ಬುಧವಾರ, ಫೆಬ್ರವರಿ 26, 2025

ಹರಿಹರಬ್ರಹ್ಮಮಯಮ್ ಜಗಮ್

 


ಹರಿಹರಬ್ರಹ್ಮಮಯಮ್ ಜಗಮ್

ಪರಿಸರ ನಿರ್ಮಿತ ದೇವ ಗಣಮ್

ಪ್ರಕೃತಿ ಪ್ರಧಾಯಕ ಈ ತ್ರಿಗುಣಮ್

ನಮಿಸುತ ನಿಲ್ಲಲಿ ಭೂಮಂಡಲಮ್ II

 

ನಿರ್ಮಲ ಭಾಷೆಯ ಆಡಲು ಭವ್ಯಮ್

ಕೋಮಲ ಮನದಲಿ ಪೂಜಿಸೆ ಧನ್ಯಮ್

ಕಾಮ ಕ್ರೋಧಗಳ ತ್ಯಜಿಸಲು ಕ್ಷೇಮಮ್

ಪ್ರೇಮ ಭಾವನೆಯ ತೋರಲು ಧರ್ಮಮ್ II

 

ನಿತ್ಯವೂ ನುಡಿಯೋ ಹರಿಹರಬ್ರಹ್ಮಮ್

ಸತ್ಯವ ನುಡಿಯೇ ಪಾವನ ಜನುಮಮ್

ಪಾಪ ವಿಮೋಚಕರೀ ಹರಿಹರಬ್ರಹ್ಮಮ್

ಶಾಪ ನಿವಾರಕರೋ ಹರಿಹರಬ್ರಹ್ಮಮ್ II

 

ಸರ್ವ ಸುಗಂಧ ಸುಲೇಪಿತ ನಾಮಮ್

ಗರ್ವ ಭಂಗಕರು ಹರಿಹರಬ್ರಹ್ಮಮ್

ದರ್ಪವ ಅಳಿಸುವ ಏಕೈಕ್ಯ ನಾಮಮ್

ಸರ್ಪಶಯನ ಸರ್ಪಧಾರಿ ಸಮೂಹಮ್ II

 

ಭಕ್ತಿಯಿಂದಲೀ ಮಾಡಲು ಧ್ಯಾನಮ್

ಶಕ್ತಿಯ ನೀಡುವರು ಹರಿಹರಬ್ರಹ್ಮಮ್

ಒಲಿದು ಬರುವರು ಹರಿಹರಬ್ರಹ್ಮಮ್

ಸುಲಿಯುತ ಪಾಪವ ಹರಿಹರಬ್ರಹ್ಮಮ್ II

 

ಹರನೇ ಬ್ರಹ್ಮಮ್ ಹರಿಯೇ ಬ್ರಹ್ಮಮ್

ಹರಿಹರ ತುಂಬಿಹ ಜಗವೇ ಬ್ರಹ್ಮಮ್

ಚರಾಚರ ಎಲ್ಲವೂ ಹರಿಹರಬ್ರಹ್ಮಮ್

ತತ್ಪ್ರಣಮಾಮಿ ನೀ ಹರಿಹರಬ್ರಹ್ಮಮ್ II


ರಚನೆ: ಡಾ. ಪ್ರಭಾಕರ್ ಬೆಳವಾಡಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೀತಿ ಪಂಚಕಂ

  ನೀತಿ ಪಂಚಕಂ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ಬ್ರಹ್ಮ ಮುರಾರಿ ಸುವರ್ಜಿತ ಮೋಹಂ ಕಶ್ಮಲ ದೂಷಿತ ವಿಸರ್ಜಿತ ಮೋಹಂ ಜನುಮಕೆ ಕಂಟಕ ಕಾರಕ ಮೋಹಂ ತತ್ ಕಾರಣ ತೊರೆ...