ಬುಧವಾರ, ಮೇ 7, 2025

'ನಂದಿಸಿ ಬಿಡೋ ಮನುಜ..'

 

 

'ನಂದಿಸಿ ಬಿಡೋ ಮನುಜ..'

(ಪದ್ಮಶ್ರೀ ಪ್ರೊ. ದೊಡ್ಡರಂಗೇಗೌಡರ ಮಾದರಿಯಲ್ಲಿ)

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ನಂದಿಸಿ ಬಿಡೋ ಮನುಜ

ಅಂತರಾಳದ ಬೆಂಕಿ ಉರಿ

ನಂದಿಸದಿರೆ ಸುಂಕ ಕಾದಿದೆ

 

ಪ್ರೀತಿ ತೋರದೆ, ಕ್ರಾಂತಿ ಎಂದೆ

ಅವನ ಕೊಂದೆ ನೀನೂ ಬೆಂದೆ

ರೋಷಾವೇಶ ಏಕೋ ಏಕೋ?

ದ್ವೇಷ ಆವೇಷ ಸಾಕೋ ಸಾಕೋ

ಸಹಬಾಳ್ವೆ ಇಂದು ಬೇಕೋ ಬೇಕೋ

 

ನಂದಿಸಿ ಬಿಡೋ ಮನುಜ...

 

ನಿನ್ನ ಹೊಂಚು ಅವನ ಸಂಚು

ಗುಡುಗು ಸಿಡಿಲು ಮಿಂಚೋ ಮಿಂಚು

ವ್ಯರ್ಥ ವಂಚನೆ ಸಾಕೋ ಸಾಕೋ

ಆತ್ಮ ಚಿಂತನೆ ಬೇಕೋ ಬೇಕೋ

ಸದ್ಭಾವನೆ ಬಾಳ  ಬೆಳಕಯ್ಯ...

 

ಸ್ಪಂದಿಸಿ ಬಿಡೋ ಮನುಜ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW  ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.  ಮಾ ಮಂಗಳಂ ಗೀತೆ ಡಾ ಬೆಳವಾಡಿ ಕೃ ...