ಕಾಲದ ಮಹಿಮೆ
image courtesy Pinterest
ಬಿಸಿಲಿನ ತಾಪಕೆ ಅದರುತ
ಹಾರಿ
ಕಡಲಿನ ನೀರು ನಭವನು
ಸೇರಿ
ಧೂಳಿನ ಕಣಗಳು
ಮೋಡದಿ ತೂರಿ
ಮಳೆಯೇ ಸುರಿದಿದೆ ನೋಡದೋ
ಜಾರಿ
ಬತ್ತಿದ ಗದ್ದೆಗೆ
ನೀರಿನ ಹರಿವು
ಭತ್ತದ ತೆನೆಗೆ
ನಲಿವೋ ನಲಿವು
ಬಿತ್ತಿದ ರೈತನು
ಮರೆತನು ನೋವು
ಭತ್ತದ ಹೊಟ್ಟನು
ಮೆಲುಕಿದೆ ಗೋವು
ರೈತನ ಕಣಜ
ತುಂಬಿತ್ತು
ಬಂಡಿಯು ಸಂತೆಗೆ
ಬಂದಿತ್ತು
ವರುಣಗೆ ಪೂಜೆಯು
ಸಂದಿತ್ತು
ನೋವಿನ ಛಾಯೆ
ನಂದಿತ್ತು
ಬೀದಿಯ ಬದಿಯ
ವ್ಯಾಪಾರಿ
ಹರಾಜು ಹಾಕಿದ ನಗೆ
ಬೀರಿ
ಬಂಗಲೆ ಭೂಪ ಕೊಂಡುಂಡ
ದುಡಿದಾ ರೈತ
ನಂಜುಂಡ
ರಚನೆ: ಡಾ. ಬೆಳವಾಡಿ ಪ್ರಭಾಕರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ