ಮಂಗಳವಾರ, ಏಪ್ರಿಲ್ 22, 2025

'ಹಂಸವೇರಿ ಬಂತು ಶಾರದಾವಿಲಾಸ'

 

'ಹಂಸವೇರಿ ಬಂತು ಶಾರದಾವಿಲಾಸ'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಮುಗಿಲಜಾರಿ ಮೋಡತೂರಿ ಕೋರಿ ಬಂತು ಕಲ್ಪನಾವಿಲಾಸ

ಪದಕೆ ಹದದ ವಿವಿಧ ವಿಧದ ಬಂತು ಪ್ರಾಸ ಪಡದೆ ತ್ರಾಸ

ಒಂದು ಮಿಂಚು ಒಂದು ಕಂಚು ಆದಿ ಅಂತ್ಯದಾ ಸಹವಾಸ

ಒಂದು ಚಿಗುರು ಒಂದು ಒಗರು ಅದು ಆಗಬಲ್ಲದೇ ಇತಿಹಾಸ

 

ನಾದವಿಲ್ಲ ವಾದವಿಲ್ಲ ವೇದವಿಲ್ಲ ಸ್ವಾದವಿಲ್ಲ ಬರೆದ ಭಾವಗೀತೆ

ಅಂಬಿಕಾತನಯನಂತೆ ಬರೆವುದೇನು ಚುಟುಕು ಹೊಡೆವ ಮಾತೆ

ಪದಗಳಲ್ಲಿ ಬೆರಗ ತುಂಬು ಮರುಗ ತುಂಬು ಕುಣಿವುದಾಗ ಗೀತೆ

ಕೇಳಿ ಮುದದಿ ಓದಿ ಮನದಿ ಹಾಡಿ ಹದದಿ ನುಲಿವರದರ ಗಾಥೆ

 

ಮೋಡ ಮರುಗಿ ಬಂತು ಕರಗಿ ತಿರುಗಿ ಹೋಗಿ ಮುಗಿಲುವಾಸ

ಎಲ್ಲೆ ಮೀರಿ ನಗೆಯ ಬೀರಿ ಸಾಲ ದೂರಿ ಬರಿದೆ ಮಂದಹಾಸ

ಒಂದು ಬೆಡಗು ಒಂದು ತುಡುಗು ಒಂದು ಗುಡುಗು ಅಟ್ಟಹಾಸ

ಬೇಡ ಮಡಗು ಅಗೋ ಹಂಸವೇರಿ ಬಂತು ಶಾರದಾವಿಲಾಸ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

"Leveraging Diversity: A Practical Approach to Public Holidays in Multicultural Societies".

  "Leveraging Diversity: A Practical Approach to Public Holidays in Multicultural Societies" .   India , like many multicultur...