ಶುಕ್ರವಾರ, ಆಗಸ್ಟ್ 19, 2022

ಜೈ ಜನಾರ್ಧನ, ಕೃಷ್ಣ




















ಈ ಜಗವೇ ವಿಷ್ಣುವಿನ ಅಂಗ 
ಅವರವರ ಅಂತರಂಗ 
ಅನುರೂಪ ಅವ ಬಹಿರಂಗ 
ಅವನಿಗೆ ಅಗೋ ಅಲ್ಲಿಹನು ರಂಗ  
ಇವನಿಗೆ ಇಗೋ ಇಲ್ಲಿ ಪಾಂಡುರಂಗ 
ಇಲ್ಲೊಬ್ಬನಿಗೆ ಮುಕುಂದ 
ಅಲ್ಲೊಬ್ಬನಿಗೆ ಆನಂದಕಂದ 
ನಂದಗೋಕುಲಕೆ ಅವ ಗೊಲ್ಲ 
ಅಲ್ಲಲ್ಲ ಗೋಪಿಕೆಯರ ನಲ್ಲ 
ಇರಬಹುದೇ ಇವ ಶ್ರೀಹರಿ 
ಹೌದೌದು ಅವನೇ ಮುರಾರಿ 
ಅತ್ತ ಹೋದರೆ ಪದ್ಮನಾಭನ ದರ್ಶನ 
ಇತ್ತ ಬಂದರೆ ಶ್ರೀರಂಗ, ಅನಂತಶಯನ 
ರಾಮನೋ, ಕೃಷ್ಣನೋ ಎನಿತು ಪರಿ 
ದಶಾವತಾರಿ ಅಯ್ಯೋ ಅದಕು ಮೀರಿ 
ಕಂಬದೊಳಗಿಂದ ನರಸಿಂಹನಾಗಿ ಬಂದ 
ನೀರಿನೊಳಗೆ ಮೀನಾಗಿ ಬೆಳೆಯುತ್ತಾ ನಿಂದ 
ಒಮ್ಮೆ ವಾಮನ, ದರ್ಪ ಮರ್ದನ 
ಒಂದು ಹೆಜ್ಜೆಯಲಿ ವಿರಾಟ ದರ್ಶನ 
ಅಸುರ ಕುಲದ ಸಂಹಾರಿ 
ಸಂಸ್ಕಾರೀ, ಚೈತನ್ಯ ಮನೋಹಾರಿ 
ಇಂದಲ್ಲವೇ ಅವನ ಜನುಮದಿನ 
ಬನ್ನಿ ಮಾಡೋಣ ಅವನ ನಮನ 
ಸುಧಾಮನ ಮಿತ್ರ, ಯಶೋಧೆಯ ಪುತ್ರ 
ಜೈ ಜನಾರ್ಧನ ಕೃಷ್ಣ, ಜೈ ಜನಾರ್ಧನ ಕೃಷ್ಣ 

 ರಚನೆ: ಡಾ. ಪ್ರಭಾಕರ್ ಬೆಲವಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ದಾಸರ ಸಂತತಿ ನೋಡಲ್ಲಿ

  ದಾಸರ ಸಂತತಿ ನೋಡಲ್ಲಿ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ   ದಾಸರಿವರೊ ದಾಸರ ದಾಸರಿವರೊ ವಿಠ್ಠಲ ಕಳಿಸಿಹ ರಾಮಧೂತರಿವರೊ II   ತಂಬೂರಿ ಮೀಟುತ ಪದಗಳ ಹಾಡುತ...