ಮಂಗಳವಾರ, ಜೂನ್ 10, 2025

"ಹುಣ್ಣಿಮೆಯ ಮಂದಹಾಸ"

 




"ಹುಣ್ಣಿಮೆಯ ಮಂದಹಾಸ"

ಕರ್ತೃ ಡಾ. ಪ್ರಭಕಾರ Belavadi

ಚಂದಿರ ನಗುತ ಪಯಣ ಮಾಡಿದರೆ,
ಆಗಸದ ತಾರೆಗಳು ಮಿಡಿದು ನೃತ್ಯ ಮಾಡಿದವೆ,
ರವಿ ಜಾರಿ ಗೋಧೂಳಿ ಸ್ಪರ್ಶಿಸಿದರೆ,
ಜನಪದ ಹಾಡು ಮನದ ಹೊಳೆಯಲ್ಲಿ ಹರಿದವೆ.

ಮೋಡವೆಂಬ ಪರದೆ ತಾನೇ ಸರಿದರೆ,
ಕರತಾಡನ ಚಂದಿರನ ಮುಟ್ಟಿದವೆ,
ಮಧುಚಂದ್ರದ ನರ್ತನಕೆ,
ಹೃದಯ ಹಾಕಿದ ತಾಳ!"

"ಮನೋಲ್ಲಾಸಕೆ ಹಾಕಿದ ಗಾಳ,
ಅಗೋ ತಾಳಕ್ಕೆ ತಕ್ಕ ಹಿಮ್ಮೇಳ!"

 


ಸೋಮವಾರ, ಜೂನ್ 9, 2025

'ಇರಬೇಕು ಹುಣ್ಣಿಮೆ ಚಂದಮನಂತೆ'

 

'ಇರಬೇಕು ಹುಣ್ಣಿಮೆ ಚಂದಮನಂತೆ'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಇದ್ದರೆ ಇರಬೇಕು ಹದಿನೈದು ದಿನಕೊಮ್ಮೆ

ಬರುವ ಹುಣ್ಣಿಮೆ ಚಂದಮನಂತೆ

ನೋಡತಿರಬೇಕು ಹದಿನೈದು ದಿನಕೊಮ್ಮೆ

ಮುಖಪುಟದ ಗುಂಪುಗಳ ಸಂತೆ

 

ಇದ್ದರೆ ಇರಬೇಕು ಹದಿನೈದು ದಿನಕೊಮ್ಮೆ

ಏಕಾದಶಿಯ ಫಲಹಾರದಂತೆ

ತೋರುತಿರಬೇಕು ಹದಿನೈದು ದಿನಕೊಮ್ಮೆ

ನಿಮ್ಮ ಸುಖ ದುಃಖಗಳ ಅನುಭವವಂತೆ

 

ನಡುವೆ ಬಿಟ್ಟು ಬಿಡಬೇಕು ಮೊಬೈಲ್ ಚಿಂತೆ

ಋಷಿಮುನಿಗಳ ಘನಘೋರ ತಪಸ್ಸಿನಂತೆ

ಚಿಂತೆಗಳ ಮರೆಯಲು ದಿವ್ಯ ಪರಮೌಷಧಿಯಂತೆ

ಗೆಳೆಯ ಗಳತಿಯರ ಯೋಗಕ್ಷೇಮ ವಿಚಾರಿಸಿದಂತೆ.

ಶುಕ್ರವಾರ, ಜೂನ್ 6, 2025

‘ಚಿಟ್ಟೆ ಕೊಟ್ಟ ನೀತಿ ಪಾಠ’

 


ಚಿಟ್ಟೆ ಕೊಟ್ಟ ನೀತಿ ಪಾಠ’

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ದೆ

ರಸವನು ಹೀರಲು ಚಂದದ ಹೂಗಳ ತರಿಸಿ ಜೋಡಿಸಿ ಇಟ್ಟಿದ್ದೆ

ಹಾಗೇ ಸುಮ್ಮನೆ ಮುಂಜಾನೆ ಮಂಜಲಿ ಸ್ನಾನಕೆ ಹೋಗಿದ್ದೆ

ಹಾಗೇ ಹಾರುತ ತೂರುತ ಬಣ್ಣದ ಹೂಗಳ ಕಂಡು ಬಂದಿದ್ದೆ

ಅಂದದ ಚಿಟ್ಟೆ ಚೆಂದದ ಚಿಟ್ಟೆ ಹೇಳೇ ಸುಮ್ಮನೆ ಏತಕೆ ಹೋಗಿದ್ದೆ

ನಿನ್ನನು ತೋರಿಸೆ ನಲಿಯುವ ಮಕ್ಕಳ ಕರೆದು ಕೂರಿಸಿ ಬಿಟ್ಟಿದ್ದೆ

ಪಕ್ಕದ ಚಲುವೆಯ ಸುಂದರ ವನಕೆ, ನಾನು ಮಾರು ಹೋಗಿದ್ದೆ

ಗಿಡದಲಿ ಬಿಟ್ಟಿಹ ತಾಜಾ ಹೂವಿನ ರಸವನು ಸವಿಯಲು ಬಯಸಿದ್ದೆ

ಓಹೋ ಚಿಟ್ಟೆ ಹೌದೇ ಚಿಟ್ಟೆ ಮಕ್ಕಳ ಕೂಡಿ ನಾನೂ ಅಲ್ಲಿಗೆ ಬರುತಿದ್ದೆ

ಗೆಳತಿಯ ಸಂಗಡ ಕುಣಿಯುತ ನಲಿಯುತ, ನಾನು ತಿಳಿಸಲು ಮರೆತಿದ್ದೆ

ಹೌದೇ, ಚಿಟ್ಟೆ ರಂಗಿನ ಬಟ್ಟೆ, ಬೇಗನೇ ಹೇಳೇ, ಇನ್ನೇನು ಮಾಡಿದ್ದೆ

ಹೊರಗೇ ಹಾರುತ, ಬಳಗವ ಸೇರಿ ಗೆಳೆಯರ ಕೂಡಿ ಹಾಡನು ಹಾಡಿದ್ದೆ

ರೆಕ್ಕೆಯ ಬಡಿದು ಮೇಲಕೆ ಏರಿ ನೀಲಿಯ ಬಾನಲಿ ನೃತ್ಯವ ಮಾಡಿದ್ದೆ

ಬಳಗವ ತೊರೆದ, ಗೆಳೆಯರ ಕಾಣದ, ನಿಮ್ಮನು ನೋಡಿ ಬೇಸರ ಪಟ್ಟಿದ್ದೆ

ಜಾಣ ಚಿಟ್ಟೆಯ ನೀತಿಯ ಪಾಠವ ಕೇಳುತ, ನಾನೂ ಬದಲಾಗಿ ಹೋಗಿದ್ದೆ

ಬಳಗವ ಕರೆದು ಗೆಳೆಯರ ಸೆಳೆದು ಹಾಡುತ ಪಾಡುತ ನಲಿವುದ ಕಲಿತಿದ್ದೆ.

ಗುರುವಾರ, ಜೂನ್ 5, 2025

'ಇದ್ದರೆ ಹೀಗಿರಬೇಕಂತೆ'




 'ಇದ್ದರೆ ಹೀಗಿರಬೇಕಂತೆ'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ


ಇರಬೇಕು ಇರುವಂತೆ ಒಬ್ಬ ಬಾ ಸಂಗಾತಿಯಂತೆ

ಹಬ್ಬ ಇರಲಿ ದಿಬ್ಬಣ ಬರಲಿ ಹುಬ್ಬ ಏರಿಸದಂತೆ

ಶ್ರೀಕೃಷ್ಣನ ನೆನೆದ ಮಹಾತಾಯಿ ದ್ರೌಪದಿಯಂತೆ

ಅಕ್ಷಯ ಪಾತ್ರೆ ಪಡೆದು ಉದರ ತೃಪ್ತಿ ಪಡಿಸಿದಂತೆ

ನಳನ ದಮಯಂತಿಯಂತೆ ಸತ್ಯವತಿ ಸಾವಿತ್ರಿಯಂತೆ

ಪತಿಯ ಪ್ರಾಣವನೇ ತಾ ಗೆದ್ದ ಸಾಧ್ವಿ ಮಣಿಗಳಿದ್ದಂತೆ

ಇರಬೇಕು ಇರುವಂತೆ ಚಿಂತೆಯನೆಪ್ಪಳಿಸಿ ಬಿಟ್ಟಂತೆ

ಕೋಶದಿಂದ ಕಿತ್ತೊಗೆದ ಚಿಂತೆ ಸುಟ್ಟು ಬೂಧಿ ಆದಂತೆ

ಸೋಮವಾರ, ಜೂನ್ 2, 2025

'ಕನ್ನಡಕೆ ಉಂಟು ಅಂಕಿಗಳ ನೆಂಟು'





 'ಕನ್ನಡಕೆ ಉಂಟು ಅಂಕಿಗಳ ನೆಂಟು'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ


ಒಂದು, ಎರಡು, ಮೂರು

ಕನ್ನಡವೇ ನನ್ ತವರು

ನಾಕು, ಐದು, ಆರು

ಕನ್ನಡವೇ ನನ್ ಉಸಿರು

ಏಳು, ಎಂಟು, ಒಂಬತ್ತು

ಕನ್ನಡವೇ ನನ್ ಸಾಕಿತ್ತು

ಹತ್ತು, ಹತ್ತು, ಹತ್ತು

ಕನ್ನಡವೇ ನನ್ ತುತ್ತು

ಹತ್ತು, ಹತ್ತು, ಹತ್ತು

ಕನ್ನಡವೇ ನನ್ ಮುತ್ತು

ಹತ್ತು, ಹತ್ತು, ಹತ್ತು

ಕನ್ನಡವೇ ನನ್ ಸ್ವತ್ತು


ಕನ್ನಡ ಬಾವುಟ ಮೇಲೆತ್ತು

ಕನ್ನಡ ಅಲ್ಲವೇ ತಾಕತ್ತು

'ಕವನಗಾತೆ'

 


 

'ಕವನಗಾತೆ'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

ತೂಕ ತಾಳವಿದ್ದರೆ ಕವನ ಒಂದು ಹವನ

ರೂಪ ರೇಷೆ ಇದ್ದರೆ ಅದೊಂದು ಭವ್ಯ ಭವನ

ಭಾವ ಭಕ್ತಿ ಇದ್ದರೆ ಸಿಗುವುದೊಂದು ನಮನ

ಇದಾವುದೂ ಇಲ್ಲದಿರೆ ಬರಿದೆ ಒಂದು ಮಸಣ.

 

"Leveraging Diversity: A Practical Approach to Public Holidays in Multicultural Societies".

  "Leveraging Diversity: A Practical Approach to Public Holidays in Multicultural Societies" .   India , like many multicultur...