ಸೋಮವಾರ, ಏಪ್ರಿಲ್ 21, 2025

ಅಜ್ಜಿ ಮೊಮ್ಮಕ್ಕಳ ಪುಟ್ಟ ಪ್ರಸಂಗ

 

 

Thanks to Pinterest photo

ಸ್ವಾಭಾವಿಕ ಅಲ್ಲವೇ?

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

ಅಜ್ಜಿ ಮೊಮ್ಮಕ್ಕಳ ಪುಟ್ಟ ಪ್ರಸಂಗ

ಮೊನ್ನೆ ನಮ್ಮ ಮನೆಯಲ್ಲಿ ಅಜ್ಜಿ ಮತ್ತು ಪುಟ್ಟ ಮೊಮ್ಮಗ ಆಟ ಆಡುತ್ತಿದ್ದರು. ಆಚಾನಕ್ಕಾಗಿ ಇಬ್ಬರೂ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದರು. ಮಗು ಅಳಲು ಆರಂಭಿಸಿತು. ಮನೆಯವರೆಲ್ಲಾ ಏನಾಯಿತೋ ಎಂದು ಮಗುವನ್ನು ಎತ್ತಿಕೊಂಡು ನೋಡಿ ಸಮಾಧಾನ ಪಡಿಸಿದರು.

ಪಾಪ ವಯಸ್ಸಾದ ಅಜ್ಜಿಗೆ ಯಾರೂ ಕೇಳಲಿಲ್ಲ, ನೋಡಲಿಲ್ಲ. ಅಲ್ಲೇ ಬರೆಯುತ್ತ ಕೂತಿದ್ದ ಮೊಮ್ಮಗಳು

ಅಜ್ಜಿಯ ಕಡೆ ನೋಡಿದಳು. ಮಗುವಿನ ಹಲ್ಲು ಚುಚ್ಚಿ ಅಜ್ಜಿಯ ಹಣೆಯಲ್ಲಿ ರಕ್ತ ಬರುತ್ತಿತ್ತು.

ಪಾಪು ಹುಟ್ಟಿದ ಮೇಲೆ ತನ್ನ ಮೇಲಿನ ಪ್ರೀತಿ ಕಡಿಮೆ ಆಗಿದೆಯೆಂದು ಅವಳಿಗೆ ಭಾಸವಾಗುತ್ತಿತ್ತು. ತನ್ನ ಜಾಗವನ್ನು ತಮ್ಮ ಆಕ್ರಮಿಸಿ ಕೊಂಡಿದ್ದ. ಮನಸ್ಸಿನಲ್ಲೇ ಸಿಟ್ಟು ತುಂಬಿತ್ತು.

ಓಡಿ ಹೋಗಿ ಬ್ಯಾಂಡ್ ಏಡ್ ತಂದು ಅಜ್ಜಿಯ ಹಣೆಗೆ ಹಾಕಿದಳು.

"ಅಜ್ಜಿ ನಿನಗೆ ಮೊದಲೇ ಹೇಳಿದ್ದೆ. ಅವನು ತುಂಟ. ಅವನ ಜೊತೆ ಆಡಬೇಡ ಎಂದು. ನನ್ನ ಮಾತು

ನೀನೂ ಕೇಳಲ್ಲ" ಎಂದು ಉಪಚರಿಸಿದಳು.

ಅನೇಕ ಮನೆಗಳಲ್ಲಿ ಇದು ಸ್ವಾಭಾವಿಕ ಅಲ್ಲವೇ.

ಸಧ್ಯ ಅಜ್ಜಿಯ ಪುಣ್ಯ. ಸೊಸೆ ನಿಮ್ಮಿಂದಾನೆ ಮಗು ಅತ್ತಿದ್ದು ಅಂದು ಬೈಯಲಿಲ್ಲ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

"Leveraging Diversity: A Practical Approach to Public Holidays in Multicultural Societies".

  "Leveraging Diversity: A Practical Approach to Public Holidays in Multicultural Societies" .   India , like many multicultur...