ಮಂಗಳವಾರ, ಸೆಪ್ಟೆಂಬರ್ 27, 2022

ಭಜ ಗೋವಿಂದಂ ಪಡೆ ಆನಂದಂ


ಭಜ ಗೋವಿಂದಂ ಪಡೆ ಆನಂದಂ  

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ

ಸಾಯುವ ಕಾಲ ಸನಿಹಕೆ ಬರುತ

ರಕ್ಷಿಪುದೇನೋ ನಿನ್ನೀ ಜಾತಿ ಮತ.  1

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ಆರೋಗ್ಯದಲಿ ಏರುಪೇರಾದಾಗ

ರಕ್ಷಿಪುದೆಮಗೆ ವೈದ್ಯನ ಘನತೆ

ಅಂಥಹ ಸಮಯದಿ ಜಾತಿಯ ಚಿಂತೆ

ಮಾಡಲು ಏರುವೆ ಮೂಢ ನಿನ್ನ ಚಿತೆ.  2

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ಹಾಸಿಗೆ ಹಿಡಿದಿರೆ ದಾದಿಯ ಮಮತೆ

ನಾಲಿಗೆ ನುಡಿವ ನಿತ್ಯ ಭಜನೆ ಗೀತೆ

ಇವುಗಳೇ ನಿನ್ನ ಉಳಿಸುವ ಖಾತೆ

ಖಂಡಿತ ಅಲ್ಲ ನಿನ್ನ ಜಾತಿಯ ಗಾಥೆ.  3

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ವಿದ್ಯೆಯ ಕಲಿಸುವ ಗುರುವಿನ ನಿಪುಣತೆ

ಜೊತೆಗೇ ತೋರುವ ಆತನ ಮಮತೆ

ನಮಗದೇ ಅಮೃತ ನಮಗದೇ ಸಂಹಿತೆ

ಎತ್ತಲು ಏಕೇ ಆತನ ಜಾತಿಯ ಕ್ಯಾತೆ.  4

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ದಾನವ ಮಾಡುತ ದೀನರ ಕಾಯುತ

ದೇವರ ಪಾದಕೆ ಮುಡಿಯನು ಬಾಗುತ

ವೇದ ಪುರಾಣಗಳ ನಿತ್ಯವೂ ಓದುತ

ಪಡೆ ಆನಂದಂ ಜಾತಿಯ ಮರೆಯುತ.  5

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ಆಡಂಬರಕೆ ವಿದಾಯ ಹೇಳುತ

ದಿಗಂಬರ ಜೀವನ ನಿತ್ಯವೂ ನಡೆಸುತ

ಮೆರೆಯುತ ನಡೆವ ಸೊಕ್ಕನು ಬಿಟ್ಟು

ನೆಮ್ಮದಿ ಜೀವನ ನಡೆಸುವ ಗುಟ್ಟು.  6

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ಜೀವನವೆಂಬುದು ಮಿಶ್ರಿತ ಫಲವು

ಅಲೆಗಳ ಮೇಲಿನ ಗುಳ್ಳೆಯ ತರವು

ಸದ್ಗುಣವೆಂಬುದು ರತ್ನದ ಸರವು

ದುರ್ಗುಣವೋ ಕಾರ್ಕೋಟದ ವಿಷವು .  7

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ಆಸೆ ಅಸೂಯೆ ಕಾರ್ಮೋಡದ ಛಾಯೆ

ಮದ ಮಾತ್ಸರ್ಯಗಳೇ ಕಾಡುವ ಮಾಯೆ

ನುಡಿ ಮುತ್ತುಗಳಾಡದ ಅದುವೇ ಬಾಯೇ

ಕೊಳೆತು ನಾರುವ ಆ ಕುಂಬಳ ಕಾಯೇ.  8

 

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

ಭಜ ಗೋವಿಂದಂ, ಪಡೆ ಆನಂದಂ

ಆನಂದಂ ಪಡೆ ಮೂಢ ಮತೇ.

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

9448488910 

Grateful to Pinterest for photo.

ಛಾಯಾಚಿತ್ರಕ್ಕೆ ಪಿಂತೆರೆಸ್ಟ್ ಅವರಿಗೆ ಕೃತಜ್ಞತೆಗಳು   

ಚುಟುಕು ರಾಮಾಯಣ

  ಚುಟುಕು ರಾಮಾಯಣ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ   ರಾಮನು ಹುಟ್ಟಿದ ಅಯೋಧ್ಯೆ ಧಾಮ ದಾಸರು ಹಾಡಲು ರಾಮ ನಾಮ ರಘುಪತಿ ರಾಘವ ರಾಜಾ ರಾಮ ಮಾಡುವ ಭಜನೆ ಜೈ ಸೀಯ...