ಹರಸು ಬಾ ತಾಯೆ
ತಾಯೆ ಬಾರೇ, ಮೊಗವ ತೋರೆ
ಅನ್ನಪೂರ್ಣೆ ಮಾತೆಯೇ
ಉಣಿಸು ಬಾರೇ ತಣಿಸು ಬಾರೇ
ಜನ್ಮ ಜೀವ ದಾತೆಯೇ
ತಾಯೆ ಬಾರೇ, ನುಡಿಸು ಬಾರೇ
ಸಕಲ ವಿದ್ಯೆ ದಾತೆಯೇ
ಕೈಯ ಹಿಡಿದು, ಮೈಯ ಬಡಿದು
ಎಲ್ಲಾ ಕಲಿಸು ಮಾತೆಯೇ
ತಾಯೆ ಬಾರೇ, ಕಾಯ ಬಾರೇ
ಧಾನ್ಯ ಧನ ಪ್ರದಾತೆಯೇ
ಜ್ಞಾನ ಹರಿಸು ದೇಹ ದುಡಿಸು
ಸಕಲ ಸಮೃದ್ಧಿ ದಾತೆಯೇ
ತಾಯೆ ಬಾರೇ, ಧೈರ್ಯ ತೋರೇ
ಶಸ್ತ್ರ ಶಾಸ್ತ್ರ ಧಾರೆಯೇ
ಎಡರನೆಸೆದು ತೊಡರ ತೊಳೆದು
ಕಾಯ್ವ ಕಾಳಿ ಮಾತೆಯೇ
ತಾಯೆ ಬಾರೇ, ನೋಡು ಬಾರೇ
ನಿನ್ನ ಕುಡಿಯ ಗಾಥೆಯೇ
ಈ ರೂಪ ಈ ಪ್ರತಾಪ
ಮಾತೆ ನೀ ಹರಸಿದಂತೆಯೇ
ತಾಯೆ ಬಾರೇ, ನಿಲ್ಲು ಬಾರೇ
ನಿನ್ನ ಪಾದ ತೊಳೆಯುವೆ
ಪಾದ ತೊಳೆದ ಗಂಗೆಯಿಂದ
ಮಿಂದು ನಾನು ನಮಿಸುವೆ .
ರಚಕ: ಡಾ. ಪ್ರಭಾಕರ್ ಬೆಳವಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ