ಚಿಟ್ಟೆ ಚಿಟ್ಟೆ
image courtesy Pinterest
ಬೆರಳಿನ ಮುಂದೆ
ಗೋಲಿಯು ಇತ್ತು
ನನ್ನಯ ಗಮನ ಗುರಿಯ
ಮೇಲಿತ್ತು
ಎದುರಿಗೆ ಇದ್ದವು
ಹಲವಾರು ಗೋಲಿ
ನನಗೆ ಬೇಕಿತ್ತು ಆ ಬಣ್ಣದ
ಗೋಲಿ
ಬೆರಳನು ಬಾಗಿಸಿ
ರೊಯ್ಯನೆ ಬಿಟ್ಟೆ
ಹಾರುತ ಬಂದಿತು
ಬಣ್ಣದ ಚಿಟ್ಟೆ
ಗೋಲಿಯ ರಭಸಕೆ ತಗುಲಿತು
ರೆಕ್ಕೆ
ಅಳುತಲಿ ನಿಂದೆ
ದುಃಖವು ಉಕ್ಕೆ
ತಿಳಿಯದೆ ಆಯಿತೆ ಚಿಟ್ಟೆಗೆ
ಪೆಟ್ಟು
ಕ್ಷಣದಲಿ ಕಂಡೆನು
ಚಿಟ್ಟೆಯ ಗುಟ್ಟು
ಬಿದ್ದಿಹ ಚಿಟ್ಟೆ ನೋಡದೋ
ಪಕ್ಕ
ನೋಡಲು ಹೋದರೆ ಹಾರಿತೆ ಠಕ್ಕ!
ರಚನೆ: ಡಾ. ಬೆಳವಾಡಿ ಪ್ರಭಾಕರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ