ಶುಕ್ರವಾರ, ಫೆಬ್ರವರಿ 21, 2025

ಪದಗಳು ನಲವತ್ತು, ಹನುಮನ ತಾಕತ್ತು

 


ರಚನೆ: ಡಾ. ಪ್ರಭಾಕರ್ ಬೆಳವಾಡಿ 



ಆದಿ ಚೌಪದಿ ಪಲ್ಲವಿ

ಭಕ್ತನೆಂದರೆ ಹನುಮ, ಶಕ್ತನೆಂದರೆ ಹನುಮ

ಭಕ್ತರ ಮಾದರಿ ಹನುಮ, ಭಕ್ತಿಗೆ ದಾರಿ ಹನುಮ

ಸೇವಾ ಪುರುಷ ಹನುಮ, ಭಾವಾ ಪರವಶ ಹನುಮ

ಮುಖ್ಯ ಪ್ರಾಣ ಹನುಮ, ಸೌಖ್ಯಕೆ ತ್ರಾಣ ಹನುಮ

    

ಜಗದ ಪ್ರಾಣವೇ ನಮ್ಮಯ ಹನುಮ         1 

ಜಗದ ತ್ರಾಣವೇ ನಮ್ಮಯ ಹನುಮ         2

ರಾಮ ಧೂತನು ನಮ್ಮಯ ಹನುಮ          3

ಆಶ್ರಯ ದಾತನು ನಮ್ಮಯ ಹನುಮ        4

ವಾಯು ಪುತ್ರನು ನಮ್ಮಯ ಹನುಮ         5

ಗಣಪನ ಮಿತ್ರನು ನಮ್ಮಯ ಹನುಮ        6

ಬಾಲ ಪ್ರತಾಪಿ ನಮ್ಮಯ ಹನುಮ           7

ತ್ರಿಕಾಲ ವ್ಯಾಪಿ ನಮ್ಮಯ ಹನುಮ           8

ಲಂಕೆಗೆ ಜಿಗಿದವ ನಮ್ಮಯ ಹನುಮ         9

ಸಂಜೀವಿನಿ ತಂದವ ನಮ್ಮಯ ಹನುಮ      10

ಬ್ರಹ್ಮಚಾರಿಯು ನಮ್ಮಯ ಹನುಮ           11

ಸಾಕ್ಷಾತ್ಕಾರಿಯು ನಮ್ಮಯ ಹನುಮ         12

ಜ್ಞಾನ ಭಂಡಾರಿ ನಮ್ಮಯ ಹನುಮ          13

ದುಷ್ಟ ಸಂಹಾರಿ ನಮ್ಮಯ ಹನುಮ          14 

ಗದೆಯನು ಬೀಸಿದ ನಮ್ಮಯ ಹನುಮ       15

ಸೇತುವೆ ಹಾಸಿದ ನಮ್ಮಯ ಹನುಮ         16 

ಭಕ್ತಿ ಪ್ರಚೋದಕ ನಮ್ಮಯ ಹನುಮ          17

ಮುಕ್ತಿ ಪ್ರಧಾಯಕ ನಮ್ಮಯ ಹನುಮ        18

ಮುದ್ರಿಕೆ ಕೊಟ್ಟವ ನಮ್ಮಯ ಹನುಮ        19

ಲಂಕೆಯ ಸುಟ್ಟವ ನಮ್ಮಯ ಹನುಮ         20

ಗರ್ವವ ಅಳಿಸಿದ ನಮ್ಮಯ ಹನುಮ         21

ಗೌರವ ಉಳಿಸಿದ ನಮ್ಮಯ ಹನುಮ        22

ಇಷ್ಟ ಪ್ರದಾಯಕ ನಮ್ಮಯ ಹನುಮ         23

ಕಷ್ಟ ನಿವಾರಕ ನಮ್ಮಯ ಹನುಮ            24

ಪಾರ್ಥನ ಧ್ವಜದೊಳು ನಮ್ಮಯ ಹನುಮ    25

ಕರ್ತನ ಭುಜದೊಳು ನಮ್ಮಯ ಹನುಮ     26

ದುಃಖ ವಿಮೋಚಕ ನಮ್ಮಯ ಹನುಮ        27

ಸೌಖ್ಯ ಪ್ರಧಾಯಕ ನಮ್ಮಯ ಹನುಮ       28

ನಿತ್ಯದ ಭಜನೆಗೆ ನಮ್ಮಯ ಹನುಮ          29

ಎಲ್ಲರ ಭುಜಬಲ ನಮ್ಮಯ ಹನುಮ          30

ಅಂಜನಿ ಕಂದನು ನಮ್ಮಯ ಹನುಮ         31

ಕೇಸರಿ ನಂದನು ನಮ್ಮಯ ಹನುಮ         32

ಲಕುಮನ ಉಳಿಸಿದ ನಮ್ಮಯ ಹನುಮ      33

ಪ್ರಸಿದ್ಧಿ ಗಳಿಸಿದ ನಮ್ಮಯ ಹನುಮ          34

ಮಂಗಳ ಮೂರುತಿ ನಮ್ಮಯ ಹನುಮ       35

ಗಳಿಸಿದ ಕೀರುತಿ ನಮ್ಮಯ ಹನುಮ         36

ರಾಮನ ಚರಣದಿ ನಮ್ಮಯ ಹನುಮ        37

ಪಾಲಿಸು ಕರುಣದಿ ನಮ್ಮಯ ಹನುಮ        38

ನಾಲಿಗೆ ನುಡಿಯಲಿ ನಮ್ಮಯ ಹನುಮ       39

ನಿಮ್ಮೆದೆ ಗುಡಿಯಲಿ ನಮ್ಮಯ ಹನುಮ      4೦

ಅಂತ್ಯ ಚೌಪದಿ ಚರಣ

ಪ್ರಭಾಕರ ವಿರಚಿತ ಹನುಮನ ನುಡಿಯು,

ಪಾವನಗೊಳಿಸುವ ಗಂಧದ ಗುಡಿಯು.

ಹನುಮನ ಪಾದಕೆ ತಾಗಲಿ ಮುಡಿಯು,

ತುಂಬದೆ ಇರದೇ ನಿಮ್ಮಯ ಉಡಿಯು.

ಓದುತ ಭಕ್ತರೇ ಧನ್ಯರಾಗಿ, ಕೇಳುತ ಭಕ್ತರೇ ಮಾನ್ಯರಾಗಿ  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೀತಿ ಪಂಚಕಂ

  ನೀತಿ ಪಂಚಕಂ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ಬ್ರಹ್ಮ ಮುರಾರಿ ಸುವರ್ಜಿತ ಮೋಹಂ ಕಶ್ಮಲ ದೂಷಿತ ವಿಸರ್ಜಿತ ಮೋಹಂ ಜನುಮಕೆ ಕಂಟಕ ಕಾರಕ ಮೋಹಂ ತತ್ ಕಾರಣ ತೊರೆ...