ಶುಕ್ರವಾರ, ನವೆಂಬರ್ 4, 2022

ತುಳಸೀ ಕೃಷ್ಣ

 ತುಳಸೀ ಕೃಷ್ಣ


ಕೃಷ್ಣನ ಪೂಜಿಸಿ
ಕೃಷ್ಣಗೆ ವಂದಿಸಿ
ಹೃದಯದಿ ಕೃಷ್ಣನ ಬಂಧೀಸಿ.

ವನಿತೆಯರೆಲ್ಲರೂ
ವಂದೀಸಿರೆಲ್ಲರೂ
ಕೃಷ್ಣನ ತೂಗುತಾ ತಲೆಬಾಗಿ.

ತುಳಸೀ ಮಾತೆಯ
ಪೂಜೆಯ ಮಾಡುತ
ಮುರಳೀ ಲೀಲೆಗೆ ಮನ ತೂಗಿ.

ಕೃಷ್ಣನ ಪೂಜಿಸಿ
ಕೃಷ್ಣಗೆ ವಂದಿಸಿ
ಹೃದಯದಿ ಕೃಷ್ಣನ ಬಂಧೀಸಿ.

ದೀಪವ ಬೆಳಗುತ
ಗೀತೆಯ ಪಾಡುತ
ರಾಧೆಯರಾಗಿ ಘನ ಶ್ಯಾಮಗಾಗಿ.

ನಲಿಯುವನವನು
ಒಲಿಯುವನವನು
ಭಕ್ತರ ಅಗಣಿತ ಅನುರಾಗಿ.

ನಂದ ಕಿಶೋರ
ಚಿತ್ತ ಚಕೋರ
ಬರುವನು ಭಕ್ತರ ಬಳಿ ಸಾಗಿ.

ಕೃಷ್ಣನ ಪೂಜಿಸಿ
ಕೃಷ್ಣಗೆ ವಂದಿಸಿ
ಹೃದಯದಿ ಕೃಷ್ಣನ ಬಂಧೀಸಿ
ಹೃದಯದಿ ಕೃಷ್ಣನ ಬಂಧೀಸಿ
ಹೃದಯದಿ ಕೃಷ್ಣನ ಬಂಧೀಸಿ.

ರಚನೆ :
ಡಾ. ಪ್ರಭಾಕರ್ ಬೆಲವಾಡಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಚುಟುಕು ರಾಮಾಯಣ

  ಚುಟುಕು ರಾಮಾಯಣ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ   ರಾಮನು ಹುಟ್ಟಿದ ಅಯೋಧ್ಯೆ ಧಾಮ ದಾಸರು ಹಾಡಲು ರಾಮ ನಾಮ ರಘುಪತಿ ರಾಘವ ರಾಜಾ ರಾಮ ಮಾಡುವ ಭಜನೆ ಜೈ ಸೀಯ...