ಶನಿವಾರ, ಮೇ 3, 2025

‘ನಮ್ಮೋಳ ಬಂಗಾರದ ಒಡವೆ’

 


 (Image courtesy pinterest) 

‘ನಮ್ಮೋಳ ಬಂಗಾರದ ಒಡವೆ’

(ಪದ್ಮಶ್ರೀ ದೊಡ್ಡರಂಗೇಗೌಡರ ಕ್ಷಮೆ ಯಾಚಿಸಿ)

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ  

 

ನಮ್ಮೋಳ ಬಂಗಾರದೊಡವೆ, ನನ್ನಾಕೆ ಸೌಂದರ್ಯದ ಸಿರಿ ಬೆಡಗೆ  

ಸುತ್ತವಳ ಬೆಡಗನ್ನು ಬೆಳಗೆ, ನನ್ನ ಬರಿದಾದ ಕಿಸೆಯನ್ನು ಮಿನುಗೆ  

ಕಣ್ಣಲ್ಲೇ ಕರೆದು ಹೊಂಗಿರಣವೆಂದು ನನ್ನಿನಿಯಳ ಮನಸನ್ನು ಇರಿದೆ

ಮಾತುಗಳೇ ಬರದೇ ಅವಳ ಹಿಂದೆ ನಡೆದೇ ನನ್ನ ಕಿಸೆಯಾಯ್ತು ಬರಿದೆ  

ಅನುಕಂಪ ಬಿಡದು ಅನುಬಂಧ ಸೆಳೆದು ನಮ್ಮೊಲವ ನೀನಿಂದು ಮಿಡಿದೆ

ಬಂಗಾರ ಬರಲಿ ಅನುರಾಗವಿರಲಿ ನನ್ನಂದ ನಿಮಗೆಂದು ನೀ ಬರಸೆಳೆದೆ

ಹೃದಯವನೆ ಒತ್ತಲು ಮುತ್ತೊಂದ ಇತ್ತಲು ಮೋಹದ ಗಂಗೆಯಲಿ ಮಿಂದೆ

ನಮ್ಮೂರ ಚೆಲುವೆ ನಮ್ಮೋರ ಒಡವೆ ನಾನೇ ಎನ್ನಲು ಬೆರಗಾಗಿ ನಾನಿಂದೆ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾ ಮಂಗಳಂ ಗೀತೆ

 https://suno.com/s/7F151wqNtMZ0rsvW  ಮಾ ಮಂಗಳಂ ಎಂಬ ಒಂದು ಗೀತೆ. ಇದರಲ್ಲಿ ಉಪದೇಶಗಳು ಅಡಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.  ಮಾ ಮಂಗಳಂ ಗೀತೆ ಡಾ ಬೆಳವಾಡಿ ಕೃ ...