ಶ್ರೀ
ಸ್ವರ್ಣ ಗೌರೀ ಪೂಜೆ
(ಸರಳ ಹಾಗೂ ಸೂಕ್ತ ಮಾರ್ಗದರ್ಶನದೊಂದಿಗೆ )
ಸರಳವಾಗಿ ಪ್ರಮುಖ ಪೂಜೆಗಳನ್ನು ಮಾಡಲು ಕೈಪಿಡಿ :
ಗಣಪ,
ಗೌರಿ ಮುಂತಾದ ಜನಪ್ರಿಯ ಪೂಜೆ ಎಂದರೆ ಆಸೆ ಎಲ್ಲರಿಗೂ ಇದ್ದದ್ದೇ. ಬಕ ಪಕ್ಷಿಯಂತೆ ವರ್ಷವಿಡೀ
ಕಾದಿರುವವರೇ ಬಹಳ. ಆದರೇನು ಮಾಡುವುದು ಈಗಿನ ಅನೇಕ ಪರಿಸ್ಥಿತಿಗಳು ವಿಘ್ನ ನಿವಾರಕನನ್ನು
ನಿಧಾನವಾಗಿ ಪೂಜಿಸಲು ವಿಘ್ನಗಳನ್ನೇ ಉಂಟುಮಾಡುತ್ತವೆ. ಅವರವರಿಗೆ ಅವರದೇ ಕಾರಣ . ಪರ
ದೇಶಗಳಲ್ಲಿರುವವರಿಗೆ ಇತಿ ಮಿತಿಯ ಕಟ್ಟಳೆ. ಈಸ ಬೇಕು , ಇದ್ದು ಜಯಿಸಬೇಕು ಎಂದು ಛಲ ಬಿಡದ ತ್ರಿವಿಕ್ರಮನಂತೆ ಪೂಜೆ
ಮಾಡಲೇಬೇಕೆಂದು ಪಣ ತೊಡುವವರೇ ಹೆಚ್ಚಿನ ಸಂಖ್ಯೆ. ಹೌದು, ಇದಕ್ಕೆ ಒಂದು ಪರಿಹಾರ ಬೇಕಲ್ಲವೇ .
ನಮ್ಮ ಶ್ರುತಿ, ಸ್ಮೃತಿ, ವೇದ, ಪುರಾಣ ಪಾರಂಗತರು ನಿಜವಾಗಿಯೂ
ತ್ರಿಕಾಲ ಜ್ಞಾನಿಗಳು. ಅನೇಕ ಪೂಜಾ ವಿದಾನಗಳನ್ನು ವಿವರವಾಗಿ, ವಿಸ್ತಾರವಾಗಿ ಶ್ಲೋಕಗಳ/ಮಂತ್ರಗಳ ರೂಪದಲ್ಲಿ ದಯಪಾಲಿಸಿದ್ದರೂ, ಅವರು ಎತ್ತಿ ತೋರಿಸುವ ಪ್ರಮುಖ
ಅಂಶವೆಂದರೆ, ದೇವರ ಪೂಜೆಗೆ
ಆಡಂಬರದ ದಿಗಂಬರ ಪ್ರದರ್ಶನದ ಅವಶ್ಯಕತೆಯಾಗಲೀ, ನಿರೀಕ್ಷೆಯಾಗಲೀ ಅಲ್ಲವೇ ಅಲ್ಲ. ಚಿಕ್ಕದಾದರೂ ಚೊಕ್ಕವಾಗಿ ಪೂಜೆ ನೆರವೇರಿಸಿ ಎಂಬ ಅಂಶ .
ಅದಕ್ಕಾಗಿಯೇ ಅವರು ಮಂತ್ರಗಳಲ್ಲಿ ,” ಶಕ್ತ್ಯಾನುಸಾರ, ಭಕ್ತ್ಯಾನುಸಾರ, ಯೋಗ್ಯತಾನುಸಾರ
.........ಕುರುಮೇ ದೇವ” ಎಂದಿದ್ದಾರೆ.
ಮೊದಲೇ ಹೇಳಿದಂತೆ , ಕಾರಣಾಂತರದಿಂದ ಅನೇಕರು ತಾವೇ ಪೂಜೆಯನ್ನು ಪುರೋಹಿತರ ನೆರವಿಲ್ಲದೆ ಮಾಡುವುದುಂಟು. ಜೊತೆಗೆ, ಎಲ್ಲ ಕಡೆ ಎಲ್ಲ
ಸಿದ್ಧತೆಗಳನ್ನು ಅಣಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅನಿರೀಕ್ಷಿತವಾಗಿ
ಅಲ್ಪ,ಸ್ವಲ್ಪ
ದೋಷಗಳಾಗಲು ಸಾಧ್ಯ. ಇದನ್ನೂ ಮನಗಂಡು ಪಂಡಿತೋತ್ತಮರು ,” ಮಂತ್ರ, ತಂತ್ರ, ಲೋಪ, ದೋಷ
ಪ್ರಾಯಶ್ಚಿತ್ತಾರ್ಥಂ.....” ಎಂಬ ಕ್ಷಮಾಪಣೆ ಮಂತ್ರವನ್ನೂ ಅಳವಡಿಸಿದ್ದಾರೆ. ಅಂದ ಮಾತ್ರಕ್ಕೆ, ಕಾಟಾಚಾರಕ್ಕೆ ಪೂಜೆ
ನೆರವೇರಿಸಬೇಕೆಂದು ಅಲ್ಲ. ನಿಮ್ಮ ಯೋಗ್ಯತೆಗೆ ತಕ್ಕಂತೆ, ಸಮಯದ, ಕಾರ್ಯ ಬಾಹುಳ್ಯದ ನಡುವೆಯೂ ಸ್ವಲ್ಪವಾದರೂ ಸಮಯವನ್ನು ನಿಮಗೂ, ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ,ಶುಭಕ್ಕಾಗಿ ಭಗವಂತನನ್ನು ಚಿಕ್ಕದಾದರೂ, ಚೊಕ್ಕವಾಗಿ ತಪ್ಪದೇ ಪೂಜಿಸಿ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಅಳಿಲು ಸೇವೆ ಮಾಡಿ.
ಭಗವಂತನು ನಿಮಗೆಲ್ಲರಿಗೂ ಸಕಲ ಸೌಭಾಗ್ಯ, ಸಂಪತ್ತು , ಸಮೃದ್ಧಿಯನ್ನು ದಯಪಾಲಿಸಲಿ .
ಒಂದು ಬಿಚ್ಚು ನುಡಿ. ನಾನು ಪುರೋಹಿತನೂ ಅಲ್ಲ, ವೇದ ಜ್ನಾನಿಯಾಗಲೀ, ಪಂಡಿತನಂತೂ ಅಲ್ಲವೇ ಅಲ್ಲ .
ನಿತ್ಯ ದೇವರಿಗೆ ಕೈ ಮುಗಿಯುತ್ತೇನೆ , ಸಂಧ್ಯಾವಂದನೆ ಮಾಡುತ್ತೇನೆ, ಕೆಲವು ಶ್ಲೋಕಗಳನ್ನೂ ಓದುತ್ತೇನೆ. ಭಾರತದ ಮನೆಯಲ್ಲಿ ಹಾಗೂ ಹಲವು ಬಾರಿ ಅಮೆರಿಕಾದ ನನ್ನ
ಮಗನ ಮನೆಯಲ್ಲಿ ಗೌರಿ ಹಾಗೂ ಗಣೇಶನ ಪೂಜೆಗಳನ್ನು ತಕ್ಕ ಮಟ್ಟಿಗೆ ಮಾಡಿಸಿದ್ದೇನೆ. ನೋಡಿ, ಮಾಡಿ ಹಾಗೂ ಆಡಿ ಕಲಿತ ಅನುಭವದ
ಆಧಾರದ ಮೇಲೆ ಪೂಜಾ ವಿಧಾನಗಳನ್ನು ಸರಳವಾದ ರೀತಿಯಲ್ಲಿ ಮಂತ್ರಗಳನ್ನು ಸಂಕಲನ ಮಾಡಿ ನಿಮ್ಮ ಮುಂದೆ
ಈಗ ಪ್ರಸ್ತುತ ಪಡಿಸುತ್ತಿದ್ದೇನೆ . ನಿಮಗೆ ಪ್ರಿಯವೆನಿಸಿದರೆ ಅಳವಡಿಸಿಕೊಳ್ಳಿ . ಯಾವುದಾದರು
ತಪ್ಪುಗಳಿದ್ದರೆ ದಯವಿಟ್ಟು ನನ್ನ ಗಮನಕ್ಕೆ ತನ್ನಿ . ಸಂತೋಷದಿಂದ ಸರಿಪಡಿಸಿಕೊಳ್ಳುತ್ತೇನೆ.
ಶುಭವಾಗಲಿ.
ಗೌರಿ
ಪೂಜೆಗೆ ಸಿದ್ದತೆಗಳು :
ಪೂಜೆಗೆ ಆಡಂಬರ, ಪ್ರದರ್ಶನಗಳಿಗಿಂತ ಮುಖ್ಯವಾಗಿ ನಿಷ್ಥೆ, ಭಕ್ತಿ
ಪ್ರಾಧಾನ್ಯ. ಜೊತೆಗೆ ನಿರ್ವಿಘ್ನವಾಗಿ ನಡೆಸುವುದೂ ಅತ್ಯಮೂಲ್ಯ .ಆದ್ದರಿಂದ ಸಕಲ
ಸಿದ್ದತೆಗಳನ್ನೂ ಮುಂಚೆಯೇ
ಮಾಡಿಕೊಳ್ಳುವುದು ಅನಿವಾರ್ಯ. ಇದರಿಂದ ಸುಗುಮವಾಗಿ ಕಾರ್ಯ ನಡೆಯುವುದು. ಕಾಲ ಹಾಗೂ ಪ್ರದೇಶಕ್ಕನುಗುಣವಾಗಿ ಪೂಜಾ ದ್ರವ್ಯಗಳನ್ನು ಬಳಸಲೇಬೇಕಾದರೂ, ಕೆಲವು ವೈದಿಕ ಮಂತ್ರಗಳು ಜೊತೆಗೆ ಪದ್ದತಿಗಳು ನಮ್ಮ ಸಂಸ್ಕೃತಿಗೆ ಶೋಭೆಯನ್ನು ತರುತ್ತವೆ.
ಆಯಾ ವೇದ, ಗೋತ್ರ , ಮನೆತನದ ಸಂಪ್ರದಾಯ ಸ್ವಲ್ಪ
ವಿಭಿನ್ನವಾದರೂ ಬಹಳಷ್ಟು ಅನುಕರಣೆಗಳು ಸಾಮಾನ್ಯವಾಗಿ ಒಂದೇ ಆಗಿರುತ್ತವೆ.
ಸ್ನಾನ, ಮುಗಿಸಿ, ಹಣೆಗೆ ಕುಂಕುಮವನ್ನು ಇಟ್ಟುಕೊಂಡು ಶುಭ್ರವಾದ ವಸ್ತ್ರಗಳನ್ನು ಧರಿಸಿ ಪೂಜಾ ಮಂಟಪವನ್ನು ಸ್ವಚ್ಚವಾದ ಬಟ್ಟೆಯಲ್ಲಿ ವರೆಸಿ ಅದರ
ಮೇಲೆ ಅಕ್ಕಿ ಅಥವಾ ಗೋಧಿಯನ್ನು ಹರಡಿ ಕಲಶ ಮತ್ತು ದೇವತಾ ಮೂರ್ತಿಯನ್ನು ಇಟ್ಟುಕೊಳ್ಳಬೇಕು.
ಸಲಕರಣೆಗಳು
- ಅರಿಶಿನ
- ಕುಂಕುಮ
- ಮಂತ್ರಾಕ್ಷತೆ
- ಚಂದನ
- ಗಂಧ
- ತಟ್ಟೆಗಳು
- ಉದ್ಧರಣೆ
(ಪಂಚ ಪಾತ್ರೆ)
- ಅರ್ಘ್ಯ
ಪಾತ್ರೆ
- ಕಲಶದ
ಚಂಬುಗಳು
- ಕುಳಿತುಕೊಳ್ಳಲು
ಮಣೆ ಅಥವಾ ಚಾಪೆ ಅಥವಾ
ಮ್ಯಾಟು
- ಹಸುವಿನ ಹಸಿ ಹಾಲು
- ಬೆಣ್ಣೆ
ಕಾಯಿಸಿದ ತುಪ್ಪ (ಹಸುವಿನಿನ ಹಾಲಿನಿಂದ ತಯಾರಿಸಿದ್ದಾದರೆ ಉತ್ತಮ )
- ಮೊಸರು
- ದೀಪದ
ಎಣ್ಣೆ
- ಸಕ್ಕರೆ
- ಜೇನುತುಪ್ಪ
- ಪಂಚಾಮೃತ ( ಹಾಲು,ಮೊಸರು, ತುಪ್ಪ, ಸಕ್ಕರೆ,
ಜೇನುತುಪ್ಪ ಇವುಗಳ
ಮಿಶ್ರಣ )
- ತೆಂಗಿನ ಕಾಯಿನ
ಎಳನೀರು
- ಗೆಜ್ಜೆವಸ್ತ್ರ
ಜೊತೆ
- ಮೂರೆಳೆ
ಜನಿವಾರ
- ಕರ್ಪೂರ
- ಮಾವಿನ ಎಲೆ,
ಬಾಳೆ ಕಂಬ, ತೋರಣ, ಮಂಟಪದ
ಅಲಂಕಾರಿಕ ವಸ್ತುಗಳು
- ವೀಳ್ಯದ
ಎಲೆ
- ಅಡಿಕೆ
- ಅಗರಬತ್ತಿ/ಊದುಬತ್ತಿ
- ಪರಿಮಳ ದ್ರವ್ಯ
- ವಿವಿಧ
ಬಗೆಯ ಬಿಡಿ ಹೂವುಗಳು ಮತ್ತು ಎರಡು ಹೂಮಾಲೆ ,
- ಕನಿಷ್ಠ ೨೧
ಗರಿಕೆ ಹುಲ್ಲು ( ಹುಟ್ಟುತ್ತಿರುವ ಮರಿ ಹುಲ್ಲು )
- ಪತ್ರೆಗಳು
( ವಿವಿಧ ರೀತಿಯ ಎಲೆಗಳು ), ತುಳಸಿ ದಳಗಳು ಇರಲೇ ಬೇಕು
.
- ತುಪ್ಪದಲ್ಲಿ
ನೆನೆಸಿದ ಹತ್ತಿಯ ಬತ್ತಿಗಳು
( ಕೆಲವು ಮೂರು,ಕೆಲವು ಐದು ಜೋಡಿಯಾಗಿ )
- ತಿಳಿನೀರಿನಲ್ಲಿ
ಅರಿಶಿನ/ಕುಂಕುಮ ಕದಡಿ
ಆರತಿಗೆ ಇಟ್ಟುಕೊಳ್ಳಿ(ಮನೆಯ ಪದ್ದತಿಯಂತೆ)
- ತೆಂಗಿನಕಾಯಿ
- ಬಾಳೆಹಣ್ಣು
ಸಾಕಷ್ಟು
- ಖರ್ಜೂರ
- ದ್ರಾಕ್ಷಿ
- ಐದು ರೀತಿಯ
ಹಣ್ಣುಗಳು
- ಬಾಳೆ ಎಲೆ
- ದಕ್ಷಿಣೆ
- ದೀಪದ
ಕಂಬಗಳು
- ಕಡ್ಡಿ
ಸಮೇತ ಕಡ್ಡಿ ಪೆಟ್ಟಿಗೆ
- ಗೌರಿಯ
ಮಣ್ಣಿನ ಪ್ರತಿಮೆ ಚಿಕ್ಕದಾದರು
ವಿಘ್ನವಾಗಿರಬಾರದು ಅಥವಾ ಅರಿಶಿನದಲ್ಲಿ ಮಾಡಿದ್ದು .
- ಹದಿನಾರು
ಗಂಟು ಹಾಕಿದ ಹದಿನಾರು ಎಳೆಯ ಅರಿಶಿನ ಹಚ್ಚಿದ ಹತ್ತಿಯ ಹಸಿ ದಾರ
- ತಂಬಿಟ್ಟಿನ
ಕದಲಾರತಿ
- ಘಂಟೆ
- ಶುದ್ಧವಾದ
ನೀರು
- ಮಹಾ ನೈವೇದ್ಯಕ್ಕೆ ವಿವಿಧ
ಬಗೆಯ ಭಕ್ಷ್ಯಗಳು ( ಹೋಳಿಗೆ
ಇಲ್ಲವಾದರೆ ಬೆಲ್ಲದ ಅನ್ನ ಹುಗ್ಗಿಯ ತರಹ ಜೊತೆಗೆ ವಿವಿಧ
ಭಕ್ಷ್ಯಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ – ಕನಿಷ್ಠ ಐದು ತರಹ )
- ಅಲಂಕಾರಕ್ಕಾಗಿ
ಬಳೆ, ಬಿಚ್ಚೋಲೆ , ಕರಿಮಣಿ ಸರ, ಬಾಚಣಿಗೆ, ಕನ್ನಡಿ ಮಂಟಪದ
ಮೇಲೆ ಇಡಲು .
- ಮರದ
ಬಾಗಿನಗಳು ( ವಿವಿಧ ವಸ್ತುಗಳೊಂದಿಗೆ )
- ಪುಟ್ಟ ಬೆಳ್ಳಿಯ
ಗೌರಿಯ ವಿಗ್ರಹ ಮತ್ತು ಅದನ್ನಿಡಲು ತಟ್ಟೆ
- ಅನುಕೂಲವಿದ್ದರೆ
ಕಲಶಕ್ಕೆ ಹಾಕಲು ಬಂಗಾರದ ಸರ
- ಗಣಪತಿ
ವಿಗ್ರಹ ಪುಟ್ಟದು
- ಹಲಗಾರತಿ
- ದೇವರ
ವಿಗ್ರಹವನ್ನು ಒರೆಸಲು ಶುಭ್ರವಾದ ವಸ್ತ್ರ
- ಮಧ್ಯೆ,
ಮಧ್ಯೇ ಕೈ ಒರೆಸಿಕೊಳ್ಳಲು ಒಂದು ಕರವಸ್ತ್ರ.
ಪ್ರಾರ್ಥನೆ ( ನಿಮ್ಮ ಮನೆ ದೇವರ ಮುಂದೆ ಕೈ ಮುಗಿದು ನಿಂತುಕೊಂಡು ಪ್ರಾರ್ಥನೆ ಮಾಡಿ )
ಓಂ ಸರ್ವೇಭ್ಯೋ ಗುರುಭ್ಯೋ ನಮಃ , ಓಂ ಸರ್ವೇಭ್ಯೋ ದೇವೇಭ್ಯೋ ನಮಃ,
ಓಂ ಸರ್ವೇಭ್ಯೋ
ಬ್ರಾಹ್ಮಣೇಭ್ಯೋ ನಮಃ ,
ಪ್ರಾರಂಭ ಕಾರ್ಯಂ
ನಿರ್ವಿಘ್ನಮಸ್ತು,
ಶುಭಂ
ಶೋಭನಮಸ್ತು, ಇಷ್ಠದೇವತಾ ಕುಲದೇವತಾ ಸುಪ್ರಸನ್ನಾ ವರದಾ ಭವತು ,
ಅನುಜ್ಞಾಂ ದೇಹಿ.
(ಪೂಜಾ ಮಂಟಪದ ಮುಂದೆ ಒಂದು ಮಣೆ ಅಥವಾ ಚಾಪೆಯನ್ನು ಹಾಕಿ,
ಪೂರ್ವ ಇಲ್ಲವೇ
ಉತ್ತರ ಮುಖವಾಗಿ
ಕುಳಿತುಕೊಳ್ಳಿ)
ದೀಪ ಸ್ಥಾಪನಾ ( ದೀಪದ ಕಂಬಗಳಲ್ಲಿ ಹೂಬತ್ತಿಯನ್ನು ಇಟ್ಟು ಎಣ್ಣೆಯನ್ನು ಹಾಕಿ ಮೊದಲು ಬಲ ಭಾಗದ ದೀಪವನ್ನು ಹಚ್ಚಿ ).
ಅಥ ದೇವಸ್ಯ ವಾಮಭಾಗೇ ದೀಪಸ್ಥಾಪನಂ ಕರಿಷ್ಯೇ .ಶುಭಂ ಭವತು ಕಲ್ಯಾಣಿ ಆರೋಗ್ಯಂ
ಧನ ಸಂಪದಃ. ಶತೃ ಬುದ್ಧಿವಿನಾಶಾಯ
ದೀಪಜ್ಯೋತಿ ನಮೋಸ್ತುತೇ.
ಆಚಮನ (ಒಂದು ಬಟ್ಟಲಿನಲ್ಲಿ ಶುದ್ಧವಾದ ನೀರನ್ನು ಇಟ್ಟುಕೊಂಡು ಅದನ್ನು ಉದ್ಧರಣೆ ಮೂಲಕ ಆಚಮನ ಮಾಡುವುದಕ್ಕೆ ಉಪಯೋಗಿಸಿ . ಆಚಮನದ
ನೀರನ್ನು ಹಾಕಲು ಒಂದು ತಟ್ಟೆಯನ್ನು ಇಟ್ಟುಕೊಳ್ಳುವುದು . ಮಧ್ಯ ಮಧ್ಯೇ ಕೈ ಒರೆಸಿಕೊಳ್ಳಲು ಒಂದು
ಪುಟ್ಟ ಬಟ್ಟೆಯನ್ನು ಇಟ್ಟುಕೊಂಡಿರಿ ).
ಓಂ ಕೇಶವಾಯ ಸ್ವಾಹಾ, ಓಂ ನಾರಾಯಣಾಯ ಸ್ವಾಹಾ,
ಓಂ ಮಾಧವಾಯ ಸ್ವಾಹಾ, ಓಂ ಗೋವಿoದಾಯ ನಮಃ,
ಓಂ ವಿಷ್ಣವೇ ನಮಃ ,ಓಂ ಮಧುಸೂದನಾಯ ನಮಃ ,ಓಂ
ತ್ರಿವಿಕ್ರಮಾಯ ನಮಃ ,ಓಂ ವಾಮನಾಯ ನಮಃ ,
ಓಂ ಶ್ರಿಧರಾಯ ನಮಃ ,ಓಂ ಹೃಷೀಕೇಶಾಯ ನಮಃ ,ಓಂ ಪದ್ಮನಾಭಾಯ ನಮಃ ,ಓಂ ದಾಮೋದರಾಯ ನಮಃ ,ಓಂ ಸಂಕರ್ಷಣಾಯ
ನಮಃ ,ಓಂ ವಾಸುದೇವಾಯ
ನಮಃ ,ಓಂ ಪ್ರದ್ಯುಮ್ನಾಯ ನಮಃ ,ಓಂ ಅನಿರುದ್ಧಾಯ ನಮಃ ,ಓಂ ಪುರುಷೋ ತ್ತಮಾಯ ನಮಃ ,ಓಂ ಅಧೋಕ್ಷಜಾಯ
ನಮಃ ,ಓಂ ನಾರಸಿoಹಾಯ ನಮಃ ,ಓಂ ಅಚ್ಚ್ಯುತಾಯ ನಮಃ ,
ಓಂ ಜನಾರ್ದನಾಯ ನಮಃ ,ಓಂ ಉಪೇoದ್ರಾಯ ನಮಃ , ಓಂ ಹರೆಯೇ ನಮಃ ,ಓಂ ಶ್ರೀ ಕೃಷ್ಣಾಯ ನಮಃ ,
ಸಂಕಲ್ಪ
(ಕೈಯಲ್ಲಿ ಸ್ವಲ್ಪ ಮಂತ್ರಾಕ್ಷತೆ ಹಿಡಿದುಕೊಂಡು ಹೀಗೆ ಹೇಳುವುದು) .
----------------------------------ಗೋತ್ರದ , ನಾನು ಶ್ರೀಮತಿ ---------------------------------------ಶ್ರೀ. ---------------------------------------------ರವರ ಧರ್ಮ
ಪತ್ನಿ/ಮಗಳು ನನ್ನ ಹಾಗೂ ನನ್ನ
ಕುಟುಂಬದ ಸಕಲ ಇಷ್ಟಾರ್ಥಗಳ ಸಿದ್ಧಿಗಾಗಿ ಇಂದು ಈ ಸ್ವರ್ಣ ಗೌರೀ ವ್ರತವನ್ನು ಶ್ರುತಿ, ಸ್ಮೃತಿ ಹಾಗೂ ಪುರಾಣೋಕ್ತ ಮಾಡಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೇನೆ. ( ಕೈಯಲ್ಲಿರುವ ಮಂತ್ರಾಕ್ಷತೆಗೆ
ಒಂದು ಉದ್ದರಣೆ ನೀರು ಹಾಕಿ ತಟ್ಟೆಗೆ ಬಿಡುವುದು.)
ಸರ್ವ ದೇವತಾ ಪ್ರಾರ್ಥನೆ ( ಒಂದು ಹಣ್ಣನ್ನು ಹಿಡಿದು
ಎದ್ದು ನಿಂತು ಕೊಂಡು ಪ್ರಾರ್ಥನೆ ಮಾಡುವುದು)
ಓಂ ಶ್ರೀಮಾನ್ ಮಹಾಗಣಾಧಿಪತೆಯೇ ನಮಃ ,ಓಂ ಶ್ರೀ ಗುರುಭ್ಯೋ ನಮಃ , ಓಂ ಶ್ರೀ
ಸರಸ್ವತ್ಯೈ ನಮಃ ,
ಓಂ ಶ್ರೀ ವೇದಾಯ ನಮಃ , ಓಂ ವೇದ ಪುರುಷಾಯ ನಮಃ, ಓಂ ಇಷ್ಟ ದೇವತಾಭ್ಯೋ ನಮಃ , ಕುಲ ದೇವತಾಭ್ಯೋ ನಮಃ, ಸ್ಥಾನ ದೇವತಾಭ್ಯೋ ನಮಃ,
ಗ್ರಾಮ
ದೇವತಾಭ್ಯೋ ನಮಃ, ಪ್ರಾಣ ದೇವತಾಭ್ಯೋ ನಮಃ , ಮಾತಾ ಪಿತೃ ಭ್ಯಾo ನಮಃ, ಸರ್ವೆಭ್ಯೋ ದೇವೇಭ್ಯೋ ನಮೋ ನಮಃ
, ಯೇತದ್ಕರ್ಮ ಪ್ರಧಾನ ದೇವತಾಭ್ಯೋ ನಮಃ,
ಅವಿಘ್ನಮಸ್ತುಃ
.
ಸುಮುಖಶ್ಚ ಏಕದಂತಶ್ಚ ಕಪಿಲೋ ಗಜಕರ್ಣಕಃ, ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ. ಧೂಮ್ರಕೇತುರ್ ಗಣಾಧ್ಯಕ್ಷೋ ಬಾಲಚಂದ್ರೋ ಗಜಾನನಃ , ದ್ವಾದಶೈತಾನಿ ನಾಮಾನಿ ಯಃ
ಪಟೇಥ್ ಶ್ರುಣು ಯಾದಪಿ .
ವಿಧ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ , ಸಂಗ್ರಾಮೇ ಸಂಕಟೇಚೈವ ವಿಘ್ನಃ
ತಸ್ಯ ನ ಜಾಯತೇ.
ಶುಕ್ಲಾoಭರಧರಂ ದೇವಂ ಶಶಿವರ್ಣಂ ಚತುರ್ಭುಜಂ , ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತೆಯೇ.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ, ಶರಣ್ಯೇ ತ್ರಯಂಬಕೇ ದೇವೀ ನಾರಾಯಣೀ ನಮೋಸ್ತುತೇ
ಸರ್ವದಾ ಸರ್ವ ಕಾರ್ಯೇಷು ನಾಸ್ತಿ ತೇಷಾಂ ಅಮಂಗಲಂ, ಯೇಷಾಂ
ಹ್ರುದಿಸ್ಥ್ಯೋ ಭಗವಾನ್ ಮಂಗಲಾಯತನೋ ಹರಿಃ .
ಪೂಜೆಗೆ
ಸೂಕ್ತ ಸಮಯದ ಘೋಷಣೆ
ತದೇವ ಲಗ್ನಂ ಸುದಿನಂ ತದೇವ , ತಾರಾಬಲಂ ಚಂದ್ರಬಲಂ ತದೇವ ,
ವಿದ್ಯಾಬಲಂ, ದೈವಬಲಂ ತದೇವ ಲಕ್ಷ್ಮೀಪತೇ , ತೇoಘ್ರಿಯುಗಂ
ಸ್ಮರಾಮಿ .
ಘಂಟಾರ್ಚನೆ : (ಘಂಟೆಗೆ ಒಂದು ಉದ್ದರಣೆ ನೀರನ್ನು ಸಿಂಪಡಿಸಿ, ಗಂಧವನ್ನಿಟ್ಟು ನಾದವನ್ನು
ಮಾಡುತ್ತಾ ಈ ಶ್ಲೋಕ ಹೇಳುವುದು)
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ. ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ.
ಅಪಸರ್ಪಂತು ತೇ ಭೂತಾ ಯೇ ಭೂತಾ, ಭೂಮಿ ಸಂಸ್ಥಿತಾಃ ವಿಘ್ನ
ಕರ್ತಾರಃ ತೇ ನಶ್ಯಂತು ಶಿವಾಜ್ನಯಾ. ಅಪಕ್ರಾಮಂತು ಭೂತಾಧ್ಯಾಃ ಸರ್ವೇತೇ ಭೂಮಿಭಾರಕಾಃ
ಸರ್ರ್ವೇಷಾಮ ವಿರೋಧೇನಾ
ದೇವಕರ್ಮಸಮಾರಭೇ. ಪೃಥಿವ್ಯಾಃ ಮೇರುಪೃಷ್ಟ ಋಷಿಃ ,ಕೂರ್ಮೊದೇವತಾಃ ಸುತಲಂಛಂದಃ. ಇತಿ ಘಂಟಾನಾದಂ ಕೃತ್ವಾ. ಸಕಲ ಪೂಜಾರ್ಥೆ ಅಕ್ಷತಾಂ ಸಮರ್ಪಯಾಮಿ.
(ಸ್ವಲ್ಪ
ಅಕ್ಷತೆಯನ್ನು ಘಂಟೆಗೆ ಪೂಜಿಸುವುದು)
ಶುಭೇ ಶೋಭನೇ ಮುಹೂರ್ತೆ, ಆದ್ಯ ಬ್ರಹ್ಮಣೋ, ದ್ವಿತೀಯ
ಪ್ರಹರಾರ್ಧೇ, ಶ್ವೇತವರಾಹ ಕಲ್ಪೆ, ವೈವಸ್ವತ ಮನ್ವಂತರೇ,ಕಲಿಯುಗೇ, ಪ್ರಥಮ ಪಾದೇ,
ಭರತ ವರ್ಷೇ,
ಭರತ ಖಂಡೇ,
ಜಂಬೂ ದ್ವೀಪೇ , ದಂಡಕಾರಣ್ಯೇ, ಗೋದಾವರ್ಯಾಃ ದಕ್ಷಿಣೇ ತೀರೇ, ಶಾಲಿವಾಹನ ಶಕೇ, ಬೌದ್ಧಾವತಾರೇ ರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೆ , ವ್ಯಾವಹಾರಿಕೇ,
ಚಾಂದ್ರಮಾನೇನ
ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಮಧ್ಯೇ, ------------------------------ನಾಮ ಸಂವತ್ಸರೇ ,ದಕ್ಷಿಣಾಯನೇ
ವರ್ಷ ಋತೌ, ಭಾದ್ರಪದ ಮಾಸೇ, ಶುಕ್ಲ ಪಕ್ಷ್ಯೇ ತೃತೀಯ ತಿಥೌ ,
------------------ ------------------ವಾಸರಯುಕ್ತಾಯಾಂ, ಶುಭ ನಕ್ಷತ್ರೇ, ಶುಭ ಯೋಗ , ಶುಭ ಕರಣ ಏವಂ ಗುಣ , ವಿಶೇಷಣ ವಿಶಿಷ್ಥಾಯಾಂ , ಶುಭ ತಿಥೌ, ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರಾ ಶ್ರೀ. ಸ್ವರ್ಣಗೌರೀ ದೇವತಾ ಪ್ರೀತ್ಯರ್ಥಂ, ಮಮ ಸಕುಟುಂಬಸ್ಯ
ಕ್ಷೇಮ ಸ್ಥೈರ್ಯ
ಆಯುರಾರೋಗ್ಯ ಚತುರ್ವಿಧ ಪುರುಷಾರ್ಥ ಸಿದ್ಧ್ಯರ್ಥಂ , ಯಥಾ ಶಕ್ತ್ಯಾ, ಉಪಚಾರ, ಧ್ಯಾನ, ಆವಾಹನಾದಿ ಶೋಡಶೋಪಚಾರ ಪೂಜನಂ
ಕರಿಷ್ಯೇ . ಇದಂ ಫಲಂ ಮಯಾ ದೇವ ಸ್ಥಾಪಿತಂ
ಪುರಸ್ತವ .ತೇನ ಮೇ ಸುಫಲಾವಾಪ್ತಿರ್ ಭವೇತ್ ಜನ್ಮನಿ ಜನ್ಮನಿ .
( ಕೈಯಲ್ಲಿರುವ ಫಲವನ್ನು ದೇವರ ಮಂಟಪದ ಮುಂದೆ ಇಟ್ಟು ನಮಸ್ಕರಿಸಿ .)
ಪ್ರಾಣಪ್ರತಿಷ್ಥೆ
ಧ್ಯಾಯೇತ್ ಸತ್ಯಂ ಗುಣಾತೀಥಂ ಗುಣತ್ರಯ ಸಮನ್ವಿತಂ ಲೋಕನಾಥಂ ತ್ರಿಲೋಕೇಶಂ ಕೌಸ್ತುಭಾಭರಣಂ ಹರಿಂ. ನೀಲವರ್ಣಂ ಪೀತವಾಸಂ ಶ್ರೀ ವತ್ಸಪದಭೂಷಿತಂ, ಗೊಕುಲಾನಂದಂ ಬ್ರಹ್ಮಾಧ್ಯೈರಪಿ ಪೂಜಿತಂ. ಅಸ್ಯಶ್ರೀ ಸ್ವರ್ಣ
ಗೌರಿ ದೇವತಾ ಪ್ರಾಣಪ್ರತಿಷ್ಥಾಪನ ಮಹಾಮಂತ್ರಸ್ಯ ಬ್ರಹ್ಮಾ ವಿಷ್ಣು ಮಹೇಶ್ವರಾ
ಋಷಯಃ. ಋಗ್ಯಜುಸ್ಸಾಮಾಥರ್ವಣಿ
ಛಂದಾಂಸಿ ಪ್ರಾಣಶಕ್ತಿಃ ಪರಾದೇವತಾ ಹ್ರಾಂ ಬೀಜಂ , ಹ್ರೀಂ ಶಕ್ತಿಃ, ಹ್ರೂಂ ಕೀಲಕಂ , ಮಮ ದೇವತಾ ಪ್ರಾಣಪ್ರತಿಷ್ಥಾ ಸಿದ್ದ್ಯರ್ಥೇ ಜಪೇ ವಿನಯೋಗಃ .
ಕರನ್ಯಾಸ
ಓಂ ಹ್ರಾಂ ಅಂಗುಷ್ಟಾಭ್ಯಾಂ ನಮಃ ,ಓಂ ಹ್ರೀಂ
ತರ್ಜನೀಭ್ಯಾಂ ನಮಃ ,ಓಂ ಹ್ರೂಂ ಮಧ್ಯಮಾಭ್ಯಾಂ ನಮಃ, ಓಂ ಹ್ರೆೃಂ ಅನಾಮಿಕಾಭ್ಯಾಂ ನಮಃ ,ಓಂ ಹ್ರೌಂ ಕನಿಷ್ಥಿಕಾಭ್ಯಾಂ ನಮಃ ,ಓಂ ಹ್ರಃ
ಕರತಲಕರಪ್ರುಷ್ಥಾಭ್ಯಾಂ ನಮಃ.
ಅಂಗನ್ಯಾಸ
ಓಂ ಹ್ರಾಂ ಹೃದಯಾಯ ನಮಃ ,ಓಂ ಹ್ರೀಂ ಶಿರಸೇ ಸ್ವಾಹಾ ,ಓಂ ಹ್ರೂಂ ಶಿಖಾಯ್ಯೆವೌಷಟ್ ,ಓಂ ಹ್ರೆೃಂ ಕವಚಾಯ ಹುಂ, ಓಂ ಹ್ರೌಂ ನೇತ್ರತ್ರಯಾಯವೌಷಟ್ , ಓಂ ಹ್ರಃ ಅಸ್ತ್ರಾಯ ಫಟ್ , ಓಂ ಭೂರ್ಭುಸ್ವರೋಮಿತಿ ದಿಗ್ಭಂದಃ.
(ಕೈ ಮುಗಿದುಕೊಂಡಿರುವುದು) ದೇವೀ ಬಾಲಾರ್ಕ ವರ್ಣಾ ಭವತು , ಸುಖಕರೀ
ಪ್ರಾಣ ಶಕ್ತಿಃ ಪರಾನಃ .
ಹ್ರಾಂ, ಹ್ರೀಂ, ಕ್ರೋಂ, ಯ ,ರ ,ಲ ,ವ ,ಶ ,ಷ , ಸ ,ಹೋಂ ,ಓಂ ಸರ್ವ ದೇವತಾ ಪ್ರಾಣಃ ಮಮ ಪ್ರಾಣಃ ,ಓಂ ಸ್ವರ್ಣ ಗೌರೀ ಜೀವಃ ಮಮ ಜೀವಃ ,ವಾಂಗ್ಮನಃ, ಶ್ರೋತ್ರ , ಜಿಹ್ವಾಘ್ರಾಣೆೄ ಉಚ್ಚ್ವಾಸ ಸ್ವರೂಪೇಣ ಬಹಿರಾಗತ್ಯ ಆಸ್ಮಿನ್ ಬಿಂಬೇ ( ಆಸ್ಮಿನ್ ಕಲಶೆ ಆಸ್ಯಾಂ ಪ್ರತಿಮಾಯಾಂ ) ಸುಖೇನ ಚಿರಂ ತಿಷ್ಟ್ಹಂತು ಸ್ವಾಹಾ .
ಕಲಶ ಸ್ಥಾಪನೆ , ಕಲಶ ಪೂಜೆ (ಕೈಯಲ್ಲಿ ಸ್ವಲ್ಪ
ಅಕ್ಷತೆಯನ್ನು ಹಿಡಿದುಕೊಳ್ಳುವುದು)
ಕಲಶಂ ಗಂಧಾಕ್ಷತ ಪತ್ರ ಪುಷ್ಪೈರಭ್ಯರ್ಚ್ಯ. ಇತಿ ಕಲಶಂ
ಪ್ರತಿಷ್ಟಾಪಯಾಮಿ . ಸಕಲ ಪೂಜಾರ್ಥೆ
ಅಕ್ಷತಾನ್ ಸಮರ್ಪಯಾಮಿ .
(ಅಕ್ಷತೆಯನ್ನು ಕಳಶಕ್ಕೆ ನಿವೇದಿಸುವುದು)
(ಈಗ ಎಡಗೈಯನ್ನು ನಿಮ್ಮ ಮುಂದಿರುವ ಕಲಶದ ಮೇಲಿಟ್ಟು ಅದರ ಮೇಲೆ
ಬಲಗೈಯನ್ನು ಇಟ್ಟು ಈ ಮಂತ್ರವನ್ನು ಹೇಳುವುದು) ಕಲಶಸ್ಯ ಮುಖೇ ವಿಷ್ನುಃ
ಕಂಠೇ ರುದ್ರಃ ಸಮಾಶ್ರಿತಾಃ,
ಮೂಲೇ ತತ್ರ
ಸ್ಥಿತೌ ಬ್ರಹ್ಮಾಃ, ಮಧ್ಯೇ ಮಾತೃಗಣಾಸ್ಮ್ರುತಾಃ, ಕುಕ್ಷೌತು ಸಾಗರಾಸ್ಸರ್ವೇ
ಸಪ್ತದ್ವೀಪಾ ವಸುಂಧರಾ , ಋಗ್ವೇದೋ ಅಥ ಯಜುರ್ವೇದಃ ಸಾಮವೇದೋಹ್ಯಥರ್ವಣಃ ಅಂಗೈಶ್ಚಸಹಿತಾಃ,
ಸರ್ವೆ ಕಲಶಾಂಬು ಸಮಾಶ್ರಿತಾಃ , ಆಯಾಂತು ದೇವಪೂಜಾರ್ಥಂ ದುರಿತಕ್ಷಯಕಾರಿಕಾಃ . ಗಂಗೇ ಚ
ಯಮುನೇಚೈವ ಗೋದಾವರೀ ಸರಸ್ವತೀ , ನರ್ಮದೇ , ಸಿಂಧು , ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು.
ಕಲಶ ಪ್ರಾರ್ಥನೆ (ಕೈಯಲ್ಲಿ ಒಂದು ಹೂವು ಅಕ್ಷತೆ ಹಿಡಿದುಕೊಂಡು ಕೈ ಮುಗಿದು ಈ
ಮಂತ್ರವನ್ನು ಉಚ್ಚರಿಸುವುದು)
ಕಲಶಃ
ಕೀರ್ತಿಮಾಯುಷ್ಯಂ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಂ , ಯೋಗ್ಯತಾಂ ಪಾಪಹಾನಿಂ ಚ ಪುಣ್ಯಂ
ವ್ರುದ್ದಿಂ ಚ ಸಾಧಯೇತ್. ಸರ್ವ ತೀರ್ಥಮಯೋ ಯಸ್ಮಾತ್ ಸರ್ವ ದೇವಮಯೋ ಯತಃ , ಅತಃ
ಹರಿಪ್ರಿಯೋಸಿ ತ್ವಂ ಪೂರ್ಣ ಕುಂಭಂ ನಮೋಸ್ತುತೇ . (ಕೈಯಲ್ಲಿರುವ ಹೂವು ಮತ್ತ್ತು ಅಕ್ಷತೆಯನ್ನು ಮಂಟಪದ ಮೇಲಿಟ್ಟಿರುವ ಕಲಶಕ್ಕೆ
ಹಾಕುವುದು) .
ಇತಿಹಿ ಕಲಶ ಪೂಜಾಂ ಸಮರ್ಪಯಾಮಿ.
ವರುಣ ಪೂಜೆ (ನೀವು ಇಟ್ಟುಕೊಂಡಿರುವ ಇನ್ನೊಂದು ಕಲಶಕ್ಕೆ ಹೂವು ಅಕ್ಷತೆ ಪೂಜೆ ಮಾಡಿ ನಮಸ್ಕರಿಸುವುದು).
ಓಂ ವರುಣಾಯ ನಮಃ , ರಾಜೋಪಚಾರಾರ್ತೆ ಅಕ್ಷತಾಂ, ಮಂತ್ರ ಪುಷ್ಪಂ ಸಮರ್ಪಯಾಮಿ,
ನಮಸ್ಕಾರಾನ್
ಸಮರ್ಪಯಾಮಿ, ಅನಯಾ
ಪೂಜಯಾ ಭಗವಾನ್ ಶ್ರೀ ಮಹಾನ್
ವರುಣಾಯ ಪ್ರೀಯತಾಂ .
ಕಲಶೋಧಕ
ಪ್ರೋಕ್ಷಣೆ (ಕೆಳಗಿಟ್ಟುಕೊಂಡಿರುವ
ಕಲಶದಿಂದ ನೀರನ್ನು ಉದ್ಧರಣೆಯಲ್ಲಿ
ತೆಗೆದುಕೊಂಡು ಒಂದು ತುಳಸಿ
ಅಥವಾ ಹೂವಿನಿಂದ ಈ ಮಂತ್ರ ಹೇಳುವಾಗ ದೇವರ ಮೇಲೂ , ಪೂಜಾ
ದ್ರವ್ಯಗಳ ಮೇಲೂ ಮತ್ತು ನಿಮ್ಮ ಮೇಲೂ ಪ್ರೋಕ್ಷಣೆ ಮಾಡಿಕೊಳ್ಳುವುದು).
ಕಲಶೋಧಕೇನ ಪೂಜಾ ದ್ರವ್ಯಾಣಿ ಸಂಪ್ರೋಕ್ಷ್ಯ , ದೇವಂ ಆತ್ಮಾನಾಂ ಚ ಪ್ರೋಕ್ಷಯೇತ್ ,
(ಈ ತುಳಸಿ ಅಥವಾ ಹೂವನ್ನು ಉತ್ತರ ದಿಕ್ಕಿಗೆ ಹಾಕಿಬಿಡುವುದು).
ದ್ವಾರ
ಪಾಲಕ ಪೂಜೆ
(ನಮಃ ಎಂದು ಹೇಳಿದಾಗ ಆಯಾ ದಿಕ್ಕುಗಳಿಗೆ ಅಕ್ಷತೆಯನ್ನು ಹಾಕುವುದು)
ದ್ವಾರಪಾಲಾನ್ಮಹಾಭಾಗಾನ್ ವಿಷ್ಣುಸಾನ್ನಿಧ್ಯವರ್ತಿನಃ, ಲೋಕಸಂರಕ್ಷಕಾನ್ ಸದಾ, ಪೂರ್ವ ದ್ವಾರೇ ಇಂದ್ರಾಯ ನಮಃ ,ದಕ್ಷಿಣ ದ್ವಾರೇ ಗೌರೀಪತೆಯೇ ನಮಃ ,ಪಶ್ಚಿಮ ದ್ವಾರೇ ರತ್ನ್ಯೈ ನಮಃ , ಉತ್ತರ ದ್ವಾರೇ ಮನ್ಯೈ ನಮಃ, ದ್ವಾರಪಾಲಕಾನ್ ನಮಸ್ಕೃತ್ಯ. ಇತಿ ದ್ವಾರಪಾಲಕ ಪೂಜಾನ್ ಸಮರ್ಪಯಾಮಿ.
ಪೀಠ ಪೂಜೆ (ನಮಃ ಎಂದು ಹೇಳಿದಾಗ ಮಂಟಪದ ಆಯಾ ದಿಕ್ಕುಗಳಿಗೆ ಅಕ್ಷತೆಯನ್ನು
ಹಾಕುವುದು)
ಪೀಠಸ್ಯ ಅಧೋಭಾಗೇ ಆಧಾರ ಶಕ್ತ್ಯೈ ನಮಃ ,ಪೃಥಿವ್ಯೈನಮಃ, ಕ್ಷೀರಸಾಗರಾಯನಮಃ, ಸಪ್ತಕುಲಪರ್ವತೇಭ್ಯೋನಮಃ,
ಭೂಮಂಡಲಾಯನಮಃ,
ವೇದಿಕಾಯೈನಮಃ,
ನೀಲಾಯ ನಮಃ,
ಪೂರ್ವ ದಿಶೇ ಗಂ ಗಣಪತಿಯೇ ನಮಃ ,ದಕ್ಷಿಣ ದಿಶೇ ಸುo ಸರಸ್ವತ್ಯೈ ನಮಃ ,ಪಶ್ಚಿಮ
ದಿಶೇ ವಾಸ್ತು ಪುರುಷಾಯ ನಮಃ ,ಉತ್ತರ
ದಿಶೇ ಮಹಾ ಲಕ್ಷ್ಮ್ಯೈ ನಮಃ , ದಂ ದುರ್ಗಾಯೈ ನಮಃ , ಕ್ಷಂ ಕ್ಷೇತ್ರಪಾಲಕಾಯ ನಮಃ, ಪಂ ಪರಮಾತ್ಮನೇ ನಮಃ, ಜಾತಕಮಲೈಃ,
ಹೈರಣ್ಯ ಸೋಪಾನ
ಕೈರ್ಯುಕ್ತಂ ಕಾಂಚನ ನಿರ್ಮಿತೈಶ್ಚ ಸಿಂಹಾಸನಂ ಧ್ಯಾತ್ವಾ. ಇತಿ ರತ್ನಸಿಂಹಾಸನಾಯ ನಮಃ,ಇತಿ ಪೀಠ ಪೂಜಾಂ ಸಮರ್ಪಯಾಮಿ .
ಮಂಟಪ ಪೂಜೆ ರಂಗಸ್ಥಲಂ ಶುದ್ದ ಸ್ಫಾಟಿಕಾ ಭಿತ್ತಿಕಾ ವಿರಚಿತೈಸ್ಥಂಭೈಶ್ಚ ಹೈಮೈಶ್ಯುಭೈಃ, ದ್ವಾರೈಶ್ಚಾರು ವಿಚಿತ್ರರತ್ನ ಖಚಿತೈಃ, ಶೋಭಾವಹೈ ಮುಕ್ತಾಜಾಲವಿಲಂಬಿ ಸುವರ್ಣ ಮಂಟಪೈ. ಮಂಟಪ ಪೂಜಾರ್ಥೆ ಅಕ್ಷತಾಂ ಸಮರ್ಪಯಾಮಿ.
(ಸೂಚನೆ : ಪೂಜಾ ವಿಧಿ ಮುಗಿಯುವವೆರೆಗೂ ಮಂಟಪದ ಮುಂದಿನ ದೀಪಗಳು
ಉರಿಯುತ್ತಿರಬೇಕು . ಆದ್ದರಿಂದ ಮಧ್ಯೇ ಮಧ್ಯೇ
ಅದಕ್ಕೆ ಎಣ್ಣೆ ಹಾಕುತ್ತಾ ಇರುವುದು)
ಗಣಪತಿ ಪೂಜೆ (ಯಾವುದೇ ಪೂಜೆಗೆ ಮುನ್ನ ಗಣಪತಿಯ ಪೂಜೆಯನ್ನು ಮಾಡಬೇಕಾದುತ್ತದೆ) (ಬೆಳ್ಳಿಯ ಗಣಪತಿ ವಿಗ್ರಹವನ್ನು ಸ್ವಚ್ಛವಾಗಿ ತೊಳೆದ
ಒಂದು ತಟ್ಟೆಯಲ್ಲಿ ನಿಮ್ಮ ಮುಂದೆ ಇಟ್ಟುಕೊಂಡು ಪೂಜಿಸುವುದು). (ಕೈ ಮುಗಿದು ಧ್ಯಾನ ಮಾಡುವುದು)
ಗಣಾನಾಂತ್ವಾ ಗಣಪತಿಗಂ ಹವಾಮಹೇ ಕವಿಂ ಕವೀನಾಂ ಉಪಶ್ರವಸ್ಥಮಂ, ಜೇಷ್ಟ ರಾಜಂ ಬ್ರಮ್ಹಣಾo ಬ್ರಹ್ಮಣಸ್ಪತ ಆಣಶ್ರುನ್ವನ್ನೂ ತಿಭಿಸ್ಸೀದಸಾಧನಂ. ಮಹಾ ಗಣಾಧಿಪತಿಂ ಧ್ಯಾಯಾಮಿ .
(ಗಣಪತಿಯನ್ನಿಟ್ಟ ತಟ್ಟೆಯನ್ನು ಮುಟ್ಟುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಪೀಠ ಪೂಜಾಂ ಸಮರ್ಪಯಾಮಿ ,
(ಎರಡೂ ಕೈಗಳನ್ನು ಜೋಡಿಸಿ ದೇವರನ್ನು ಆಹ್ವಾನಿಸುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಆವಾಹನಂ ಸಮರ್ಪಯಾಮಿ ,
( ಪುನಃ
ತಟ್ಟೆಯನ್ನು ಮುಟ್ಟುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಆಸನಂ ಸಮರ್ಪಯಾಮಿ ,
( ಒಂದು ಉದ್ದರಣೆ ಕಲಶದ ನೀರನ್ನು ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಪಾದ್ಯಂ ಸಮರ್ಪಯಾಮಿ ,
( ಒಂದು ಉದ್ದರಣೆ ಕಲಶದ ನೀರನ್ನು ಪುನಃ ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಅರ್ಘ್ಯಂ ಸಮರ್ಪಯಾಮಿ ,
(ಒಂದು ಉದ್ಧರಣೆ ಆಚಮನದ ನೀರನ್ನು ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಆಚಮನೀಯಂ ಸಮರ್ಪಯಾಮಿ ,
(ಒಂದು ಉದ್ಧರಣೆ ಕಲಶದ ನೀರನ್ನು ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಔಪಚಾರಿಕ ಸ್ನಾನಂ ಸಮರ್ಪಯಾಮಿ ,
ಪಂಚಾಮೃತ ಸ್ನಾನ : (ಕೆಲವರು ಐದೂ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿ ಮತ್ತೆ ಕೆಲವರು ಬಿಡಿಬಿಡಿಯಾಗಿ
ಪೂಜಿಸುವುದುಂಟು).
(ಪ್ರತಿ ಬಾರಿಯೂ ಸಮರ್ಪಯಾಮಿ ಎಂದಾಗ ಮಿಶ್ರಿತ ಪಂಚಾಮೃತವನ್ನು ಒಂದು
ಉದ್ಧರಣೆಯಿಂದ ಗಣಪತಿಯ ವಿಗ್ರಹದ ಮೇಲೆ ಹಾಕುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಪಯಃ (ಹಾಲು) ಸ್ನಾನಂ ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ದಧಿ (ಮೊಸರು) ಸ್ನಾನಂ ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಘೃತ (ತುಪ್ಪ) ಸ್ನಾನಂ
ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಮಧು (ಜೇನು ತುಪ್ಪ) ಸ್ನಾನಂ ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಶರ್ಕರಾ (ಸಕ್ಕರೆ) ಸ್ನಾನಂ ಸಮರ್ಪಯಾಮಿ ,
(ಹೀಗೆ ಸಮರ್ಪಿಸಿದ
ಈ ಪಂಚಾಮೃತವನ್ನು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳುವುದು. ಮುಂದೆ ಪೂಜೆ ಮುಗಿದ ನಂತರ ತೆಗೆದುಕೊಳ್ಳಲು ಬೇಕಾಗುತ್ತದೆ)
ಓಂ ಶ್ರೀ ಮಹಾ ಗಣಪತಯೇ ನಮಃ ಗಂಧೋದಕ (ಗಂಧದ ನೀರು) ಸ್ನಾನಂ ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಅಭ್ಯಂಗ (ಸುಗಂಧದ ಎಣ್ಣೆ) ಸ್ನಾನಂ
ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಅಂಗೋದ್ವರ್ತನಕಂ (ಮೈಗೆ ಕಸ್ತೂರಿ ಲೇಪಿಸುವುದು) ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಉಷ್ಣೋದಕ (ಉದ್ದರಣೆಯಲ್ಲಿ ಬೆಚ್ಚಗೆ ಮಾಡಿದ ಕಲಶದ ನೀರು)ಸ್ನಾನಂ ಸಮರ್ಪಯಾಮಿ
ಓಂ ಶ್ರೀ ಮಹಾ ಗಣಪತಯೇ ನಮಃ ಶುದ್ಧೋಧಕ (ಕಲಶದ ಶುದ್ಧವಾದ ನೀರು) ಸ್ನಾನಂ ಸಮರ್ಪಯಾಮಿ ,
(ಹೀಗೆ ಅರ್ಪಿಸಿದ ಈ ವಿವಿಧ ಬಗೆಯ ನೀರನ್ನೂ ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳುವುದು. ಮುಂದೆ ಪೂಜೆ ಮುಗಿದ ನಂತರ
ತೆಗೆದುಕೊಳ್ಳಲು ಬೇಕಾಗುತ್ತದೆ)
ಓಂ ಶ್ರೀ ಮಹಾ ಗಣಪತಯೇ ನಮಃ ಸಕಲ ಪೂಜಾರ್ಥೆ ಅಕ್ಷತಾಂ ಸಮರ್ಪಯಾಮಿ , ಓಂ ಶ್ರೀ ಮಹಾ ಗಣಪತಯೇ ನಮಃ
ವಸ್ತ್ರಾರ್ಥಂ ಅಕ್ಷತಾಂ
ಸಮರ್ಪಯಾಮಿ , ಓಂ ಶ್ರೀ ಮಹಾ
ಗಣಪತಯೇ ನಮಃ ಯಜ್ನೋಪವೀತಾರ್ಥಂ ಅಕ್ಷತಾಂ ಸಮರ್ಪಯಾಮಿ , ಓಂ ಶ್ರೀ ಮಹಾ ಗಣಪತಯೇ ನಮಃ ಗಂಧಂ ಸಮರ್ಪಯಾಮಿ , ಓಂ ಶ್ರೀ ಮಹಾ ಗಣಪತಯೇ ನಮಃ
ನಾನಾ ಪರಿಮಳ ದ್ರವ್ಯ ಸಮರ್ಪಯಾಮಿ , ಓಂ ಶ್ರೀ ಮಹಾ ಗಣಪತಯೇ ನಮಃ
ಅಕ್ಷತಾನ್ ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಪುಷ್ಪಾಣಿ ಸಮರ್ಪಯಾಮಿ , ಓಂ ಶ್ರೀ ಮಹಾ ಗಣಪತಯೇ ನಮಃ
ಸರ್ವಾಂಗ ಪೂಜಾನ್ ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ಪತ್ರ ಪೂಜಾನ್ ಸಮರ್ಪಯಾಮಿ , ಓಂ ಶ್ರೀ ಮಹಾ ಗಣಪತಯೇ ನಮಃ ದೂರ್ವಾಯುಗ್ಮ ಪೂಜಾನ್ ಸಮರ್ಪಯಾಮಿ , ಓಂ ಶ್ರೀ ಮಹಾ ಗಣಪತಯೇ ನಮಃ ಧೂಪಾರ್ಥಂ ಅಕ್ಷತಾಂ ಸಮರ್ಪಯಾಮಿ ,
ಓಂ ಶ್ರೀ ಮಹಾ ಗಣಪತಯೇ ನಮಃ ದೀಪಾರ್ಥಂ ಅಕ್ಷತಾಂ ಸಮರ್ಪಯಾಮಿ .
ನೈವೇದ್ಯ (ವೀಳ್ಯದೆಲೆಯ ಮೇಲೆ ಒಂದು ಬಾಳೆ ಹಣ್ಣನ್ನು ಇಟ್ಟುಕೊಂಡು ನೈವೇದ್ಯ
ಮಾಡುವುದು)
ಪರಿಶಿಂಚಾಮಿ, ಅಮೃತಮಸ್ತು , ಅಮೃತೋಪಸ್ತರಣಮಸೀ ಸ್ವಾಹಾ, ಓಂ ಪ್ರಾಣಾಯ ಸ್ವಾಹಾ ,ಓಂ ಅಪಾನಾಯ ಸ್ವಾಹಾ ,ಓಂ ವ್ಯಾನಾಯ
ಸ್ವಾಹಾ ,ಓಂ ಉದಾನಾಯ
ಸ್ವಾಹಾ , ಬ್ರಹ್ಮಣೇ
ಸ್ವಾಹಾ , ಬ್ರಮ್ಹಣಿಮ , ಆತ್ಮಾಮೃತತ್ವಾಯ ......
ಓಂ ಶ್ರೀ ಮಹಾ ಗಣಪತಯೇ ನಮಃ ನೈವೇದ್ಯಂ ಸಮರ್ಪಯಾಮಿ ,
(ಈ ನೈವೇದ್ಯದ ಬಾಳೆ ಹಣ್ಣನ್ನು ಮಂಟಪದಲ್ಲಿ ಬಲ ಭಾಗದಲ್ಲಿ ಗಣಪತಿ
ಪೂಜಾ ನಂತರ ಇಟ್ಟುಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಉತ್ತರಾಪೋಷಣಂ, ಮಹಾ ಫಲಂ ,ಫಲಾಷ್ಟಕ ,ತಾಂಬೂಲಮ್ ,ದಕ್ಷಿಣಾ ಅರ್ಥೇ ಅಕ್ಷತಾಂ
ಸಮರ್ಪಯಾಮಿ ,
ಮಂಗಳಾರತಿ (ಘಂಟೆ ಬಾರಿಸುತ್ತಾ, ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಮೂರು
ಬತ್ತಿಗಳನ್ನು ಹಚ್ಚಿ ಮಂಗಳಾರತಿ ಮಾಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಮಹಾ ನೀರಾಜನಂ ಸಮರ್ಪಯಾಮಿ,
(ಒಂದು
ಉದ್ಧರಣೆ ಆಚಮನದ ನೀರನ್ನು ಬಿಡುವುದು)
ಪುನಃ ಪೂಜೆ (ಅಕ್ಷತೆಯಿಂದ ಪೂಜೆ ಮಾಡಿ)
ಓಂ ಶ್ರೀ ಮಹಾ ಗಣಪತಯೇ ನಮಃ , ರಾಜ ಭೋಗಾಯ ಯತ್ನತಃ ಪುನಃ ಪೂಜಾಂ ಕರಿಷ್ಯೇ .
ಛತ್ರಂ, ಚಾಮರಂ, ಗೀತಂ, ನೃತ್ಯಂ, ವಾದ್ಯಂ, ದರ್ಪಣಂ, ವ್ಯಜನಂ, ಆಂದೋಲನಂ, ಸಮಸ್ತ ರಾಜೋಪಚಾರ,
ಸರ್ವೋಪಚಾರಾರ್ಥೆ ಅಕ್ಷತಾಂ ಸಮರ್ಪಯಾಮಿ .
ಪ್ರಾರ್ಥನೆ : (ಗಣಪತಿಗೆ ಕೈ
ಮುಗಿದು ಪ್ರಾರ್ಥನೆ ಮಾಡಿಕೊಳ್ಳುವುದು)
ಓಂ ವಕ್ರತುಂಡ ಮಹಾಕಾಯ , ಕೋಟಿ ಸೂರ್ಯ ಸಮಪ್ರಭಾ , ನಿರ್ವಿಘ್ನಂ
ಕುರುಮೇ ದೇವ , ಸರ್ವ ಕಾರ್ಯೇಷು
ಸರ್ವದಾ ,
ಅನಯಾ
ಪೂಜಯ ವಿಘ್ನಹರ್ಥಃ ಶ್ರೀ ಮಹಾ ಗಣಪತಿಃ ಪ್ರೀಯತಾಂ.
(ಗಣಪತಿಯನ್ನು ಪೂಜಿಸಿದ ಹೂವನ್ನು ಮತ್ತು ಅಕ್ಷತೆಯನ್ನು ನಿಮ್ಮ ಶಿರದಲ್ಲಿ ಧರಿಸಿ ಕೊಳ್ಳುವುದು)
ಗಣಾಧಿಪತಿ ಪ್ರಸಾದಂ ಶಿರಸಾ ಗೃಹ್ಣಾಮಿ.
(ಹೀಗೆ ಪೂಜಿಸಿದ
ಗಣಪತಿಯನ್ನು ನಿಮ್ಮ ದೇವರ ಗೂಡಿನಲ್ಲಿ ಇಟ್ಟು ಬಿಡುವುದು)
ಈಗ ಗೌರೀ ಪೂಜೆ
ಧ್ಯಾನಂ (ಅರಿಶಿನದ ಗೌರಿಯನ್ನು ಮಂಟಪದ ಮೇಲೆ ಒಂದು ಬಾಳೆ ಎಲೆ ಅಥವಾ
ತಟ್ಟೆಯಲ್ಲಿ ನುಚ್ಚಿರದ ಅಕ್ಕಿಯನ್ನು ಹರಡಿ ಅದರ ಮೇಲೆ ಇಡುವುದು. ಕೆಲವರು ಮಣ್ಣಿನ ಅಥವಾ ಲೋಹದ ವಿಗ್ರಹವನ್ನು ಇಡುತ್ತಾರೆ. ಜೊತೆಗೆ ಇನ್ನೊಂದು ತಟ್ಟೆಯಲ್ಲಿ ನಿಮ್ಮ ಮನೆಯಲ್ಲಿರುವ ಬೆಳ್ಳಿ ಅಥವಾ ಪಂಚಲೋಹದ ಮೂರ್ತಿಯನ್ನು ನಿಮ್ಮ
ಮುಂದೆ ಕೆಳ ಬಾಗದಲ್ಲಿ ಸ್ವಲ್ಪ ಅಕ್ಷತೆ ಹಾಕಿ ಒಂದು ಸಣ್ಣ ಮಣೆಯ ಮೇಲೆ ಇಟ್ಟುಕೊಳ್ಳುವುದು.
ಇದರಲ್ಲಿ ಅಕ್ಕಿ ಹರಡುವ
ಅವಶ್ಯಕತೆಯಿಲ್ಲ. ಇದರಿಂದ ಪೂಜೆಗೆ ಅನುಕೂಲವಾಗುವುದು.). ( ಕೈ ಮುಗಿದು ಧ್ಯಾನ ಮಾಡುವುದು.)
ಹರಾನ್ವಿತಾಮಿಂದುಮುಖೀಂ ಸರ್ವಾಭರಣ ಭೂಷಿತಾಂ , ವಿಮಲಾಂಗೀಂ ವಿಶಾಲಾಕ್ಷೀಂ ಚಿಂತಯಾಮಿ ಸದಾಶಿವಾಂ.
ಶ್ರೀ ಸ್ವರ್ಣಗೌರ್ಯೈ (ರ್ರೈ
ರ್ರ್ಯೈ) ನಮಃ , ಧ್ಯಾಯಾಮಿ, ಧ್ಯಾನಂ ಸಮರ್ಪಯಾಮಿ .
ಆವಾಹನಂ (ಎರಡೂ ಕೈಗಳನ್ನು ಚಾಚಿ ಹಸ್ತಗಳನ್ನು ಜೋಡಿಸಿ , ಹಸ್ತಗಳನ್ನು
ನಿಮ್ಮ ಕಡೆ ತಿರುಗಿಸಿ ದೇವರನ್ನು
ಆಹ್ವಾನಿಸುವುದು)
ಸುಮಧ್ಯಮಾಂ , ಸುವಸನಾಂ, ಚಂದ್ರ
ಬಿಂಬಾಧರಾನ್ವಿತಾಂ ,ಆವಾಹಯಾಮಿ ದೇವೀಂತ್ವಾಂ ಸರ್ವದಾ ಶುಭಕಾರಿಣೀo .
ಶ್ರೀ ಸ್ವರ್ಣಗೌರ್ಯೈ ನಮಃ , ಆವಾಹನಂ ಸಮರ್ಪಯಾಮಿ . .
ಆಸನಂ (ಮಂಟಪವನ್ನು ಬೆರಳುಗಳಿಂದ
ಮುಟ್ಟುವುದು)
ಅನೇಕ ರತ್ನ ಸುಮ್ಯುಕ್ತಂ ಮುಕ್ತಾಮಣಿ ವಿಭೂಶಿತಮ್ , ಸ್ವರ್ಣ ಸಿಂಹಾಸನಂ ಚಾರು ಪ್ರೀತ್ಯರ್ಥಂ ಪ್ರತಿಗೃಹ್ಯತಾಂ
.
ಶ್ರೀ ಸ್ವರ್ಣಗೌರ್ಯೈ ನಮಃ , ಆಸನಂ ಸಮರ್ಪಯಾಮಿ .
ಅರ್ಘ್ಯಂ (ಕಲಶದ ನೀರಿನಿಂದ ಒಂದು ಉದ್ಧರಣೆ ನೀರು ಅರ್ಘ್ಯ ಪಾತ್ರೆಗೆ ಬಿಡುವುದು)
ಶ್ರೀ
ಪಾರ್ವತಿ ಮಹಾಭಾಗೇ ಗಂಧ ಪುಷ್ಪಾಕ್ಷತೈರ್ಯುತಂ ಅರ್ಘ್ಯಂ ಗೃಹಾಣಂ ದೇವೇಶಿ ಸರ್ವ ಸಿದ್ಧಿ
ಪ್ರದಾಯಕಿ .
ಶ್ರೀ ಸ್ವರ್ಣಗೌರ್ಯೈ ನಮಃ, ಅರ್ಘ್ಯಂ ಸಮರ್ಪಯಾಮಿ .
ಪಾದ್ಯಂ (ಕಲಶದ ನೀರಿನಿಂದ ಒಂದು ಉದ್ಧರಣೆ ನೀರು ಅರ್ಘ್ಯ ಪಾತ್ರೆಗೆ ಬಿಡುವುದು)
ನಾನಾ ವಿಧ ಸುವಾಸಿತಂ, ಶಂಕರ ಪ್ರಿಯ ಸಿದ್ಧಿದಂ , ಭಕ್ತಾ ಪಾದ್ಯಂ ಮಯಾದತ್ತಂ
ಗೃಹಾಣ ಪ್ರಣತ ಪ್ರಿಯೇ.
ಶ್ರೀ ಸ್ವರ್ಣಗೌರ್ಯೈ ನಮಃ ಪಾದ್ಯಂ ಸಮರ್ಪಯಾಮಿ.
ಆಚಮನಂ (ಆಚಮನಕ್ಕೆ ಇಟ್ಟು ಕೊಂಡಿರುವ ನೀರಿನಿಂದ ಒಂದು ಉದ್ಧರಣೆ ನೀರನ್ನು
ಅರ್ಘ್ಯ ಪಾತ್ರೆಗೆ ಬಿಡುವುದು)
ಗಂಗಾತೊಯಂ ಸಮಾನಿತಾಂ ಸುವರ್ಣ ಕಲಶೆ ಸ್ಥಿತಂ, ಗೃಹಾಣ
ಆಚಮನಂ ದೇವಿ ಪೂಜಿತೊ ಯಃ ಸುರೈರಪಿ .
ಶ್ರೀ ಸ್ವರ್ಣಗೌರ್ಯೈ ನಮಃ , ಆಚಮನಂ ಸಮರ್ಪಯಾಮಿ .
ಪಂಚಾಮೃತ ಸ್ನಾನಂ (ಕೆಳಗೆ ಇಟ್ಟು ಕೊಂಡಿರುವ ಗೌರಿಯ ಬೆಳ್ಳಿಯ ಮೂರ್ತಿಯ ಮೇಲೆ, ಕ್ರಮಾನುಸಾರವಾಗಿ ಪಂಚಾಮೃತದ ವಿವಿದ ಪದಾರ್ಥಗಳನ್ನು ಒಂದು ಉದ್ದರಣೆಯಿಂದ, ಮಂತ್ರಗಳನ್ನು ಹೇಳಿದ ಹಾಗೇ ಹಾಕುತ್ತಾ ಇರುವುದು)
ಪಯಃ ಸ್ನಾನ (ಕಾಯಿಸಿರದ ಹಸಿ ಹಾಲು):
ಸುರಭೇಸ್ತು ಸಮುತ್ಪನ್ನಂ ದೇವಾನಾಂ ಅಪಿ ದುರ್ಲಭಂ, ಪಯೋ ದಧಾಮಿ ದೇವೇಶಿ
ಪ್ರೀತ್ಯರ್ಥಂ ಪ್ರತಿಗೃಹ್ಯತಾಂ
.
ಶ್ರೀ
ಸ್ವರ್ಣ ಗೌರ್ಯೈ ನಮಃ , ಪಯಃ ಸ್ನಾನಂ ಸಮರ್ಪಯಾಮಿ .
ದಧಿ ಸ್ನಾನಂ (ಮೊಸರು)
ಚಂದ್ರ ಮಂಡಲ ಸಂಕಾಶಂ ಸರ್ವ ದೇವ ಪ್ರಿಯಂ ಹಿ ಯತ್ , ದಧಿ ದಧಾಮಿ ದೇವೇಶಿ ಸ್ನಾನಾರ್ಥಂ ಪ್ರತಿಗೃಹ್ಯತಾಂ ,
ಶ್ರೀ
ಸ್ವರ್ಣ ಗೌರ್ಯೈ ನಮಃ , ದಧಿ ಸ್ನಾನಂ ಸಮರ್ಪಯಾಮಿ .
ಘೃತ ಸ್ನಾನಂ (ತುಪ್ಪ)
ಆಜ್ಯಂ
ಸುರಾಣಾಂ ಆಹಾರಂ ಆಜ್ಯಂ ಯಜ್ಞೇ ಪ್ರತಿಷ್ಥಿತಂ, ಆಜ್ಯಂ ಪವಿತ್ರಂ ಪರಮಂ ಸ್ನಾನಾರ್ಥಂ ಪ್ರತಿಗೃಹ್ಯತಾಂ ,
ಶ್ರೀ
ಸ್ವರ್ಣ ಗೌರ್ಯೈ ನಮಃ , ಘೃತ ಸ್ನಾನಂ ಸಮರ್ಪಯಾಮಿ .
ಮಧು ಸ್ನಾನಂ (ಜೇನು ತುಪ್ಪ)
ಸರ್ವೌಷಧಿ ಸಮುತ್ಪನ್ನಂ ಪೀಯೂಷ ಸದೃಶಂ
ಮಧು , ಸ್ನಾನಾರ್ಥಂ ಮಯಾ ದತ್ತಂ ಗೃಹಾಣ ಪರಮೇಶ್ವರಿ.
ಶ್ರೀ
ಸ್ವರ್ಣ ಗೌರ್ಯೈ ನಮಃ , ಮಧು ಸ್ನಾನಂ
ಸಮರ್ಪಯಾಮಿ .
ಶರ್ಕರಾ ಸ್ನಾನಂ (ಸಕ್ಕರೆ)
ಇಕ್ಷು
ಧoಡಾತ್
ಸಮುತ್ಪನ್ನಾ , ರಸ ಸ್ನಿಗ್ಧ ಧರಾ ಶುಭಾ , ಶರ್ಕರೇಯ ಮಯಾ ದತ್ತಾ , ಸ್ನಾನಾರ್ಥಂ ಪ್ರತಿಗೃಹ್ಯತಾಂ ,
ಶ್ರೀ
ಸ್ವರ್ಣ ಗೌರ್ಯೈ ನಮಃ , ಶರ್ಕರಾ ಸ್ನಾನಂ
ಸಮರ್ಪಯಾಮಿ .
(ಹೀಗೆ
ಪೂಜಿಸಿದ ಪಂಚಾಮೃತವನ್ನು ಪಾತ್ರೆಗೆ ಹಾಕಿಟ್ಟುಕೊಳ್ಳುವುದು. ಆಮೇಲೆ ಪುಜಾನಂತರ ತೆಗೆದುಕೊಳ್ಳಲು
ಬೇಕಾಗುತ್ತದೆ)
ಫಲೋದಕ (ತೆಂಗಿನಕಾಯಿ ಒಡೆದು ಅದರಲ್ಲಿನ ಎಳನೀರನ್ನು ಉದ್ಧರಣೆಯಿಂದ
ಅರ್ಪಿಸುವುದು)
ಯಾಃ ಫಲಿನೀರ್ಯಾ ಅಫಲಾ ಅಪುಷ್ಪಾಯಾಶ್ಚ ಪುಷ್ಪಿಣೀಃ, ಬೃಹಸ್ಪತಿ ಪ್ರಸೂತಾಸ್ತೇ ನೋಮುಂಚಂತ್ವಂಗಹಸಃ.
ಶ್ರೀ
ಸ್ವರ್ಣ ಗೌರ್ಯೈ ನಮಃ , ಫಲೋದಕ ಸ್ನಾನಂ
ಸಮರ್ಪಯಾಮಿ .
ಉಷ್ಣೋದಕ ಸ್ನಾನಂ (ಉದ್ಧರಣೆಯಲ್ಲಿ ಕಲಶದ ನೀರನ್ನು ತೆಗೆದುಕೊಂಡು ಅದನ್ನು ದೀಪದ ಮೇಲೆ
ಸ್ವಲ್ಪ ಬೆಚ್ಚಗೆ ಮಾಡಿ ಲೋಹದ ಮೂರ್ತಿಯ ಮೇಲೆ ಬಿಡುವುದು)
ನಾನಾ ತೀರ್ಥದಾಹೃತಂ ಚ ತೋಯಂ ಉಷ್ಣಂ ಮಯಾ ಕೃತಂ
, ಸ್ನಾನಾರ್ಥಂ ಪ್ರಯಚ್ಚಾಮಿ
ಸ್ವೀಕುರುಶ್ವ ದಯಾನಿಧೇ.
ಶ್ರೀ
ಸ್ವರ್ಣ ಗೌರ್ಯೈ ನಮಃ , ಉಷ್ಣೋದಕ ಸ್ನಾನಂ
ಸಮರ್ಪಯಾಮಿ .
ಶುದ್ಧೋದಕ ಸ್ನಾನಂ : (ಕಲಶದಲ್ಲಿನ ನೀರನ್ನು ಉದ್ಧರಣೆಯಿಂದ ಎರಡು, ಮೂರು ಬಾರಿ ಹಾಕುವುದು)
ಗಂಗಾದಿ ಸರ್ವ ತೀರ್ಥೇಭ್ಯ ಆಹ್ರುತೈರ ಮಲೈರ್ಜಲೈಃ, ಸ್ನಾನಂ ಕುರುಷ್ವ ದೇವೇಶಿ ಹರಪ್ರಿಯೇ ನಮೋಸ್ತುತೇ,
ಶ್ರೀ
ಸ್ವರ್ಣ ಗೌರ್ಯೈ ನಮಃ , ಶುದ್ಧೋದಕ
ಸ್ನಾನಂ ಸಮರ್ಪಯಾಮಿ .
( ಉಷ್ಣೋದಕ, ಶುದ್ಧೋದಕ ಹಾಗೂ ಫಲೋದಕಗಳನ್ನು ಇನ್ನೊಂದು ಪಾತ್ರೆಗೆ ಹಾಕಿಟ್ಟುಕೊಳ್ಳುವುದು. ಇದನ್ನು
ಪೂಜೆಯ ನಂತರ ಎಲ್ಲರೂ ತೆಗೆದುಕೊಳ್ಳಲು ಬೇಕಾಗುತ್ತದೆ)
ಆಚಮನಂ ಸಮರ್ಪಯಾಮಿ. (ಒಂದು ಉದ್ಧರಣೆ ಕಲಶದ ನೀರನ್ನು ಅರ್ಘ್ಯ ಪಾತ್ರೆಗೆ ಬಿಡುವುದು)
ಗಂಗಾತೋಯಂ ಸಮಾನೀತಂ ,ಸುವರ್ಣ ಕಲಶೇ ಸ್ಥಿತಂ, ಆಚಮ್ಯತಾಂ ಮಹಾಭಾಗೇ ಶಿವೇನ ಸಹಿತೇನಘೇ.
ಶ್ರೀ
ಸ್ವರ್ಣ ಗೌರ್ಯೈ ನಮಃ , ಆಚಮನೀಯಂ
ಸಮರ್ಪಯಾಮಿ .
(ಹೀಗೆ ಪೂಜಿಸಿದ
ಶ್ರೀ ಸ್ವರ್ಣ ಗೌರಿಯ ಬೆಳ್ಳಿಯ ವಿಗ್ರಹವನ್ನು ಒಂದು ಸ್ವಚ್ಚವಾದ ಬಟ್ಟೆಯಿಂದ
ಶುಭ್ರವಾಗಿ ಒರೆಸಿ ಮಂಟಪದಲ್ಲಿ ವಿಗ್ರಹದ ಮುಂಬದಿಯಲ್ಲಿ ಸಣ್ಣ ತಟ್ಟೆಯಲ್ಲಿ ಗಂಧ, ಕುಂಕುಮವನ್ನು ಹಚ್ಚಿ ಇಡುವುದು)
(ಈಗ ಮಂಟಪದ ಮೇಲಿಟ್ಟಿರುವ ದೇವರ ಮೂರ್ತಿಗೆ ಕುಂಕುಮವನ್ನು ಇಟ್ಟು
ಒಂದು ಲಕ್ಷಣವಾದ ಹೂವನ್ನು ಶಿರದ ಮೇಲಿಡುವುದು. ಇನ್ನು ಮುಂದಿನ ಪೂಜಾ ವಿಧಿಗಳನ್ನು ಈ
ಮೂರ್ತಿಗೆ ಮಾಡುವುದು)
ದೋರ ಸ್ಥಾಪನಂ (ನೀವು ಅಣಿ ಮಾಡಿಕೊಂಡಿರುವ ಹದಿನಾರು ಎಳೆ ಹಾಗೂ ಹದಿನಾರು ಗಂಟು ಹಾಕಿರುವ ದಾರಕ್ಕೆ ಅರಿಶಿನವನ್ನು ಹಚ್ಚಿ
ಎರಡು ವೀಳ್ಯದೆಲೆಯ ಮೇಲೆ ಇಟ್ಟು ಮಂಟಪದಲ್ಲಿ ಗೌರಿ ವಿಗ್ರಹದ ಬಲ ಪಕ್ಕದಲ್ಲಿ ಇಡುವುದು. ಅದಕ್ಕೆ
ಅರಿಶಿನ, ಕುಂಕುಮ , ಅಕ್ಷತೆ ಮತ್ತು ಹೂವಿನಿಂದ
ಪೂಜಿಸುವುದು)
ನೂತನ
ದೋರ ಸ್ಥಾಪನಂ ಕರಿಷ್ಯೇ .
ಹರಿದ್ರಾ ಕುಂಕುಮಂ ಸಮರ್ಪಯಾಮಿ, ಅಕ್ಷತಾಂ ಸಪರ್ಪಯಾಮಿ, ಪುಷ್ಪಂ ಸಮರ್ಪಯಾಮಿ .
ಶ್ರೀ ಸ್ವರ್ಣಗೌರ್ಯೈ ನಮಃ , ದೋರ ಸ್ಥಾಪನಂ ಸಮರ್ಪಯಾಮಿ
ವಸ್ತ್ರದ್ವಯಂ (ಒಂದು ಜೊತೆ ಗೆಜ್ಜೆ
ವಸ್ತ್ರವನ್ನು ಏರಿಸುವುದು)
ನವ ವಸ್ತ್ರ ದ್ವಯಂ ರಕ್ತಂ ದೇವಾನಾಂ ಸದ್ರುಶಪ್ರಭಂ , ಭಕ್ತ್ಯಾ ದತ್ತಂ
ಗೃಹಾನೇದಂ ಲೋಕಾಲಜ್ಜ
ನಿವಾರಿಣೀಮ್,
ಶ್ರೀ
ಸ್ವರ್ಣ ಗೌರ್ಯೈ ನಮಃ , ವಸ್ತ್ರದ್ವಯಂ
ಸಮರ್ಪಯಾಮಿ .
ಆಭರಣಂ (ದೇವರ ಮೂರ್ತಿಗೆ ಇದ್ದರೆ ಬಂಗಾರದ ಸರ ಹಾಕುವುದು. ಇಲ್ಲವಾದರೆ ಅಲಂಕಾರವಾದ ಹೂಮಾಲೆಯನ್ನು ಹಾಕಬಹುದು) (ದೇವಿಗೆ ವಿವಿಧ ಬಗೆಯ ಆಭರಣಗಳಾದ ಬಳೆ,
ಬಿಚ್ಚೋಲೆ ,ಸರ, ಮುಂತಾದವುಗಳನ್ನು ಹಾಕಬಹುದು)
ಸ್ವಭಾವ ಸುಂದರಾಂಗಿತ್ವಂ, ನಾನಾ ರತ್ನಯುತಾನಿ ಚ ,ಭೂಷಣಾನಿ
ವಿಚಿತ್ರಾನಿ ಪ್ರೀತ್ಯರ್ಥಂ
ಪ್ರತಿಗ್ರಹ್ಯತಾಂ , ಶ್ರೀ ಸ್ವರ್ಣ ಗೌರ್ಯೈ ನಮಃ , ಹರಿದ್ರಾ ಕುಂಕುಮ , ಮಂಗಳ ಸೂತ್ರೆ, ನಾನಾ ಆಭರಣಾನಿ ಸಮರ್ಪಯಾಮಿ
ಗಂಧಂ (ಗಂಧದ ಕೊರಡಿನಿಂದ ಮೊದಲೇ ತೇಯ್ದಿಟ್ಟುಕೊಂಡಿರುವ ಹಸಿಯಾಗಿರುವ ಗಂಧ , ಇಲ್ಲವಾದರೆ ಗಂಧದ
ಪುಡಿಯನ್ನು ಹಸಿ ಮಾಡಿ ದೇವಿಯ ಹಣೆಗೆ ಇಡುವುದು)
ಗಂಧ ಕರ್ಪೂರ ಸಂಯುಕ್ತಂ ದಿವ್ಯ ಚಂದನಂ ಉತ್ತಮಂ , ವಿಲೇಪನಂ
ಸುರಶ್ರೇಷ್ಠೆಃ ಪ್ರೀತ್ಯರ್ಥಂ ಪ್ರತಿ ಗೃಹ್ಯತಾಂ .
ಶ್ರೀ
ಸ್ವರ್ಣ ಗೌರ್ಯೈ ನಮಃ , ಗಂಧಂ ಸಮರ್ಪಯಾಮಿ
.
ಅಕ್ಷತಾಃ (ಅಕ್ಷತೆಯನ್ನು ಹಾಕುವುದು)
ಶಾಲೇಯಾನ ಅಕ್ಷತಾಂ, ಶ್ವೇತಾನ ಚಂದ್ರಾಭಾನ್ವಿಮಲಾನ್ ಶುಭಾನ್ ದದಾಮಿ ದೇವದೇವೇಶಿ ಪ್ರೀತ್ಯರ್ಥಂ ಪ್ರತಿಗೃಹೄತಾಂ, ಶ್ರೀ ಸ್ವರ್ಣ ಗೌರ್ಯೈ ನಮಃ , ಅಕ್ಷತಾಂ ಸಮರ್ಪಯಾಮಿ .
ಪರಿಮಳ ದ್ರವ್ಯ (ಒಳ್ಳೆಯ ಘಮಘಮಿಸುವ ಪರಿಮಳ ದ್ರವ್ಯವನ್ನು/ಗಳನ್ನು, ಇಲ್ಲದಿದ್ದರೆ
ಒಂದು ಹೆಚ್ಚು ಪರಿಮಳವುಳ್ಳ
ಹೂವನ್ನು ಕಳಶದ
ನೀರಿನಲ್ಲಿ ಅದ್ದಿ ಸಿಂಪಡಿಸುವುದು)
ನಾನ ಪರಿಮಳ ದ್ರವ್ಯಾನ್ ಗೃಹಾಣ ಪರಮೇಶ್ವರಿ.
ಶ್ರೀ
ಸ್ವರ್ಣ ಗೌರ್ಯೈ ನಮಃ , ನಾನಾ ವಿಧ ಪರಿಮಳ
ದ್ರವ್ಯಾಣಿ ಸಮರ್ಪಯಾಮಿ .
ಪುಷ್ಪಾಣಿ (ಸುಗಂಧಯುತವಾದ ಹೂವನ್ನು ಪೂಜೆ ಮಾಡುವುದು)
ಸುಗಂಧೀನಿ ಸುಪುಷ್ಪಾಣಿ ವರಸಿದ್ಧಿ ಪ್ರದಾಯಿನೀ. ನಾನಾ ವಿಧಾನಿ ಪುಷ್ಪಾಣಿ ಗೃಹಾಣ ವರದಾ ಭವ .
ಶ್ರೀ
ಸ್ವರ್ಣ ಗೌ ರ್ಯೈನಮಃ ,
ಸುಗಂಧ ಪುಷ್ಪಾಣಿ
ಸಮರ್ಪಯಾಮಿ .
ಓಂ ಅಥಾಂಗ ಪೂಜಾ (ಪೂಜಯಾಮಿ ಎಂದು
ಹೇಳಿದಾಗ ಅಕ್ಷತೆಯಿಂದ ವಿಗ್ರಹಕ್ಕೆ ಪೂಜಿಸುತ್ತಾ ಇರುವುದು)
ಓಂ ಸ್ವರ್ಣ ಗೌರ್ಯೈ ನಮಃ ಪಾದೌ
(ಪಾದಗಳು) ಪೂಜಯಾಮಿ, ಓಂ ಪರ್ವತ ರಾಜ
ಪುತ್ರೈ ನಮಃ ಗುಲ್ಫೌ (ಹಿಮ್ಮಡಿ) ಪೂಜಯಾಮಿ, ಓಂ ಭದ್ರಾಯ ನಮಃ ಜಾನುನೀ (ಮೊಣಕಾಲು) ಪೂಜಯಾಮಿ, ಓಂ ಕಾತ್ಯಾಯಿನ್ಯೈ ನಮಃ ಜಂಘೇ
(ಹಿಂಭಾಗ) ಪೂಜಯಾಮಿ, ಓಂ ಹೈಮವತ್ಯೆ ನಮಃ ಊರೂ (ತೊಡೆ) ಪೂಜಯಾಮಿ, ಓಂ ಈಶ್ವರ್ಯೈ ನಮಃ ಕಟಿಂ (ನಡು) ಪೂಜಯಾಮಿ, ಓಂ ಭವದಾಯೈ ನಮಃ ಗುಹ್ಯಂ (ನಡುವಿನ ಭಾಗ) ಪೂಜಯಾಮಿ, ಓಂ ಉಮಾಯೈನಮಃ ಉದರಂ
(ಹೊಟ್ಟೆ) ಪೂಜಯಾಮಿ, ಓಂ ಶಿವ ಪ್ರಿಯಾಯೈ ನಮಃ ನಾಭಿಂ (ಹೊಕ್ಕಳು) ಪೂಜಯಾಮಿ, ಓಂ ಅಪರ್ಣಾಯೈ ನಮಃ ಹೃದಯಂ
(ಎದೆ) ಪೂಜಯಾಮಿ, ಓಂ ಪಾರ್ವತ್ಯೈ ನಮಃ ಕಂಠಂ (ಕತ್ತು)
ಪೂಜಯಾಮಿ, ಓಂ ದುರ್ಗಾಯೈ
ನಮಃ ಸ್ಕಂಧೌ
(ಗಂಟಲು) ಪೂಜಯಾಮಿ, ಓಂ ಗೌರಿಯೈನಮಃ ಹಸ್ತೌ (ಕೈಗಳು)
ಪೂಜಯಾಮಿ, ಓಂ
ದಾಕ್ಷಾಯಿಣ್ಯೈ ನಮಃ ವಕ್ತ್ರಂ (ಮುಖ) ಪೂಜಯಾಮಿ, ಓಂ ಮೃಡಾಣ್ಯೈ ನಮಃ ನಾಸಿಕಾಂ (ಮೂಗು) ಪೂಜಯಾಮಿ, ಓಂ ಚಂಡಿಕಾಯೈ ನಮಃ ನೇತ್ರೇ (ಕಣ್ಣುಗಳು) ಪೂಜಯಾಮಿ, ಓಂ ಈಶ್ವರ್ಯೈ ನಮಃ ಕರ್ಣೌ (ಕಿವಿಗಳು) ಪೂಜಯಾಮಿ, ಓಂ ಗಿರಿಜಾಯೈ ನಮಃ ಲಲಾಟಂ
(ಹಣೆ) ಪೂಜಯಾಮಿ, ಓಂ
ಮೇನಕಾತ್ಮಜಾಯೈ ನಮಃ ಶಿರಃ (ತಲೆ) ಪೂಜಯಾಮಿ,
ಓಂ ಸ್ವರ್ಣಗೌರಿಯೈ ನಮಃ ಸರ್ವಾಂಗಾಣಿ (ಎಲ್ಲಾ
ಅಂಗಗಳು) ಪೂಜಯಾಮಿ.
ಅಥ ಪುಷ್ಪ ಪೂಜಾ (ವಿವಿಧ ಬಗೆಯ ಹೂವುಗಳಿಂದ ವಿಗ್ರಹಕ್ಕೆ ಪೂಜಿಸುವುದು)
ಓಂ ಜಗನ್ಮಾತ್ರ್ಯೈ ನಮಃ ಜಾಜೀ ಪುಷ್ಪಂ ಪೂಜಯಾಮಿ ,ಓಂ ಮಾನ್ಯಾಯೈ ನಮಃ ಮಲ್ಲಿಕಾ ಪುಷ್ಪಂ ಪೂಜಯಾಮಿ ,
ಓಂ ಗಿರಿಸುತಾಯೈ ನಮಃ ಗಿರಿಕರ್ಣಿಕಾ ಪುಷ್ಪಂ ಪೂಜಯಾಮಿ
,ಓಂ ಕಾತ್ಯಾಯನೈ ನಮಃ ಕೇತಕೀ ಪುಷ್ಪಂ
ಪೂಜಯಾಮಿ ,
ಓಂ ಕಮಲಾಕ್ಹೈ ನಮಃ ಕಮಲ ಪುಷ್ಪಂ ಪೂಜಯಾಮಿ
,ಓಂ ಚಾಮುಂಡಾಯೈ ನಮಃ ಚಂಪಕ ಪುಷ್ಪಂ
ಪೂಜಯಾಮಿ ,
ಓಂ ಗಂಧರ್ವ ಸೇವಿತಾಯೈ ನಮಃ ಸೇವಂತಿಕಾ ಪುಷ್ಪಂ ಪೂಜಯಾಮಿ ,ಓಂ ಪಾರ್ವತ್ಯೈ ನಮಃ ಪಾರಿಜಾತ ಪುಷ್ಪಂ ಪೂಜಯಾಮಿ ,ಓಂ ಸ್ವರ್ಣಗೌರಿಯೈ ನಮಃ ನಾನಾ ವಿಧ ಪರಿಮಳ
ಪುಷ್ಪ ಪೂಜಾಂ ಸಮರ್ಪಯಾಮಿ .
ಅಥ ಪತ್ರ ಪೂಜಾ (ವಿವಿದ ಬಗೆಯ
ಎಲೆಗಳಿಂದ/ಪತ್ರೆಗಳಿಂದ ಪೂಜೆ ಮಾಡುವುದು)
ಓಂ ಉಮಾಯೈ ನಮಃ ಮಾಚೀ ಪತ್ರಂ ಪೂಜಯಾಮಿ, ಓಂ ಸರ್ವ ಜನ ರಕ್ಷಿಣ್ಯಿ ನಮಃ ಸೇವಂತಿಕಾ ಪತ್ರಂ
ಪೂಜಯಾಮಿ,
ಓಂ ಶಿವ ಪ್ರಿಯಾಯೈ ನಮಃ ಬಿಲ್ವ ಪತ್ರಂ ಪೂಜಯಾಮಿ,
ಓಂ ಮಲಯಾಚಲವಾಸಿನ್ಯೈ ನಮಃ ಮರುಗ ಪತ್ರಂ
ಪೂಜಯಾಮಿ,
ಓಂ ಕಾತ್ಯಾಯಿನೈ ನಮಃ ಕಸ್ತೂರಿಕಾ ಪತ್ರಂ ಪೂಜಯಾಮಿ, ಓಂ ಹೈಮವತೈ ನಮಃ ತುಳಸೀ ಪತ್ರಂ
ಪೂಜಯಾಮಿ,
ಶ್ರೀ
ಸ್ವರ್ಣಗೌರಿಯೈ ನಮಃ ನಾನಾ ವಿಧ
ಪತ್ರಾಣಿ ಪೂಜಯಾಮಿ.
ಅಥ ನಾಮ ಪೂಜಾ (ಈಗ ಅಕ್ಷತೆಯಿಂದ ಪೂಜಿಸುವುದು)
ಓಂ ಕಾತ್ಯಾಯಿನಿಯೈ
ನಮಃ, ಓಂ ಉಮಾಯೈ ನಮಃ, ಓಂ ಭದ್ರಾಯೈ ನಮಃ, ಓಂ ಹೈಮವತ್ಯೈ ನಮಃ, ಓಂ ಈಶ್ವರ್ಯೈ ನಮಃ, ಓಂ ಭವಾನ್ಯೈ ನಮಃ, ಓಂ ಸರ್ವ ಪಾಪ ಹರಾಯೈ ನಮಃ,
ಓಂ ಮೃಡಾಣ್ಯೈ ನಮಃ, ಓಂ ಚಂಡಿಕಾಯೈ ನಮಃ, ಓಂ ಗಿರಿಜಾಯೈ ನಮಃ, ಓಂ ಮೇನಕಾತ್ಮಜಾಯೈ ನಮಃ, ಓಂ ಬ್ರಾಮ್ಹಣ್ಯೈ ನಮಃ, ಓಂ ಮಾಹೇಶ್ವರ್ಯೈ
ನಮಃ, ಓಂ ಕೌಮಾರ್ಯೈ ನಮಃ, ಓಂ ವೈಷ್ಣವ್ಯೈ ನಮಃ, ಓಂ ವಾರಾಹ್ಯೈ ನಮಃ, ಓಂ ಇಂದ್ರಾಣ್ಯೈ ನಮಃ, ಓಂ ಚಾಮುಂಡಾಯೈ ನಮಃ, ಓಂ ಚಂಡಿಕಾಯೈ ನಮಃ, ಓಂ ದಾಕ್ಷಾಯಿಣ್ಯೈ ನಮಃ, ಓಂ ಪರ್ವತರಾಜ
ಪುತ್ರ್ಯೈ ನಮಃ, ಓಂ ಚಂದ್ರಶೇಖರ ಪತ್ನ್ಯೈ ನಮಃ, ಓಂ ಸರ್ವ ಉಪದ್ರವ ನ್ಯಿನ್ಯಿ ನಾಶಿಣ್ಯೈ ನಮಃ, ಓಂ ಶ್ರೀ ಸ್ವರ್ಣ ಗೌರ್ಯೈ ನಮಃ,
ಓಂ ಧೀರಾಯೈ ನಮಃ, ಓಂ ಸತ್ಯಾಯೈ ನಮಃ, ಓಂ ಮಾಯಾಯೈ ನಮಃ, ಓಂ ಮನೋನ್
ಸ್ವರ್ಣ ಗೌ ರ್ಯೈ ನಮಃ ,ಇತಿ ನಾಮ ಪೂಜಾಂ
ಸಮರ್ಪಯಾಮ
ಅಥ ದೋರ ಗ್ರಂಥಿ ಪೂಜಾ (ಈಗ ಅಕ್ಷತೆಯಿಂದ ಮತ್ತು ಕೊನೆಯಲ್ಲಿ ಒಂದು ಹೂವಿನಿಂದ ಪೂಜಿಸುವುದು)
ಸ್ವರ್ಣಗೌ ರ್ಯೈ ನಮಃ ಪ್ರಥಮ ಗ್ರಂಥಿಂ ಪೂಜಯಾಮಿ, ಮಹಾಗೌರಿಯೈ ನಮಃ ದ್ವಿತೀಯಾ ಗ್ರಂಥಿಂ
ಪೂಜಯಾಮಿ,
ಕಾತ್ಯಾಯಿನ್ಯೈ ನಮಃ ತೃತೀಯ ಗ್ರಂಥಿಂ
ಪೂಜಯಾಮಿ, ಕೌಮಾರಿಯೈ ನಮಃ ಚತುರ್ಥ ಗ್ರಂಥಿಂ ಪೂಜಯಾಮಿ,
ಭದ್ರಾಯೈ ನಮಃ ಪಂಚಮ ಗ್ರಂಥಿಂ
ಪೂಜಯಾಮಿ, ವಿಷ್ಣು ಸೋದರ್ಯೈ
ನಮಃ ಶ್ರಷ್ಟಿಂ ಗ್ರಂಥಿಂ ಪೂಜಯಾಮಿ,
ಮಂಗಳ ದೇವತಾಯೈ ನಮಃ ಸಪ್ತಮಿ ಗ್ರಂಥಿಂ
ಪೂಜಯಾಮಿ, ರಾಕೇಂದು
ವದನಾಯೈನಮಃ ಅಷ್ಟಮಿ ಗ್ರಂಥಿಂ ಪೂಜಯಾಮಿ,
ಚಂದ್ರಶೇಖರ ಪತ್ನಿಯೈನಮಃ ನವಮಿ
ಗ್ರಂಥಿಂ ಪೂಜಯಾಮಿ, ವಿಶ್ವೇಶ್ವರ
ಪ್ರಿಯಾಯೈ ನಮಃ ದಶಮಿ ಗ್ರಂಥಿಂ ಪೂಜಯಾಮಿ,
ದಾಕ್ಷಾಯಿಣ್ಯೈ ನಮಃ ಏಕಾದಶ ಗ್ರಂಥಿಂ
ಪೂಜಯಾಮಿ, ಕ್ರಿಷ್ಣವೇನ್ಯೈ
ನಮಃ ದ್ವಾದಶ ಗ್ರಂಥಿಂ ಪೂಜಯಾಮಿ,
ಭವಾನ್ಯೈ ನಮಃ ತ್ರಯೋದಶ ಗ್ರಂಥಿಂ
ಪೂಜಯಾಮಿ, ಲೋಲಲೋಚನಾಯ ನಮಃ ಚತುರ್ದಶ ಗ್ರಂಥಿಂ ಪೂಜಯಾಮಿ,
ಮೇನಕಾತ್ಮಜಾಯೈ ನಮಃ ಪಂಚದಶ ಗ್ರಂಥಿಂ ಪೂಜಯಾಮಿ, ಶ್ರೀ
ಸ್ವರ್ಣ ಗೌರಿಯೈ ನಮಃ ಶೋಡಷ ಗ್ರಂಥಿಂ
ಪೂಜಯಾಮಿ,
ಶ್ರೀ
ಸ್ವರ್ಣ ಗೌ ರ್ಯೈ ನಮಃ ದೋರ ಗ್ರಂಥಿ ಪೂಜಾಂ ಸಮರ್ಪಯಾಮಿ .
ಅಥ ಅಷ್ಟ್ಹೋತ್ತರ ಪೂಜಾ (ನಮಃ ಎಂದಾಗ ಅರಿಶಿನ ಮತ್ತು ಕುಂಕುಮದಿಂದ ಪೂಜಿಸುತ್ತಿರುವುದು).(ಅನುಕೂಲಕ್ಕೆ ನಿಮ್ಮ
ಮುಂದೆ ಎರಡು ವೀಳ್ಯದೆಲೆ ಅಥವಾ ಬೆಳ್ಳಿಯ ಗೌರಿಯ ವಿಗ್ರಹವನ್ನು ಇಟ್ಟುಕೊಂಡು ಪೂಜಿಸಬಹುದು.ನಂತರ ಇದನ್ನು ಮಂಟಪದಲ್ಲಿ ವಿಗ್ರಹದ ಮುಂದೆ ಅಥವಾ ಪಕ್ಕದಲ್ಲಿ
ಇಡಬಹುದು)
ಓಂ ಶಿವಾಯೈನಮಃ, ಓಂ ಶ್ರೀ ಮಹಾವಿದ್ಯಾಯೈನಮಃ, ಓಂ ಶ್ರೀ ಮನ್ಮುಕುಟ
ಮಂಡಿತಾಯೈನಮಃ, ಓಂ ಕಲ್ಯಾಣ್ಯೈ ನಮಃ, ಓಂ ಕಮಲಾರಾಧ್ಯೈ ನಮಃ, ಓಂ ಕರುಣಾ ರಸ ಸಾಗರಾಯೈ ನಮಃ, ಓಂ ಕಲಿ ಪ್ರಭೃತಿ ಸಂಸೇವ್ಯಾಯೈ ನಮಃ, ಓಂ ಕಮಲಾಸನ ಸಂಸ್ತುತಾಯೇ ನಮಃ, ಓಂ ಅಂಬಿಕಾಯೈ ನಮಃ, ಓಂ ಅನೇಕ
ಸೌಭಾಗ್ಯ ಧಾತ್ರ್ಯೈ ನಮಃ,
ಓಂ ಆನಂದ ವಿಗ್ರಹಾಯೈ ನಮಃ, ಓಂ ಈಶಣತ್ರಯ
ನಿರ್ಮುಕ್ತಾಯೈ ನಮಃ, ಓಂ ಹೃತ್ಸರೋರುವಾಸಿಣ್ಯೈ ನಮಃ, ಓಂ ಆದ್ಯಂತ ರಹಿತಾಯೈ ನಮಃ,
ಓಂ ಅನೇಕ ಕೋಟಿ
ಭಾಸ್ಕರ ವಲ್ಲಭಾಯೈ ನಮಃ, ಓಂ ಈಶ್ವರೋತ್ಸಂಗ ನಿಲಯಾಯೈ ನಮಃ, ಓಂ ಈತಿ ಭಾದಾ ವಿನಾಶಿಣ್ಯೈ ನಮಃ,
ಓಂ ಇಂದಿರಾರತಿ
ಸಂಸೇವ್ಯಾಯೈ ನಮಃ, ಓಂ ಈಶ್ವರಾರ್ದ ಶರೀರಣ್ಯೈ ನಮಃ,
ಓಂ ಲಕ್ಶಾರ್ಧ್ಯ
ರೂಪಾಯೈ ನಮಃ,
ಓಂ ಲಕ್ಷ್ಮೀಶ
ಬ್ರಮ್ಹೇಶ ಅಮರ ಪೂಜಿತಾಯೈನಮಃ,
ಓಂ ಉತ್ಪಾತಾದಿ
ವಿನಿರ್ಮುಕ್ತಾಯೈ ನಮಃ, ಓಂ ವಿಧ್ಯಾ ಪ್ರತಿಪಾದಿನ್ಯೈ ನಮಃ,
ಓಂ ಊರ್ದ್ವ ಲೋಕ
ಪ್ರಧಾತ್ಯೈ ನಮಃ, ಓಂ ಹಾನಿ ವೃದ್ಧಿ ವಿವರ್ಜಿತಾಯೈ ನಮಃ,
ಓಂ ಸರ್ವೇಶ್ವರ್ಯೈ
ನಮಃ, ಓಂ ಸರ್ವಲಭ್ಯಾಯೈ ನಮಃ, ಓಂ ಗುರುಮೂರ್ತಿ
ಸ್ವರೂಪಿಣ್ಯೈ ನಮಃ, ಓಂ ಸಮಸ್ತ ಪ್ರಾಣಿ ನಿಲಯಾಯೈ ನಮಃ, ಓಂ ಸರ್ವಲೋಕ ಸುಂದರ್ಯೈ ನಮಃ,
ಓಂ ಕಾಮಾಕ್ಷ್ಯೈ ನಮಃ, ಓಂ ಕಾಮಧಾತ್ರ್ಯೈ ನಮಃ, ಓಂ ಕಾಮೇಶಾಂಕ
ನಿವಾಸಿನ್ಯೈ ನಮಃ, ಓಂ ಹರಾರ್ಧ ದೇಹಾಯೈ ನಮಃ,
ಓಂ ಕಲ್ಲ್ಹಾರ
ಭೂಶಿತಾಯೈ ನಮಃ, ಓಂ ಹರಿಲೋಚನಾಯೈ ನಮಃ, ಓಂ ಲಲಿತಾಯೈ ನಮಃ, ಓಂ ಲಾಕಿನಿ
ಸೇವ್ಯಾಯೈ
ನಮಃ, ಓಂ ಲಬ್ದ್ಯೈಶ್ವರ್ಯ ಪ್ರವರ್ತಿಣ್ಯೈ ನಮಃ, ಓಂ ಹ್ರೀಂಕಾರ ಪದ್ಮ ನಿಲಯಾಯೈ ನಮಃ,
ಓಂ ಹ್ರೀಂಕಾರಾರ್ಣವ
ಕೌಸ್ತುಭಾಯೈ ನಮಃ, ಓಂ ಸಮಸ್ತಲೋಕ ಜನನ್ಯೈ ನಮಃ, ಓಂ ಸರ್ವ ಭೂತೇಶ್ವರ್ಯೈ ನಮಃ, ಓಂ ಕರೀಂದ್ರಾ ರೂಢ ಸಂಸೇವ್ಯಾಯೈ ನಮಃ, ಓಂ ಕಮಲೇಶ ಸಹೋದರ್ಯೈ
ನಮಃ, ಓಂ ಲಕ್ಷ್ಯಗಾಘೋಶಾಂಭಾಯೈ ನಮಃ, ಓಂ ಹ್ರೀಂಕಾರ ಬಿಂದು
ಲಕ್ಷಿತಾಯೈ ನಮಃ, ಓಂ ಏಕಾಕ್ಷರಾಯೈ ನಮಃ, ಓಂ ಏಕರೂಪಾಯೈ ನಮಃ, ಓಂ ಐಶ್ವರ್ಯ ಫಲದಾಯಿನ್ಯೈ ನಮಃ,
ಓಂ ಓಂಕಾರ ವರ್ಣ ನಿಲಯಾಯ ನಮಃ,
ಓಂ ಔಧಾರ್ಯಾದಿ
ಪ್ರಧಾಯೈ ನಮಃ, ಓಂ ಗಾಯತ್ರೆಯೈ ನಮಃ, ಓಂ ಗಿರಿಜಾ ಕನ್ಯಾಯೈ ನಮಃ, ಓಂ ಗೂಡಾರ್ಥ
ಬ್ಹೋಧಿನ್ಯೈ ನಮಃ, ಓಂ ಚಂದ್ರಶೇಖರ
ಅರ್ಧಾಂಗ್ಯೈ ನಮಃ , ಓಂ ಚೂಡಾಮಣಿ ವಿಭೂಷಿತಾಯೈ ನಮಃ, ಓಂ ಜಾಜೀ, ಚಂಪಕ, ಪುನ್ನಾಗ, ಕೇತಕೀ ಕುಸುಮಾರ್ಚಿತಾಯೈ ನಮಃ, ಓಂ ತನು ಮಧ್ಯಾಯೈ ನಮಃ, ಓಂ ದಾನವೇಂದ್ರ ಸಂಹ್ರುತ್ಯೈ ನಮಃ,
ಓಂ ಮಹಿಷಾಸುರ ಮರ್ಧಿನ್ಯೈ ನಮಃ , ಓಂ ನಕುಲಾಯೈ ನಮಃ , ಕವಿರಾಜ ಮನೋಹರ್ಯಾಯೈ ನಮಃ ,
ಓಂ ದೀನ ರಕ್ಷಿಣ್ಯೈ ನಮಃ, ಓಂ ಸ್ವಧರ್ಮ ಪರ
ಸಂಸೇವ್ಯಾಯೈ ನಮಃ, ಓಂ ಧನ ಧಾನ್ಯಾಭಿವೃದ್ಧಿದಾಯೈ ನಮಃ, ಓಂ ನಾರಾಯಣ್ಯೈ ನಮಃ, ಓಂ ನಾಮ ರೂಪ ವಿವರ್ಜಿತಾಯೈ ನಮಃ, ಓಂ ಆಪರಾಜಿತಾಯೈ ನಮಃ, ಓಂ ಪರಮಾನಂದ ರೂಪಾಯೈ ನಮಃ,
ಓಂ ಪರಮಾನಂದದಾಯೈ
ನಮಃ, ಓಂ ಪಾಶಾಂಕುಶ ಭಯಾವರ ವಿಲಸತ್ಕರ ಪಲ್ಲವಾಯೈ ನಮಃ , ಓಂ ಪುರಾಣ ಪುರುಷ
ಸೇವ್ಯಾಯೈ ನಮಃ, ಓಂ ಪುಷ್ಪಮಾಲಾ ವಿರಾಜಿತಾಯೈ ನಮಃ,
ಓಂ ಫಣೀಂದ್ರ ರತ್ನ
ಶೋಭಾದ್ಡ್ಯಾಯೈ ನಮಃ, ಓಂ ಬದರೀ ವನ ವಾಸಿನ್ಯೈ ನಮಃ, ಓಂ ಬಾಲಾಯೈ ನಮಃ, ಓಂ ವಿಕ್ರಮ
ಸಂಹೃಷ್ಟಾಯೈ ನಮಃ, ಓಂ ಬಿಮ್ಬೋಷ್ಟ್ಯಿ ನಮಃ, ಓಂ ಬಿಲ್ವ ಪೂಜಿತಾಯೈ
ನಮಃ,
ಓಂ ಬಿಂದು ಚಕ್ರೈಕ್ಯ
ನಿಲಯಾಯೈ ನಮಃ, ಓಂ ಭವಾರಣ್ಯದವಾನಲಾಯೈನಮಃ, ಓಂ ಭವರೋಗ್ಯೈ ನಮಃ, ಓಂ ಭವದೇಹಾರ್ಧ ಧಾರಿಣ್ಯೈ ನಮಃ, ಓಂ ಭಕ್ತಸೇವ್ಯಾಯೈ ನಮಃ, ಓಂ ಭಕ್ತಗಣ್ಯಾಯೈ
ನಮಃ, ಓಂ ಭವಾನ್ಯೈ ನಮಃ, ಓಂ ಭಾಗ್ಯವೃದ್ಧಿ
ಪ್ರಧಾನಿನ್ಯೈ ನಮಃ, ಓಂ ಭೂತಿಧಾತ್ರೈ ನಮಃ, ಓಂ ಭ್ಯೈರವಾದಿ
ಸಂವೃತಾಯೈ ನಮಃ,
ಓಂ ಶ್ರೀ
ಮಹೇಶ್ವರಿಯೈ ನಮಃ, ಓಂ ಸರ್ವೆಷ್ಟಾಯೈ ನಮಃ, ಓಂ ಶ್ರೀ ಮಹಾದೇವ್ಯೈ ನಮಃ, ಓಂ ತ್ರಿಪುರ ಸೌಂದರ್ಯೈ ನಮಃ, ಓಂ ಮುಕ್ತಿ
ಧಾತ್ರ್ಯೈ ನಮಃ, ಓಂ ರಾಜರಾಜೇಶ್ವರ್ಯೈ ನಮಃ, ಓಂ ವಿಧ್ಯಾ
ಪ್ರಧಾಯಿಣ್ಯೈ ನಮಃ, ಓಂ ಭಾವರೂಪಾಯೈ ನಮಃ, ಓಂ ವಿಶ್ವ ಮೋಹಿನ್ಯೈ ನಮಃ, ಓಂ ಶಾಂಕರ್ಯೈ ನಮಃ,
ಓಂ ಶತೃ ಸಂಹತ್ರ್ಯೈ
ನಮಃ, ಓಂ ತ್ರಿಪುರಾಯೈ ನಮಃ, ಓಂ ತ್ರಿಪುರೇಶ್ವರ್ಯೈ
ನಮಃ, ಓಂ ಶಾರದಾ ಸಂಸೇವ್ಯಾಯೈ ನಮಃ, ಓಂ ಶ್ರೀಮದ್
ಸಿಂಹಾಸನೇಶ್ವರ್ಯೈ ನಮಃ, ಓಂ ಶ್ರೀ ಮನ್ಮುನೀಂದ್ರ ಸಂಸೇವ್ಯಾಯೈ ನಮಃ, ಓಂ ಶ್ರೀಮನ್
ಅಮರನಾಯಕಾಯೈ ನಮಃ,
ಓಂ ಶ್ರೀ ಸ್ವರ್ಣ ಗೌರ್ಯೈ
ನಮಃ , ಇತಿ ಅಷ್ಟ್ಹೋತ್ತರ ಶತನಾಮ ಪೂಜಾಂ ಸಮರ್ಪಯಾಮಿ .
ಪುಷ್ಪ ಮಾಲಿಕಾ (ಒಂದು
ಹೂವಿನ ಮಾಲೆಯನ್ನು ಮೂರ್ತಿಗೆ ಹಾಕಿ)
ಮಾಲ್ಯಾನಿ ಚ ಸುಗಂಧೀನಿ , ಮಾಲತ್ಯಾದೀನಿ ಚ ಜಗನ್ಮಾತೇ , ಮಯಾಹೃತಾನಿ ಪೂಜಾರ್ಥಂ , ಗೃಹಾಣ
ಸ್ವರ್ಣ ಗೌರ್ಯೈ ಸ್ವೀಕ್ರುತ್ವ .
ಪೂರ್ಣ/ಮಹಾ ಫಲ
ಒಂದು ದೊಡ್ಡ
ಗಾತ್ರದ ಇಡೀ ಹಣ್ಣನ್ನು ದೇವರ ಬಲಗಡೆ ಇಡಿ.
ಶ್ರೀ ಸ್ವರ್ಣಗೌರಿ ಪ್ರೀತ್ಯರ್ಥಂ ಮಹಾಫಲಂ ಸಮರ್ಪಯಾಮಿ
ಧೂಪಮ್ (ಊದು ಬತ್ತಿಯನ್ನು ಹಚ್ಚಿ ಮೂರ್ತಿಯ ಮುಂದೆ ಮೂರು ಬಾರಿ ಎಡ ಬದಿಯಿಂದ ಬಲ ಬದಿಗೆ ಗಡಿಯಾರದ ಮುಳ್ಳಿನ ಚಲನೆಯ ರೀತಿ
ತಿರುಗಿಸುವುದು)
ದಶಾಂಗ ಗುಗ್ಗುಲ ಧೂಪಮ್ ಸುಗಂಧಂ ಚ ಮನೋಹರಂ , ಮಹಾ ಮಾತೇ
ನಮಸ್ತುಭ್ಯಂ ಗೃಹಾಣ ವರದೋ ಭವ .
ಶ್ರೀ
ಸ್ವರ್ಣ ಗೌರ್ಯೈ ನಮಃ , ಧೂಪಮ್ ದರ್ಶಯಾಮಿ .
ದೀಪಂ (ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಮೂರು ಹೂಬತ್ತಿಯನ್ನು ಇಟ್ಟು ದೀಪ ಹಚ್ಚಿಕೊಳ್ಳ್ಳುವುದು . ನಿಮ್ಮ ಕೈಯಲ್ಲಿ ಸ್ವಲ್ಪ
ಅಕ್ಷತೆ, ಒಂದು ಹೂವು ಮತ್ತು ಹಲಗಾರತಿ ಹಿಡಿದು ಎಡಗೈಯಲ್ಲಿ ಘಂಟೆ ಬಾರಿಸುತ್ತಾ ಮೇಲೆ ಹೇಳಿದಂತೆ ಮೂರು ಬಾರಿ ಆರತಿ ಮಾಡುವುದು)
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿ ನಾದ್ಯೋತಿತಂ ಮಯಾ ,ಗೃಹಾಣ ಮಂಗಳಂ
ದೀಪಂ ಈಶ ಪತ್ನ್ಯೈ ನಮೋಸ್ತುತೇ .
ಶ್ರೀ
ಸ್ವರ್ಣ ಗೌರ್ಯೈ ನಮಃ , ದೀಪಂ ದರ್ಶಯಾಮಿ .
ಮಹಾ ನೈವೇದ್ಯಂ (ಮಂಟಪದ ಮುಂದೆ ಸ್ವಚ್ಚವಾದ
ಜಾಗದಲ್ಲಿ ಕಳಶದ ನೀರಿನಿಂದ ಒಂದು
ಮಂಡಲವನ್ನು ಮಾಡಿ ಅದರ ಮೇಲೆ
ಸ್ವಲ್ಪ ಅಕ್ಷತೆ ಹಾಕಿ , ಐದು ವಿವಿಧ ಬಗೆಯ ಹಣ್ಣುಗಳನ್ನು ತಟ್ಟೆಯಲ್ಲಿ ಎರಡು ವೀಳ್ಯದ ಎಲೆಯ ಮೇಲೆ ಇಡುವುದು. ವೀಳ್ಯದೆಲೆ ಮೇಲೆ ಸ್ವಲ್ಪ ಅಡಕೆಯನ್ನು ಇಡಲು ಮರೆಯಬೇಡಿ . ಇದೇ ರೀತಿ ಇನ್ನೊಂದು
ಮಂಡಲವನ್ನು ಮಾಡಿ , ಅಕ್ಷತೆ ಹಾಕಿ ತಟ್ಟೆಯಲ್ಲಿ ವಿವಿಧ ಬಗೆಯ ಭಕ್ಷ್ಯಗಳನ್ನು ಸ್ವಲ್ಪ ಸ್ವಲ್ಪ ಇಡುವುದು. ಎರಡೂ ತಟ್ಟೆಗಳ ಮೇಲೆ ತುಳಸಿ ದಳಗಳನ್ನು
ಹಾಕಿ . ಬಲಗೈನಲ್ಲಿ ಸ್ವಲ್ಪ ಕಲಶದ ನೀರನ್ನು ಹಾಕಿಕೊಂಡು ಎರಡೂ ತಟ್ಟೆಗಳ ಸುತ್ತ ಹಾಕುವುದು.
ಸ್ವಲ್ಪ ನೀರನ್ನು ತಟ್ಟೆಗಳ ಮೇಲೆ ಚುಮುಕಿಸಿ . ವೀಳ್ಯದ ಎಲೆಯ ತುದಿಯನ್ನು ಮತ್ತು ಒಂದು ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಮುರಿಯುವುದು. ಮಂತ್ರ ಹೇಳುವಾಗ ಸ್ವಾಹಾ ಎಂದಾಗಲೆಲ್ಲಾ ಎರಡೂ ಕೈಗಳ ಅಂಗೈಯನ್ನು ತಟ್ಟೆಯಿಂದ ದೇವರ
ಮೂರ್ತಿಯ ಕಡೆಗೆ ಚಲಿಸುವುದು)
ಸುಗಂಧಾನ್ ನೈವೇದ್ಯಂ, ಭಕ್ಷ್ಯಂ
ಬ್ಹೊಜ್ಯಂ ಚ ಸುಕ್ರುರ್ತಾಶ್ಚೈವ ಸುಪಕ್ವಾನ್, ಘ್ರುತಪಾಚಿತಾನ್ . ಗೃಹ್ಯತಾಂ ದೇವ ಚನಮುದ್ಗೈಃ
ಪ್ರಕಲ್ಪಿತಾಂ. ಲೇಹ್ಯಂ ಚ ಚೋಷ್ಯಂ ಪಾನೀಯಮೇವ ಚ, ಇದಂ ಗೃಹಾಣ ನೈವೇದ್ಯಂ ಮಯಾ ದತ್ತಂ, ದೇವಸವಿತಃ ಪ್ರಸುವ ಸತ್ಯಂತ್ವರ್ತೇನ ಪರಿಷಿಂಚಾಮಿ ಅಮೃತಮಸ್ತು, ಅಮೃತೋಪಸ್ತರಣಮಸಿ ಸ್ವಾಹಾ , ಓಂ ಪ್ರಾಣಾಯಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ
ಸ್ವಾಹಾ , ಉದಾನಾಯ ಸ್ವಾಹಾ ,
ಸಮಾನಾಯ ಸ್ವಾಹಾ, ಬ್ರಹ್ಮಣೇ
ಸ್ವಾಹಾ . ಶ್ರೀ ಸ್ವರ್ಣ ಗೌರ್ಯೈ ನಮಃ , ಮಹಾ ನೈವೇದ್ಯಂ ಸಮರ್ಪಯಾಮಿ .
ಫಲಾಷ್ಟಕ (ತಟ್ಟೆಯಲ್ಲಿರುವ ಒಂದು ಹಣ್ಣಿನ ಮೇಲ್ಭಾಗವನ್ನು ಸ್ವಲ್ಪ ತೆಗೆದು, ಹಣ್ಣು ತೆಂಗಿನಕಾಯಿಯನ್ನು ತೋರಿಸುವುದು)
ನಾರಿಕೇಲಂ ಚ ನಾರಂಗ , ದಾಡಿಂಬ, ಬದರೀ ದ್ರಾಕ್ಷ್ಯಾ ಖರ್ಜೂರ ವಿವಿದ ಫಲ ಪ್ರತಿಗೃಹ್ಯತಾಂ
ಶ್ರೀ
ಸ್ವರ್ಣ ಗೌರ್ಯೈ ನಮಃ , ಫಲಾಷ್ಟಕಂ
ಸಮರ್ಪಯಾಮಿ .
ತಾಂಬೂಲಂ (ತಟ್ಟೆಯಲ್ಲಿರುವ ವೀಳ್ಯದೆಲೆಯ
ತೊಟ್ಟನ್ನು ಮುರಿದು, ತಾಂಬೂಲವನ್ನು
ತೋರಿಸುವುದು)
ಫೂಗೀಫಲ ಸಮಾಯುಕ್ತಂ ನಾಗವಲ್ಲೀದಲೈರ್ಯುತಂ, ಯೇಲ, ಲವಂಗ
ಸಂಯುಕ್ತಂ ತಾಂಬೂಲಂ ಭಗವಾನ್ ಪ್ರತಿಗೃಹ್ಯತಾಂ. ಶ್ರೀ ಸ್ವರ್ಣ ಗೌರ್ಯೈ ನಮಃ,
ತಾಂಬೂಲಂ ಸಮರ್ಪಯಾಮಿ .
ದಕ್ಷಿಣೆ (ವೀಳ್ಯದೆಲೆಯ ಮೇಲೆ ಇಟ್ಟಿರುವ
ದಕ್ಷಿಣೆಯನ್ನು ತೋರಿಸುವುದು)
ಹಿರಣ್ಯಗರ್ಭಗರ್ಭಸ್ಥಂ ಹೇಮಭೀಜಂ ವಿಭಾವಸೋಃ. ಅನಂತ ಪುಣ್ಯ ಫಲದಂ ಅತಶ್ಯಾಂತಿ ಪ್ರಯಚ್ಚಮೆ.
ಶ್ರೀ
ಸ್ವರ್ಣ ಗೌರ್ಯೈ ನಮಃ , ಸುವರ್ಣ ದಕ್ಷಿಣಾಂ ಸಮರ್ಪಯಾಮಿ .
ಮಹಾ ಮಂಗಳಾರತಿ (ಒಂದು ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಐದು ಹೂಬತ್ತಿಗಳನ್ನು
ಇಟ್ಟುಕೊಳ್ಳುವುದು. ಹಲಗಾರತಿಯ
ಇನ್ನೊಂದು ತುದಿಯಲ್ಲಿ ಸ್ವಲ್ಪ ಹೂವು , ಅಕ್ಷತೆಯನ್ನು ಇಟ್ಟುಕೊಳ್ಳುವುದು, ಇದು ಮಹಾ ಮಂಗಳಾರತಿ ಆದ್ದರಿಂದ
ಮನೆಯಲ್ಲಿರುವವರನ್ನೆಲ್ಲ ಒಟ್ಟಿಗೆ ನಿಂತುಕೊಂಡು ಕೈ ಮುಗಿದುಕೊಳ್ಳಲು ಹೇಳಿ. ಮಂಗಳಾರತಿಯನ್ನು
ಕನಿಷ್ಠ ಮೂರು/ಐದು ಬಾರಿ ಮಾಡುವುದು)
ಘ್ರುತವರ್ತಿ ಸಮಾಯುಕ್ತಂ ಘನಸಾರಸುದೀಪ್ತಿತಂ,ನೀರಾಜನಮಿದಂ ದೇವಿ ಗೃಹಾಣ ಶಿವವಲ್ಲಭೆ.
ಶ್ರೀ
ಸ್ವರ್ಣ ಗೌರ್ಯೈ ನಮಃ ,ಮಹಾ ನೀರಾಜನಂ
ಸಮರ್ಪಯಾಮಿ .
ಮಹಾ ನೀರಾಜನ ನಂತರಂ ಆಚಮನೀಯಂ ಸಮರ್ಪಯಾಮಿ .
(ಒಂದು ಉದ್ಧರಣೆ ಆಚಮನದ ನೀರನ್ನು ಪಾತ್ರೆಗೆ ಬಿಟ್ಟು ನೀವು ಮೊದಲು
ಮಂಗಳಾರತಿಯನ್ನು ತೆಗೆದುಕೊಂಡು ನಂತರ ಉಳಿದವರಿಗೆಲ್ಲಾ ಕೊಡುವುದು)
ಪ್ರದಕ್ಷಿಣೆ (ಎಲ್ಲರೂ ಮೂರು ಬಾರಿ
ಪ್ರದಕ್ಷಿಣೆ ಹಾಕುವುದು)
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ , ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ .
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ , ತಸ್ಮಾತ್ ಕಾರುಣ್ಯ ಭಾವೇನ ರಕ್ಷ
ರಕ್ಷ ಮಹೇಶ್ವರೀ,
ಓಂ ಶ್ರೀ ಸ್ವರ್ಣ ಗೌರ್ಯೈ ನಮಃ , ಪ್ರದಕ್ಷಿಣಾನ್ ಸಮರ್ಪಯಾಮಿ .
ಪಂಚಾಂಗ ನಮಸ್ಕಾರ ( ಮಹಿಳೆಯರ ಅತ್ಯಂತ ಪ್ರಮುಖ
ಎರಡು ಭಾಗಗಳು ನೆಲಕ್ಕೆ ತಾಗಬಾರದು. ಆದ್ದರಿಂದ
ಮಹಿಳೆಯರು ಸಾಷ್ಟಾಂಗ ನಮಿಸಬಾರದು. ಎರಡೂ ಕೈಗಳನ್ನು ಜೋಡಿಸಿ ಪಂಚ ಅಂಗಗಳು ನೆಲಕ್ಕೆ
ತಾಗುವಂತೆ ಬಗ್ಗಿ ಮೊಣಕೈ ಮತ್ತು ಮೊಣಕಾಲು ಊರಿ ನಮಸ್ಕಿರಿಸುವುದು)
ನಮಃ ಸರ್ವ ಹಿತಾರ್ಥಾಯ ಜಗದಾಧಾರ ಹೇತವೇ, ಸಾಷ್ಟ್ಹಾಂಗೋಯಂ ಪ್ರಣಾಮಸ್ತೇ
ಪ್ರಯತ್ನೇನ ಮಯಾ ಕೃತಃ ,
ಶಾತ್ಯೇನಾಪಿ ನಮಸ್ಕಾರಾನ್ ಕುರ್ವತಃ ಶಾಂಘ್ಯಪಾಣಯೇ ಶತ ಜನ್ಮಾರ್ಚಿತಂ
ಪಾಪಂ ತತ್ಕ್ಷಣಮೇವ ನಶ್ಯತಿ
.
ಶ್ರೀ
ಸ್ವರ್ಣ ಗೌರ್ಯೈ ನಮಃ , ನಮಸ್ಕಾರಾನ್
ಸಮರ್ಪಯಾಮಿ .
ದೋರ ಬಂಧನಂ (ಮಂಟಪದಲ್ಲಿಟ್ಟಿರುವ ಹದಿನಾರು ಎಳೆ ದಾರವನ್ನು ಈಗ
ನಿಮ್ಮ ಬಲಗೈಗೆ ಕಟ್ಟಿಸಿಕೊಂಡು ಹೀಗೆ ಪ್ರಾರ್ಥನೆ
ಮಾಡುವುದು)
ಭಕ್ತ ಪ್ರಿಯೆ ಮಹಾದೇವಿ ಸರ್ವೈಶ್ವರ್ಯ ಪ್ರಧಾಯಿನಿ , ಸೂತ್ರಂತೆ ಧಾರಯಶ್ಯಾಮಿ ಮಮಾಭೀಷ್ಥ್ಯ ಸದಾ ಕುರು.
ಪುನಃ ಪೂಜ (ಈಗ ದೇವರಿಗೆ
ಮತ್ತೊಮ್ಮೆ ವಿಶೇಷ ರಾಜೋಪಚಾರಗಳನ್ನು ಮಾಡಿ ಪೂಜೆಯನ್ನು ಅಂತ್ಯಗೊಳಿಸುವುದು)
ಗೃಹಾಣ
ರಾಜಭೋಗಾಯ ಯತ್ನತಃ ,
ಶ್ರೀ ಸ್ವರ್ಣ ಗೌ ರ್ಯೈ
ನಮಃ , ಪುನಃ
ಪೂಜಾಂ ಕರಿಷ್ಯೇ .
ಓಂ ಶ್ರೀ ಸ್ವರ್ಣ ಗೌರ್ಯೈ ನಮಃ , ಛತ್ರಂ
ದರ್ಶಯಾಮಿ, ಚಾಮರಂ
ಸಮರ್ಪಯಾಮಿ, ಗೀತಂ
ಸಮರ್ಪಯಾಮಿ, ನೃತ್ಯಂ
ಸಮರ್ಪಯಾಮಿ, ವಾದ್ಯಂ
ಸಮರ್ಪಯಾಮಿ, ದರ್ಪಣಂ
ಸಮರ್ಪಯಾಮಿ, ವ್ಯಜನಂ
ಸಮರ್ಪಯಾಮಿ, ಆಂದೋಳಿಕಂ ಸಮರ್ಪಯಾಮಿ, ಪಾದ್ಯಂ ಸಮರ್ಪಯಾಮಿ , ಅಶ್ವಾರೋಹಣಂ ಸಮರ್ಪಯಾಮಿ, ಗಜಾರೋಹಣಂ ಸಮರ್ಪಯಾಮಿ ,
ರಥಾರೋಹಣಂ
ಸಮರ್ಪಯಾಮಿ, ರಾಜೋಪಚರಾನ್ ಸಮರ್ಪಯಾಮಿ, ಭಕ್ತ್ಯೋಪಚಾರ, ಶಕ್ತ್ಯೋಪಚಾರ , ಶೋಡಶೋಪಚಾರ
ಪೂಜಾಂ ಸಮರ್ಪಯಾಮಿ, ಸಮಸ್ತ
ರಾಜೋಪಚಾರಾರ್ಥೇ ಅಕ್ಷತಾಂ ಸಮರ್ಪಯಾಮಿ
(ಸ್ವಲ್ಪ ಅಕ್ಷತೆಯನ್ನು ಪೂಜೆ ಮಾಡುವುದು)
ಪುಷ್ಪ ಮತ್ತು ಕ್ಷಮಾಪಣೆ ಮಂತ್ರ (ಕೈಯಲ್ಲಿ ಹೂವನ್ನು ಹಿಡಿದು ನಿಂತು ಕೊಳ್ಳುವುದು)
ಯಸ್ಯಸ್ಮ್ರುತ್ಯಾಚ ನಾಮೊಕ್ತ್ಯಾ ತಪಃ ಪೂಜಾ ಕ್ರಿಯಾದಿಷು , ನ್ಯೂನಂ ಸoಪೂರ್ಣತಾಂ ಯಾತಿ ಸಂಧ್ಯೋ ವಂದೇ ತಮಚ್ಯುತಂ , ಮಂತ್ರ ಹೀನಂ ,
ಕ್ರಿಯಾ ಹೀನಂ ,ಭಕ್ತಿ ಹೀನಂ
ಮಹೇಶ್ವರೀ, ಯತ್ಪೂಜಿತಂ ಮಯಾ ದೇವೀ ಪರಿಪೂರ್ಣಂ ತದಸ್ತುಮೇ. ಅನೇನ ಮಯಾ ಕೃತೇನ
ಸ್ವರ್ಣಗೌರೀ ವ್ರತಾಂಗ ಪೂಜನೇನ ಭಗವತೀ
ಜಗದಾರ್ಪಣಮಸ್ತು, ಮಧ್ಯೇ ಮಂತ್ರ , ತಂತ್ರ , ಸ್ವರ , ವರ್ಣ
, ಲೋಪದೋಷ ಪ್ರಾಯಶ್ಚಿತ್ತಾರ್ಥಂ
ನಾಮತ್ರಯ ಮಂತ್ರಂ ಜಪಂ ಕರಿಷ್ಯೇ , ಅಚ್ಯುತಾಯನಮಃ , ಅನಂತಾಯನಮಃ , ಗೋವಿಂದಾಯನಮಃ , ಅಚ್ಯುತಾನಂದಗೊವಿಂದೇಭ್ಯೋನಮಃ .
ವಿದ್ಯಾ ಬುದ್ಧಿ ಧನೇಷ್ವೈರ್ಯ ಪುತ್ರ ಪೌತ್ರಾದಿ ಸಂಪದಂ , ಪುಷ್ಪಾಂಜಲಿ ಪ್ರಧಾನೇನ ದೇಹಿಮೇ
ಈಪ್ಸಿತಂ ವರಂ .
ಶ್ರೀ
ಸ್ವರ್ಣ ಗೌರ್ಯೈ ನಮಃ , ಮಂತ್ರ ಪುಷ್ಪಂ
ಸಮರ್ಪಯಾಮಿ. (ಹೂವನ್ನು
ದೇವರಿಗೆ ಸಮರ್ಪಿಸಿ)
ತೀರ್ಥ ಪ್ರಾಶನ (ಮೊದಲು ಬೆಳ್ಳಿ ವಿಗ್ರಹಗಳಿಗೆ ಅರ್ಪಿಸಿದ ಪಂಚಾಮೃತ , ನಂತರ ಶುದ್ಧೋದಕ ಹಾಗೂ ಎಳನೀರು ಸ್ನಾನದ ತೀರ್ಥಗಳನ್ನು
ಬಲಗೈಯಲ್ಲಿ ತೆಗೆದು ಕೊಂಡು ಸ್ವೀಕರಿಸುವುದು)
ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಂ , ಸರ್ವ ಪಾಪ
ಉಪಶಮನಂ ಶ್ರೀ ಸ್ವರ್ಣ ಗೌರಿ ಪಾದೋದಕ ತೀರ್ಥಾನಾಂ ಶುಭಂ
.
ಆರತಿ (ಒಂದು ತಟ್ಟೆಯಲ್ಲಿ ಅರಿಶಿನ ಬೆರೆಸಿದ ನೀರನ್ನು ಹಾಕಿ ಅದರಲ್ಲಿ ಎರಡು ಪುಟ್ಟ ದೀಪದ ಸೊಡಲುಗಳನ್ನು
ಹತ್ತಿಸಿಟ್ಟು ಆರತಿಯನ್ನು ಮಾಡುವುದು. ಆರತಿಯ ಯಾವುದೇ ಹಾಡನ್ನು ಹಾಡಿ. ( ಉದಾಹರಣೆಗೆ : ಮಂಗಳಾರತಿ ತಂದು ಬೆಳಗಿರೆ .........)
ವಿಸರ್ಜನ ಪೂಜೆ
ಆರಾಧಿತಾನಾಂ ದೇವಾನಾಂ ಪುನರಾರಾಧನಂ ಕರಿಶ್ಯೇ, ನಾನಾ ವಿಧ ಪರಿಮಳ ಪುಷ್ಪ ಪೂಜಾಂ ಕರಿಷ್ಯೇ, ಪುನಃ ಪೂಜಾಂ ಕರಿಶ್ಯೇ, ಛತ್ರಂ ದರ್ಶಯಾಮಿ, ಧೂಪಮ್ ,ದೀಪಂ ದರ್ಶಯಾಮಿ, ಫಲ ನೈವೇದ್ಯಂ
ಸಮರ್ಪಯಾಮಿ .
ಯಾಂತು ದೇವ ಗಣಾ ಸರ್ವೇ , ಪೂಜಾಮಾದಾಯ ಪಾರ್ಥೀವೀಂ , ಇಷ್ಟ ಕಾಮಾರ್ಥೆ
ಪ್ರಸೀದ್ಯರ್ಥಂ , ಓಂ ಶ್ರೀ ಸ್ವರ್ಣ ಗೌರ್ಯೈ ನಮಃ ಪುನರ್ ಅಗಮನಾಯ ಚ . (ದೇವರನ್ನು ವಿಸರ್ಜಿಸುವಾಗ ಮಂತ್ರಗಳನ್ನು ಹೇಳಿ ಕಳಶ ಮತ್ತು ವಿಗ್ರಹವನ್ನು ಸ್ವಲ್ಪ
ಅಲುಗಾಡಿಸಿ ಒಂದು ಹೂವನ್ನು
ಪ್ರಸಾದವೆಂದು ತೆಗೆದುಕೊಳ್ಳುವುದು)
ವಿಶೇಷ ಸೂಚನೆ (ನೀವು ಮಂಟಪದ ಮೇಲಿಟ್ಟಿರುವ
ವಿಗ್ರಹ, ಕಳಶ ಮುಂತಾದವುಗಳಿಗೆ
ಹಾಕಿರುವ ಬಂಗಾರದ ಮತ್ತು ಇನ್ನಿತರ ಬೆಲೆ ಬಾಳುವ ಪದಾರ್ಥಗಳನ್ನು ಮರೆಯದೆ
ತೆಗೆದಿಟ್ಟುಕೊಳ್ಳುವುದು) (ತೆಂಗಿನಕಾಯಿಯನ್ನು ಅಡಿಗೆಗೆ ಉಪಯೋಗಿಸುವುದು)
ಉಪಾಯನ ದಾನ (ಒಂದು ತಟ್ಟೆಯಲ್ಲಿ ಸ್ವಲ್ಪ ಒಳ್ಳೆಯ ಅಕ್ಕಿ, ವೀಳ್ಯೆದೆಲೆ,
ಅಡಕೆ , ನಿಮ್ಮ ಅನುಕೂಲಕ್ಕೆ ತಕ್ಕಂತೆ
ದಕ್ಷಿಣೆ ಇಟ್ಟು ಅದರ ಮೇಲೆ ತೆಂಗಿನಕಾಯಿ ಇಡಿ . ಇದರ ಮೇಲೆ
ಒಂದು ಎಲೆ ಅಥವಾ ಬಟ್ಟೆಯನ್ನು ಮುಚ್ಚಿ .ಬ್ರಾಹ್ಮಣರಿಗೆ ಕೊಡುವಾಗ ಒಂದು ಉದ್ಧರಣೆ ನೀರು ಹಾಕಿ, ಮುಚ್ಚಿದ
ಬಟ್ಟೆ ಅಥವಾ ಎಲೆಯನ್ನು ತೆಗೆದು ತೋರಿಸಿ , ಅವರಿಗೆ ನಮಸ್ಕರಿಸಿ ದಾನ ಮಾಡುವುದು) (ಒಂದು ವೇಳೆ ಬ್ರಾಹ್ಮಣರು
ಇಲ್ಲದಿದ್ದರೆ, ಮನೆಯಲ್ಲಿ
ಹಿರಿಯರಿಗೆ ಅಥವಾ ಹತ್ತಿರದ ದೇವಸ್ಥಾನದಲ್ಲಿ ಕೊಡಬಹುದು)
ಕಥಾ ಶ್ರವಣ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ