ಬಾಲಕೃಷ್ಣ ಅಂದು ಇಂದು
ಅಂಗಳದಲ್ಲಿ ಆಡುತ್ತಾ ಮಣ್ಣ ಮುಕ್ಕಿದೆಯೇನೋ
ತೆರೆ ನಿನ್ನ ಬಾಯಿ ಕಕ್ಕೆಂದಳು ಅಮ್ಮ
ಗಾಬರಿಯಾಗಿ
ಮುಸುನಗುತ ಬಾಲ, ತೆರೆಯುತ್ತಾ ಬಾಯಿ
ನೋಡೆಂದ
ವಿಶ್ವವನೇ ಕಂಡು ನೋಡಿದಳಾ ತಾಯಿ
ಬೆರಗಾಗಿ
ಮುಟ್ಟಬ್ಯಾಡವೋ ಕಂದ, ನೋಡದಿರೆಲೋ
ಕಂದ
ನೀನಿನ್ನೂ ಸಣ್ಣವ, ದೊಡ್ಡವನಾಗುವ
ತನಕ ಮೊಬೈಲಾ
ನಸುನಗುತ ಬಾಲ, ಒತ್ತುತ್ತಾ, ಕರೆದು ಅವ್ವ ನೋಡೆಂದ
ವಿಶ್ವವನೇ ಕಂಡು ಮುತ್ತಿಟ್ಟಲು ತಾಯಿ
ಹಿಚಕುತ್ತಾ ಗಲ್ಲಾ.
ರಚನೆ : ಡಾ. ಪ್ರಭಾಕರ್ ಬೆಳವಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ