಿ ಸಂಪದಂ,
ಪುಷ್ಪಾಂಜಲಿ ಪ್ರದಾನೇನ ದೇಹಿಮೇ ಈಪ್ಸಿತಂ ವರಂ.
ಶ್ರೀ
ವರಸಿದ್ಧಿ ವಿನಾಯಕಾಯ ನಮಃ,
ಪ್ರಾರ್ಥನಾಂ ಸಮರ್ಪಯಾಮಿ.
ತೀರ್ಥ ಪ್ರಾಶನ (ಮೊದಲು
ಬೆಳ್ಳಿ ವಿಗ್ರಹಗಳಿಗೆ ಅರ್ಪಿಸಿದ ಪಂಚಾಮೃತ , ನಂತರ ಶುದ್ಧೋದಕ ಹಾಗೂ ಎಳನೀರು ಸ್ನಾನದ ತೀರ್ಥಗಳನ್ನು ಬಲಗೈಯಲ್ಲಿ ತೆಗೆದು
ಕೊಂಡು ಸ್ವೀಕರಿಸುವುದು)
ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಂ,
ಸರ್ವ ಪಾಪ ಪ್ರಶಮನಂ ಶ್ರೀ ಗಣೇಶ
ಪಾದೋದಕಂ ಪಾವನಂ ಶುಭಂ .
ಆರತಿ (ಮನೆಯಲ್ಲಿರುವ ಮಹಿಳೆಯರು ಒಂದು ತಟ್ಟೆಯಲ್ಲಿ ಕುಂಕುಮ ಬೆರೆಸಿದ ನೀರನ್ನು ಹಾಕಿ ಅದರಲ್ಲಿ ಎರಡು ಪುಟ್ಟ ದೀಪದ ಸೊಡಲುಗಳನ್ನು ಹತ್ತಿಸಿಟ್ಟು
ಆರತಿಯನ್ನು ಮಾಡುವುದು. ಮಹಿಳೆಯರು ಇಲ್ಲದಲ್ಲಿ ಗಂಡಸರೇ ಮಾಡುವುದು. ಆರತಿಯ ಯಾವುದೇ ಹಾಡನ್ನು
ಹಾಡುತ್ತಾ ಮಾಡಿದರೆ ಉತ್ತಮ) (ಉದಾಹರಣೆಗೆ ಜಯ ಗಣೇಶ, ಜಯ ಗಣೇಶ ಪಾಹಿಮಾಂ)
ವಿಸರ್ಜನ ಪೂಜೆ
ಆರಾಧಿತಾನಾಂ ದೇವತಾನಾಂ ಶೋಡಷೋಪಚಾರಾಂ ಕರಿಶ್ಯೇ,
ನಾನಾ ವಿಧ ಪರಿಮಳ ಪುಷ್ಪ ಪೂಜಾಂ ಕರಿಷ್ಯೇ,
ಪುನಃ ಪೂಜಾಂ ಕರಿಶ್ಯೇ,
ಧೂಪಮ್ ,ದೀಪಂ ದರ್ಶಯಾಮಿ,
ಫಲ ನೈವೇದ್ಯಂ ಸಮರ್ಪಯಾಮಿ .
ಯಾಂತು ದೇವ ಗಣಾ ಸರ್ವೇ, ಪೂಜಾಮಾದಾಯ ಸತ್ಕ್ರುತಾಂ.
ಇಷ್ಟ ಕಾಮ್ಯಾರ್ಥ ಸಿದ್ಯರ್ಥಂ, ಪುನರಾಗಮನಾಯಚ.
(ದೇವರನ್ನು ವಿಸರ್ಜಿಸುವಾಗ ಮೇಲಿನ ಮಂತ್ರಗಳನ್ನು ಹೇಳಿ ಕಳಶ ಮತ್ತು
ವಿಗ್ರಹವನ್ನು ಸ್ವಲ್ಪ ಅಲುಗಾಡಿಸಬೇಕು)
{ವಿಶೇಷ ಸೂಚನೆ: (ನೀವು ಮಂಟಪದ ಮೇಲಿಟ್ಟಿರುವ
ವಿಗ್ರಹ, ಕಳಶ ಮುಂತಾದವುಗಳಿಗೆ
ಹಾಕಿರುವ ಬಂಗಾರದ ಮತ್ತು ಇನ್ನಿತರ ಬೆಲೆ ಬಾಳುವ ಪದಾರ್ಥಗಳನ್ನು ಮರೆಯದೆ
ತೆಗೆದಿಟ್ಟುಕೊಳ್ಳುವುದು) (ತೆಂಗಿನಕಾಯಿಯನ್ನು ಅಡಿಗೆಗೆ ಉಪಯೋಗಿಸಬೇಕು)
ಉಪಾಯನ ದಾನ (ಸಾಮಾನ್ಯವಾಗಿ ಪೂಜೆ ಮಾಡಿಸಿದ ಬ್ರಾಹ್ಮಣರಿಗೆ ಇದನ್ನು ಕೊಡುವ
ವಾಡಿಕೆಯುಂಟು . ಒಂದು ತಟ್ಟೆಯಲ್ಲಿ ಸ್ವಲ್ಪ ಒಳ್ಳೆಯ ಅಕ್ಕಿ, ವೀಳ್ಯೆದೆಲೆ, ಅಡಿಕೆ , ನಿಮ್ಮ ಅನುಕೂಲಕ್ಕೆ ತಕ್ಕಂತೆ
ದಕ್ಷಿಣೆ ಇಟ್ಟು ಅದರ ಮೇಲೆ ತೆಂಗಿನಕಾಯಿ ಇಡುವುದು. ಇದರ ಮೇಲೆ ಒಂದು ಎಲೆ ಅಥವಾ ಬಟ್ಟೆಯನ್ನು ಮುಚ್ಚಿ .ಬ್ರಾಹ್ಮಣರಿಗೆ ಕೊಡುವಾಗ ಒಂದು
ಉದ್ಧರಣೆ ನೀರು ಹಾಕಿ, ಮುಚ್ಚಿದ ಬಟ್ಟೆ ಅಥವಾ ಎಲೆಯನ್ನು ತೆಗೆದು ತೋರಿಸಿ, ಅವರಿಗೆ
ನಮಸ್ಕರಿಸಿ ದಾನ ಮಾಡುವುದು) (ನೀವೇ ಪೂಜೆ ಮಾಡಿಕೊಂಡಿದ್ದರೆ ಇದನ್ನು ಇತರ ಹಿರಿಯರಿಗೆ, ಅದೂ ಆಗದಿದ್ದರೆ ನಿಮ್ಮ ಹತ್ತಿರದ ದೇವಸ್ತಾನಕ್ಕೆ
ಕೊಡಬಹುದು ).
ಶ್ರೀ ವರಸಿದ್ಧಿ ವಿನಾಯಕ ವ್ರತ ಕಥಾ ಸಾರಾಂಶ.
ಪೂರ್ವ ಕಾಲದಲ್ಲಿ ಹಸ್ತಿನಾಪುರ ರಾಜ್ಯವಾಳುತ್ತಿದ್ದ ಚಂದ್ರವಂಶದ ದೊರೆ ಧರ್ಮರಾಯನು ಗ್ರಹಚಾರದ ಫಲದಿಂದಾಗಿ ರಾಜ್ಯಭಾರವನ್ನೂ, ಸಕಲೈಶ್ವರ್ಯಗಳನ್ನೂ ಧೂರ್ತ ಧುರ್ಯೋಧನನಿಗೆ ಸೋತು, ಅವಮಾನಿತನಾಗಿ ಘೋರಾರಣ್ಯಕ್ಕೆ ತಮ್ಮಂದಿರೊಂದಿಗೆ, ಪತ್ನಿಯೊಂದಿಗೆ ತೆರಳಿದನು. ಅಲ್ಲಿ ಸದಾಕಾಲವೂ
ಅಗ್ನಿಹೋತ್ರ ನಿರತರಾದ, ಗಾಳಿ, ನೀರು, ತರಗೆಲೆಗಳನ್ನೇ ಸೇವಿಸುವ, ಸ್ವಯಂ ಪ್ರಕಾಶಿತರಾದ
ಬ್ರಹ್ಮವೇತ್ತ ಮಹಾಋಷಿಗಳು ನಿರಾಧಾರದಿಂದ ಭೂಮಿಯ ಮೇಲೆ ಕುಳಿತು ತಪಸ್ಸನ್ನು ಮಾಡುತ್ತಿದ್ದರು. ಪ್ರೇರೇಪಿತನಾದ ಧರ್ಮಜನು
ಸಂಗಡಿಗರೊಂದಿಗೆ ಸಾಷ್ಟಾಂಗ ನಮಸ್ಕಿರಿಸಿ, ಸೂತಮಹಾಮುನಿವರ್ಯರಿಗೆ ತಾನು, ಅನುಜರು ಮತ್ತು ಭಾರ್ಯೆಯು ಕೌರವರಿಂದ
ಅನುಭವಿಸಿದ ಆಘಾದ ಅವಮರ್ಯಾದೆಗಳನ್ನೆಲ್ಲಾ ಸವಿಸ್ತಾರವಾಗಿ ತಿಳಿಸಿದನು. ಇಂತಾದರೂ, ಈ ಘಳಿಗೆ ಮುನಿವರ್ಯರ ಧರ್ಶನ
ಮಾತ್ರದಿಂದಲೇ ಘೋರ ದುಃಖಗಳೆಲ್ಲಾ ಶಮನವಾದದ್ದನ್ನು ಅರುಹಿ, ತನಗೂ, ತನ್ನ ಅನುಜರಿಗೂ, ಭಾರ್ಯೆಗೂ ಬಂದಿರತಕ್ಕಂತಾ ಸಂಕಷ್ಟಗಳ ನಿವಾರಣೆಗಾಗಿಯೂ ಮತ್ತು ಪುನಃ ಕಳೆದುಹೋದ ರಾಜ್ಯ ದೊರೆಯುವಂತಾಗಲು ಒಂದು ಶ್ರೇಷ್ಠ ವ್ರತವನ್ನು ಅನುಗ್ರಹಿಸಬೇಕೆಂದು ಭಕ್ತಿಪೂರ್ವಕವಾಗಿ ವಿನಂತಿಸಿದನು.
ದಿವ್ಯ
ಧೃಷ್ಟಿಯುಳ್ಳ ಸೂತ ಮಹಾಮುನಿಗಳು, ”ಎಲೈ ಪಾಂಡವರೇ, ಆಲಿಸಿ, ಅನೇಕ ವ್ರತಗಳಲ್ಲಿ ಅತಿ
ಶ್ರೇಷ್ಟವಾದದ್ದು, ಪಾಪ ವಿನಾಶಾಕ, ಸಕಲೈಶ್ವರ್ಯ ಪ್ರಧಾಯಕ, ಪುತ್ರಪೌತ್ರಾದಿ
ಅಭಿವ್ರುದ್ಧಿದಾಯಕ ಮತ್ತು ಸೌಖ್ಯವನ್ನು ದಯಪಾಲಿಸತಕ್ಕಂತಾ ವ್ರತವಿರುವುದು. ಇದನ್ನು ಕುಮಾರಸ್ವಾಮಿಗೆ,
ಕೈಲಾಸದಲ್ಲಿ
ಬಂಗಾರದ ಸಿಂಹಾಸನದ ಮೇಲೆ ವಿರಾಜಮಾನನಾದ, ಪ್ರಪಂಚವನ್ನೆಲ್ಲಾ ಪರಿಪಾಲಿಸತಕ್ಕ ಪರಮೇಶ್ವರನು ವಿಧಾನಬದ್ಧವಾಗಿ ಹೀಗೆ ಹೇಳಿದ್ದಾನೆ. ಕೇಳುವಂತವರಾಗಿ”
ಎಂದು ಅನುಗ್ರಹಿಸುತ್ತಾರೆ.
ಎಲೈ ಪುತ್ರನೇ, ನನಗೆ ಸಂತೋಷವಾಗಿದೆ. ಪ್ರಪಂಚಕ್ಕೆಲ್ಲಾ ಬಹಳ ಉಪಯುಕ್ತವಾದ ವ್ರತದ ಬಗ್ಗೆ ಕೇಳಿರುವೆ. ಸಕಲ ಇಷ್ಥಾರ್ಥಗಳನ್ನೂ ಪ್ರದಾಯಿಸುವ ವಿನಾಯಕ
ವ್ರತವಿದೆ. ಇದನ್ನು
ಭಾದ್ರಪದ ಶುಕ್ಲ ಚತುರ್ಥಿಯಂದು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಅಂದು ಸೂರ್ಯೊದಯಕ್ಕೆದ್ದು,
ಸ್ನಾನಾದಿಗಳನ್ನು
ಪೂರೈಸಿ, ಶಕ್ತಾನುಸಾರ ಗಣಪತಿಯ ವಿಗ್ರಹವನ್ನು ಮಾಡಿ/ತಂದು ಮನೆಯ ಉತ್ತರ ಭಾಗದಲ್ಲಿ ನಿರ್ಮಿಸಿದ
ಮಂಟಪದಲ್ಲಿಟ್ಟು, ಗಂಧ, ಪುಷ್ಪ, ಅಕ್ಶತೆಗಳಿಂದಲೂ, ೨೧ ಗರಿಕೆ ಹುಲ್ಲು ಮತ್ತು ೨೧ ಪತ್ರೆಗಳಿಂದಲೂ ಒಳಗೊಂಡಂತೆ ಶೋಢಷೋಪಚಾರ
ಧ್ಯಾನ ಅವಾಹನಾದಿ ಪೂಜೆಗಳಿಂದಲೂ, ಫಲ,
ತಾಂಬೂಲ, ಭಕ್ಷಗಳ ನೈವೇದ್ಯಗಳನ್ನು ಅರ್ಪಿಸಿ, ಧೂಪ, ದೀಪಗಳನ್ನು ಬೆಳಗಿಸಿ,
ಪುನಃ ಪೂಜೆಯನ್ನು
ನೆರವೇರಿಸಿ, ಬ್ರಾಹ್ಮಣರಿಗೆ ಉಪಾಯನದಾನವನ್ನು ನೀಡಿ, ತೀರ್ಥಗಳನ್ನು ಸೇವಿಸಿ, ಬಂಧು
ಮಿತ್ರರೊಡಗೂಡಿ ಭೋಜನವನ್ನು ಸ್ವೀಕರಿಸಿ, ಶ್ರೀ ವರಸಿದ್ಧಿ ವಿನಾಯಕನ ಕೃಪಾ ಕಟಾಕ್ಷಕ್ಕೆ ಒಳಗಾಗಬೇಕು.
ಈ ವ್ರತವು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾದುದು. ಇದರ ಪ್ರಭಾವದಿಂದ ದಮಯಂತಿಗೆ
ನಳನು ದೊರಕಿದನು, ಶ್ರೀ ಕೃಷ್ಣನು
ಜಾಂಬವತಿ ಹಾಗೂ ಸ್ಯಮಂತಕ ಮಣಿಯನ್ನು ಹೊಂದಿದನು, ಇಂದ್ರನು ವೃತಾಸುರನನ್ನು ಸಂಹರಿಸಿದನು, ಶ್ರೀ ರಾಮನು ರಾವಣನನ್ನು
ವಧಿಸಿ ಸೀತೆಯನ್ನು ಮರಳಿ ಪಡೆದನು, ಭಗೀರತನು ಗಂಗೆಯನ್ನು ಪಡೆದನು. ಎಲೈ ಧರ್ಮರಾಯನೆ, ಆದ್ದರಿಂದ ನೀನು ಈ ವಿನಾಯಕ ವ್ರತವನ್ನು ತಪ್ಪದೇ ಆಚರಿಸಿ
ನಿನ್ನ ರಾಜ್ಯಭಾರವನ್ನೂ, ಸುಖ ಸಂಪತ್ತನ್ನೂ ಸುಪ್ರಸಿದ್ದಿಯನ್ನೂ ಪಡೆಯುವಂತಾಗು ಎಂದು
ಸೂತಮುನಿಗಳು ಆಶೀರ್ವದಿಸಿದರು.
ಸ್ಯಮಂತಕೋಪಾಖ್ಯಾನ ಕಥೆ
ಎಲೈ ಧರ್ಮರಾಯನೆ, ಮುಂದುವರೆದಂತೆ ಕೇಳು. ಭಾದ್ರಪದ ಶುಕ್ಲ ಚತುರ್ಥಿಯಂದು ಶ್ರೀ ವರಸಿದ್ಧಿ ವಿನಾಯಕನ ವ್ರತವನ್ನು ಮಾಡಿ ಅರಿವಿಲ್ಲದೆ ಚಂದ್ರ ದರ್ಶನ
ಮಾಡುವವರು ಖಂಡಿತ
ಕಾರಣವಿರಲೀ ಬಿಡಲಿ ದೋಷ, ಆರೋಪ, ಅಪನಿಂದನೆಗೊಳಗಾಗುತ್ತಾರೆ. ಇದರ ಪರಿಹಾರಕ್ಕಾಗಿ ವಿಷ್ಣು
ದೇವರಿಂದಲೂ ಜಪಿಸಲ್ಪಟ್ಟ ಕೆಳಗಿನ ಶ್ಲೋಕವನ್ನು ಹೇಳುವುದು.
“ಸಿಂಹಃಪ್ರಸೇನಮವಧೀತ್ ಸಿಂಹೋ ಜಾಂಬವತಾಹತಃ. ಸುಕುಮಾರಕ ಮಾರೋದೀಃ
ತವಹ್ಯೇಶ ಸ್ಯಮಂತಕಃ.”
ತದನಂತರ
ನಂದಿಕೇಶ್ವರನು ಸನತ್ಕುಮಾರನಿಗೆ ಹೇಳಿರುವ ಈ ಉಪಕಥೆಯನ್ನು ಪಠಿಸು ಅಥವಾ ಆಲಿಸು.
ಭಾದ್ರಪದ ಶುಕ್ಲ ಚತುರ್ಥಿಯಂದು ಈ ವ್ರತವನ್ನು ನೆರವೇರಿಸಿ ಕಥಾ ಪಠಣ
ಅಥವಾ ಶ್ರವಣ ಮಾಡಿದರೆ, ಅಪವಾದದಿಂದ ಪರಿಹಾರವೂ, ಸಂಕಟ ವಿಮೋಚನೆಯೂ, ಸಕಲ ವಿಘ್ನ ನಿವಾರಣೆಯೂ
ಆಗುವುದರಲ್ಲಿ ಸಂಶಯವಿಲ್ಲ. ಪ್ರತಾಪವಂತನಾದ ವಸುದೇವ ಪುತ್ರನೇ ವ್ಯರ್ಥವಾಗಿ ಬಂದ ಅಪವಾದವನ್ನು, ತ್ರಿಲೋಕ ಸಂಚಾರಿ ನಾರದ
ಮಹರ್ಷಿಗಳ ಸಲಹೆಯಂತೆ, ಈ ವ್ರತವನ್ನು
ಆಚರಿಸಿ ನಿರಪರಾದಿಯಾಗಿ ಹೊರಬಂದನು. ಈ ಘಟನಾವಳಿಯನ್ನು ನಿನಗೆ ಸಂಕ್ಷಿಪ್ತವಾಗಿ ನಿರೂಪಿಸುತ್ತೇನೆ. ಕೇಳುವಂತವನಾಗು. ಭೂಭಾರ ನಿವೃತ್ತಿಗೋಸ್ಕರ ಶ್ರೀ ಬಲರಾಮ ಮತ್ತು ಶ್ರೀ ಕೃಷ್ಣರು ಜನಿಸಿದರು. ಶ್ರೀ
ಕೃಷ್ಣನು ಜರಾಸಂಧನೆಂಬ ಅರಸನ ಉಪಟಳವನ್ನು ತಾಳಲಾರದೆ, ಮಧುರಾ ಪಟ್ಟಣವನ್ನು ತ್ಯಜಿಸಿ ಸಮುದ್ರ ಮಧ್ಯದಲ್ಲಿ ದ್ವಾರಕಾನಗರಿಯನ್ನು
ವಿಶ್ವಕರ್ಮನ ಮಾರ್ಗದರ್ಶನದಲ್ಲಿ ಕಟ್ಟಿಸಿದನು. ಈ ನಗರಿಯ ವೈಭವಯುತವಾದ ಅರಮನೆಗಳಲ್ಲಿ ಹದಿನಾರು ಸಾವಿರ ಸುರಸುಂದರಿಯರು, ಅವರ ಕ್ರೀಡೆಗಾಗಿ
ನಯನ ಮನೋಹರವಾದ ಉದ್ಯಾನವನವನ್ನು ನಿರ್ಮಿಸಿ ಮಧ್ಯದಲ್ಲಿ ತನ್ನ ಭವನದಲ್ಲಿ ವಿರಾಜಮಾನನಾದನು.
ಹನ್ನೊಂದು ಸಾವಿರ ಕೋಟಿ ಮನೆಗಳಲ್ಲಿ ಯಾದವರು ವ್ಯಸನದ ಗಂಧವೇ ಇರದೆ ಜೀವಿಸುತ್ತಿದ್ದರು. ಇಂತಹದರಲ್ಲಿ ತ್ರಿಲೋಕ
ಪ್ರಸಿದ್ಧಿ ಪಡೆದ ಉಗ್ರಸೇನನಿಗೆ ಸತ್ರಾಜಿತ ಮತ್ತು ಪ್ರಸೇನರೆಂಬ ಪುತ್ರರ ಜನನವಾಯಿತು.
ಸತ್ರಾಜಿತನು ಒಂದು ದಿನ ಸಮುದ್ರದ ಮಡಿಲಿನಲ್ಲಿ ಕಣ್ಣಿನ ರೆಪ್ಪೆಯನ್ನು ಮುಚ್ಚದೆ ಸುೂರ್ಯನನ್ನು
ನೋಡುತ್ತಾ ಉಗ್ರ ನಿರಶನ ವ್ರತವನ್ನು ಮಾಡಿ ಸೂರ್ಯದೇವನ ಕೃಪೆಗೆ ಒಳಗಾಗಿ ಆತನಿಂದ ತನ್ನ
ಅಭೀಷ್ಟೆಯಂತೆ ಸ್ಯಮಂತಕ ರತ್ನಮಣಿಯ ಕಂಠಹಾರವನ್ನು ಪಡೆದನು. ಆದರೆ “ಈ ಮಣಿಯು ಆಚಾರವಂತನಾಗಿರುವ ವರೆಗೆ ದಿನಕ್ಕೆ ಎಂಟು ಸಲ ಬಂಗಾರವನ್ನು ನೀಡುತ್ತದೆ. ಯಾವಾಗ ಅಶುಚಿವಂತನಾಗುವಿಯೋ ಅಂದು ತನ್ನ ಪ್ರಭಾವವನ್ನು
ಕಳೆದುಕೊಳ್ಳುತ್ತದೆ” ಎಂದು ಎಚ್ಚರಿಸಿ
ಸೂರ್ಯನು ಅಂತರ್ದಾನನಾಗುತ್ತಾನೆ.
ಸತ್ರಾಜಿತನು ಪ್ರಜ್ವಲಿಸುತ್ತಿದ್ದ ಈ ಮಣಿಕಂಠ ಹಾರವನ್ನು ಧರಿಸಿ
ದ್ವಾರಕಾ ನಗರಿಯನ್ನು ಹರ್ಷಭರಿತನಾಗಿ ಪ್ರವೆಶಿಸುತ್ತಿರಲು ಪುರದ ಜನರು ನಿಬ್ಬೆರಗಾಗಿ ಕಣ್ಣು
ಮುಚ್ಚಿ ಸೂರ್ಯನೇ ಶ್ರೀ ಕೃಷ್ಣನನ್ನು ನೋಡಲು ಬರುತ್ತಿರುವನೆಂದು ಭಾವಿಸಿದರು. ಹಲವಾರು ಪ್ರಜೆಗಳು
ಆಸೆಯಿಂದ ಈ ಮಹಾನ್ ಪದಕವು
ತಮದಾಕಬೇಕೆಂದು ಕೊಂಡರು. ಇಷ್ಟು ಸುಲಭವಾಗಿ
ದಕ್ಕುವಂತಹ ಹಾರ ಅದಾಗಿರಲಿಲ್ಲ. ಇದನ್ನು ಮನಗಂಡ ಸತ್ರಾಜಿತನು, ಈ ಹಾರದ ಪದಕವು ತನ್ನ
ಕೊರಳಲ್ಲಿದ್ದರೆ ಶ್ರೀ ಕೃಷ್ಣನೂ ಕೇಳಬಹುದೆಂದು ಮುನ್ನೆಚ್ಚರಿಕೆಯಾಗಿ ತಮ್ಮನಾದ ಪ್ರಸೇನನಿಗೆ
ಎಲ್ಲವನ್ನೂ ವಿವರಿಸಿ ಕೊಟ್ಟು ಬಿಟ್ಟನು.
ಒಂದು ದಿನ ಪ್ರಸೇನನು ಕೃಷ್ಣನ ಜೊತೆಗೂಡಿ ಮೋಜಿಗಾಗಿ ಈ ಸ್ಯಮಂತಕ ಮಣಿಯ
ಹಾರವನ್ನು ಧರಿಸಿ ಕಾನನವನ್ನು ಪ್ರವೇಶಿಸರಲು, ಅಶ್ವವನ್ನೇರಿ ಅಶುಚಿಯಾಗಿ ದಾರಿ ತಪ್ಪಿರಲು ಸಿಂಹವೊಂದು
ಎದುರಾಗಿ ಆತನನ್ನು ಕೊಂದು ಮಣಿಯೊಂದಿಗೆ ಓಡಿ ಹೋಯಿತು. ಆದರೆ ತನ್ಮಧ್ಯೆ ಈ ಸಿಂಹವನ್ನು ಜಾಂಬವಂತವೆಂಬ ಕರಡಿಯೊಂದು
ಸಂಹರಿಸಿ, ಮಣಿಯನ್ನು ತೆಗೆದುಕೊಂಡು ಗುಹೆಯಲ್ಲಿದ್ದ ತನ್ನ ಮಗಳಾದ ಜಾಂಬವತಿಗೆ ಅರ್ಪಿಸಿತು. ಆಕೆಯಾದರೋ
ಖುಷಿಯಿಂದ ಅದನ್ನು ಮಗು ಮಲಗಿದ್ದ ತೊಟ್ಟಿಲಿಗೆ ಕಟ್ಟಿದಳು.
ಅತ್ತ ಎಷ್ಟು ಕಾದರೂ ಪ್ರಸೇನನು ಮರಳಿ ಬಾರದ್ದರಿಂದ ಶ್ರೀ ಕೃಷ್ಣನು
ಗದ್ಘತಿದನಾಗಿ ಊರಿಗೆ ಮರಳಿದನು. ಕೆಲವು ದಿನ
ಕಳೆದರೂ ಪ್ರಸೇನನು ಊರಿಗೆ ಬಾರದ್ದರಿಂದ ಅನುಮಾನಿತರಾದ ಪುರಜನರು ಮಣಿಯ ಆಸೆಗಾಗಿ ಶ್ರೀ ಕೃಷ್ಣನೇ
ಪ್ರಸೇನನನ್ನು ಸಂಹರಿಸಿರಬೇಕೆಂದು ಮಾತನಾಡಿಕೊಳ್ಳಲಾರಂಭಿಸಿದರು. ಈ ವ್ಯರ್ಥ ಆರೋಪದಿಂದ ನೊಂದ
ಕೃಷ್ಣನು ಸತ್ರಾಜಿತ ಮತ್ತು ಆತ್ಮೀಯರೊಡಗೂಡಿ ಪ್ರಸೇನನ ಪತ್ತೆಗಾಗಿ
ಅರಣ್ಯ ಪ್ರವೇಶ ಮಾಡಿದನು. ಅಲ್ಲಿ ಸಿಂಹದಿಂದ
ಹತನಾದ ಪ್ರಸೇನನನ್ನು ನೋಡಿ, ಸಿಂಹದ ಹೆಜ್ಜೆ ಗುರುತುಗಳ ಹಿಂದೆಯೇ ಹೋದಾಗ, ಆ ಸಿಂಹವೂ ಒಂದು
ಕರಡಿಯಿಂದ ಹತವಾಗಿರುವುದನ್ನು ಕಂಡು ಬೆರಗಾಗಿ, ಕರಡಿಯ ಹೆಜ್ಜೆಗಳನ್ನೇ ಹಿಂಬಾಲಿಸಲು ಅವರು ಅಂಧಕಾರಮಯವಾದ ಗುಹೆಯನ್ನು ಪ್ರವೇಶಿಸುವಂತಾಯಿತು. ಶ್ರೀ
ಕೃಷ್ಣನು ತನ್ನ ತೇಜಸ್ಸಿನ ಬೆಳಕಿನಿಂದ ಒಳಹೊಕ್ಕುತ್ತಾ ಉಳಿದವರಿಗೆ ಹೊರಗೇ ಇರುವಂತೆ ತಿಳಿಸಿದನು.
ಗುಹೆಯೊಳಗೆ ರತ್ನ ಭರಿತ ಅರಮನೆಯನ್ನೂ, ತೊಟ್ಟಿಲಲ್ಲಿ ಕಾಂತಿಯುಳ್ಳ ಜಾಂಬವಂತನ ಮಗುವನ್ನೂ, ತೊಟ್ಟಿಲಿಗೆ ಕಟ್ಟಿದ್ದ ಸ್ಯಮಂತಿಕ ಮಣಿಹಾರವನ್ನೂ, ತೊಟ್ಟಿಲನ್ನು
ತೂಗುತ್ತಿದ್ದ ರೂಪಸಿರಿಯಾದ ಜಾಂಬವಂತನ ಮಗಳನ್ನೂ ನೋಡಿ ದಿಘ್ಬ್ರಮೆಗೊಂಡನು. ಶ್ರೀ ಕೃಷ್ಣನ ದರ್ಶನ
ಮಾತ್ರದಿಂದಲೇ ಪುಳಕಿತಳಾಗಿ ನವಯೌವನದ ಹೊಸ್ತಿಲಲ್ಲಿದ್ದ ಜಾಂಬವತಿಯು, ಸವಿಸ್ತಾರವಾಗಿ ನಡೆದ
ಘಟನೆಯನ್ನು ತಿಳಿಸಿ, ಜಾಂಬವಂತನು ಮಲಗಿರುವುದಾಗಿಯೂ, ಬೇಕಾದರೆ ಈ ಮಣಿಯನ್ನು ಅಪ್ಪನು ಏಳುವ ಮೊದಲೇ ಒಯ್ಯಬಹುದೆಂದು
ಉಸಿರಿದಳು. ಧೈರ್ಯಶಾಲಿಯಾದ
ಶ್ರೀ ಕೃಷ್ಣನು ಹುಸಿನಗೆ ಬೀರುತ್ತಾ ತನ್ನ ಪಾಂಚಜನ್ಯವನ್ನು ಊದಿ, ಜಾಂಬವಂತನನ್ನು ಎಬ್ಬಿಸಿ ಯುದ್ಧ
ಪ್ರಾರಂಬಿಸಿದನು. ಈ ದಿಗ್ಗ್ಗಜರ
ಯುದ್ಧ ದೀರ್ಘವಾಗಿ ನಡೆಯುತ್ತಿರಲು, ನಿರಾಶರಾಗಿ, ಪ್ರಸೇನ ಮತ್ತು ಸಂಗಡಿಗರು ಮರಳಿ ದ್ವಾರಕೆಗೆ ಬಂದು, ಕೃಷ್ಣನು ಹತನಾದನೆಂದು ತಿಳಿಸಿ
ಯಾದವರೊಡಗೂಡಿ ಅಂತ್ಯಕ್ರಿಯೆ
ನೆರವೇರಿಸಿಬಿಟ್ಟರು.
ಜಾಂಬವತೀ ವಿವಾಹ
ಅನೇಕಾನೇಕ ದಿನಗಳ ಯುದ್ಧದಲ್ಲಿ ಪರಾಕ್ರಮದ ಪರೀಕಾಷ್ಟ ಮುಟ್ಟಿದ
ಜಾಂಬವಂತನು ಬಳಲಿ ಬೆಂಡಾಗಿ, ತ್ರೇತಾಯುಗದ ರಾಮ ಪರಾಕ್ರಮವನ್ನು ನೆನೆಸಿಕೊಂಡು, ಅಜೇಯನಾದ
ತನ್ನನ್ನು ಹೀಗೆ ಜಯಿಸಿದ ಈತನು ಖಂಡಿತಾ ವಿಷ್ಣುವೇ ಇರಬೇಕೆಂದು ನಮಿಸಲು, ಕೃಷ್ಣನ
ರಾಮಾವತಾರದ ದರ್ಶನ ಪ್ರಾಪ್ತವಾಯಿತು. ತತ್ಕ್ಷಣವೇ ಜಾಂಬವಂತನು, ವಿನಮ್ರತೆಯಿಂದ ಆ ಸ್ಯಮಂತಿಕ
ಮಣಿ ಹಾರವನ್ನೂ ಜೊತೆಗೆ ಜಾಂಬವತಿಯನ್ನೂ ಆ ಸುಮುಹೂರ್ತದಲ್ಲಿ ವಿವಾಹ
ಮಾಡಿಕೊಟ್ಟು ಕಳುಹಿದನು. ಶ್ರೀ ಕೃಷ್ಣನು ಕಾಂತಾಮಣಿಗಳ ಸಮೇತ ರಥಾರೂಢನಾಗಿ ದ್ವಾರಕೆಗೆ ಬಂದು, ಯಾದವರೆಲ್ಲರಿಗೂ
ಪ್ರಸಂಗವನ್ನು ವಿವರಿಸಿ, ಸತ್ರಾಜಿತನಿಗೆ ಸ್ಯಮಂತಕ ಮಣಿಯನ್ನು ಹಿಂತಿರುಗಿಸಿ ಅಪನಿಂದನೆಯನ್ನು
ಕಳಚಿಕೊಂಡನು.
ಸತ್ಯಭಾಮಾ ವಿವಾಹ
ಈ ಸ್ಯಮಂತಕ ಮಣಿ
ಪಡೆದ ಸತ್ರಾಜಿತನು, ಅಜೇಯನಾದ ಶ್ರೀ ಕೃಷ್ಣನ ಮೇಲೆ ಅನ್ಯಥಾ ಅಪವಾದ ಹೊರಿಸಿದ್ದಕ್ಕೆ ಲಜ್ಜಿತನಾಗಿ, ಪಶ್ಚಾತ್ತಾಪಗೊಂಡು,
ತನ್ನ
ಪ್ರತಿಭಾವಂತ ಪುತ್ರಿಯಾದ ಸತ್ಯಭಾಮಾಳನ್ನು ಶಾಸ್ತ್ರೋಕ್ತವಾಗಿ ವಿಜ್ರುಂಭಮಣೆಯಿಂದ ಪುರದ
ಜನರೆದುರಿಗೆ ದಾರೆಯೆರದು ಕೊಟ್ಟನು. ಜೊತೆಗೆ ಈ ಅತ್ಯಮೂಲ್ಯ ರತ್ನಹಾರವನ್ನೂ ಉಡುಗೊರೆಯಾಗಿ ನೀಡಿದನು.
ಪುನಃ ಅಪನಿಂದನೆ
ಹಲವು
ದಿನಗಳು ಕಳೆದನಂತರ ಇದೇ ಕಾರಣಕ್ಕಾಗಿ
ಶತಧನ್ವ ಮತ್ತು ಅಕ್ರೂರರೆಂಬುವರು ಸತ್ರಾಜಿತನನ್ನು ಕೊಂದು, ಸತ್ಯಭಾಮೆಯಲ್ಲಿದ್ದ ಮಣಿಹಾರವನ್ನು ಅಪಹರಿಸಿದರು. ಈ ಕ್ರೂರ ಘಟನೆಯನ್ನು ಸತ್ಯಭಾಮೆಯು ಶ್ರೀ ಕೃಷ್ಣನಿಗೆ ತಿಳಿಸಲು, ಅವನು ಭ್ರಾತೃ ಬಲರಾಮನನ್ನು
ಕರೆದುಕೊಂಡು ಶತಧನ್ವನ ಮೇಲೆ ಯುದ್ಧಕ್ಕೆ ಹೊರಟನು. ಇದನ್ನರಿತ ಶತಧನ್ವನು ಮಣಿಯನ್ನು ಅಕ್ರೂರನ
ಕೈಗಿತ್ತು ಅಶ್ವವನ್ನೇರಿ ಹೊರಟುಬಿಟ್ಟನು. ಈ ಸಮಯದಲ್ಲಿ ಕೊಂಚ ದೂರ ಕ್ರಮಿಸುವಲ್ಲಿ ಅಕ್ರೂರನ ಅಶ್ವವು ಸುಸ್ತಾಗಿ ಬಿದ್ದು ಅಸುನೀಗಿತು.
ಭೀತಿಯಿಂದ ಓಡುತ್ತಿದ್ದ ಶತಧನ್ವನನ್ನು ಬೆನ್ನಟ್ಟಿದ ಶ್ರೀ ಕೃಷ್ಣನು ಆತನನ್ನು ಸಂಹರಿಸಿದನು.
ಎಷ್ಟೇ ಶೋದಿಸಿದರೂ ಅವನ ಬಳಿ ರತ್ನ ಮಣಿ ಹಾರ ಇಲ್ಲದ್ದನ್ನು ಬಲರಾಮನಿಗೆ ತಿಳಿಸಲು, ನಂಬದೇ,
ಕೃಷ್ಣನು
ಕಪಟಿಯೆಂದು ಜರಿದು, ಬೇಸತ್ತು ವಿಧರ್ಭ ದೇಶಕ್ಕೆ ಹೊರಟುಹೋದನು. ಶ್ರೀ ಕೃಷ್ಣನು ದಾರಿ ಕಾಣದೇ, ಒಂಟಿಯಾಗಿ ದ್ವಾರಕೆಗೆ ಬರಲು, ಪುನಃ ಪುರ ಜನರು, ಶ್ರೀ ಕೃಷ್ಣನು
ಲೋಭಿಯೆಂದೂ, ಹೆಣ್ಣು ಹೊನ್ನುಗಳಿಗಾಗಿ ಬಂಧುಗಳನ್ನೂ ಬಿಡುವುದಿಲ್ಲವೆಂದು
ಜರಿಯುತ್ತಾ ಆತನ ಮೇಲೆ ಮತ್ತೆ ಅಪವಾದವನ್ನು ಹೊರಿಸಿದರು. ತ್ರಿಕಾಲ ಜ್ಞಾನಿಯಾದ ಶ್ರೀ ಕೃಷ್ಣನು
ಮನುಷ್ಯನ ಅವತಾರದಲ್ಲಿದ್ದುದರಿಂದ ಪುರ ಜನರ ಮುಂದೆ ಅಜ್ನಾನಿಯಂತೆ ನಟಿಸಿದನು.
ಇದನ್ನು ಅರಿತ ತ್ರಿಲೋಕಗಾಮಿ ನಾರದರು ಶ್ರೀ ಕೃಷ್ಣನ ಮುಂದೆ
ಪ್ರತ್ಯಕ್ಷರಾಗಿ, ಶ್ರೀ ಕೃಷ್ಣನೇ “ನೀನು ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ಚಂದ್ರ ದರ್ಶನ ಮಾಡಿದ ಫಲವೇ ಈ ಅಪನಿಂದನೆ” ಎಂಬ ವಿಷಯವನ್ನು ತಿಳಿಸಿದರು. ಪುರ ಜನರ ಅಪೇಕ್ಷೆಯಂತೆ ಹಾಗೂ
ಶ್ರೀ ಕೃಷ್ಣನ ವಿನಂತಿಯಂತೆ, ನಾರದ ಮಹರ್ಷಿಗಳು, ಈ ಚಂದ್ರ ದರ್ಶನದಿಂದ ಉಂಟಾಗುವ ದೋಷಹಾಗೂ ಬಿದಿಗೆಯಲ್ಲಿ
ಚಂದ್ರ ದರ್ಶನದಿಂದ ಸಿಗುವ ಪರಿಹಾರವನ್ನು ಸವಿಸ್ತಾರವಾಗಿ ಈ ರೀತಿ ಪ್ರಕಟಿಸುತ್ತಾರೆ.
ಗಣೇಶನ ವಿವಾಹ
ಈ ಹಿಂದೆ ಸಾಂಬಶಿವನು ಗಣಪತಿಯನ್ನು ಗಣಾಧಿಪತಿಯನ್ನಾಗಿ ಮಾಡುವ
ಸಮಯದಲ್ಲಿ ಬ್ರಹ್ಮಾದಿ ದೇವತೆಗಳ ಸಮ್ಮುಖದಲ್ಲಿ ಅಹಿಮಾ, ಮಹಿಮಾ, ಗರಿಮಾ ಮುಂತಾದ ಅಷ್ಟ ಸಿದ್ಧಿಗಳೊಡನೆ ಆತನ ವಿವಾಹವನ್ನು
ನೆರವೇರಿಸಿದರು. ಆಗ ಬ್ರಹ್ಮ ದೇವರು ಗಜಮುಖನನ್ನು ಆಶೀರ್ವದಿಸುತ್ತಾ “ಲಂಬೋದರನೇ, ವಿಘ್ನರಾಜನೇ
ನಿನಗೆ ಯಾರ್ಯಾರು ಮೋದಕಗಳ ನಿವೇದನೆ ಮಾಡಿ ಪೂಜಿಸುತ್ತಾರೋ ಅವರ ಕಾರ್ಯಗಳು ನಿರ್ವಿಘ್ನವಾಗಿ
ನಡೆಯುವಂತೆ ನೀನು ನಿಸ್ಸಂದೇಹವಾಗಿ ಮಾಡುತ್ತಿ” ಎಂದು ಹರಸಿದರು.
ಸಂತುಷ್ಟನಾದ ಗಜಾನನು, “ಬ್ರಹ್ಮದೇವರೆ, ನಿಮ್ಮ
ಸೃಷ್ಟಿಕರ್ಮವು ನಿರ್ವಿಘ್ನವಾಗಿ ನಡೆಯಲೆಂದು” ಅನುಗ್ರಹಿಸಿ ತನ್ನ ಸೊಂಡಲಿನಲ್ಲಿ ಕಡುಬನ್ನು
ಸ್ವೀಕರಿಸುತ್ತಾನೆ.
ತದನಂತರ, ಸಿದ್ಧಿ, ಬುದ್ಧಿ ಎಂಬ
ಪತ್ನಿಯರೊಡಗೂಡಿ ಸಪ್ತಲೋಕಗಳ ಸ್ವೇಚ್ಛಾವಿಹಾರಕ್ಕಾಗಿ ಮೂಷಿಕವಾಹನನಾಗಿ ಗಗನದಲ್ಲಿ ಸಂಚರಿಸುತ್ತಿರುತ್ತಾನೆ. ಗಣಪತಿಯು ಚಂದ್ರಲೋಕವನ್ನು
ದಾಟುತ್ತಿದ್ದಾಗ, ಚಿಕ್ಕ ಇಲಿಯ ಮೇಲೆ ದೊಡ್ಡ ಗಣಪ, ಪತ್ನೀ ಸಮೇತನಾಗಿ ಚಲಿಸುತ್ತಿದ್ದದ್ದನ್ನು ಕಂಡು ಮಧದಿಂದ
ಚಂದ್ರನು ಅಪಹಾಸ್ಯ ಮಾಡಿ ಬಿಡುತ್ತಾನೆ. ತತ್ಕ್ಷಣ ಕುಪಿತಗೊಂಡ ಗಣಪನು ಚಂದ್ರನಿಗೆ ಶಾಪವನ್ನು
ನೀಡುತ್ತಾನೆ. “ಸುಂದರಾಂಗನೆಂದು
ಬೀಗುತ್ತಿರುವ ಮೃಗಲಾಂಛನನಾದ ನಿನ್ನನ್ನು ಯಾರು ಚತುರ್ಥಿಯ ದಿನ ನೋಡುತ್ತಾರೋ, ಅವರೆಲ್ಲಾ
ಅಪನಿಂದನೆಗೆ ಒಳಗಾಗಲೀ”. ಇದರಿಂದ ವಿಚಲಿತನಾದ ಚಂದ್ರನಿಗೆ ದಿಕ್ಕೇ ತೋಚದಂತಾಗುತ್ತದೆ.
ನಾಚಿಕೆಯಿಂದ ಜಲದ ತಾವರೆಯಲ್ಲಿ
ಚಂದ್ರನು ಅಡಗಿರಲು, ಗಾಭರಿಗೊಂಡ ದೆವೇಂದ್ರನೂ, ಗಾಂಧರ್ವರೂ, ಋಷಿಗಳೂ ಬ್ರಹ್ಮನ ಬಳಿ ಬಂದು ಈ ಅಹಿತಕರ ಪ್ರಸಂಗವನ್ನು ತಿಳಿಸಲು, ಬ್ರಹ್ಮನು ಈ
ಶಾಪವನ್ನು ಪರಿಹರಿಸಲು ಮುಕ್ಕೋಟಿ ದೇವತೆಗಳಿಂದಲೂ ಸಾಧ್ಯವಿಲ್ಲ, ಎಲೈ ಸುರರೇ, ನೀವೆಲ್ಲಾ ಚತುರ್ಥಿಯ ದಿನದಂದು ಶ್ರದ್ಧಾ ಪೂರ್ವಕವಾಗಿ ಸಂಕಷ್ಟ
ಗಣಪತಿ ವ್ರತವೆಂಬ ಪ್ರದೋಷ ಪೂಜೆಯನ್ನು ನೆರವೇರಿಸಿ, ಅತಿರಸ, ತುಪ್ಪದಿಂದ ತಯಾರಿಸಿದ
ಕಡುಬುಗಳಿಂದ ಗಣಾಧಿಪತಿಗೆ ನೈವೇದ್ಯ ಅರ್ಪಿಸಿ ಧಾನ ಧರ್ಮಾದಿಗಳನ್ನು ಮಾಡಿದರೆ, ಆತನು ಸಂತುಷ್ಟನಾಗುತ್ತಾನೆಂದು ಸೂಚಿಸಿದರು. ಇದರಂತೆ ಚಂದ್ರನೊಡಗೂಡಿ ಈ
ಪೂಜೆಯನ್ನು ಮಾಡಿದ ತತ್ಕ್ಷಣ ಗಣಪನು ಪ್ರಸನ್ನನಾಗುತ್ತಾನೆ. ಚಂದ್ರನು ಧೈನ್ಯತೆಯಿಂದ ಗಣಪನಿಗೆ ಕೈಮುಗಿದು “ತಾನು ಗರ್ವಭರಿತನಾಗಿ ತಿಳಿಯದೆ
ಇಂತಹ ಅಪಹಾಸ್ಯವನ್ನು ಮಾಡಿಬಿಟ್ಟೆ, ದಯಾಮಯಿಯಾದ ಜಗನ್ನಿವಾಸನೇ ಕ್ಷಮಿಸು. ಇನ್ನು ಮುಂದೆ ಯಾವುದೇ ಕೆಲಸ ಮಾಡಬೇಕಾದರೂ ನಿನ್ನನ್ನು ಪೂಜಿಸಿಯೇ
ಪ್ರಾರಂಭಿಸುತ್ತೇನೆ” ಎಂದು ಬಿನ್ನವಿಸಲು, ಸಂತೃಪ್ತನಾದ ಗಣಪನು, “ಎಲೈ ಚಂದ್ರನೇ, ಯಾರು ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಂದು ನಿನ್ನ ದರ್ಶನ ಮಾಡುತ್ತಾರೋ ಅವರು ಭಾದ್ರಪದ ಶುಕ್ಲ ಬಿದಿಗೆಯಂದು
ಮತ್ತೆ ನಿನ್ನ ದರ್ಶನ ಮಾಡಿದರೆ, ಶಾಪ
ಮುಕ್ತರಾಗುತ್ತಾರೆ” ಜೊತೆಗೆ ಈ ಕಥೆಯನ್ನು ಶ್ರದ್ಧೆಯಿಂದ ಪಠಿಸಬೇಕು ಅಥವಾ ಆಲಿಸಬೇಕು ಮತ್ತು
ಸಂಕಷ್ಟ ಹರ ಚತುರ್ಥಿ ಪೂಜೆಯನ್ನು ಮಾಡಿದರೆ ಮೇಧಾವಿಗಳೂ, ಸದ್ಗುಣ ಸಂಪನ್ನರೂ, ಜಯಶಾಲಿಗಳೂ
ಆಗುತ್ತಾರೆಂದು ಹೇಳಿ ಅಂತರ್ಧಾನನಾದನು.
ಅದ್ದರಿಂದ, ಶ್ರೀ ಕೃಷ್ಣನೇ ನೀನೂ ಹೀಗೇ ಮಾಡು ಎಂದು ತಿಳಿಸಿದಾಗ, ಕೃಷ್ಣನು ಪಾಲಿಸಿ, ತನ್ನ ಮೇಲೆ
ಬಂದಿದ್ದ ಎಲ್ಲಾ ವೃಥ ಆರೋಪಗಳಿಂದ ಮುಕ್ತನಾದನು. ಭೂಲೊಕದಲ್ಲಿರುವವರೂ ಕಷ್ಟ ಕಾರ್ಪಣ್ಯಗಳು
ಎದುರಾದಾಗ ವಿಘ್ನ ವಿನಾಶಕನನ್ನು ಭಕ್ತಿಯಿಂದ ಪೂಜಿಸಿದರೆ, ಇಷ್ಟಾರ್ಥಗಳು ಲಭಿಸುವುದೆಂದೂ,
ಹೀಗಾಗಿಯೇ ಈ
ಸಂಪ್ರದಾಯವು ಪ್ರಸಿದ್ಧಿಯನ್ನು ಪಡೆಯಿತೆಂದು ಸೂತ ಪುರಾಣಿಕರು ಧರ್ಮರಾಯನಿಗೆ ಅನುಗ್ರಹಿಸಿ, ಆತನಿಂದ ಈ
ವ್ರತಾಚರಣೆ ಮತ್ತು ಕಥಾ ಶ್ರವಣ ಮಾಡಿಸಿ, ಕಳೆದು ಹೋದ ಸಕಲೈಶ್ವರ್ಯಗಳನ್ನೂ, ರಾಜ್ಯಭಾರವನ್ನೂ ಮತ್ತು
ಎಲ್ಲಕ್ಕಿಂತ ಮಿಗಿಲಾಗಿ ಮನಶಾಂತಿಯನ್ನೂ ದೊರಕಿಸಿಕೊಟ್ಟರು.
ಈ ರೀತಿಯಾಗಿ ಸ್ಕಾಂದ ಪುರಾಣದಲ್ಲಿ ನಂದಿಕೇಶ್ವರ - ಸನತ್ಕುಮಾರ ಸಂವಾದದಲ್ಲಿ ನಡೆದ
ಸ್ಯಮಂತಕೊಪಾಖ್ಯಾನವು ಉಲ್ಹಾಸಮಯವಾಗಿ ಮುಕ್ತಾಯವಾಯಿತು. ಪಠಿಸಿದವರಿಗೂ, ಶ್ರವಣಿಸಿದವರಿಗೂ ಶುಭಮಸ್ತು. ಶುಭ ಮಂಗಳಂ ಸರ್ವ ಮಂಗಳಂ. ಸರ್ವೇ ಜನೋ ಸುಖಿನೋ ಭವಂತು.
(ಕಥಾ ಶ್ರವಣದ ನಂತರ ಭಗವಂತನಿಗೆ, ಧೂಪ, ದೀಪದ ಮಂಗಳಾರತಿಯನ್ನು ಮಾಡಿ, ಎಲ್ಲರೂ ಆರತಿ ಸ್ವೀಕರಿಸಿ, ನಮಸ್ಕಿರಸುವುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ