ಸೋಮವಾರ, ಮೇ 12, 2025

‘ಅಳಿಯನ ಮಾಡಿಕೊ ಎನ್ನ’

 

‘ಅಳಿಯನ ಮಾಡಿಕೊ ಎನ್ನ’

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಮುತ್ತಿನ ಮಗಳ ಪಡೆದಿಹ ನೀನು

ಅಳಿಯನ ಮಾಡಿಕೊ ಎನ್ನ

 

ವೇದವ ಕಲಿತಿಹೆ ವಾದವ ಮಾಡೆ

ನಾದವ ಕಲಿತಿಹೆ ನಿಂದನೆ ಮಾಡೆ

ದೇವರ ಪೂಜಿಸೋ ಮಾವನೆ ನೀನು

 

ಮುತ್ತಿನ ಮಗಳ ಪಡೆದಿಹ ನೀನು

ಅಳಿಯನ ಮಾಡಿಕೊ ಎನ್ನ

 

ಪಾಠವ ಕಲಿತಿಹೆ ಕಾಟವ ನೀಡೆ

ನಿನ್ನಯ ಆಸ್ತಿಯ ಎನಿತೂ ಬೇಡೆ

ನಿನ್ನಯ ಮಗಳ ವರಿಸುವೆ ನಾನು

 

ಮುತ್ತಿನ ಮಗಳ ಪಡೆದಿಹ ನೀನು

ಅಳಿಯನ ಮಾಡಿಕೊ ಎನ್ನ

ನನಗೇ ಬಲವಿರೆ ನಿನ್ನನು ಕಾಡೆ

ಚಕ್ರವ್ಯೂಹಗಳ ಎಂದೂ ಹೂಡೆ

ಕೊಟ್ಟ ಮಾತನು ಭರಿಸುವೆ ನಾನು

 

ಮುತ್ತಿನ ಮಗಳ ಪಡೆದಿಹ ನೀನು

ಅಳಿಯನ ಮಾಡಿಕೊ ಎನ್ನ

 

ಬಿಡೆನು ನಿನ್ನಯ ಮಗಳನು ಬಾಡೆ

ನಂದನವನವದಲಿ ಹರಿಸುವೆ ಹಾಡೆ

ಗೌರವ ಗಳಿಸುತ ಬಾಳಿಹೆ ನೀನು

 

ಮುತ್ತಿನ ಮಗಳ ಪಡೆದಿಹ ನೀನು

ಅಳಿಯನ ಮಾಡಿಕೊ ಎನ್ನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW  ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.  ಮಾ ಮಂಗಳಂ ಗೀತೆ ಡಾ ಬೆಳವಾಡಿ ಕೃ ...