ಸೋಮವಾರ, ಮೇ 5, 2025

‘ಸದಾ ಬರಲಿ ರಾಮ ನಾಮ’

 

‘ಸದಾ ಬರಲಿ ರಾಮ ನಾಮ’

ಕರ್ತೃ : ಡಾ. ಪ್ರಭಾಕರ್ ಬೆಳವಾಡಿ 

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ

ಬರಲಿ ರಾಮನಾಮ ಸದಾ ಬರಲಿ ದಿವ್ಯ ನಾಮ

ಎನ್ನ ಪ್ರಾಣವಿರುವುದೇ ನುಡಿಯೆ ನಿನ್ನ ನಾಮ

ನನ್ನ ತ್ರಾಣವಿರುವುದೇ ನುಡಿಯಲೆಂದು ರಾಮ

 

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ

ಬರಲಿ ರಾಮನಾಮ ಸದಾ ಬರಲಿ ದಿವ್ಯ ನಾಮ

 

ಸದಾ ನಲಿದು ನುಡಿದಿಹನು ನಿನ್ನ ಭಕ್ತ ಹನುಮ

ಅವನ ರಕ್ತ ಕಣಗಳಲಿ ತುಂಬಿಹುದು ರಾಮನಾಮ

ನುಡಿಯುತಿಹ ನಿನ್ನ ನಾಮ ನಾನು ಒಬ್ಬ ಹನುಮ

ಹಾಡಲೆಂದೇ ಪಾಡಲೆಂದೇ ಪಡೆದಿರುವೆ ಜನುಮ

 

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ

ಬರಲಿ ರಾಮನಾಮ ಸದಾ ಬರಲಿ ದಿವ್ಯ ನಾಮ

 

ರಾಮನಾಮ ಕಾಯಕಕ್ಕೆ ರಾಮನಾಮ ಜೀವನಕ್ಕೆ

ರಾಮನಾಮ ಜ್ಞಾನಕ್ಕೆ ರಾಮನಾಮ ಧ್ಯಾನಕ್ಕೆ

ನಿನ್ನ ನಾಮ ನುಡಿಯುತ ಅಲೆಯನೆಲ್ಲ ಮೀಟುವೆ

ರಾಮನಾಮ ನುಡಿಯುತ ದೂರ ಕಡಲ ದಾಟುವೆ

 

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ

ಬರಲಿ ರಾಮನಾಮ ಸದಾ ಬರಲಿ ದಿವ್ಯ ನಾಮ

 

ನಿನ್ನ ನಾಮ ನುಡಿಯುತ ಹೆಜ್ಜೆ ಹೆಜ್ಜೆ ಹಾಕುವೆ

ರಾಮನಾಮ ಮುಡಿಯುತ ಮುಂದೆ ಮುಂದೆ ಸಾಗುವೆ

ಹನುಮನಂತೆ ನಾನು ನನ್ನ ಒಡಲ ಸೀಳಿ ನಿಲ್ಲುವೆ

ರಾಮ ನೀನು ಬಂದೇ ಬರುವೆ ಒಲಿದು ಬಂದು ನೆಲಸುವೆ

 

ನಿನ್ನ ನಾಮ ಕೇಳಲೆಂದೆ ಕರ್ಣ ತೆರೆದು ನಿಂತಿದೆ

ನಿನ್ನ ನಾಮ ನುಡಿಯಲೆಂದೆ ಜಿಹ್ವೆ ಚಾಚಿ ಕಾದಿದೆ

ನಿನ್ನ ಹೆಸರ ಭಜಿಸಲೆಂದು ನನ್ನ ಉಸಿರು ನಿಂತಿದೆ

ರಾಮಲಾಲಿ ಮೇಘ ಶ್ಯಾಮಲಾಲಿ ನುಡಿಯ ಬಯಸಿದೆ

 

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ

ಬರಲಿ ರಾಮನಾಮ ಸದಾ ಬರಲಿ ದಿವ್ಯ ನಾಮ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW  ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.  ಮಾ ಮಂಗಳಂ ಗೀತೆ ಡಾ ಬೆಳವಾಡಿ ಕೃ ...