ಗುರುವಾರ, ಮೇ 15, 2025

'ಗೆಲುವ ಕನ್ನಡ ನಾಡು'

 


'ಗೆಲುವ ಕನ್ನಡ ನಾಡು'

ಡಾ. ಪ್ರಭಾಕರ್ ಬೆಳವಾಡಿ

(ಹುಯಿಲಗೋಳು ನಾರಾಯಣರಾಯರ ಸನ್ನಿಧಿಯಲ್ಲಿ)

 

ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು

ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು

ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು

ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II II

 

ರಾಜರಾವೇಶದಿಂ ಆಳಿ ಬೆಳಸಿದ ನಾಡು

ರಾರಾಜಿಸುವ ಕನ್ನಂಬಾಡಿ ಕಟ್ಟೆಯ ನೋಡು

ಪಂಪ ರನ್ನ ಜನ್ನರ ಜಾಡು ಹಿಡಿದಿಹರ ಬೀಡು

ಜ್ಞಾನಪೀಠದ ದಿಗ್ಗಜರ ಸಾಹಿತ್ಯ ವೈಖರಿಯ ಗೂಡು II II

 

ವಿಶ್ವೇಶರಯ್ಯ ಯಾಜ್ಞವಲ್ಕ ಮಿತಾಕ್ಷರರು ಉತ್ತಿಹ ಬೀಡು

ಸಾಲುಮರದ ತಿಮ್ಮಕ್ಕನ ಕಾರುಣ್ಯದಿಂದುಳಿದಿಹ ಕಾಡು

ಕೃಷ್ಣೆ ತುಂಗೆ ಕಾವೇರಿ ಹರಿದುಣಿಸಿ ಬೆಳಸಿಹ ಫಲ ಬೀಡು

ವಿದ್ವತ್ಮಣಿಗಳ ಗಣಕಾಧಿಪತಿಗಳ ವಿಜ್ಞಾನಿಗಳ ಕಲೆವೀಡು II II

 

ಆಚಾರ್ಯರು ದಾಸರು ವಚನಕಾರರು ಜನಪದರುಗಳ ಘನ ಬೀಡು

ಶಾಂತತೆಯ ಕೂಟ ಕಾಂತಿಯುತ ನೋಟ ಮೈಗೂಡಿಹ ತಾಯ್ನಾಡು

ಕನ್ನಡದ ನಿಲುಮೆ ಜನರ ಒಲುಮೆ ಕಿರುಭಾರತವನಾಗಿಸಿದೆ ಈ ಸೂಡು

ಪ್ರಖ್ಯಾತವಾಗಲಿ ಓಜೆಯಿಂ ತೇಜದಿಂ ಶ್ರೀಗಂಧದ ಹೃದಯದ ನಾಡು II II

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

"Leveraging Diversity: A Practical Approach to Public Holidays in Multicultural Societies".

  "Leveraging Diversity: A Practical Approach to Public Holidays in Multicultural Societies" .   India , like many multicultur...