ಶ್ರೀ ಶ್ರಾವಣ ಮಂಗಳ ಗೌರೀ ಪೂಜಾ ವಿಧಾನ
ಶ್ರೀ ಮಂಗಳ ಗೌರಿ ಪೂಜೆಗೆ ಸಿಧ್ಧತೆಗಳು
ಪೂಜೆಗೆ ಆಡಂಬರ, ಪ್ರದರ್ಶನಗಳಿಗಿಂತ ಮುಖ್ಯವಾಗಿ ನಿಷ್ಥೆ, ಭಕ್ತಿ ಪ್ರಾಧಾನ್ಯ. ಜೊತೆಗೆ ನಿರ್ವಿಘ್ನವಾಗಿ ಅಡಚಣೆಗಳಿಲ್ಲದಂತೆ ನಡೆಸುವುದೂ ಅತ್ಯಮೂಲ್ಯ. ಆದ್ದರಿಂದ ಸಕಲ ಸಿಧ್ಧತೆಗಳನ್ನೂ ಮುಂಚೆಯೇ ಮಾಡಿಕೊಳ್ಳುವುದು ಅನಿವಾರ್ಯ. ಇದರಿಂದ ಸುಗುಮವಾಗಿ ಕಾರ್ಯ ನಡೆಯುವುದು. ಕಾಲ ಹಾಗೂ ಪ್ರದೇಶಕ್ಕನುಗುಣವಾಗಿ ಪೂಜಾ ದ್ರವ್ಯಗಳನ್ನು ಬಳಸಬಹುದು. ಸಾಮಾನ್ಯವಾಗಿ ಬಳಸುವ ಸಲಕರಣೆಗಳು ಕೆಳಗಿನಂತಿವೆ.
ಸ್ನಾನ, ಮುಗಿಸಿ, ಹಣೆಗೆ ಕುಂಕುಮವನ್ನು ಇಟ್ಟುಕೊಂಡು ಶುಭ್ರವಾದ ವಸ್ತ್ರಗಳನ್ನು ಧರಿಸಿ ಪೂಜಾ ಮಂಟಪವನ್ನು ಸ್ವಚ್ಚವಾದ ಬಟ್ಟೆಯಲ್ಲಿ ವರೆಸಿ ಅದರ ಮೇಲೆ ಅಕ್ಕಿ ಅಥವಾ ಗೋಧಿಯನ್ನು ಹರಡಿ ಕಳಶ ಮತ್ತು ದೇವತಾ ಮೂರ್ತಿಯನ್ನು ಇಟ್ಟುಕೊಳ್ಳಬೇಕು. ಮಂಟಪವನ್ನು ಹಿಂದಿನ ದಿನವೇ ಸಿಧ್ಧ ಪಡಿಸಿಕೊಂಡರೆ ಅನುಕೂಲ.
ಸಲಕರಣೆಗಳು
1.
ಅರಿಶಿನ
2.
ಕುಂಕುಮ
3.
ಮಂತ್ರಾಕ್ಷತೆ
4.
ಚಂದನ
5.
ಗಂಧ
6.
ತಟ್ಟೆಗಳು
7.
ರವಿಕೆಯ ಕಣ (ಹಸಿರು,ಕೆಂಪು)
8.
ಉದ್ಧರಣೆ (ಪಂಚ ಪಾತ್ರೆ)
9.
ಅರ್ಘ್ಯ ಪಾತ್ರೆ
10.ಕಳಶದ ಚಂಬುಗಳು
11.ಕುಳಿತುಕೊಳ್ಳಲು ಮಣೆ ಅಥವಾ ಚಾಪೆ ಅಥವಾ ಮ್ಯಾಟು
12.ಹಸುವಿನ ಹಸಿ ಹಾಲು
13.ಬೆಣ್ಣೆ ಕಾಯಿಸಿದ ತುಪ್ಪ (ಹಸುವಿನಿನ ಹಾಲಿನಿಂದ ತಯಾರಿಸಿದ್ದಾದರೆ ಉತ್ತಮ )
14.ಮೊಸರು
15.ದೀಪದ ಎಣ್ಣೆ
16.ಸಕ್ಕರೆ
17.ಜೇನುತುಪ್ಪ
18.ಪಂಚಾಮೃತ (ಮೇಲೆ ತೋರಿಸಿದ ಹಾಲು,ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ ಇವುಗಳನ್ನು ಸ್ವಲ್ಪ ಸ್ವಲ್ಪ ಪ್ರತ್ಯೇಕವಾಗಿ ಮಿಶ್ರಣ ಮಾಡಿಮಾಡಿಟ್ಟುಕೊಳ್ಳುವುದು)
19.ತೆಂಗಿನ ಕಾಯಿನ ಎಳನೀರು
20.ಗೆಜ್ಜೆವಸ್ತ್ರ ಜೊತೆ
21.ಮೂರೆಳೆ ಜನಿವಾರ
22.ಕರ್ಪೂರ
23.ಮಾವಿನ ಎಲೆ, ಬಾಳೆ ಕಂಬ, ತೋರಣ, ಮಂಟಪದ ಅಲಂಕಾರಿಕ ವಸ್ತುಗಳು
24.ವೀಳ್ಯದ ಎಲೆ
25.ಅಡಕೆ
26.ಅಗರಬತ್ತಿ/ಊದುಬತ್ತಿ (ಧೂಪವಿದ್ದರೆ ಉತ್ತಮ)
27.ಪರಿಮಳ ದ್ರವ್ಯ
28.ವಿವಿಧ ಬಗೆಯ ಬಿಡಿ ಹೂವುಗಳು ಮತ್ತು ಎರಡು ಹೂಮಾಲೆ,
29.ಕನಿಷ್ಠ ೨೧ ಗರಿಕೆ ಹುಲ್ಲು (ದೂರ್ವ)
30.ಪತ್ರೆಗಳು (ವಿವಿಧ ರೀತಿಯ ಎಲೆಗಳು) , ತುಳಸಿ ದಳಗಳು ಇರಲೇ ಬೇಕು.
31.ತುಪ್ಪದಲ್ಲಿ ನೆನೆಸಿದ ಹತ್ತಿಯ ಬತ್ತಿಗಳು ( ಕೆಲವು ಮೂರು, ಕೆಲವು ಐದು ಜೋಡಿಯಾಗಿ )
32.ತಿಳಿನೀರಿನಲ್ಲಿ ಅರಿಶಿನ ಅಥವಾ ಕುಂಕುಮ (ಪದ್ದತಿಯಂತೆ) ಕದಡಿ ಆರತಿಗೆ ಇಟ್ಟುಕೊಳ್ಳಿ
33.ತೆಂಗಿನಕಾಯಿ
34.ಬಾಳೆಹಣ್ಣು ಸಾಕಷ್ಟು
35.ಖರ್ಜೂರ
36.ದ್ರಾಕ್ಷಿ
37.ಐದು ರೀತಿಯ ಹಣ್ಣುಗಳು
38.ಬಾಳೆ ಎಲೆ
39.ದಕ್ಷಿಣೆ
40.ದೀಪದ ಕಂಬಗಳು
41.ಬೆಂಕಿ ಪೊಟ್ಟಣ
42.ಗೌರಿಯ ಮಣ್ಣಿನ ಪ್ರತಿಮೆ (ಚಿಕ್ಕದಾದರು ಭಿನ್ನವಾಗಿರಬಾರದು) ಅಥವಾ ಅರಿಶಿನದಲ್ಲಿ ಮಾಡಿದ್ದು.
43.ಹದಿನಾರು ಗಂಟು ಹಾಕಿದ ಹದಿನಾರು ಎಳೆಯ ಅರಿಶಿನ ಹಚ್ಚಿದ ಹತ್ತಿಯ ಹಸಿ ದಾರ
44.ತಂಬಿಟ್ಟಿನ ಕದರಾರತಿ
45.ಕೆಲವರು ಹದಿನಾರು
ಸೊಡಲಿನ ತುಪ್ಪದ ದೀಪವನ್ನು ಇಡುತ್ತಾರೆ.
46.ಘಂಟೆ
47.ಶುದ್ಧವಾದ ನೀರು
48.ಮಹಾ ನೈವೇದ್ಯಕ್ಕೆ ವಿವಿಧ ಬಗೆಯ ಭಕ್ಷ್ಯಗಳು (ಹೋಳಿಗೆ ಇಲ್ಲವಾದರೆ ಬೆಲ್ಲದ ಅನ್ನ ಹುಗ್ಗಿಯ ತರಹ ಜೊತೆಗೆ ವಿವಿಧ ಭಕ್ಷ್ಯಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ – ಕನಿಷ್ಠ ಐದು ತರಹ)
49.ಅಲಂಕಾರಕ್ಕಾಗಿ ಬಳೆ, ಬಿಚ್ಚೋಲೆ, ಕರಿಮಣಿ ಸರ, ಬಾಚಣಿಗೆ, ಕನ್ನಡಿ ಮಂಟಪದ ಮೇಲೆ ಇಡಲು.
50.ಮೊರದ ಬಾಗಿನಗಳು* (ವಿವಿಧ ವಸ್ತುಗಳೊಂದಿಗೆ) (ಒಟ್ಟು ಐದು, ಒಂದು ಶ್ರೀ ಮಂಗಳ ಗೌರಿಗೆ, ಉಳಿದದ್ದು ನಾಲ್ಕು ಮುತ್ತೈದೆಯರಿಗೆ)
51.ಪುಟ್ಟ ಬೆಳ್ಳಿಯ ಗೌರಿಯ ವಿಗ್ರಹ ಮತ್ತು ಅದನ್ನಿಡಲು ತಟ್ಟೆ
52.ಅನುಕೂಲವಿದ್ದರೆ ಕಳಶಕ್ಕೆ ಹಾಕಲು ಬಂಗಾರದ ಸರ
53.ಗಣಪತಿ ವಿಗ್ರಹ ಪುಟ್ಟದು
54.ಹಲಗಾರತಿ
55.ದೇವರ ವಿಗ್ರಹವನ್ನು ಒರೆಸಲು ಶುಭ್ರವಾದ ವಸ್ತ್ರ
56.ಮಧ್ಯೆ, ಮಧ್ಯೇ ಕೈ ಒರೆಸಿಕೊಳ್ಳಲು ಒಂದು ಕರವಸ್ತ್ರ.
·
ಮೊರದ ಬಾಗಿನದಲ್ಲಿ ಸಾಮಾನ್ಯವಾಗಿ ಅಣಿ ಮಾಡುವ ವಸ್ತುಗಳು:
ಪ್ರತಿಯೊಂದು ಬಾಗಿನಕ್ಕೂ ಎರಡು ಹೊಸದಾದ ಬಿದರಿನ ಮೊರಗಳು (ಐದು ಜೊತೆ). ಲಭ್ಯವಿಲ್ಲದಿದ್ದರೆ ಸ್ವಲ್ಪ ಮೊರಕ್ಕೆ ಹತ್ತಿರವಾದ ಯಾವುದೇ ವಸ್ತು. ಎರಡೂ ಮೊರಗಳ ಮೇಲ್ಭಾಗದಲ್ಲಿ ಅಡ್ಡವಾಗಿ X ರೂಪದಲ್ಲಿ ಅರಿಶಿನದಿಂದ ಕಾಣಿಸುವಂತೆ ಗೆರೆಗಳನ್ನು ಎಳೆಯುವುದು. ಅರಿಶಿನ, ಕುಂಕುಮ, ಚಂದ್ರ, ಅಕ್ಷತೆ, 16 ಗೆಜ್ಜೆ ವಸ್ತ್ರ, ೧೦ ಹೂಬತ್ತಿ, ೧೦ ಮಂಗಳಾರತಿ ಬತ್ತಿ, ಊದುಬತ್ತಿ, 12 ಹಸಿರು ಬಳೆ, ಪುಟ್ಟ ಕರಿ ಬಳೆ, ಬಿಚ್ಚೋಲೆ, ಬಾಚಣಿಗೆ (ಮರದ್ದಿದ್ದರೆ ಚೆನ್ನ), ಕನ್ನಡಿ, ಕಾಡಿಗೆ, ಕಪ್ಪು ಮಣಿ, ಸಾಧ್ಯವಾದರೆ ಸೀರೆ ಇಲ್ಲದಿದ್ದರೆ ರವಿಕೆ ಕಣ, ನವ ಧಾನ್ಯಗಳಾದ ಕಡಲೆ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ತೊಗರಿ ಬೇಳೆ, ಗೋಧಿ ಅಥವಾ ರವೆ, ಅಕ್ಕಿ, ಬೆಲ್ಲ, ಉಪ್ಪು, ಹಣ್ಣುಗಳು, ವೀಳ್ಯದೆಲೆ, ಅಡಕೆ, ಅನುಕೂಲವಿದ್ದಷ್ಟು ದಕ್ಷಿಣೆ, ತೆಂಗಿನಕಾಯಿ, ಘಮಘಮಿಸುವ ಹೂವು ಬಾಗಿನ ಕೊಡುವ ದಿನ ಇಟ್ಟರೆ ಬಾಡಿರುವುದಿಲ್ಲ. ಇತ್ತೀಚಿಗೆ ಬಳೆ, ಬಿಚ್ಚೋಲೆ, ಕರಿಮಣಿ ಸರ ಮುಂತಾದವುಗಳು ಗ್ರಂಧಿಗೆ ಅಂಗಡಿಗಳಲ್ಲಿ ಒಟ್ಟಿಗೆ ಪ್ಯಾಕೆಟ್ನಲ್ಲಿ ಸಿಗುತ್ತವೆ. ಹೊಸದಾದ ಮೊರಗಳನ್ನು ಆದಷ್ಟೂ ಮಂಗಳವಾರ ಮತ್ತು ಶುಕ್ರವಾರ ಬಿಟ್ಟು ಉಳಿದ ದಿನಗಳಲ್ಲಿ ಸ್ವಚ್ಚವಾದ ನೀರಿನಿಂದ ತೊಳೆದಿಟ್ಟುಕೊಳ್ಳುವುದು/ಹಸಿ ಬಟ್ಟೆಯಿಂದ ಒರೆಸಿಟ್ಟುಕೊಳ್ಳುವುದು ಉತ್ತಮ. ಇವೆಲ್ಲವನ್ನೂ ಬಿಡಿಬಿಡಿಯಾಗಿ ಪ್ಯಾಕೆಟ್ಟುಗಳಲ್ಲಿ ಅಥವಾ ಡಬ್ಬಿಗಳಲ್ಲಿ ಅಣಿ ಮಾಡಿಕೊಂಡರೆ ಲಕ್ಷಣವಾಗಿ ಕಾಣುತ್ತದೆ. ಈ ವಸ್ತುಗಳನ್ನೆಲ್ಲ ಮೊರದಲ್ಲಿ ಬಾಳೆ ಎಲೆ ಅಥವಾ ಅಂದವಾದ ಬಣ್ಣದ ಹಾಳೆಯನ್ನು ಹರಡಿ ಹೊಂದಿಸುವುದು.
ಈಗಿನ ದಿವಸಗಳಲ್ಲಿ ಮೊರದ ಬದಲು ಪ್ಲಾಸ್ಟಿಕ್ ಬುಟ್ಟಿ, ಡಬ್ಬಿ, ಹೀಗೇ ಅಲಂಕಾರಿಕ ಮುಚ್ಚಳವಿರುವ
ವಸ್ತುಗಳನ್ನು ಉಪಯೋಗಿಸುತ್ತಿದ್ದಾರೆ. ಇವೆಲ್ಲಾ ನಿಮ್ಮ ಅನುಕೂಲಕ್ಕೆ ಬಿಟ್ಟದ್ದು.
[ವಿ. ಸೂ.: ಮೊದಲ ವರ್ಷ ಐದು,
ಎರಡನೇ ವರ್ಷ ಹತ್ತು ಹೀಗೆ ಪ್ರತಿ ವರುಷ ಬಾಳೇಹಣ್ಣಿನ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಬಹುದು.]
[ಅನುಕೂಲವಿದ್ದವರು ಕೆಲವು ಪೂಜಾ ಪುಸ್ತಕಗಳನ್ನೂ ಇಟ್ಟಿರುತ್ತಾರೆ.]
ಪೂಜಾ ಪ್ರಾರಂಭ
ಪೂಜಾ ಸ್ಥಳವನ್ನು ಸ್ವಚ್ಚವಾಗಿ ವರೆಸಿ, ಲಕ್ಷಣವಾಗಿ ರಂಗೋಲಿ ಬಿಡಿಸುವುದು.
(ಅರಿಶಿನದ ಗೌರಿಯನ್ನು ಮಂಟಪದ ಮೇಲೆ ಒಂದು ಬಾಳೆ ಎಲೆ ಅಥವಾ ತಟ್ಟೆಯಲ್ಲಿ ನುಚ್ಚಿರದ ಅಕ್ಕಿಯನ್ನು ಹರಡಿ ಅದರ ಮೇಲೆ ಇಡುವುದು. ಕೆಲವರು ಮಣ್ಣಿನ ಅಥವಾ ಲೋಹದ ವಿಗ್ರಹವನ್ನು ಇಡುತ್ತಾರೆ. ಜೊತೆಗೆ ಇನ್ನೊಂದು ತಟ್ಟೆಯಲ್ಲಿ ನಿಮ್ಮ ಮನೆಯಲ್ಲಿರುವ ಬೆಳ್ಳಿ ಅಥವಾ ಪಂಚಲೋಹದ ಮೂರ್ತಿಯನ್ನು ನಿಮ್ಮ ಮುಂದೆ ಕೆಳ ಬಾಗದಲ್ಲಿ ಸ್ವಲ್ಪ ಅಕ್ಷತೆ ಹಾಕಿ ಒಂದು ಸಣ್ಣ ಮಣೆಯ ಮೇಲೆ ಇಟ್ಟುಕೊಳ್ಳುವುದು. ಇದರಲ್ಲಿ ಅಕ್ಕಿ ಹರಡುವ ಅವಶ್ಯಕತೆಯಿಲ್ಲ. ಇದರಿಂದ ಪೂಜೆಗೆ ಅನುಕೂಲವಾಗುವುದು.). ( ಕೈ ಮುಗಿದು ಧ್ಯಾನ ಮಾಡುವುದು.)
(ಪೂಜಾ ಮಂಟಪದ ಮುಂದೆ ಒಂದು ಮಣೆ ಅಥವಾ ಚಾಪೆಯನ್ನು ಹಾಕಿ, ಪೂರ್ವ ಇಲ್ಲವೇ ಉತ್ತರ ಮುಖವಾಗಿ ಕುಳಿತುಕೊಳ್ಳಿ)
ದೀಪ ಸ್ಥಾಪನೆ (ದೀಪದ ಕಂಬಗಳಲ್ಲಿ ಹೂಬತ್ತಿಯನ್ನು ಇಟ್ಟು ಎಣ್ಣೆಯನ್ನು ಹಾಕಿ ಮೊದಲು ಬಲ ಭಾಗದ ದೀಪವನ್ನು ಹಚ್ಚುವುದು)
ಅಥ ದೇವಸ್ಯ ವಾಮ ಭಾಗೇ ದೀಪ ಸ್ಥಾಪನಂ ಕರಿಷ್ಯೇ.
ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ.
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇ.
ಶುಭಂ ಭವತು ಕಲ್ಯಾಣಿ ಆರೋಗ್ಯಂ ಧನ ಸಂಪದಃ.
ಶತೃ ಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೇ.
(ಸೂಚನೆ: ಪೂಜಾ ವಿಧಿ ಮುಗಿಯುವವೆರೆಗೂ ಮಂಟಪದ ಮುಂದಿನ ದೀಪಗಳು ಉರಿಯುತ್ತಿರಬೇಕು. ಆದ್ದರಿಂದ ಮಧ್ಯೇ ಮಧ್ಯೇ ಅದಕ್ಕೆ ಎಣ್ಣೆ ಹಾಕುತ್ತಾ ಇರುವುದು)
ಘಂಟಾನಾದ (ಒಂದು ಪುಟ್ಟ ಮಣೆಯ ಮೇಲೆ ಘಂಟೆಯನ್ನು ಇಟ್ಟು ಅದಕ್ಕೆ ಒಂದು ಉದ್ಧರಣೆ ನೀರನ್ನು ಸಿಂಪಡಿಸಿ, ಗಂಧವನ್ನಿಟ್ಟು ನಾದವನ್ನು ಮಾಡುತ್ತಾ ಈ ಶ್ಲೋಕ ಹೇಳುವುದು)
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ.
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ.
ಅಪಸರ್ಪಂತು ತೇ ಭೂತಾ ಯೇ ಭೂತಾ, ಭೂಮಿ ಸಂಸ್ಥಿತಾಃ
ಯೇ ಭೂತಾ ವಿಘ್ನ ಕರ್ತಾರಃ ತೇ ನಶ್ಯಂತು ಶಿವಾಜ್ನಯಾ.
ಅಪಕ್ರಾಮಂತು ಭೂತಾಧ್ಯಾಃ ಸರ್ವೇತೇ ಭೂಮಿಭಾರಕಾಃ
ಸರ್ರ್ವೇಷಾಮ ವಿರೋಧೇನಾ ದೇವಕರ್ಮ ಸಮಾರಭೇ.
ಪೃಥಿವ್ಯಾಃ ಮೇರುಪೃಷ್ಟ ಋಷಿಃ, ಕೂರ್ಮೊ ದೇವತಾಃ ಸುತಲಂ ಛಂದಃ.
ಇತಿ ಘಂಟಾನಾದಂ ಕೃತ್ವಾ.
ಸಕಲ ಪೂಜಾರ್ಥೆ ಅಕ್ಷತಾಂ ಸಮರ್ಪಯಾಮಿ.
(ಸ್ವಲ್ಪ ಅಕ್ಷತೆಯನ್ನು ಘಂಟೆಗೆ ಪೂಜಿಸುವುದು)
ಸರ್ವ ದೇವತಾ ಪ್ರಾರ್ಥನೆ (ನಿಮ್ಮ ಮನೆ ದೇವರ ಮುಂದೆ ಕೈ ಮುಗಿದು ನಿಂತುಕೊಂಡು ಪ್ರಾರ್ಥನೆ ಮಾಡಿ)
ಓಂ ಶ್ರೀ ಮನ್ಮಹಾಗಣಾಧಿಪತೆಯೇ ನಮಃ, ಓಂ ಶ್ರೀ ಸರಸ್ವತ್ಯೈ ನಮಃ,
ಓಂ ಶ್ರೀ ವೇದಾಯ ನಮಃ, ಓಂ ವೇದ ಪುರುಷಾಯ ನಮಃ,
ಓಂ ಇಷ್ಟ ದೇವತಾಭ್ಯೋ ನಮಃ, ಓಂ ಕುಲ ದೇವತಾಭ್ಯೋ ನಮಃ,
ಓಂ ಸ್ಥಾನ ದೇವತಾಭ್ಯೋ ನಮಃ, ಓಂ ಗ್ರಾಮ ದೇವತಾಭ್ಯೋ ನಮಃ,
ಓಂ ಪ್ರಾಣ ದೇವತಾಭ್ಯೋ ನಮಃ, ಓಂ ಮಾತಾ ಪಿತೃಭ್ಯಾo ನಮಃ,
ಓಂ ಸರ್ವೇಭ್ಯೋ ಶ್ರೀ ಗುರುಭ್ಯೋ ನಮಃ, ಓಂ ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮಃ,
ಓಂ ಸರ್ವೆಭ್ಯೋ ದೇವೇಭ್ಯೋ ನಮೋ ನಮಃ, ಯೇತದ್ಕರ್ಮ ಪ್ರಧಾನ ದೇವತಾಭ್ಯೋ ನಮಃ,
ಪ್ರಾರಂಭ ಕಾರ್ಯಂ ನಿರ್ವಿಘ್ನಮಸ್ತುಃ,
ಶುಭಂ ಶೋಭನಮಸ್ತು,
ಇಷ್ಠದೇವತಾ ಕುಲದೇವತಾ ಸುಪ್ರಸನ್ನಾ ವರದಾ ಭವತು,
ಅನುಜ್ಞಾಂ ದೇಹಿ. ಅವಿಘ್ನಮಸ್ತುಃ.
ಸುಮುಖಶ್ಚ ಏಕದಂತಶ್ಚ ಕಪಿಲೋ ಗಜಕರ್ಣಕಃ,
ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ.
ಧೂಮ್ರಕೇತುರ್ ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ,
ದ್ವಾದಶೈತಾನಿ ನಾಮಾನಿ ಯಃ ಪಠೇಥ್ ಶ್ರುಣುಯಾದಪಿ.
ವಿಧ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ,
ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಃ ತಸ್ಯ ನ ಜಾಯತೇ.
ಶುಕ್ಲಾoಭರಧರಂ ದೇವಂ ಶಶಿವರ್ಣಂ ಚತುರ್ಭುಜಂ,
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತೆಯೇ.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ,
ಶರಣ್ಯೇ ತ್ರಯಂಬಕೇ ದೇವೀ ನಾರಾಯಣೀ ನಮೋಸ್ತುತೇ
ಸರ್ವದಾ ಸರ್ವ ಕಾರ್ಯೇಷು ನಾಸ್ತಿ ತೇಷಾಂ ಅಮಂಗಲಂ,
ಯೇಷಾಂ ಹೃದಿಸ್ಥ್ಯೋ ಭಗವಾನ್ ಮಂಗಲಾಯತನೋ ಹರಿಃ.
ಸಂಕಲ್ಪ (ಕೈಯಲ್ಲಿ ಸ್ವಲ್ಪ ಮಂತ್ರಾಕ್ಷತೆ ಹಿಡಿದುಕೊಂಡು ಹೀಗೆ ಹೇಳುವುದು)
----------------------------------ಗೋತ್ರದ, ನಾನು ಶ್ರೀಮತಿ
---------------------------------------ಶ್ರೀ. ---------------------------------------------ರವರ ಧರ್ಮಪತ್ನಿ ನನ್ನ ದೀರ್ಘ ಸುಮಂಗಲೀತನಕ್ಕಾಗಿ ಮತ್ತು ನನ್ನ ಹಾಗೂ ನನ್ನ ಕುಟುಂಬದ ಸಕಲ ಇಷ್ಟಾರ್ಥಗಳ ಸಿದ್ಧಿಗಾಗಿ ಇಂದು ಈ ಮಂಗಳ ಗೌರೀ ಪೂಜೆಯನ್ನು ಶೃತಿ, ಸ್ಮೃತಿ ಹಾಗೂ ಪುರಾಣೋಕ್ತ ಮಾಡಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೇನೆ. (ಕೈಯಲ್ಲಿರುವ ಮಂತ್ರಾಕ್ಷತೆಗೆ ಒಂದು ಉದ್ಧರಣೆ ನೀರು ಹಾಕಿ ತಟ್ಟೆಗೆ ಬಿಡುವುದು)
ಪೂಜೆಗೆ ಸೂಕ್ತ ಸಮಯದ ಘೋಷಣೆ (ಪಾಶ್ಚಿಮಾತ್ಯ ದೇಶದಲ್ಲಿರುವವರು ಆಯಾ ಖಂಡ, ದ್ವೀಪ,ಅರಣ್ಯ, ನದಿಗಳ ಹೆಸರುಗಳನ್ನು ಸೇರಿಸಿಕೊಳ್ಳುವುದು)
ತದೇವ ಲಗ್ನಂ ಸುದಿನಂ ತದೇವ, ತಾರಾಬಲಂ ಚಂದ್ರಬಲಂ ತದೇವ,
ವಿದ್ಯಾಬಲಂ, ದೈವಬಲಂ ತದೇವ, ಲಕ್ಷ್ಮೀಪತೇ, ತೇoಘ್ರಿಯುಗಂ ಸ್ಮರಾಮಿ.
ಶುಭೇ ಶೋಭನೇ ಮುಹೂರ್ತೆ, ಆದ್ಯ ಬ್ರಹ್ಮಣೋ, ದ್ವಿತೀಯ ಪ್ರಹರಾರ್ಧೇ, ಶ್ವೇತವರಾಹ ಕಲ್ಪೆ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮ ಪಾದೇ, ಭರತ ವರ್ಷೇ, ಭರತ ಖಂಡೇ, ಜಂಬೂ ದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾಃ ದಕ್ಷಿಣೇ ತೀರೇ, ಶಾಲಿವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೆ, ವ್ಯಾವಹಾರಿಕೇ, ಚಾಂದ್ರಮಾನೇನ, ಪ್ರಭವಾದಿ, ಷಷ್ಠಿ ಸಂವತ್ಸರಾಣಾಂ ಮಧ್ಯೇ, ------------------------------ನಾಮ ಸಂವತ್ಸರೇ, ದಕ್ಷಿಣಾಯನೇ ವರ್ಷ ಋತೌ, ಭಾದ್ರಪದ ಮಾಸೇ, ಶುಕ್ಲ ಪಕ್ಷ್ಯೇ, ತೃತೀಯ ತಿಥೌ, ------------------
------------------ವಾಸರಯುಕ್ತಾಯಾಂ, ಶುಭ ನಕ್ಷತ್ರೇ, ಶುಭ ಯೋಗ, ಶುಭ ಕರಣ, ಏವಂ ಗುಣ, ವಿಶೇಷಣ ವಿಶಿಷ್ಟಾಯಾಂ, ಶುಭ ತಿಥೌ, ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರಾ ಶ್ರೀ ಮಂಗಳ ಗೌರೀ ದೇವತಾ ಪ್ರೀತ್ಯರ್ಥಂ, ಮಮ ಸಕುಟುಂಬಸ್ಯ ಕ್ಷೇಮ ಸ್ಥೈರ್ಯ ಆಯುರಾರೋಗ್ಯ ಚತುರ್ವಿಧ ಪುರುಷಾರ್ಥ ಸಿದ್ಧ್ಯರ್ಥಂ, ಯಥಾ ಶಕ್ತ್ಯಾ, ಉಪಚಾರ, ಧ್ಯಾನ, ಆವಾಹನಾದಿ ಷೋಡಶೋಪಚಾರ ಪೂಜನಂ ಕರಿಷ್ಯೇ.
ಇದಂ ಫಲಂ ಮಯಾ ದೇವ ಸ್ಥಾಪಿತಂ ಪುರ(ತ)ಸ್ತವ. ತೇನ ಮೇ ಸುಫಲಾವಾಪ್ತಿರ್ ಭವೇತ್ ಜನ್ಮನಿ ಜನ್ಮನಿ.
(ಒಂದು ಫಲವನ್ನು ದೇವರ ಮಂಟಪದ ಮುಂದೆ ಇಟ್ಟು ನಮಸ್ಕರಿಸಿ)
ಪ್ರಾಣ ಪ್ರತಿಷ್ಥೆ
ಹರಾನ್ವಿತಾಮಿಂದುಮುಖೀಂ ಸರ್ವಾಭರಣ ಭೂಷಿತಾಂ,
ವಿಮಲಾಂಗೀಂ ವಿಶಾಲಾಕ್ಷೀಂ ಚಿಂತಯಾಮಿ ಸದಾಶಿವಾಂ.
ಶ್ರೀ ಮಂಗಳ ಗೌರ್ಯೈ ನಮಃ, ಧ್ಯಾಯಾಮಿ, ಧ್ಯಾನಂ ಸಮರ್ಪಯಾಮಿ .
ಅಸ್ಯ ಶ್ರೀ ಮಂಗಳ ಗೌರಿ ದೇವತಾ ಪ್ರಾಣಪ್ರತಿಷ್ಥಾಪನ ಮಹಾಮಂತ್ರಸ್ಯ
ಬ್ರಹ್ಮಾ ವಿಷ್ಣು ಮಹೇಶ್ವರಾ ಋಷಯಃ.
ಋಗ್ಯಜುಸ್ಸಾಮಾಥರ್ವಣಿ ಛಂದಾಂಸಿ ಪ್ರಾಣಶಕ್ತಿಃ
ಪರಾದೇವತಾ ಹ್ರಾಂ ಬೀಜಂ, ಹ್ರ್ಯೆಂ ಶಕ್ತಿಃ, ಹ್ರೂಂ ಕೀಲಕಂ,
ಮಮ ದೇವತಾ ಪ್ರಾಣಪ್ರತಿಷ್ಥಾ ಸಿದ್ದ್ಯರ್ಥೇ ಜಪೇ ವಿನಯೋಗಃ.
ಕರನ್ಯಾಸ
ಓಂ ಹ್ರಾಂ ಅಂಗುಷ್ಟಾಭ್ಯಾಂ ನಮಃ, ಓಂ ಹ್ರೀಂ ತರ್ಜನೀಭ್ಯಾಂ ನಮಃ,
ಓಂ ಹ್ರೂಂ ಮಧ್ಯಮಾಭ್ಯಾಂ ನಮಃ, ಓಂ ಹ್ರೆೃಂ ಅನಾಮಿಕಾಭ್ಯಾಂ ನಮಃ,
ಓಂ ಹ್ರೌಂ ಕನಿಷ್ಥಿಕಾಭ್ಯಾಂ ನಮಃ, ಓಂ ಹ್ರಃ ಕರತಲಕರಪ್ರುಷ್ಥಾಭ್ಯಾಂ ನಮಃ.
ಅಂಗನ್ಯಾಸ
ಓಂ ಹ್ರಾಂ ಹೃದಯಾಯ ನಮಃ, ಓಂ ಹ್ರೀಂ ಶಿರಸೇ ಸ್ವಾಹಾ,
ಓಂ ಹ್ರೂಂ ಶಿಖಾಯ್ಯೆವೌಷಟ್, ಓಂ ಹ್ರೆೃಂ ಕವಚಾಯ ಹುಂ,
ಓಂ ಹ್ರೌಂ ನೇತ್ರತ್ರಯಾಯವೌಷಟ್, ಓಂ ಹ್ರಃ ಅಸ್ತ್ರಾಯ ಫಟ್,
ಓಂ ಭೂರ್ಭುಸ್ವರೋಮಿತಿ ದಿಗ್ಭಂದಃ.
(ಕೈ ಮುಗಿದುಕೊಂಡಿರುವುದು)
ರಕ್ತಾಂ ಭೋಧಿಸ್ಥ ಪೋತೋಲಿಸದರುಣ ಸರೊಜಾಧಿರೂಢಾಂ.
ಕರಾಬ್ಜೈಃ ಪಾಶಂ ಕೊದಂಡ ಮಿಕ್ಷೋದ್ಭವ ಮಣಿಗಣಮಪ್ಯಂಕುಶಂ
ಪಂಚಬಾಣಾನ್ ಭಿಭ್ರಾಣಾ ಸೃಕ್ಕಪಾಲಂ ತ್ರಿನಯನಲಸಿತಾ ಪೀನವಕ್ಷೋರುಹಾಢಾೄ.
ದೇವೀ ಬಾಲಾರ್ಕ ವರ್ಣಾಭವತು, ಸುಖಕರೀ ಪ್ರಾಣ ಶಕ್ತಿಃ ಪರಾನಃ .
ಹ್ರಾಂ, ಹ್ರೀಂ, ಕ್ರೋಂ, ಯ, ರ, ಲ, ವ, ಶ, ಷ, ಸ, ಹೋಂ,
ಓಂ ಸರ್ವ ದೇವತಾ ಪ್ರಾಣಃ ಮಮ ಪ್ರಾಣಃ,
ಓಂ ಶ್ರೀ ಮಂಗಳ ಗೌರೀ ಜೀವಃ ಮಮ ಜೀವಃ, ವಾಂಗ್ಮನಃ,
ಶ್ರೋತ್ರ, ಜಿಹ್ವಾಘ್ರಾಣೆೄ, ಉಚ್ಚ್ವಾಸ ನಿಶ್ವಾಸ ಸ್ವರೂಪೇಣ ಬಹಿರಾಗತ್ಯ
ಆಸ್ಮಿನ್ ಬಿಂಬೇ (ಆಸ್ಮಿನ್ ಕಳಶೆ ಆಸ್ಯಾಂ ಪ್ರತಿಮಾಯಾಂ) ಸುಖೇನ ಚಿರಂ ತಿಷ್ಟ್ಹಂತು ಸ್ವಾಹಾ .
ದೋರ ಸ್ಥಾಪನಂ (ನೀವು ಅಣಿ ಮಾಡಿಕೊಂಡಿರುವ ಹದಿನಾರು ಎಳೆ ಹಾಗೂ ಹದಿನಾರು ಗಂಟು ಹಾಕಿರುವ ದಾರಕ್ಕೆ ಅರಿಶಿನವನ್ನು ಹಚ್ಚಿ ಎರಡು ವೀಳ್ಯದೆಲೆಯ ಮೇಲೆ ಇಟ್ಟು ಮಂಟಪದಲ್ಲಿ ಗೌರಿ ವಿಗ್ರಹದ ಬಲ ಪಕ್ಕದಲ್ಲಿ ಇಡುವುದು. ಅದಕ್ಕೆ ಅರಿಶಿನ, ಕುಂಕುಮ , ಅಕ್ಷತೆ ಮತ್ತು ಹೂವಿನಿಂದ ಪೂಜಿಸುವುದು)
ನೂತನ ದೋರ ಸ್ಥಾಪನಂ ಕರಿಷ್ಯೇ.
ಹರಿದ್ರಾ ಕುಂಕುಮಂ ಸಮರ್ಪಯಾಮಿ,
ಅಕ್ಷತಾಂ ಸಪರ್ಪಯಾಮಿ,
ಪುಷ್ಪಂ ಸಮರ್ಪಯಾಮಿ .
ಶ್ರೀ ಮಂಗಳ ಗೌರ್ಯೈ ನಮಃ, ದೋರ ಸ್ಥಾಪನಂ ಸಮರ್ಪಯಾಮಿ
ಕಳಶ ಪೂಜೆ (ಕಳಶಕ್ಕೆ ನಾಲ್ಕು ಕಡೆ ಗಂಧವನ್ನು ಹಚ್ಚುವುದು. ಒಳಗೆ ಒಂದು ಹೂವು, ಪತ್ರೆ ಮತ್ತು ಅಕ್ಷತೆಯನ್ನು ಹಾಕುವುದು)
ಕಳಶಂ ಗಂಧಾಕ್ಷತ ಪತ್ರ ಪುಷ್ಪೈರಭ್ಯರ್ಚ್ಯ.
ಇತಿ ಕಳಶಂ ಪ್ರತಿಷ್ಟಾಪಯಾಮಿ.
ಸಕಲ ಪೂಜಾರ್ಥೆ ಅಕ್ಷತಾನ್ ಸಮರ್ಪಯಾಮಿ .
(ಈಗ ಎಡಗೈಯನ್ನು ನಿಮ್ಮ ಮುಂದಿರುವ ಕಳಶದ ಮೇಲಿಟ್ಟು ಅದರ ಮೇಲೆ ಬಲಗೈಯನ್ನು ಇಟ್ಟು ಈ ಮಂತ್ರವನ್ನು ಹೇಳುವುದು) ಕಳಶಸ್ಯ ಮುಖೇ ವಿಷ್ನುಃ ಕಂಠೇ ರುದ್ರಃ ಸಮಾಶ್ರಿತಾಃ,
ಮೂಲೇ ತತ್ರ ಸ್ಥಿತೌ ಬ್ರಹ್ಮಾಃ, ಮಧ್ಯೇ ಮಾತೃಗಣಾಸ್ಮ್ರುತಾಃ,
ಕುಕ್ಷೌತು ಸಾಗರಾಸ್ಸರ್ವೇ ಸಪ್ತದ್ವೀಪಾ ವಸುಂಧರಾ,
ಋಗ್ವೇದೊಥರ್ಯಜುರ್ವೇದಃ ಸಾಮವೇದೋಹ್ಯಥರ್ವಣಃ
ಅಂಗೈಶ್ಚ ಸಹಿತಾಃ, ಸರ್ವೆ ಕಳಶಾಂಬು ಸಮಾಶ್ರಿತಾಃ,
ಆಯಾಂತು ದೇವ ಪೂಜಾರ್ಥಂ ದುರಿತಕ್ಷಯಕಾರಿಕಾಃ.
ಗಂಗೇ ಚ ಯಮುನೇಚೈವ ಗೋದಾವರೀ ಸರಸ್ವತೀ,
ನರ್ಮದೇ, ಸಿಂಧು, ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು.
ಕಳಶ ಪ್ರಾರ್ಥನೆ (ಕೈಯಲ್ಲಿ ಒಂದು ಹೂವು ಅಕ್ಷತೆ ಹಿಡಿದುಕೊಂಡು ಕೈ ಮುಗಿದು ಈ ಮಂತ್ರವನ್ನು ಉಚ್ಚರಿಸುವುದು)
ಕಳಶಃ ಕೀರ್ತಿಮಾಯುಷ್ಯಂ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಂ,
ಯೋಗ್ಯತಾಂ ಪಾಪಹಾನಿಂ ಚ ಪುಣ್ಯಂ ವ್ರುದ್ದಿಂ ಚ ಸಾಧಯೇತ್.
ಸರ್ವ ತೀರ್ಥಮಯೋ ಯಸ್ಮಾತ್ ಸರ್ವ ದೇವಮಯೋ ಯತಃ,
ಅತಃ ಹರಿಪ್ರಿಯೋಸಿ ತ್ವಂ ಪೂರ್ಣ ಕುಂಭಂ ನಮೋಸ್ತುತೇ .
(ಕೈಯಲ್ಲಿರುವ ಹೂವು ಮತ್ತ್ತು ಅಕ್ಷತೆಯನ್ನು ಮಂಟಪದ ಮೇಲಿಟ್ಟಿರುವ ಕಳಶಕ್ಕೆ ಹಾಕುವುದು) .
ಇತಿ ಕಳಶ ಪೂಜಾಂ
ಕಳಶೋಧಕ ಪ್ರೋಕ್ಷಣೆ (ಕೆಳಗಿಟ್ಟುಕೊಂಡಿರುವ ಕಳಶದಿಂದ ನೀರನ್ನು ಉದ್ಧರಣೆಯಲ್ಲಿ ತೆಗೆದುಕೊಂಡು ಒಂದು ತುಳಸಿ ಅಥವಾ ಹೂವಿನಿಂದ ಈ ಮಂತ್ರ ಹೇಳುವಾಗ ದೇವರ ಮೇಲೂ, ಪೂಜಾ ದ್ರವ್ಯಗಳ ಮೇಲೂ ಮತ್ತು ನಿಮ್ಮ ಮೇಲೂ ಪ್ರೋಕ್ಷಣೆ ಮಾಡಿಕೊಳ್ಳುವುದು).
ಕಳಶೋಧಕೇನ ಪೂಜಾ ದ್ರವ್ಯಾಣಿ ಸಂಪ್ರೋಕ್ಷ್ಯ, ದೇವಂ ಆತ್ಮಾನಾಂ ಚ ಪ್ರೋಕ್ಷಯೇತ್,
(ಈ ತುಳಸಿ ಅಥವಾ ಹೂವನ್ನು ಉತ್ತರ ದಿಕ್ಕಿಗೆ ಹಾಕಿಬಿಡುವುದು).
ಶಂಖ ಪೂಜೆ
[ಕೆಲವರು ಶಂಖವನ್ನು ಬಳಸುತ್ತಾರೆ.
ಅಂತಹವರಿಗೆ ಈ ಶ್ಲೋಕಗಳು. ಘಂಟಾನಾದ ಇರುವುದರಿಂದ ಇದನ್ನು ಮಾಡುವುದು ಬಿಡುವುದು ಕರ್ತೃವಿಗೆ ಬಿಟ್ಟದ್ದು
]
ಕಲಶೋದಕೇನ ಶಂಖಂ ಪ್ರಕ್ಷಾಲ್ಯ, ಗಾಯತ್ರ್ಯಾ ಶಂಖಮಾಪೂರ್ಯ,
ಶಂಖ್ಲಂ ಗಂಧ-ಅಕ್ಷತ-ಒಅತ್ರ-ಪುಷ್ಪೈಃ ಅಭ್ಯರ್ಚ್ಯ , ಶಂಖಂ ಸ್ಪ್ರುಷ್ಟ್ವಾ.
ಶಂಖಂ ಚಂದ್ರಾರ್ಕದೈವತ್ವಂ ವಾರುಣಂ ಚಾಧಿದೈವತಂ,
ಪ್ರುಷ್ಟೇ ಪ್ರಜಾಪತಿಸ್ತತ್ರ ಗಂಗಾ ಸರಸ್ವತೀ .
ತ್ರೈಲೋ ಕ್ಯೇ ಯಾನಿ ತೀರ್ಥಾನಿ ವಾಸುದೇವಸ್ಯ
ಚಾಜ್ಞಯಾ,
ಶಂಖೇ ತಿಶ್ಥಂತಿ ವಿಪ್ರೇಂದ್ರ ತಸ್ಮಾತ್ ಶಂಖಂ
ಪ್ರಪೂಜಯೇತ್.
ಶಂಖ ಮಧ್ಯಸ್ಥಿತಂ ತೋಯಂ ಭ್ರಾಮಿತಂ ಕೇಶವೋಪರಿ,
ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾಯುತಂ
ದಹೇತ್.
ಪಾಂಚಜನ್ಯಾಯ ವಿದ್ಮಹೇ ವಿಶ್ನುಪ್ರಿಯಾಯ ಧೀಮಹಿ ,
ತನ್ನಃ ಶಂಖಃ ಪ್ರಚೋದಯಾತ್.
ಶಂಖೋದಕಂ ಕಲಶೇ ಕಿಂಚಿನ್ನಿಕ್ಷಿಪ್ಯ, ದೆವಸ್ಯಾರ್ಘ್ಯಂ ದತ್ವಾ,
ಪೂಜಾದ್ರವ್ಯಾಣಿ ಪ್ರೋಕ್ಷ್ಯಾ, ಆತ್ಮಾನಂ ಪ್ರೋಕ್ಷ್ಯಾ, ತಚ್ಛೆೀಷಂ ವಿಸೃಜ್ಯ,
ಪುನಃ ಶಂಖಂ ಪೂರಯಿತ್ವಾ—
ದ್ವಾರ ಪಾಲಕ ಪೂಜೆ (ನಮಃ ಎಂದು ಹೇಳಿದಾಗ ಆಯಾ ದಿಕ್ಕುಗಳಿಗೆ ಅಕ್ಷತೆಯನ್ನು ಹಾಕುವುದು) ದ್ವಾರಪಾಲಾನ್ಮಹಾಭಾಗಾನ್ ವಿಷ್ಣುಸಾನ್ನಿಧ್ಯವರ್ತಿನಃ,
ಲೋಕಸಂರಕ್ಷಕಾನ್ ಸದಾ ದ್ವಾರಶ್ರಿಯೈ ನಮಃ.
ಪೂರ್ವ ದ್ವಾರೇ ಇಂದ್ರಾಯ ನಮಃ,
ದಕ್ಷಿಣ ದ್ವಾರೇ ಗೌರೀಪತೆಯೇ ನಮಃ,
ಪಶ್ಚಿಮ ದ್ವಾರೇ ರತ್ನ್ಯೈ ನಮಃ,
ಉತ್ತರ ದ್ವಾರೇ ಮನ್ಯೈ ನಮಃ,
ಸರ್ವದ್ವಾರಪಾಲಕಾನ್ ನಮಸ್ಕೃತ್ಯ.
ಇತಿ ದ್ವಾರಪಾಲಕ ಪೂಜಾನ್ ಸಮರ್ಪಯಾಮಿ.
ಪೀಠ ಪೂಜೆ (ನಮಃ ಎಂದು ಹೇಳಿದಾಗ ಮಂಟಪದ ಆಯಾ ದಿಕ್ಕುಗಳಿಗೆ ಅಕ್ಷತೆಯನ್ನು ಹಾಕುವುದು)
ಪೀಠಸ್ಯ ಅಧೋಭಾಗೇ ಆಧಾರ ಶಕ್ತ್ಯೈ ನಮಃ,
ಪೃಥಿವ್ಯೈ ನಮಃ, ಕ್ಷೀರಸಾಗರಾಯನಮಃ,
ಸಪ್ತಕುಲಪರ್ವತೇಭ್ಯೋನಮಃ, ಭೂಮಂಡಲಾಯನಮಃ,
ವೇದಿಕಾಯೈನಮಃ, ನೀಲಾಯ ನಮಃ,
ಪೂರ್ವ ದಿಶೇ ಗಂ ಗಣಪತಯೇ ನಮಃ,
ದಕ್ಷಿಣ ದಿಶೇ ಸುo ಸರಸ್ವತ್ಯೈ ನಮಃ,
ಪಶ್ಚಿಮ ದಿಶೇ ವಾಸ್ತು ಪುರುಷಾಯ ನಮಃ,
ಉತ್ತರ ದಿಶೇ ಮಹಾ ಲಕ್ಷ್ಮ್ಯೈ ನಮಃ,
ದುಂ ..ದುರ್ಗಾಯೈ ನಮಃ, ಕ್ಷಂ ಕ್ಷೇತ್ರಪಾಲಕಾಯ ನಮಃ,
ಪಂ ಪರಮಾತ್ಮನೇ ನಮಃ, ಜಾತಕಮಲೈಃ,
ಹೈರಣ್ಯ ಸೋಪಾನ ಕೈರ್ಯುಕ್ತಂ ಕಾಂಚನ ನಿರ್ಮಿತೈಶ್ಚ ಸಿಂಹಾಸನಂ ಧ್ಯಾತ್ವಾ.
ಇತಿ ರತ್ನಸಿಂಹಾಸನಾಯ ನಮಃ,
ಇತಿ ಪೀಠ ಪೂಜಾಂ ಸಮರ್ಪಯಾಮಿ.
ಮಂಟಪ ಪೂಜೆ
ಚಿತ್ರ ಮಂಟಪಾಯ ನಮಃ, ಪುಷ್ಪ ಮಂಟಪಾಯ ನಮಃ,
ಪ್ರವಾಳ ಮಂಟಪಾಯ ನಮಃ, ಮೌಕ್ತಿಕ ಮಂಟಪಾಯ ನಮಃ,
ರತ್ನ ಮಂಟಪಾಯ ನಮಃ, ಮಾಣಿಕ್ಯ ಮಂಟಪಾಯ ನಮಃ,
ವಜ್ರ ಮಂಟಪಾಯ ನಮಃ, ವೈಡೂರ್ಯ ಮಂಟಪಾಯ ನಮಃ,
ಗೋಮೇಧಿಕ ಮಂಟಪಾಯ ನಮಃ, ಕದಲೀ ಮಂಟಪಾಯ ನಮಃ,
ಮಂಟಪ ಪೂಜಾಂ ಸಮರ್ಪಯಾಮಿ.
ಗಣಪತಿ ಪೂಜೆ (ಯಾವುದೇ ಪೂಜೆಗೆ ಮುನ್ನ ಗಣಪತಿಯ ಪೂಜೆಯನ್ನು ಮಾಡಬೇಕಾದುತ್ತದೆ) (ಬೆಳ್ಳಿಯ ಗಣಪತಿ ವಿಗ್ರಹವನ್ನು ಸ್ವಚ್ಛವಾಗಿ ತೊಳೆದ ಒಂದು ತಟ್ಟೆಯಲ್ಲಿ ನಿಮ್ಮ ಮುಂದೆ ಇಟ್ಟುಕೊಂಡು ಪೂಜಿಸುವುದು) (ಕೈ ಮುಗಿದು ಧ್ಯಾನ ಮಾಡುವುದು)
ಗಣಾನಾಂತ್ವಾ ಗಣಪತಿಗಂ ಹವಾಮಹೇ
ಕವಿಂ ಕವೀನಾಂ ಉಪಶ್ರವಸ್ಥಮಂ,
ಜೇಷ್ಟ ರಾಜಂ ಬ್ರಹ್ಮಣಾo ಬ್ರಹ್ಮಣಸ್ಪತ
ಆಣಶೃನ್ವನ್ನೂ ತಿಭಿಸ್ಸೀದಸಾಧನಂ.
ಮಹಾ ಗಣಾಧಿಪತಿಂ ಧ್ಯಾಯಾಮಿ .
(ಗಣಪತಿಯನ್ನಿಟ್ಟ ತಟ್ಟೆಯನ್ನು ಮುಟ್ಟುವುದು)
ಓಂ ಶ್ರೀ ಮಹಾ ಗಣಪತಯೇ ಧ್ಯಾನಂ ಸಮರ್ಪಯಾಮಿ.
(ಎರಡೂ ಕೈಗಳನ್ನು ಜೋಡಿಸಿ ದೇವರನ್ನು ಆಹ್ವಾನಿಸುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಆವಾಹನಂ ಸಮರ್ಪಯಾಮಿ ,
(ಪುನಃ ತಟ್ಟೆಯನ್ನು ಮುಟ್ಟುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಆಸನಂ ಸಮರ್ಪಯಾಮಿ ,
(ಒಂದು ಉದ್ಧರಣೆ ಕಳಶದ ನೀರನ್ನು ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಪಾದ್ಯಂ ಸಮರ್ಪಯಾಮಿ ,
(ಒಂದು ಉದ್ದರಣೆ ಕಳಶದ ನೀರನ್ನು ಪುನಃ ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಅರ್ಘ್ಯಂ ಸಮರ್ಪಯಾಮಿ ,
(ಒಂದು ಉದ್ಧರಣೆ ಆಚಮನದ ನೀರನ್ನು ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಆಚಮನೀಯಂ ಸಮರ್ಪಯಾಮಿ ,
(ಒಂದು ಉದ್ಧರಣೆ ಕಳಶದ ನೀರನ್ನು ಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಔಪಚಾರಿಕ ಸ್ನಾನಂ ಸಮರ್ಪಯಾಮಿ ,
ಪಂಚಾಮೃತ ಸ್ನಾನ (ಕೆಲವರು ಐದೂ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿ ಮತ್ತೆ ಕೆಲವರು ಬಿಡಿಬಿಡಿಯಾಗಿ ಪೂಜಿಸುವುದುಂಟು).
(ಪ್ರತಿ ಬಾರಿಯೂ ಸಮರ್ಪಯಾಮಿ ಎಂದಾಗ ಮಿಶ್ರಿತ ಪಂಚಾಮೃತವನ್ನು ಒಂದು ಉದ್ಧರಣೆಯಿಂದ ಗಣಪತಿಯ ವಿಗ್ರಹದ ಮೇಲೆ ಹಾಕುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಕ್ಷೀರ (ಹಾಲು) ಸ್ನಾನಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ದಧಿ (ಮೊಸರು) ಸ್ನಾನಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಘೃತ (ತುಪ್ಪ) ಸ್ನಾನಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಮಧು (ಜೇನು ತುಪ್ಪ) ಸ್ನಾನಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಶರ್ಕರಾ (ಸಕ್ಕರೆ) ಸ್ನಾನಂ ಸಮರ್ಪಯಾಮಿ,
(ಹೀಗೆ ಸಮರ್ಪಿಸಿದ ಈ ಪಂಚಾಮೃತವನ್ನು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳುವುದು. ಮುಂದೆ ಪೂಜೆ ಮುಗಿದ ನಂತರ ತೆಗೆದುಕೊಳ್ಳಲು ಬೇಕಾಗುತ್ತದೆ)
ಓಂ ಶ್ರೀ ಮಹಾ ಗಣಪತಯೇ ನಮಃ ಗಂಧೋದಕ (ಗಂಧದ ನೀರು) ಸ್ನಾನಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಅಭ್ಯಂಗ (ಸುಗಂಧದ ಎಣ್ಣೆ) ಸ್ನಾನಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಅಂಗೋದ್ವರ್ತನಕಂ (ಮೈಗೆ ಕಸ್ತೂರಿ ಲೇಪಿಸುವುದು) ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಉಷ್ಣೋದಕ (ಉದ್ದರಣೆಯಲ್ಲಿ ಬೆಚ್ಚಗೆ ಮಾಡಿದ ಕಳಶದ ನೀರು) ಸ್ನಾನಂ ಸಮರ್ಪಯಾಮಿ.
ಓಂ ಶ್ರೀ ಮಹಾ ಗಣಪತಯೇ ನಮಃ ಶುದ್ಧೋಧಕ (ಕಳಶದ ಶುದ್ಧವಾದ ನೀರು) ಸ್ನಾನಂ ಸಮರ್ಪಯಾಮಿ,
(ಹೀಗೆ ಅರ್ಪಿಸಿದ ಈ ವಿವಿಧ ಬಗೆಯ ನೀರನ್ನೂ ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳುವುದು. ಮುಂದೆ ಪೂಜೆ ಮುಗಿದ ನಂತರ ತೆಗೆದುಕೊಳ್ಳಲು ಬೇಕಾಗುತ್ತದೆ)
ಓಂ ಶ್ರೀ ಮಹಾ ಗಣಪತಯೇ ನಮಃ ಸಕಲ ಪೂಜಾರ್ಥೆ ಅಕ್ಷತಾಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ವಸ್ತ್ರಾರ್ಥಂ ಅಕ್ಷತಾಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಯಜ್ನೋಪವೀತಾರ್ಥಂ ಅಕ್ಷತಾಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಗಂಧಂ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ನಾನಾ ಪರಿಮಳ ದ್ರವ್ಯ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಅಕ್ಷತಾನ್ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಪುಷ್ಪಾಣಿ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಸರ್ವಾಂಗ ಪೂಜಾನ್ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ಪತ್ರ ಪೂಜಾನ್ ಸಮರ್ಪಯಾಮಿ,
ಓಂ ಶ್ರೀ ಮಹಾ ಗಣಪತಯೇ ನಮಃ ದೂರ್ವಾಯುಗ್ಮ ಪೂಜಾನ್ ಸಮರ್ಪಯಾಮಿ,
ಧೂಪಂ
ದಶಾಂಗಂ ಗುಗ್ಗುಲಂ ದಿವ್ಯಮುತ್ತಮಂ ಗಣ ನಾಯಕ
ಧೂಪಂ ಗೃಹಾಣ ದೇವೇಶ ಈಶ ಪುತ್ರ ನಮೋಸ್ತುತೇ.
ಓಂ ಶ್ರೀ ಮಹಾ ಗಣಪತಯೇ ನಮಃ ಧೂಪಂ ಆಘ್ರಾಪಯಾಮಿ.
ದೀಪಂ
ಸರ್ವಜ್ಞ ಸರ್ವ ದೇವೇಶ, ಸರ್ವ ಸಿದ್ಧಿ ಬುದ್ಧಿ ಪ್ರದಾಯಕ,
ಗೃಹಾಣ ಮಂಗಲಂ ದೀಪಂ, ಗೌರೀನಂದ ನಮೋಸ್ತುತೇ.
ಓಂ ಶ್ರೀ ಮಹಾ ಗಣಪತಯೇ ನಮಃ ದೀಪಂ ದರ್ಶಯಾಮಿ.
ನೈವೇದ್ಯ (ಒಂದು ಮಂಡಲವನ್ನು ಮಾಡಿ, ಅದರ ಮೇಲೆ ಸ್ವಲ್ಪ ಅಕ್ಷತೆಯನ್ನು ಹಾಕಿ, ವೀಳ್ಯದೆಲೆಯ ಮೇಲೆ ಬಾಳೆ ಹಣ್ಣನ್ನು ಇಟ್ಟುಕೊಂಡು ನೈವೇದ್ಯ ಮಾಡುವುದು)
ಓಂ ಸತ್ಯಂತವರ್ತೇನ ಪರಿಶಿಂಚಾಮಿ, (ನೈವೇದ್ಯದ ಮೇಲೆ ಸ್ವಲ್ಪ ನೀರನ್ನು ಚುಮುಕಿಸಿ)
ಅಮೃತಮಸ್ತು , ಅಮೃತೋಪಸ್ತರಣಮಸೀ ಸ್ವಾಹಾ,
ಓಂ ಪ್ರಾಣಾಯ ಸ್ವಾಹಾ, ಓಂ ಅಪಾನಾಯ ಸ್ವಾಹಾ,
ಓಂ ವ್ಯಾನಾಯ ಸ್ವಾಹಾ, ಓಂ ಉದಾನಾಯ ಸ್ವಾಹಾ,
ಬ್ರಹ್ಮಣೇ ಸ್ವಾಹಾ, ಬ್ರಮ್ಹಣಿಮ, ಆತ್ಮಾಮೃತತ್ವಾಯ
ನೈವೇದ್ಯಂ ಗ್ರುಹ್ಯತಾಂ ದೇವ ಭಕ್ತಿ ಮೇ ಆಚಲಾಂ ಕುರುಃ,
ಈಪ್ಸಿತಂ ಮೇ ವರಂ ದೇಹಿ ಇಹತ್ರ ಚ ಪರಾಂ ಗತಿಂ.
ಓಂ ಶ್ರೀ ಮಹಾ ಗಣಪತಯೇ ನಮಃ ನೈವೇದ್ಯಂ ಸಮರ್ಪಯಾಮಿ,
(ಈ ನೈವೇದ್ಯದ ಬಾಳೆ ಹಣ್ಣನ್ನು ಮಂಟಪದಲ್ಲಿ ಬಲ ಭಾಗದಲ್ಲಿ ಗಣಪತಿ ಪೂಜಾ ನಂತರ ಇಟ್ಟುಬಿಡುವುದು)
ಓಂ ಶ್ರೀ ಮಹಾ ಗಣಪತಯೇ ನಮಃ ಉತ್ತರಾಪೋಷಣಂ,
ಮಹಾ ಫಲಂ, ಫಲಾಷ್ಟಕ, ತಾಂಬೂಲಂ, ದಕ್ಷಿಣಾಂ ಸಮರ್ಪಯಾಮಿ,
ಮಂಗಳಾರತಿ (ಘಂಟೆ ಬಾರಿಸುತ್ತಾ, ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಮೂರು ಬತ್ತಿಗಳನ್ನು ಹಚ್ಚಿ ಮಂಗಳಾರತಿ ಮಾಡುವುದು)
ಚಂದ್ರಾದಿತ್ಯೌ ಚ ಧರಣೀ, ವಿದ್ಯುದಗ್ನಿಸ್ತಥೇವ ಚ,
ತ್ವಮೇವ ಸರ್ವ ಜ್ಯೋತೀಂಷಿ ಆರ್ಥಿಕ್ಯಂ ಪ್ರತಿಗೃಹ್ಯತಾಂ.
ಓಂ ಶ್ರೀ ಮಹಾ ಗಣಪತಯೇ ನಮಃ ಮಹಾ ನೀರಾಜನಂ ದೀಪಂ ಸಮರ್ಪಯಾಮಿ,
(ಒಂದು ಉದ್ಧರಣೆ ಆಚಮನದ ನೀರನ್ನು ಬಿಡುವುದು)
ಪುನಃ ಪೂಜೆ (ಅಕ್ಷತೆಯಿಂದ ಪೂಜೆ ಮಾಡಿ)
ಓಂ ಶ್ರೀ ಮಹಾ ಗಣಪತಯೇ ನಮಃ, ರಾಜ ಭೋಗಾಯ ಯತ್ನತಃ ಪುನಃ ಪೂಜಾಂ ಕರಿಷ್ಯೇ.
ಛತ್ರಂ, ಚಾಮರಂ, ಗೀತಂ, ನೃತ್ಯಂ, ವಾದ್ಯಂ,
ದರ್ಪಣಂ, ವ್ಯಜನಂ, ಆಂದೋಲನಂ,
ಸಮಸ್ತ ರಾಜೋಪಚಾರ, ಸರ್ವೋಪಚಾರಾರ್ಥೆ ಅಕ್ಷತಾಂ ಸಮರ್ಪಯಾಮಿ.
ಪ್ರಾರ್ಥನೆ : (ಗಣಪತಿಗೆ ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುವುದು)
ಓಂ ವಕ್ರತುಂಡ ಮಹಾಕಾಯ, ಕೋಟಿ ಸೂರ್ಯ ಸಮಪ್ರಭಾ,
ನಿರ್ವಿಘ್ನಂ ಕುರುಮೇ ದೇವ, ಸರ್ವ ಕಾರ್ಯೇಷು ಸರ್ವದಾ,
ಅನಯಾ ಪೂಜಯಾ ಶ್ರೀ ಮಹಾ ಗಣಪತಿಃ ಪ್ರೀಯತಾಂ.
ಗಣಾಧಿಪತಿ ಪ್ರಸಾದಂ ಶಿರಸಾ ಗೃಹ್ಣಾಮಿ.
(ಗಣಪತಿಯನ್ನು ಪೂಜಿಸಿದ ಹೂವನ್ನು ಮತ್ತು ಅಕ್ಷತೆಯನ್ನು ನಿಮ್ಮ ಶಿರದಲ್ಲಿ ಧರಿಸಿ ಕೊಳ್ಳುವುದು)
(ಹೀಗೆ ಪೂಜಿಸಿದ ಗಣಪತಿಯನ್ನು ನಿಮ್ಮ ದೇವರ ಗೂಡಿನಲ್ಲಿ ಇಟ್ಟು ಬಿಡುವುದು)
ಶ್ರೀ ಮಂಗಳ ಗೌರೀ ಪೂಜೆ
ಧ್ಯಾನಂ
ಹರಾನ್ವಿತಾಮಿಂದುಮುಖೀಂ ಸರ್ವಾಭರಣ ಭೂಷಿತಾಂ,
ವಿಮಲಾಂಗೀಂ ವಿಶಾಲಾಕ್ಷೀಂ ಚಿಂತಯಾಮಿ ಸದಾಶಿವಾಂ.
ಶ್ರೀ ಮಂಗಳ ಗೌರ್ಯೈ ನಮಃ, ಧ್ಯಾಯಾಮಿ, ಧ್ಯಾನಂ ಸಮರ್ಪಯಾಮಿ .
ಆವಾಹನಂ (ಎರಡೂ ಕೈಗಳನ್ನು ಚಾಚಿ ಹಸ್ತಗಳನ್ನು ಜೋಡಿಸಿ, ಹಸ್ತಗಳನ್ನು ನಿಮ್ಮ ಕಡೆ ತಿರುಗಿಸಿ ದೇವರನ್ನು ಆಹ್ವಾನಿಸುವುದು)
ಸುಮಧ್ಯಮಾಂ, ಸುವಸನಾಂ, ಚಂದ್ರ ಬಿಂಬಾಧರಾನ್ವಿತಾಂ,
ಆವಾಹಯಾಮಿ ದೇವೀಂತ್ವಾಂ ಸರ್ವದಾ ಶುಭಕಾರಿಣೀo.
ಶ್ರೀ ಮಂಗಳ ಗೌರ್ಯೈ ನಮಃ, ಆವಾಹನಂ ಸಮರ್ಪಯಾಮಿ.
ಆಸನಂ (ಮಂಟಪವನ್ನು ಬೆರಳುಗಳಿಂದ ಮುಟ್ಟುವುದು)
ಅನೇಕ ರತ್ನ ಸಂಯುಕ್ತಂ ಮುಕ್ತಾಮಣಿ ವಿಭೂಶಿತಂ,
ಸ್ವರ್ಣ ಸಿಂಹಾಸನಂ ಚಾರು ಪ್ರೀತ್ಯರ್ಥಂ ಪ್ರತಿಗೃಹ್ಯತಾಂ.
ಶ್ರೀ ಮನಾಲ ಗೌರ್ಯೈ ನಮಃ, ಆಸನಂ ಸಮರ್ಪಯಾಮಿ.
ಪಾದ್ಯಂ (ಕಳಶದ ನೀರಿನಿಂದ ಒಂದು ಉದ್ಧರಣೆ ನೀರು ಅರ್ಘ್ಯ ಪಾತ್ರೆಗೆ ಬಿಡುವುದು)
ಮಹಾದೇವಿ ಜಗನ್ಮಾತೆ, ಶಂಕರ ಪ್ರಿಯ ಸಿದ್ಧಿದೆ,
ಭಕ್ತಾೄ ಪಾದ್ಯಂ ಮಯಾದತ್ತಂ ಗೃಹಾಣ ಪ್ರಣತ ಪ್ರಿಯೇ.
ಶ್ರೀ ಮಂಗಳ ಗೌರ್ಯೈ ನಮಃ ಪಾದ್ಯಂ ಸಮರ್ಪಯಾಮಿ.
ಅರ್ಘ್ಯಂ (ಕಳಶದ ನೀರಿನಿಂದ ಒಂದು ಉದ್ಧರಣೆ ನೀರು ಅರ್ಘ್ಯ ಪಾತ್ರೆಗೆ ಬಿಡುವುದು)
ಶ್ರೀ ಪಾರ್ವತಿ ಮಹಾಭಾಗೇ ಗಂಧ ಪುಷ್ಪಾಕ್ಷತೈರ್ಯುತಂ
ಅರ್ಘ್ಯಂ ಗೃಹಾಣ ದೇವೇಶಿ ಸರ್ವ ಸಿದ್ಧಿ ಪ್ರದಾಯಕಿ.
ಶ್ರೀ ಮಂಗಳ ಗೌರ್ಯೈ ನಮಃ, ಅರ್ಘ್ಯಂ ಸಮರ್ಪಯಾಮಿ.
ಆಚಮನಂ (ಕಳಶದ ನೀರಿನಿಂದ ಒಂದು ಉದ್ಧರಣೆ ನೀರನ್ನು ಅರ್ಘ್ಯ ಪಾತ್ರೆಗೆ ಬಿಡುವುದು)
ಗಂಗಾತೊಯಂ ಸಮಾನೀತಾಂ ಸುವರ್ಣ ಕಳಶೆ ಸ್ಥಿತಂ,
ಗೃಹಾಣಾಚಮನಂ ದೇವಿ ಪೂಜಿತೊ ಯಃ ಸುರೈರಪಿ.
ಶ್ರೀ ಮಂಗಳ ಗೌರ್ಯೈ ನಮಃ, ಆಚಮನಂ ಸಮರ್ಪಯಾಮಿ.
ಪಂಚಾಮೃತ ಸ್ನಾನಂ (ಕೆಳಗೆ ಇಟ್ಟು ಕೊಂಡಿರುವ ಗೌರಿಯ ಬೆಳ್ಳಿಯ ಮೂರ್ತಿಯ ಮೇಲೆ, ಕ್ರಮಾನುಸಾರವಾಗಿ ಪಂಚಾಮೃತದ ವಿವಿದ ಪದಾರ್ಥಗಳನ್ನು ಒಂದು ಉದ್ದರಣೆಯಿಂದ, ಮಂತ್ರಗಳನ್ನು ಹೇಳಿದ ಹಾಗೇ ಹಾಕುತ್ತಾ ಇರುವುದು)
ಕ್ಷೀರ ಸ್ನಾನ (ಕಾಯಿಸಿರದ ಹಸಿ ಹಾಲು):
ಸುರಭೇಸ್ತು ಸಮುತ್ಪನ್ನಂ ದೇವಾನಾಂ ಅತಿ ದುರ್ಲಭಂ,
ಪಯೋ ದಧಾಮಿ ದೇವೇಶಿ ಪ್ರೀತ್ಯರ್ಥಂ ಪ್ರತಿಗೃಹ್ಯತಾಂ.
ಶ್ರೀ ಮಂಗಳ ಗೌರ್ಯೈ ನಮಃ, ಕ್ಷೀರ ಸ್ನಾನಂ ಸಮರ್ಪಯಾಮಿ.
ದಧಿ ಸ್ನಾನಂ (ಮೊಸರು)
ಚಂದ್ರ ಮಂಡಲ ಸಂಕಾಶಂ ಸರ್ವ ದೇವ ಪ್ರಿಯಂ ಹಿ ಯತ್,
ದಧಿ ದಧಾಮಿ ದೇವೇಶಿ ಸ್ನಾನಾರ್ಥಂ ಪ್ರತಿಗೃಹ್ಯತಾಂ,
ಶ್ರೀ ಮಂಗಳ ಗೌರ್ಯೈ ನಮಃ, ದಧಿ ಸ್ನಾನಂ ಸಮರ್ಪಯಾಮಿ.
ಘೃತ ಸ್ನಾನಂ (ತುಪ್ಪ)
ಆಜ್ಯಂ ಸುರಾಣಾಂ ಆಹಾರಂ ಆಜ್ಯಂ ಯಜ್ಞೇ ಪ್ರತಿಷ್ಥಿತಂ,
ಆಜ್ಯಂ ಪವಿತ್ರಂ ಪರಮಂ ಸ್ನಾನಾರ್ಥಂ ಪ್ರತಿಗೃಹ್ಯತಾಂ,
ಶ್ರೀ ಮಂಗಳ ಗೌರ್ಯೈ ನಮಃ, ಘೃತ ಸ್ನಾನಂ ಸಮರ್ಪಯಾಮಿ.
ಮಧು ಸ್ನಾನಂ (ಜೇನು ತುಪ್ಪ)
ಸರ್ವೌಷಧಿ ಸಮುತ್ಪನ್ನಂ ಪೀಯೂಷ ಸದೃಶಂ ಮಧು,
ಸ್ನಾನಾರ್ಥಂತೆ ಮಯಾ ದತ್ತಂ ಗೃಹಾಣ ಪರಮೇಶ್ವರಿ.
ಶ್ರೀ ಮಂಗಳ ಗೌರ್ಯೈ ನಮಃ, ಮಧು ಸ್ನಾನಂ ಸಮರ್ಪಯಾಮಿ.
ಶರ್ಕರಾ ಸ್ನಾನಂ (ಸಕ್ಕರೆ)
ಇಕ್ಷು ಧoಡಾತ್ ಸಮುತ್ಪನ್ನಾ, ರಸ ಸ್ನಿಗ್ಧ ಧರಾ ಶುಭಾ,
ಶರ್ಕರೇಯ ಮಯಾ ದತ್ತಾ, ಸ್ನಾನಾರ್ಥಂ ಪ್ರತಿಗೃಹ್ಯತಾಂ,
ಶ್ರೀ ಮಂಗಳ ಗೌರ್ಯೈ ನಮಃ, ಶರ್ಕರಾ ಸ್ನಾನಂ ಸಮರ್ಪಯಾಮಿ.
(ಹೀಗೆ ಪೂಜಿಸಿದ ಪಂಚಾಮೃತವನ್ನು ಪಾತ್ರೆಗೆ ಹಾಕಿಟ್ಟುಕೊಳ್ಳುವುದು. ಆಮೇಲೆ ಪೂಜಾ ನಂತರ ತೆಗೆದುಕೊಳ್ಳಲು ಬೇಕಾಗುತ್ತದೆ)
ಫಲೋದಕ (ತೆಂಗಿನಕಾಯಿ ಒಡೆದು ಅದರಲ್ಲಿನ ಎಳನೀರನ್ನು ಉದ್ಧರಣೆಯಿಂದ ಅರ್ಪಿಸುವುದು)
ಉಷ್ಣೋದಕ ಸ್ನಾನಂ (ಉದ್ಧರಣೆಯಲ್ಲಿ ಕಳಶದ ನೀರನ್ನು ತೆಗೆದುಕೊಂಡು ಅದನ್ನು ದೀಪದ ಮೇಲೆ ಸ್ವಲ್ಪ ಬೆಚ್ಚಗೆ ಮಾಡಿ ಲೋಹದ ಮೂರ್ತಿಯ ಮೇಲೆ ಬಿಡುವುದು)
ನಾನಾ ತೀರ್ಥದಾಹೃತಂ ಚ ತೋಯಂ ಉಷ್ಣಂ ಮಯಾ ಕೃತಂ,
ಸ್ನಾನಾರ್ಥಂ ಪ್ರಯಚ್ಚಾಮಿ ಸ್ವೀಕುರುಶ್ವ ಮಹೇಶ್ವರೀ.
ಶ್ರೀ ಮಂಗಳ ಗೌರ್ಯೈ ನಮಃ, ಉಷ್ಣೋದಕ ಸ್ನಾನಂ ಸಮರ್ಪಯಾಮಿ.
ಶುದ್ಧೋದಕ ಸ್ನಾನಂ (ಕಳಶದಲ್ಲಿನ ನೀರನ್ನು ಉದ್ಧರಣೆಯಿಂದ ಎರಡು, ಮೂರು ಬಾರಿ ಹಾಕುವುದು)
ಗಂಗಾದಿ ಸರ್ವ ತೀರ್ಥೇಭ್ಯ ಆಹ್ರುತೈರಮರ್ಲೈರ್ಜಲೈಃ,
ಸ್ನಾನಂ ಕುರುಷ್ವ ದೇವೇಶಿ ಹರಪ್ರಿಯೇ ನಮೋಸ್ತುತೇ,
ಶ್ರೀ ಮಂಗಳ ಗೌರ್ಯೈ ನಮಃ, ಶುದ್ಧೋದಕ ಸ್ನಾನಂ ಸಮರ್ಪಯಾಮಿ.
(ಉಷ್ಣೋದಕ, ಶುದ್ಧೋದಕ ಹಾಗೂ ಫಲೋದಕಗಳನ್ನು ಇನ್ನೊಂದು ಪಾತ್ರೆಗೆ ಹಾಕಿಟ್ಟುಕೊಳ್ಳುವುದು. ಇದನ್ನು ಪೂಜೆಯ ನಂತರ ಎಲ್ಲರೂ ತೆಗೆದುಕೊಳ್ಳಲು ಬೇಕಾಗುತ್ತದೆ)
ಆಚಮನಂ ಸಮರ್ಪಯಾಮಿ. (ಒಂದು ಉದ್ಧರಣೆ ಕಳಶದ ನೀರನ್ನು ಅರ್ಘ್ಯ ಪಾತ್ರೆಗೆ ಬಿಡುವುದು)
ಗಂಗಾತೋಯಂ ಸಮಾನೀತಂ, ಸುವರ್ಣ ಕಳಶೇ ಸ್ಥಿತಂ,
ಆಚಮ್ಯತಾಂ ಮಹಾಭಾಗೇ ಶಿವೇನ ಸಹಿತೇನಘೇ.
ಶ್ರೀ ಮಂಗಳ ಗೌರ್ಯೈ ನಮಃ, ಆಚಮನೀಯಂ ಸಮರ್ಪಯಾಮಿ.
(ಹೀಗೆ ಪೂಜಿಸಿದ ಶ್ರೀ ಮಂಗಳ ಗೌರಿಯ ಬೆಳ್ಳಿಯ ವಿಗ್ರಹವನ್ನು ಒಂದು ಸ್ವಚ್ಚವಾದ ಬಟ್ಟೆಯಿಂದ ಶುಭ್ರವಾಗಿ ಒರೆಸಿ ಮಂಟಪದಲ್ಲಿ ವಿಗ್ರಹದ ಮುಂಬದಿಯಲ್ಲಿ ಸಣ್ಣ ತಟ್ಟೆಯಲ್ಲಿ ಗಂಧ, ಕುಂಕುಮವನ್ನು ಹಚ್ಚಿ ಇಡುವುದು)
(ಈಗ ಮಂಟಪದ ಮೇಲಿಟ್ಟಿರುವ ದೇವರ ಮೂರ್ತಿಗೆ ಕುಂಕುಮವನ್ನು ಇಟ್ಟು ಒಂದು ಲಕ್ಷಣವಾದ ಹೂವನ್ನು ಶಿರದ ಮೇಲಿಡುವುದು. ಇನ್ನು ಮುಂದಿನ ಪೂಜಾ ವಿಧಿಗಳನ್ನು ಈ ಮೂರ್ತಿಗೆ ಮಾಡುವುದು)
ವಸ್ತ್ರದ್ವಯಂ (ಒಂದು ಜೊತೆ ಗೆಜ್ಜೆ ವಸ್ತ್ರವನ್ನು ಏರಿಸುವುದು)
ನವ ವಸ್ತ್ರ ದ್ವಯಂ ರಕ್ತಂ ದೇವಾನಾಂ ಸದ್ರುಶಪ್ರಭಂ,
ಭಕ್ತ್ಯಾ ದತ್ತಂ ಗೃಹಾನೇದಂ ಲೋಕಾಲಜ್ಜ ನಿವಾರಿಣೀಂ,
ಶ್ರೀ ಮಂಗಳ ಗೌರ್ಯೈ ನಮಃ, ವಸ್ತ್ರದ್ವಯಂ ಸಮರ್ಪಯಾಮಿ.
ಆಭರಣಂ (ದೇವರ ಮೂರ್ತಿಗೆ ಇದ್ದರೆ ಬಂಗಾರದ ಸರ ಹಾಕುವುದು. ಇಲ್ಲವಾದರೆ ಅಲಂಕಾರವಾದ ಹೂಮಾಲೆಯನ್ನು ಹಾಕಬಹುದು) (ದೇವಿಗೆ ವಿವಿಧ ಬಗೆಯ ಆಭರಣಗಳಾದ ಬಳೆ, ಬಿಚ್ಚೋಲೆ, ಸರ, ಮುಂತಾದವುಗಳನ್ನು ಹಾಕಬಹುದು)
ಸ್ವಭಾವ ಸುಂದರಾಂಗಿತ್ವಂ, ನಾನಾ ರತ್ನಯುತಾನಿ ಚ,
ಭೂಷಣಾನಿ ವಿಚಿತ್ರಾನಿ ಪ್ರೀತ್ಯರ್ಥಂ ಪ್ರತಿಗೃಹ್ಯತಾಂ,
ಶ್ರೀ ಮಂಗಳ ಗೌರ್ಯೈ ನಮಃ, ಹರಿದ್ರಾ ಕುಂಕುಮ, ಮಂಗಳ ಸೂತ್ರೆ,
ನಾನಾ ಆಭರಣಾನಿ ಸಮರ್ಪಯಾಮಿ
ಗಂಧಂ (ಗಂಧದ ಕೊರಡಿನಿಂದ ಮೊದಲೇ ತೇಯ್ದಿಟ್ಟುಕೊಂಡಿರುವ ಹಸಿಯಾಗಿರುವ ಗಂಧ, ಇಲ್ಲವಾದರೆ ಗಂಧದ ಪುಡಿಯನ್ನು ಹಸಿ ಮಾಡಿ ದೇವಿಯ ಹಣೆಗೆ ಇಡುವುದು)
ಗಂಧ ಕರ್ಪೂರ ಸಂಯುಕ್ತಂ ದಿವ್ಯ ಚಂದನಂ ಉತ್ತಮಂ,
ವಿಲೇಪನಂ ಸುರಶ್ರೇಷ್ಠೆಃ ಪ್ರೀತ್ಯರ್ಥಂ ಪ್ರತಿ ಗೃಹ್ಯತಾಂ.
ಶ್ರೀ ಮಂಗಳ ಗೌರ್ಯೈ ನಮಃ, ಗಂಧಂ ಸಮರ್ಪಯಾಮಿ.
ಅಕ್ಷತಾಃ (ಅಕ್ಷತೆಯನ್ನು ಹಾಕುವುದು)
ಶಾಲೇಯಾನಕ್ಷತಾಂ, ಶ್ವೇತಾನ್ ಚಂದ್ರಾಭಾನ್ವಿಮಲಾನ್ ಶುಭಾನ್
ದದಾಮಿ ದೇವದೇವೇಶಿ ಪ್ರೀತ್ಯರ್ಥಂ ಪ್ರತಿಗೃಹೄತಾಂ,
ಶ್ರೀ ಮಂಗಳ ಗೌರ್ಯೈ ನಮಃ, ಅಕ್ಷತಾಂ ಸಮರ್ಪಯಾಮಿ.
ಪರಿಮಳ ದ್ರವ್ಯ (ಒಳ್ಳೆಯ ಘಮಘಮಿಸುವ ಪರಿಮಳ ದ್ರವ್ಯವನ್ನು/ಗಳನ್ನು, ಇಲ್ಲದಿದ್ದರೆ ಒಂದು ಹೆಚ್ಚು ಪರಿಮಳವುಳ್ಳ ಹೂವನ್ನು ಕಳಶದ ನೀರಿನಲ್ಲಿ ಅದ್ದಿ ಸಿಂಪಡಿಸುವುದು)
ಶ್ರೀ ಮಂಗಳ ಗೌರ್ಯೈ ನಮಃ, ನಾನಾ ವಿಧ ಪರಿಮಳ ದ್ರವ್ಯಾಣಿ ಸಮರ್ಪಯಾಮಿ.
ಪುಷ್ಪಾಣಿ (ಸುಗಂಧಯುತವಾದ ಹೂವನ್ನು ಪೂಜೆ ಮಾಡುವುದು)
ಸುಗಂಧೀನಿ ಸುಪುಷ್ಪಾಣಿ ವರಸಿದ್ಧಿ ಪ್ರದಾಯಿನೀ.
ನಾನಾ ವಿಧಾನಿ ಪುಷ್ಪಾಣಿ ಗೃಹಾಣ ವರದಾ ಭವ.
ಶ್ರೀ ಮಂಗಳ ಗೌರ್ಯೈ ನಮಃ, ಸುಗಂಧ ಪುಷ್ಪಾಣಿ ಸಮರ್ಪಯಾಮಿ.
ಓಂ ಅಥಾಂಗ ಪೂಜಾ (ದೇವಿಯ ಪಾದದಿಂದ ಹಿಡಿದು ಶಿರದವರೆಗೆ ನಾನಾ ಅಂಗಗಳಿಗೆ ಪೂಜಯಾಮಿ ಎಂದು ಹೇಳಿದಾಗ ಅಕ್ಷತೆಯಿಂದ ವಿಗ್ರಹಕ್ಕೆ ಪೂಜಿಸುತ್ತಾ ಇರುವುದು)
ಓಂ ಮಂಗಳ ಗೌರ್ಯೈ ನಮಃ ಪಾದೌ (ಪಾದಗಳು) ಪೂಜಯಾಮಿ,
ಓಂ ಪರ್ವತ ರಾಜ ಪುತ್ರೈ ನಮಃ ಗುಲ್ಫೌ (ಹಿಮ್ಮಡಿ) ಪೂಜಯಾಮಿ,
ಓಂ ಭದ್ರಾಯ ನಮಃ ಜಾನುನೀ (ಮೊಣಕಾಲು) ಪೂಜಯಾಮಿ,
ಓಂ ಕಾತ್ಯಾಯಿನ್ಯೈ ನಮಃ ಜಂಘೇ (ಹಿಂಭಾಗ) ಪೂಜಯಾಮಿ,
ಓಂ ಹೈಮವತ್ಯೆ ನಮಃ ಊರೂ (ತೊಡೆ) ಪೂಜಯಾಮಿ,
ಓಂ ಈಶ್ವರ್ಯೈ ನಮಃ ಕಟಿಂ (ನಡು) ಪೂಜಯಾಮಿ,
ಓಂ ಭವದಾಯೈ ನಮಃ ಗುಹ್ಯಂ (ನಡುವಿನ ಭಾಗ) ಪೂಜಯಾಮಿ,
ಓಂ ಉಮಾಯೈನಮಃ ಉದರಂ (ಹೊಟ್ಟೆ) ಪೂಜಯಾಮಿ,
ಓಂ ಶಿವ ಪ್ರಿಯಾಯೈ ನಮಃ ನಾಭಿಂ (ಹೊಕ್ಕಳು) ಪೂಜಯಾಮಿ,
ಓಂ ಅಪರ್ಣಾಯೈ ನಮಃ ಹೃದಯಂ (ಎದೆ) ಪೂಜಯಾಮಿ,
ಓಂ ಪಾರ್ವತ್ಯೈ ನಮಃ ಕಂಠಂ (ಕತ್ತು) ಪೂಜಯಾಮಿ,
ಓಂ ದುರ್ಗಾಯೈ ನಮಃ ಸ್ಕಂಧೌ (ಗಂಟಲು) ಪೂಜಯಾಮಿ,
ಓಂ ಗೌರ್ಯೈ ನಮಃ ಹಸ್ತೌ (ಕೈಗಳು) ಪೂಜಯಾಮಿ,
ಓಂ ದಾಕ್ಷಾಯಿಣ್ಯೈ ನಮಃ ವಕ್ತ್ರಂ (ಮುಖ) ಪೂಜಯಾಮಿ,
ಓಂ ಮೃಡಾಣ್ಯೈ ನಮಃ ನಾಸಿಕಾಂ (ಮೂಗು) ಪೂಜಯಾಮಿ,
ಓಂ ಚಂಡಿಕಾಯೈ ನಮಃ ನೇತ್ರೇ (ಕಣ್ಣುಗಳು) ಪೂಜಯಾಮಿ,
ಓಂ ಗಿರಿಸುತಯೇ ನಮಃ ಕರ್ಣೌ (ಕಿವಿಗಳು) ಪೂಜಯಾಮಿ,
ಓಂ ಅಪರ್ಣಾಯೈ ನಮಃ ಲಲಾಟಂ (ಹಣೆ) ಪೂಜಯಾಮಿ,
ಓಂ ಮೇನಕಾತ್ಮಜಾಯೈ ನಮಃ ಶಿರಃ (ತಲೆ) ಪೂಜಯಾಮಿ,
ಓಂ ಮಂಗಳ ಗೌರ್ಯೈ ನಮಃ ಸರ್ವಾಂಗಾಣಿ (ಎಲ್ಲಾ ಅಂಗಗಳು) ಪೂಜಯಾಮಿ.
ಅಥ ಪತ್ರ ಪೂಜಾ (ವಿವಿದ ಬಗೆಯ ಎಲೆಗಳಿಂದ/ಪತ್ರೆಗಳಿಂದ ಪೂಜೆ ಮಾಡುವುದು)
ಓಂ ಉಮಾಯೈ ನಮಃ ಮಾಚೀ ಪತ್ರಂ ಪೂಜಯಾಮಿ,
ಓಂ ಸರ್ವ ಜನ ರಕ್ಷಿಣ್ಯಿ ನಮಃ ಸೇವಂತಿಕಾ ಪತ್ರಂ ಪೂಜಯಾಮಿ,
ಓಂ ಶಿವ ಪ್ರಿಯಾಯೈ ನಮಃ ಬಿಲ್ವ ಪತ್ರಂ ಪೂಜಯಾಮಿ,
ಓಂ ಮಲಯಾಚಲವಾಸಿನ್ಯೈ ನಮಃ ಮರುಗ ಪತ್ರಂ ಪೂಜಯಾಮಿ,
ಓಂ ಕಾತ್ಯಾಯಿನೈ ನಮಃ ಕಸ್ತೂರಿಕಾ ಪತ್ರಂ ಪೂಜಯಾಮಿ,
ಓಂ ಹೈಮವತೈ ನಮಃ ತುಳಸೀ ಪತ್ರಂ ಪೂಜಯಾಮಿ,
ಶ್ರೀ ಮಂಗಳ ಗೌರ್ಯೈ ನಮಃ ನಾನಾ ವಿಧ ಪತ್ರಾಣಿ ಪೂಜಯಾಮಿ.
ಅಥ ಪುಷ್ಪ ಪೂಜಾ (ವಿವಿಧ ಬಗೆಯ ಹೂವುಗಳಿಂದ ವಿಗ್ರಹಕ್ಕೆ ಪೂಜಿಸುವುದು)
ಓಂ ಜಗನ್ಮಾತ್ರ್ಯೈ ನಮಃ ಜಾಜೀ ಪುಷ್ಪಂ ಪೂಜಯಾಮಿ,
ಓಂ ಮಾನ್ಯಾಯೈ ನಮಃ ಮಲ್ಲಿಕಾ ಪುಷ್ಪಂ ಪೂಜಯಾಮಿ,
ಓಂ ಗಿರಿಸುತಾಯೈ ನಮಃ ಗಿರಿಕರ್ಣಿಕಾ ಪುಷ್ಪಂ ಪೂಜಯಾಮಿ,
ಓಂ ಕಾತ್ಯಾಯನೈ ನಮಃ ಕೇತಕೀ ಪುಷ್ಪಂ ಪೂಜಯಾಮಿ,
ಓಂ ಕಮಲಾಕ್ಹೈ ನಮಃ ಕಮಲ ಪುಷ್ಪಂ ಪೂಜಯಾಮಿ,
ಓಂ ಚಾಮುಂಡಾಯೈ ನಮಃ ಚಂಪಕ ಪುಷ್ಪಂ ಪೂಜಯಾಮಿ,
ಓಂ ಗಂಧರ್ವ ಸೇವಿತಾಯೈ ನಮಃ ಸೇವಂತಿಕಾ ಪುಷ್ಪಂ ಪೂಜಯಾಮಿ,
ಓಂ ಪಾರ್ವತ್ಯೈ ನಮಃ ಪಾರಿಜಾತ ಪುಷ್ಪಂ ಪೂಜಯಾಮಿ,
ಓಂ ಮಂಗಳ ಗೌರ್ಯೈ ನಮಃ ನಾನಾ ವಿಧ ಪರಿಮಳ ಪುಷ್ಪ ಪೂಜಾಂ ಸಮರ್ಪಯಾಮಿ.
ಅಥ ನಾಮ ಪೂಜಾ (ಈಗ ಅಕ್ಷತೆಯಿಂದ ಪೂಜಿಸುವುದು)
ಓಂ ಕಾತ್ಯಾಯಿನ್ಯೈ ನಮಃ, ಓಂ ಉಮಾಯೈ ನಮಃ,
ಓಂ ಭದ್ರಾಯೈ ನಮಃ, ಓಂ ಹೈಮವತ್ಯೈ ನಮಃ,
ಓಂ ಈಶ್ವರ್ಯೈ ನಮಃ, ಓಂ ಭವಾನ್ಯೈ ನಮಃ,
ಓಂ ಸರ್ವ ಪಾಪ ಹರಾಯೈ ನಮಃ, ಓಂ ಮೃಡಾಣ್ಯೈ ನಮಃ,
ಓಂ ಚಂಡಿಕಾಯೈ ನಮಃ, ಓಂ ಗಿರಿಜಾಯೈ ನಮಃ,
ಓಂ ಮೇನಕಾತ್ಮಜಾಯೈ ನಮಃ, ಓಂ ಬ್ರಾಹ್ಮಣ್ಯೈ ನಮಃ,
ಓಂ ಮಾಹೇಶ್ವರ್ಯೈ ನಮಃ, ಓಂ ಕೌಮಾರ್ಯೈ ನಮಃ,
ಓಂ ವೈಷ್ಣವ್ಯೈ ನಮಃ, ಓಂ ವಾರಾಹ್ಯೈ ನಮಃ, ಓಂ ಇಂದ್ರಾಣ್ಯೈ ನಮಃ,
ಓಂ ಚಾಮುಂಡಾಯೈ ನಮಃ, ಓಂ ಚಂಡಿಕಾಯೈ ನಮಃ,
ಓಂ ದಾಕ್ಷಾಯಿಣ್ಯೈ ನಮಃ, ಓಂ ಪರ್ವತರಾಜ ಪುತ್ರ್ಯೈ ನಮಃ,
ಓಂ ಚಂದ್ರಶೇಖರ ಪತ್ನ್ಯೈ ನಮಃ, ಓಂ ಸರ್ವೋಪದ್ರವನಾಶಿನ್ಯೈ ನಮಃ,
ಓಂ ಶ್ರೀ ಸ್ವರ್ಣ ಗೌರ್ಯೈ ನಮಃ, ಓಂ ಧೀರಾಯೈ ನಮಃ,
ಓಂ ಸತ್ಯಾಯೈ ನಮಃ, ಓಂ ಮಾಯಾಯೈ ನಮಃ,
ಓಂ ಮನೋನ್ಮಣ್ಯೈ ನಮಃ.
ಓಂ ಶ್ರೀ ಮಂಗಳ ಗೌರ್ಯೈ ನಮಃ,ಇತಿ ನಾಮ ಪೂಜಾಂ ಸಮರ್ಪಯಾಮಿ.
ಅಥ ದೋರ ಗ್ರಂಥಿ ಪೂಜಾ (ಈಗ ಅಕ್ಷತೆಯಿಂದ ಮತ್ತು ಕೊನೆಯಲ್ಲಿ ಒಂದು ಹೂವಿನಿಂದ ಮಂಟಪದ ಮೇಲಿಟ್ಟಿರುವ ಹದಿನಾರು ಎಳೆ ಅರಿಶಿನದ ದಾರಕ್ಕೆ ಪೂಜಿಸುವುದು)
ಸ್ವರ್ಣ ಗೌರ್ಯೈ ನಮಃ ಪ್ರಥಮ ಗ್ರಂಥಿಂ ಪೂಜಯಾಮಿ,
ಮಹಾಗೌರ್ಯೈ ನಮಃ ದ್ವಿತೀಯ ಗ್ರಂಥಿಂ ಪೂಜಯಾಮಿ,
ಕಾತ್ಯಾಯಿನ್ಯೈ ನಮಃ ತೃತೀಯ ಗ್ರಂಥಿಂ ಪೂಜಯಾಮಿ,
ಕೌಮಾರ್ಯೈ ನಮಃ ಚತುರ್ಥ ಗ್ರಂಥಿಂ ಪೂಜಯಾಮಿ,
ಭದ್ರಾಯೈ ನಮಃ ಪಂಚಮ ಗ್ರಂಥಿಂ ಪೂಜಯಾಮಿ,
ವಿಷ್ಣು ಸೋದರ್ಯೈ ನಮಃ ಷಷ್ಟ ಗ್ರಂಥಿಂ ಪೂಜಯಾಮಿ,
ಮಂಗಳ ದೇವತಾಯೈ ನಮಃ ಸಪ್ತಮ ಗ್ರಂಥಿಂ ಪೂಜಯಾಮಿ,
ರಾಕೇಂದು ವದನಾಯೈನಮಃ ಅಷ್ಟಮ ಗ್ರಂಥಿಂ ಪೂಜಯಾಮಿ,
ಚಂದ್ರಶೇಖರ ಪತ್ನ್ಯೈ ನಮಃ ನವಮ ಗ್ರಂಥಿಂ ಪೂಜಯಾಮಿ,
ವಿಶ್ವೇಶ್ವರ ಪ್ರಿಯಾಯೈ ನಮಃ ದಶಮ ಗ್ರಂಥಿಂ ಪೂಜಯಾಮಿ,
ದಾಕ್ಷಾಯಿಣ್ಯೈ ನಮಃ ಏಕಾದಶ ಗ್ರಂಥಿಂ ಪೂಜಯಾಮಿ,
ಕ್ರಿಷ್ಣವೇಣ್ಯೈ ನಮಃ ದ್ವಾದಶ ಗ್ರಂಥಿಂ ಪೂಜಯಾಮಿ,
ಭವಾನ್ಯೈ ನಮಃ ತ್ರಯೋದಶ ಗ್ರಂಥಿಂ ಪೂಜಯಾಮಿ,
ಲೋಲಲೋಚನಾಯೈ ನಮಃ ಚತುರ್ದಶ ಗ್ರಂಥಿಂ ಪೂಜಯಾಮಿ,
ಮೇನಕಾತ್ಮಜಾಯೈ ನಮಃ ಪಂಚದಶ ಗ್ರಂಥಿಂ ಪೂಜಯಾಮಿ,
ಮಂಗಳ ಗೌರ್ಯೈ ನಮಃ ಷೋಡಶ ಗ್ರಂಥಿಂ ಪೂಜಯಾಮಿ,
ಶ್ರೀ ಮಂಗಳ ಗೌರ್ಯೈ ನಮಃ ದೋರ ಗ್ರಂಥಿ ಪೂಜಾಂ ಸಮರ್ಪಯಾಮಿ .
ಅಥ ಅಷ್ಟ್ಹೋತ್ತರ ಪೂಜಾ (ನಮಃ ಎಂದಾಗ ಅರಿಶಿನ ಮತ್ತು ಕುಂಕುಮದಿಂದ ಪೂಜಿಸುತ್ತಿರುವುದು) (ಅನುಕೂಲಕ್ಕೆ ನಿಮ್ಮ ಮುಂದೆ ಎರಡು ವೀಳ್ಯದೆಲೆ ಅಥವಾ ಬೆಳ್ಳಿಯ ಗೌರಿಯ ವಿಗ್ರಹವನ್ನು ಇಟ್ಟುಕೊಂಡು ಪೂಜಿಸಬಹುದು. ನಂತರ ಇದನ್ನು ಮಂಟಪದಲ್ಲಿ ವಿಗ್ರಹದ ಮುಂದೆ ಅಥವಾ ಪಕ್ಕದಲ್ಲಿ ಇಡಬಹುದು)
ಓಂ ಅನೇಕ ಕೋಟಿ ಭಾಸ್ಕರ ವಲ್ಲಭಾಯೈ ನಮಃ, ಓಂ ಅನೇಕ ಸೌಭಾಗ್ಯ ಧಾತ್ರ್ಯೈ ನಮಃ,
ಓಂ ಆಪರಾಜಿತಾಯೈ ನಮಃ,
ಓಂ ಆನಂದ ವಿಗ್ರಹಾಯೈ ನಮಃ, ಓಂ ಆದ್ಯಂತ ರಹಿತಾಯೈ ನಮಃ,
ಓಂ ಇಂದಿರಾರತಿ ಸಂಸೇವ್ಯಾಯೈ ನಮಃ, ಓಂ ಈಶಣತ್ರಯ ನಿರ್ಮುಕ್ತಾಯೈ ನಮಃ,
ಓಂ ಈಶ್ವರೋತ್ಸಂಗ ನಿಲಯಾಯೈ ನಮಃ, ಓಂ ಈತಿ ಭಾದಾ ವಿನಾಶಿಣ್ಯೈ ನಮಃ,
ಓಂ ಈಶ್ವರಾರ್ದ ಶರೀರಣ್ಯೈ ನಮಃ, ಓಂ ಉತ್ಪಾತಾದಿ ವಿನಿರ್ಮುಕ್ತಾಯೈ ನಮಃ,
ಓಂ ಊರ್ದ್ವಲೋಕ ಪ್ರಧಾತ್ಯೈ ನಮಃ, ಓಂ ಏಕಾಕ್ಷರಾಯೈ ನಮಃ,
ಓಂ ಏಕರೂಪಾಯೈ ನಮಃ, ಓಂ ಐಶ್ವರ್ಯ ಫಲದಾಯಿನ್ಯೈ ನಮಃ,
ಓಂ ಔದಾರ್ಯಾದಿ ಪ್ರಧಾಯೈ ನಮಃ, ಓಂ ಓಂಕಾರ ವರ್ಣ ನಿಲಯಾಯ ನಮಃ,
ಓಂ ಅಂಬಿಕಾಯೈ ನಮಃ, ಓಂ ಕಮಲಾರಾಧಾೄಯೈ ನಮಃ,
ಓಂ ಕರುಣಾರಸ ಸಾಗರಾಯೈ ನಮಃ, ಓಂ ಕಲಿಪ್ರಭೃತಿ ಸಂಸೇವ್ಯಾಯೈ ನಮಃ,
ಓಂ ಕಮಲಾಸನ ಸಂಸ್ತುತಾಯೈ, ಓಂ ಕಲ್ಯಾಣ್ಯೈ ನಮಃ,
ಓಂ ಕಲ್ಲ್ಹಾರ ಭೂಶಿತಾಯೈ ನಮಃ, ಓಂ ಕರೀಂದ್ರಾರೂಢ ಸಂಸೇವ್ಯಾಯೈ ನಮಃ,
ಓಂ ಕಮಲೇಶ ಸಹೋದರ್ಯೈ ನಮಃ, ಓಂ ಕವಿರಾಜ ಮನೋಹರ್ಯಾಯೈ ನಮಃ,
ಓಂ ಕಾಮಾಕ್ಷ್ಯೈ ನಮಃ, ಓಂ ಕಾಮಧಾತ್ರ್ಯೈ ನಮಃ,
ಓಂ ಕಾಮೇಶಾಂಕ ನಿವಾಸಿನ್ಯೈ ನಮಃ, ಓಂ ಗುರುಮೂರ್ತಿ ಸ್ವರೂಪಿಣ್ಯೈ ನಮಃ,
ಓಂ ಗಿರಿಜಾ ಕನ್ಯಾಯೈ ನಮಃ, ಓಂ ಗಾಯತ್ರೈೄ ನಮಃ,
ಓಂ ಗೂಡಾರ್ಥ ಬ್ಹೋಧಿನ್ಯೈ ನಮಃ, ಓಂ ಚಂದ್ರಶೇಖರ ಅರ್ಧಾಂಗ್ಯೈ ನಮಃ,
ಓಂ ಚೂಡಾಮಣಿ ವಿಭೂಷಿತಾಯೈ ನಮಃ, ಓಂ ಜಾಜೀ, ಚಂಪಕ, ಪುನ್ನಾಗ, ಕೇತಕೀ ಕುಸುಮಾರ್ಚಿತಾಯೈ ನಮಃ,
ಓಂ ನಾರಾಯಣ್ಯೈ ನಮಃ, ಓಂ ನಾಮ ರೂಪ ವಿವರ್ಜಿತಾಯೈ ನಮಃ,
ಓಂ ಪರಮಾನಂದ ರೂಪಾಯೈ ನಮಃ, ಓಂ ಪರಮಾನಂದದಾಯೈ ನಮಃ,
ಓಂ ಪಾಶಾಂಕುಶ ಭಯಾವರ ವಿಲಸತ್ಕರ ಪಲ್ಲವಾಯೈ ನಮಃ , ಓಂ ಪುರಾಣ ಪುರುಷವ್ಯಾಯೈ ನಮಃ,
ಓಂ ಪುಷ್ಪಮಾಲಾ ವಿರಾಜಿತಾಯೈ ನಮಃ, ಓಂ ಫಣೀಂದ್ರ ರತ್ನ ಶೋಭಾಢಾೄಯೈ ನಮಃ,
ಓಂ ಬದರೀ ವನ ವಾಸಿನ್ಯೈ ನಮಃ, ಓಂ ಬಾಲಾಯೈ ನಮಃ,
ಓಂ ಬಿಲ್ವ ಪೂಜಿತಾಯೈ ನಮಃ, ಓಂ ಬಿಂಬೊಷ್ಟ್ಯಿ ನಮಃ,
ಓಂ ಬಿಂದು ಚಕ್ರೈಕ್ಯ ನಿಲಯಾಯೈ ನಮಃ, ಓಂ ಭವಾರಣ್ಯದವಾನಲಾಯೈನಮಃ,
ಓಂ ಭವರೋಗ್ಯೈ ನಮಃ, ಓಂ ಭವದೇಹಾರ್ಧ ಧಾರಿಣ್ಯೈ ನಮಃ,
ಓಂ ಭಕ್ತಸೇವ್ಯಾಯೈ ನಮಃ, ಓಂ ಭಕ್ತಗಣ್ಯಾಯೈ ನಮಃ,
ಓಂ ಭವಾನ್ಯೈ ನಮಃ, ಓಂ ಭಾವರೂಪಾಯೈ ನಮಃ,
ಓಂ ಭಾಗ್ಯವೃದ್ಧಿ ಪ್ರದಾಯಿನ್ಯೈ ನಮಃ, ಓಂ ಭೂತಿಧಾತ್ರೈ ನಮಃ,
ಓಂ ಭ್ಯೈರವಾದಿ ಸಂವೃತಾಯೈ ನಮಃ, ಓಂ ಶ್ರೀ ಮಹಾದೇವ್ಯೈ ನಮಃ,
ಓಂ ಶ್ರೀ ಮಹಾವಿದ್ಯಾಯೈನಮಃ, ಓಂ ಮಹಿಷಾಸುರ ಮರ್ಧಿನ್ಯೈ ನಮಃ,
ಓಂ ಶ್ರೀ ಮಹೇಶ್ವರ್ಯೈ ನಮಃ, ಓಂ ಶ್ರೀ ಮನ್ಮುಕುಟ ಮಂಡಿತಾಯೈನಮಃ, ನಮಃ,
ಓಂ ಶ್ರೀ ಮನ್ಮುನೀಂದ್ರ ಸಂಸೇವ್ಯಾಯೈ ನಮಃ, ಓಂ ಶ್ರೀಮನ್ನಮರನಾಯಕಾಯೈ ನಮಃ,
ಓಂ ಮುಕ್ತಿ ಧಾತ್ರ್ಯೈ ನಮಃ, ಓಂ ತನು ಮಧ್ಯಾಯೈ ನಮಃ,
ಓಂ ತ್ರಿಪುರಾಯೈ ನಮಃ, ಓಂ ತ್ರಿಪುರೇಶ್ವರ್ಯೈ ನಮಃ,
ಓಂ ತ್ರಿಪುರ ಸೌಂದರ್ಯೈ ನಮಃ, ಓಂ ದಾನವೇಂದ್ರ ಸಂಹೃತ್ಯೈ ನಮಃ,
ಓಂ ದೀನ ರಕ್ಷಿಣ್ಯೈ ನಮಃ, ಓಂ ಧನ ಧಾನ್ಯಾಭಿವೃದ್ಧಿದಾಯೈ ನಮಃ,
ಓಂ ನಕುಲಾಯೈ ನಮಃ, ಓಂ ರಾಜರಾಜೇಶ್ವರ್ಯೈ ನಮಃ,
ಓಂ ಲಕ್ಶಾರ್ಧ್ಯ ರೂಪಾಯೈ ನಮಃ, ಓಂ ಲಕ್ಷ್ಮೀಶ ಬ್ರಹ್ಮೇಶಾಮರ ಪೂಜಿತಾಯೈನಮಃ,
ಓಂ ಲಲಿತಾಯೈ ನಮಃ, ಓಂ ಲಬ್ದ್ಯೈಶ್ವರ್ಯ ಪ್ರವರ್ತಿಣ್ಯೈ ನಮಃ,
ಓಂ ಲಕ್ಷ್ಯಗಾಘೋಶಾಂಭಾಯೈ ನಮಃ, ಓಂ ಲಾಕಿನಿ ಸೇವ್ಯಾಯೈ ನಮಃ,
ಓಂ ವಿದ್ಯಾ ಪ್ರತಿಪಾದಿನ್ಯೈ ನಮಃ, ಓಂ ವಿದ್ಯಾ ಪ್ರದ್ಯಾಯಿಣ್ಯೈ ನಮಃ,
ಓಂ ವಿಶ್ವ ಮೋಹಿನ್ಯೈ ನಮಃ, ಓಂ ವಿಕ್ರಮ ಸಂಹೃಷ್ಟಾಯೈ ನಮಃ,
ಓಂ ಸಮಸ್ತಲೋಕ ಜನನ್ಯೈ ನಮಃ, ಓಂ ಸರ್ವಲಭ್ಯಾಯೈ ನಮಃ,
ಓಂ ಸಮಸ್ತ ಪ್ರಾಣಿ ನಿಲಯಾಯೈ ನಮಃ, ಓಂ ಸರ್ವಲೋಕ ಸುಂದರ್ಯೈ ನಮಃ,
ಓಂ ಸರ್ವ ಭೂತೇಶ್ವರ್ಯೈ ನಮಃ, ಓಂ ಸರ್ವೆಷ್ಟಾಯೈ ನಮಃ,
ಓಂ ಸರ್ವೇಶ್ವರ್ಯೈ ನಮಃ, ಓಂ ಸ್ವಧರ್ಮ ಪರ ಸಂಸೇವ್ಯಾಯೈ ನಮಃ,
ಓಂ ಶತೃ ಸಂಹತ್ರ್ಯೈ ನಮಃ, ಓಂ ಶಾರದಾ ಸಂಸೇವ್ಯಾಯೈ ನಮಃ,
ಓಂ ಶಾಂಕರ್ಯೈ ನಮಃ, ಓಂ ಶ್ರೀಮದ್ ಸಿಂಹಾಸನೇಶ್ವರ್ಯೈ ನಮಃ,
ಓಂ ಹರಾರ್ಧ ದೇಹಾಯೈ ನಮಃ, ಓಂ ಹರಿಲೋಚನಾಯೈ ನಮಃ,
ಓಂ ಹಾನಿ ವೃದ್ಧಿ ವಿವರ್ಜಿತಾಯೈ ನಮಃ, ಓಂ ಹೃತ್ಸರೋರುವಾಸಿಣ್ಯೈ ನಮಃ,
ಓಂ ಹ್ರೀಂಕಾರ ಪದ್ಮ ನಿಲಯಾಯೈ ನಮಃ, ಓಂ ಹ್ರೀಂಕಾರಾರ್ಣವ ಕೌಸ್ತುಭಾಯೈ ನಮಃ,
ಓಂ ಹ್ರೀಂಕಾರ ಬಿಂದು ಲಕ್ಷಿತಾಯೈ ನಮಃ,
ಓಂ ಶ್ರೀ ಮಂಗಳ ಗೌರ್ಯೈ ನಮಃ, ಇತಿ ಅಷ್ಟ್ಹೋತ್ತರ ಶತನಾಮ ಪೂಜಾಂ ಸಮರ್ಪಯಾಮಿ.
ಧೂಪಂ (ಧೂಪ ಅಥವಾ ಊದು ಬತ್ತಿಯನ್ನು ಹಚ್ಚಿ ಮೂರ್ತಿಯ ಮುಂದೆ ಮೂರು ಬಾರಿ ಎಡ ಬದಿಯಿಂದ ಬಲ ಬದಿಗೆ ಗಡಿಯಾರದ ಮುಳ್ಳಿನ ಚಲನೆಯ ರೀತಿ ತಿರುಗಿಸುವುದು)
ದಶಾಂಗಂ ಗುಗ್ಗುಲಂ ಧೂಪಂ ಸುಗಂಧಂ ಚ ಮನೋಹರಂ,
ಮಹಾ ಮಾತೇ ನಮಸ್ತುಭ್ಯಂ ಗೃಹಾಣ ವರದೋ ಭವ.
ಶ್ರೀ ಮಂಗಳ ಗೌರ್ಯೈ ನಮಃ, ಧೂಪಂ ದರ್ಶಯಾಮಿ.
ದೀಪಂ (ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಮೂರು ಹೂಬತ್ತಿಯನ್ನು ಇಟ್ಟು ದೀಪ ಹಚ್ಚಿಕೊಳ್ಳ್ಳುವುದು . ನಿಮ್ಮ ಕೈಯಲ್ಲಿ ಸ್ವಲ್ಪ ಅಕ್ಷತೆ, ಒಂದು ಹೂವು ಮತ್ತು ಹಲಗಾರತಿ ಹಿಡಿದು ಎಡಗೈಯಲ್ಲಿ ಘಂಟೆ ಬಾರಿಸುತ್ತಾ ಮೇಲೆ ಹೇಳಿದಂತೆ ಮೂರು ಬಾರಿ ಆರತಿ ಮಾಡುವುದು)
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾದ್ಯೋತಿತಂ ಮಯಾ,
ಗೃಹಾಣ ಮಂಗಳಂ ದೀಪಂ ಈಶ ಪತ್ನ್ಯೈ ನಮೋಸ್ತುತೇ.
ಶ್ರೀ ಮಂಗಳ ಗೌರ್ಯೈ ನಮಃ, ದೀಪಂ ದರ್ಶಯಾಮಿ.
ಮಹಾ ನೈವೇದ್ಯ (ಮಂಟಪದ ಮುಂದೆ ಸ್ವಚ್ಚವಾದ ಜಾಗದಲ್ಲಿ ಕಳಶದ ನೀರಿನಿಂದ ಒಂದು ಮಂಡಲವನ್ನು ಮಾಡಿ ಅದರ ಮೇಲೆ ಸ್ವಲ್ಪ ಅಕ್ಷತೆ ಹಾಕುವುದು, ಐದು ವಿವಿಧ ಬಗೆಯ ಹಣ್ಣುಗಳನ್ನು ತಟ್ಟೆಯಲ್ಲಿ ಎರಡು ವೀಳ್ಯದ ಎಲೆಯ ಮೇಲೆ ಇಡುವುದು. ವೀಳ್ಯದೆಲೆ ಮೇಲೆ ಸ್ವಲ್ಪ ಅಡಕೆಯನ್ನು ಇಡಲು ಮರೆಯದಿರಿ. ಇದೇ ರೀತಿ ಇನ್ನೊಂದು ಮಂಡಲವನ್ನು ಮಾಡಿ, ಅಕ್ಷತೆ ಹಾಕಿ ತಟ್ಟೆಯಲ್ಲಿ ವಿವಿಧ ಬಗೆಯ ಭಕ್ಷ್ಯಗಳನ್ನು ಸ್ವಲ್ಪ ಸ್ವಲ್ಪ ಇಡುವುದು. ಎರಡೂ ತಟ್ಟೆಗಳ ಮೇಲೆ ತುಳಸಿ ದಳಗಳನ್ನು ಹಾಕಿ. ಬಲಗೈನಲ್ಲಿ ಸ್ವಲ್ಪ ಕಳಶದ ನೀರನ್ನು ಹಾಕಿಕೊಂಡು ಎರಡೂ ತಟ್ಟೆಗಳ ಸುತ್ತ ಹಾಕುವುದು. ಸ್ವಲ್ಪ ನೀರನ್ನು ತಟ್ಟೆಗಳ ಮೇಲೆ ಚುಮುಕಿಸಿ. ವೀಳ್ಯದ ಎಲೆಯ ತುದಿಯನ್ನು ಮತ್ತು ಒಂದು ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಮುರಿಯುವುದು. ಮಂತ್ರ ಹೇಳುವಾಗ ಸ್ವಾಹಾ ಎಂದಾಗಲೆಲ್ಲಾ ಎರಡೂ ಕೈಗಳ ಅಂಗೈಯನ್ನು ತಟ್ಟೆಯಿಂದ ದೇವರ ಮೂರ್ತಿಯ ಕಡೆಗೆ ಚಲಿಸುವುದು)
ನೈವೇದ್ಯಂ ಷಡದ್ರಸೋಪೇತಂ ವರದೇ ಭಕ್ತವತ್ಸಲೇ
ಮಯಾ ಸಮರ್ಪಿತಂ ದೇವೀ ಪ್ರೀತ್ಯರ್ಥಂ ಪ್ರತಿಗೃಹ್ಯತಾಂ.
ಸತ್ಯಂತ್ವರ್ತೇನ ಪರಿಷೀಂಚಾಮಿ
ಅಮೃತಮಸ್ತು, ಅಮೃತೋಪಸ್ತರಣಮಸಿ ಸ್ವಾಹಾ,
ಓಂ ಪ್ರಾಣಾಯಸ್ವಾಹಾ, ಅಪಾನಾಯ ಸ್ವಾಹಾ,
ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ,
ಸಮಾನಾಯ ಸ್ವಾಹಾ, ಬ್ರಹ್ಮಣೇ ಸ್ವಾಹಾ.
ಶ್ರೀ ಮಂಗಳ ಗೌರ್ಯೈ ನಮಃ ಮಹಾ ನೈವೇದ್ಯಂ ಸಮರ್ಪಯಾಮಿ,
ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ,
ಉತ್ತರಾಪೋಷಣಂ ಸಮರ್ಪಯಾಮಿ,
ಹಸ್ತ ಪ್ರಕ್ಷಾಳನಂ ಸಮರ್ಪಯಾಮಿ,
ಪಾದ ಪ್ರಕ್ಷಾಳನಂ ಸಮರ್ಪಯಾಮಿ,
ಕರೋದ್ವರ್ತನಂ ಸಮರ್ಪಯಾಮಿ,
ಪುನರಾಚಮನೀಯಂ ಸಮರ್ಪಯಾಮಿ.
ಮಹಾ ಫಲಂ (ಒಂದು ದೊಡ್ಡ ಹಣ್ಣನ್ನು ಇಟ್ಟು, ಇದರ ಮೇಲೆ ಸ್ವಲ್ಪ ತುಳಸಿ ಅಥವಾ ಅಕ್ಷತೆಯನ್ನು ಹಾಕುವುದು)
ಇದಂ ಫಲಂ ಮಯಾದೇವಿ ಸ್ಥಾಪಿತಂ ಪುರತಸ್ತವ.
ತೇನ ಮೇ ಸಫಲಾವಾಪ್ತಿರ್ಭವೇತ್ ಜನ್ಮನಿ ಜನ್ಮನಿ.
ಓಂ ಶ್ರೀ ಮಂಗಳ ಗೌರ್ಯೈ ನಮಃ ಮಹಾ ಫಲಂ ಸಮರ್ಪಯಾಮಿ.
ಫಲಾಷ್ಟಕ (ತಟ್ಟೆಯಲ್ಲಿರುವ ಒಂದು ಹಣ್ಣಿನ ಮೇಲ್ಭಾಗವನ್ನು ಸ್ವಲ್ಪ ತೆಗೆದು, ಹಣ್ಣು ತೆಂಗಿನಕಾಯಿಯನ್ನು ದೇವರಿಗೆ ತೋರಿಸುವುದು)
ಫಲ ತೋಯೈ, ಗಂಧ ತೋಯೈ, ನಾರಿಕೇಳ ಕುಶೋಧಕೈ,
ನಾರಂಗ ಕದಲೀ ಮತುಲುಂಗಕಂ ಇಕ್ಷು ಖಂಡಂ ಗೃಹಾಣೇಶ, ಪ್ರತಿಗೃಹ್ಯತಾಂ.
ದಾಡಿಂಬ ಬದರೀ ಜಂಬೂ ಕಪಿತ್ಥಂ ಪ್ರಭ್ರತೀನಿ ಚ,
ದ್ರಾಕ್ಷ್ಯಾ ಖರ್ಜೂರ ಪನಸ ಫಲಾನಿ ಪ್ರತಿಗೃಹ್ಯತಾಂ.
ನಾನಾರ್ಥಂತೆ ಪ್ರಯಚ್ಚಾಮಿ, ಸ್ವೀಕುರುಷ್ಯ ಮಹೇಶ್ವರಿ.
ಶ್ರೀ ಮಂಗಳ ಗೌರ್ಯೈ ನಮಃ, ಫಲಾಷ್ಟಕಂ ಸಮರ್ಪಯಾಮಿ .
ತಾಂಬೂಲಂ (ತಟ್ಟೆಯಲ್ಲಿರುವ ವೀಳ್ಯದೆಲೆಯ ತೊಟ್ಟನ್ನು ಮುರಿದು, ತಾಂಬೂಲವನ್ನು ತೋರಿಸುವುದು)
ಫೂಗೀಫಲ ಸಮಾಯುಕ್ತಂ ನಾಗವಲ್ಲೀದಲೈರ್ಯುತಂ,
ಏಲಾ, ಲವಂಗ ಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಂ.
ಶ್ರೀ ಮಂಗಳ ಗೌರ್ಯೈ ನಮಃ, ತಾಂಬೂಲಂ ಸಮರ್ಪಯಾಮಿ.
ದಕ್ಷಿಣೆ (ವೀಳ್ಯದೆಲೆಯ ಮೇಲೆ ಇಟ್ಟಿರುವ ದಕ್ಷಿಣೆಯನ್ನು ತೋರಿಸುವುದು)
ಹಿರಣ್ಯಗರ್ಭಗರ್ಭಸ್ಥಂ ಹೇಮಭೀಜಂ ವಿಭಾವಸೋಃ.
ಅನಂತ ಪುಣ್ಯ ಫಲದಂ ಅತಶ್ಯಾಂತಿಂ ಪ್ರಯಚ್ಚಮೆ.
ಶ್ರೀ ಮಂಗಳ ಗೌರ್ಯೈ ನಮಃ, ಸುವರ್ಣ ದಕ್ಷಿಣಾಂ ಸಮರ್ಪಯಾಮಿ.
ಮಹಾ ಮಂಗಳಾರತಿ (ಒಂದು ಹಲಗಾರತಿಯಲ್ಲಿ ತುಪ್ಪದಲ್ಲಿ ಅದ್ದಿದ ಐದು ಹೂಬತ್ತಿಗಳನ್ನು ಇಟ್ಟುಕೊಳ್ಳುವುದು. ಹಲಗಾರತಿಯ ಇನ್ನೊಂದು ತುದಿಯಲ್ಲಿ ಸ್ವಲ್ಪ ಹೂವು , ಅಕ್ಷತೆಯನ್ನು ಇಟ್ಟುಕೊಳ್ಳುವುದು, ಇದು ಮಹಾ ಮಂಗಳಾರತಿ ಆದ್ದರಿಂದ ಮನೆಯಲ್ಲಿರುವವರನ್ನೆಲ್ಲ ಒಟ್ಟಿಗೆ ನಿಂತುಕೊಂಡು ಕೈ ಮುಗಿದುಕೊಳ್ಳಲು ಹೇಳಿ. ಮಂಗಳಾರತಿಯನ್ನು ಕನಿಷ್ಠ ಮೂರು/ಐದು ಬಾರಿ ಪಾದದಿಂದ ಶಿರದ ತನಕ ಮಾಡುವುದು)
ಘ್ರುತವರ್ತಿ ಸಮಾಯುಕ್ತಂ ಘನಸಾರಸುದೀಪ್ತಿತಂ,
ನೀರಾಜನಮಿದಂ ದೇವಿ ಗೃಹಾಣ ಶಿವವಲ್ಲಭೆ.
ಶ್ರೀ ಮಂಗಳ ಗೌರ್ಯೈ ನಮಃ, ಮಹಾ ನೀರಾಜನಂ ಸಮರ್ಪಯಾಮಿ.
ಮಹಾ ನೀರಾಜನ ನಂತರಂ ಆಚಮನೀಯಂ ಸಮರ್ಪಯಾಮಿ.
(ಹೂವು ಮತ್ತು ಅಕ್ಷತೆಯನ್ನು ದೇವರಿಗೆ ಅರ್ಪಿಸುವುದು. ಒಂದು ಉದ್ಧರಣೆ ಆಚಮನದ ನೀರನ್ನು ಪಾತ್ರೆಗೆ ಬಿಟ್ಟು ನೀವು ಮೊದಲು ಮಂಗಳಾರತಿಯನ್ನು ತೆಗೆದುಕೊಂಡು ನಂತರ ಉಳಿದವರಿಗೆಲ್ಲಾ ಕೊಡುವುದು)
ಪ್ರದಕ್ಷಿಣೆ (ಎಲ್ಲರೂ ಮೂರು ಬಾರಿ ಪ್ರದಕ್ಷಿಣೆ ಹಾಕುವುದು)
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ,
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ.
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ,
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಮಹೇಶ್ವರೀ,
ಓಂ ಶ್ರೀ ಮಂಗಳ ಗೌರ್ಯೈ ನಮಃ, ಪ್ರದಕ್ಷಿಣಾನ್ ಸಮರ್ಪಯಾಮಿ.
ನಮಸ್ಕಾರ (ಎರಡೂ ಕೈಗಳನ್ನು ಜೋಡಿಸಿ ಮಂಡಿ ಊರಿ ಬಗ್ಗಿ ನಮಸ್ಕಿರಿಸುವುದು. ಮಹಿಳೆಯರು ಸಾಷ್ಟ್ಹಾಂಗ ನಮಸ್ಕಾರ ಮಾಡಬಾರದು)
ನಮಃ ಸರ್ವ ಹಿತಾರ್ಥಾಯ ಜಗದಾಧಾರ ಹೇತವೇ,
ಪಂಚಾಂಗೋಯಂ ಪ್ರಣಾಮಸ್ತೇ ಪ್ರಯತ್ನೇನ ಮಯಾ ಕೃತಃ,
ಶಾಂತ್ಯೇನಾಪಿ ನಮಸ್ಕಾರಾನ್ ಕುರ್ವತಃ ಶಾಂಘ್ಯಪಾಣಯೇ,
ಶತ ಜನ್ಮಾರ್ಚಿತಂ ಪಾಪಂ ತತ್ಕ್ಷಣಮೇವ ನಶ್ಯತಿ.
ಶ್ರೀ ಮಂಗಳ ಗೌರ್ಯೈ ನಮಃ, ಪಂಚಾಂಗ ನಮಸ್ಕಾರಾನ್ ಸಮರ್ಪಯಾಮಿ.
ದೋರ ಬಂಧನಂ (ಮಂಟಪದಲ್ಲಿಟ್ಟಿರುವ ಹದಿನಾರು ಎಳೆ ದಾರವನ್ನು ಈಗ ನಿಮ್ಮ ಬಲಗೈಗೆ ಪತಿಯಿಂದ ಅಥವಾ ಹಿರಿಯರಿಂದ ಕಟ್ಟಿಸಿಕೊಂಡು ಹೀಗೆ ಪ್ರಾರ್ಥನೆ ಮಾಡುವುದು)
ಭಕ್ತ ಪ್ರಿಯೆ ಮಹಾದೇವಿ ಸರ್ವೈಶ್ವರ್ಯ ಪ್ರದಾಯಿನಿ,
ಸೂತ್ರಂತೆ ಧಾರಯಶ್ಯಾಮಿ ಮಮಾಭೀಷ್ಥ್ಂ ಸದಾ ಕುರು.
ದೋರ ಬಂಧನಂ
(ನಿಮ್ಮ ಪತಿಗೆ ಅಥವಾ ಹಿರಿಯರ ಪಾದಕ್ಕೆ ನಮಸ್ಕರಿಸುವುದು)
ಪುನರರ್ಘ್ಯ
ಕಮಲೋತ್ಪಲಕಲ್ಹಾರಗಂಧವಾಸಿತವಾರಿಣಾ,
ಪುನರರ್ಘ್ಯಂ ಪ್ರದಾಸ್ಯಾಮಿ ದೇಹಿಮೇ ಪರಮಾಂಗತಿಂ,
ಪುನರರ್ಘ್ಯಂ ಸಮರ್ಪಯಾಮಿ.
(ಒಂದು ಉದ್ಧರಣೆ ಕಳಶದ ನೀರನ್ನು ಅರ್ಘ್ಯ ಪಾತ್ರೆಗೆ ಬಿಡುವುದು)
ಮಾಲಾರ್ಪಣೆ (ನೀವು ಮಾಡಿಕೊಂಡಿರುವ ಅಲಂಕೃತ ಹತ್ತಿಯ ಅಥವಾ ಹೂವಿನ ಮಾಲೆಯನ್ನು ಮೂರ್ತಿಗೆ ಹಾಕಬಹುದು)
ಪುನಃ ಪೂಜೆ (ಈಗ ದೇವರಿಗೆ ಮತ್ತೊಮ್ಮೆ ವಿಶೇಷ ರಾಜೋಪಚಾರಗಳನ್ನು ಮಾಡಿ ಪೂಜೆಯನ್ನು ಅಂತ್ಯಗೊಳಿಸಬೇಕು)
ಆರಾಧಿತಾನಾಂ ದೇವಾನಾಂ ಪುನಃ ಪೂಜಾಂ ಕರಿಷ್ಯೇ.
ಗೃಹಾಣ ಪರಮೇಶಾನಸರತ್ನೇ ಛತ್ರ ಚಾಮರೇ,
ದರ್ಪಣಂ ವ್ಯಜನಂ ಚೈವ ರಾಜಭೋಗಾಯ ಯತ್ನತಃ,
ಶ್ರೀ ಮಂಗಳ ಗೌರ್ಯೈ ನಮಃ, ಪುನಃ ಪೂಜಾಂ ಕರಿಷ್ಯೇ.
ಸರತ್ನೇ ಛತ್ರಂ ಸಮರ್ಪಯಾಮಿ, ಚಾಮರಂ ಸಮರ್ಪಯಾಮಿ,
ನೃತ್ಯಂ ಸಮರ್ಪಯಾಮಿ, ಗೀತಂ ಶ್ರಾವಯಾಮಿ,
ವಾದ್ಯಂ ಸಮರ್ಪಯಾಮಿ, ಆಂದೋಳನಮಾರೋಹಣಾಮಿ,
ಅಶ್ವಮಾರೋಹಣಾಮಿ, ಗಜಮಾರೋಹಣಾಮಿ,
ಪುರಾಣಶ್ರವಣಂ ಸಮರ್ಪಯಾಮಿ, ಪಂಚಾಂಗ ಶ್ರವಣಂ ಸಮರ್ಪಯಾಮಿ,
ಸಮಸ್ತ ರಾಜೋಪಚಾರ ದೇವೊಪಚಾರ ಭಕ್ತ್ಯೋಪಚಾರ
ಶಕ್ತ್ಯೋಪಚಾರ ಸರ್ವೋಪಚಾರ ಪೂಜಾಂ ಸಮರ್ಪಯಾಮಿ.
ಸಮಸ್ತ ರಾಜೋಪಚಾರಾರ್ಥೇ ಅಕ್ಷತಾಂ ಸಮರ್ಪಯಾಮಿ (ಸ್ವಲ್ಪ ಅಕ್ಷತೆಯನ್ನು ಪೂಜೆ ಮಾಡುವುದು)
ಪುಷ್ಪ ಮತ್ತು ಕ್ಷಮಾಪಣೆ ಮಂತ್ರ (ಕೈಯಲ್ಲಿ ಹೂವನ್ನು ಹಿಡಿದು ನಿಂತು ಕೊಳ್ಳುವುದು)
ಯಸ್ಯಸ್ಮ್ರುತ್ಯಾಚ ನಾಮೊಕ್ತ್ಯಾ ತಪಃ ಪೂಜಾ ಕ್ರಿಯಾದಿಷು,
ನ್ಯೂನಂ ಸoಪೂರ್ಣತಾಂ ಯಾತಿ ಸಧ್ಯೋವಂದೇ ತಮಚ್ಯುತಂ,
ಮಂತ್ರ ಹೀನಂ, ಕ್ರಿಯಾ ಹೀನಂ, ಭಕ್ತಿ ಹೀನಂ ಮಹೇಶ್ವರೀ,
ಯತ್ಪೂಜಿತಂ ಮಯಾ ದೇವೀ ಪರಿಪೂರ್ಣಂ ತದಸ್ತುಮೇ.
ಅನೇನ ಮಯಾ ಕೃತೇನ ಮಂಗಳ ಗೌರೀ ವ್ರತಾಂಗ ಪೂಜನೇನ ಭಗವತೀ ಜಗದಂಬಾರ್ಪಣಮಸ್ತು,
ಮಧ್ಯೇ ಮಂತ್ರ, ತಂತ್ರ, ಸ್ವರ, ವರ್ಣ, ಲೋಪದೋಷ ಪ್ರಾಯಶ್ಚಿತ್ತಾರ್ಥಂ
ನಾಮತ್ರಯ ಮಂತ್ರಂ ಜಪಂ ಕರಿಷ್ಯೇ,
ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯನಮಃ,
ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯನಮಃ,
ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯನಮಃ,
ಅಚ್ಯುತಾನಂದಗೊವಿಂದೇಭ್ಯೋನಮಃ.
ಸೌಮಾನ್ಗಲ್ಯಂ, ಸುಖಂ, ವಿದ್ಯಾ ಬುದ್ಧಿ ಧನೇಷ್ವೈರ್ಯ ಪುತ್ರ ಪೌತ್ರಾದಿ ಸಂಪದಂ,
ಪುಷ್ಪಾಂಜಲಿ ಪ್ರದಾನೇನ ದೇಹಿಮೇ ಈಪ್ಸಿತಂ ವರಂ.
ಶ್ರೀ ಮಂಗಳ ಗೌರ್ಯೈ ನಮಃ, ಮಂತ್ರ ಪುಷ್ಪಂ ಸಮರ್ಪಯಾಮಿ. (ಹೂವನ್ನು ದೇವರಿಗೆ ಸಮರ್ಪಿಸಿ)
ತೀರ್ಥ ಪ್ರಾಶನ (ಮೊದಲು ಬೆಳ್ಳಿ ವಿಗ್ರಹಗಳಿಗೆ ಅರ್ಪಿಸಿದ ಪಂಚಾಮೃತ , ನಂತರ ಶುದ್ಧೋದಕ ಹಾಗೂ ಎಳನೀರು ಸ್ನಾನದ ತೀರ್ಥಗಳನ್ನು ಬಲಗೈಯಲ್ಲಿ ತೆಗೆದು ಕೊಂಡು ಸ್ವೀಕರಿಸುವುದು)
ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಂ, ಸರ್ವ ಪಾಪೋಪಶಮನಂ
ಶ್ರೀ ಮಂಗಳ ಗೌರಿ ಪಾದೋದಕಂ ಪಾವನಂ ಶುಭಂ.
ಆರತಿ (ಒಂದು ತಟ್ಟೆಯಲ್ಲಿ ಅರಿಶಿನ ಬೆರೆಸಿದ ನೀರನ್ನು ಹಾಕಿ ಅದರಲ್ಲಿ ಎರಡು ಪುಟ್ಟ ದೀಪದ ಸೊಡಲುಗಳನ್ನು ಹತ್ತಿಸಿಟ್ಟು ಆರತಿಯನ್ನು ಮಾಡುವುದು. ಆರತಿಯ ಯಾವುದೇ ಹಾಡನ್ನು ಹಾಡಿ. ( ಉದಾಹರಣೆಗೆ : ಮಂಗಳಾರತಿ ತಂದು ಬೆಳಗಿರೆ .........)
ತಂಬಿಟ್ಟು ಕದಲಾರತಿ, ಹದಿನಾರು ಸೊಡಲಿನ ದೀಪವನ್ನೂ ಬೆಳಗಿಸಿ ಆರತಿ ಮಾಡಿ. ಇವೆಲ್ಲಾ ಮನೆತನದ
ಪದ್ಧತಿ ಅಥವಾ ಅನುಕೂಲಕ್ಕೆ ತಕ್ಕಂತೆ.
ವಿಸರ್ಜನ ಪೂಜೆ (ದೇವರನ್ನು ವಿಸರ್ಜಿಸುವಾಗ ಮಂತ್ರಗಳನ್ನು ಹೇಳಿ ಕಳಶ ಮತ್ತು ವಿಗ್ರಹವನ್ನು ಸ್ವಲ್ಪ ಅಲುಗಾಡಿಸಿ ಒಂದು ಹೂವನ್ನು ಪ್ರಸಾದವೆಂದು ತೆಗೆದುಕೊಳ್ಳುವುದು)
ವಿಶೇಷ ಸೂಚನೆ (ನೀವು ಮಂಟಪದ ಮೇಲಿಟ್ಟಿರುವ ವಿಗ್ರಹ, ಕಳಶ ಮುಂತಾದವುಗಳಿಗೆ ಹಾಕಿರುವ ಬಂಗಾರದ ಮತ್ತು ಇನ್ನಿತರ ಬೆಲೆ ಬಾಳುವ ಪದಾರ್ಥಗಳನ್ನು ಮರೆಯದೆ ತೆಗೆದಿಟ್ಟುಕೊಳ್ಳುವುದು) (ತೆಂಗಿನಕಾಯಿಯನ್ನು ಅಡಿಗೆಗೆ ಉಪಯೋಗಿಸುವುದು)
ಆರಾಧಿತಾನಾಂ ದೇವಾನಾಂ ಪುನರಾರಾಧನಂ ಕರಿಶ್ಯೇ,
ನಾನಾ ವಿಧ ಪರಿಮಳ ಪುಷ್ಪ ಪೂಜಾಂ ಕರಿಷ್ಯೇ,
ಪುನಃ ಪೂಜಾಂ ಕರಿಶ್ಯೇ,
ಛತ್ರಂ ದರ್ಶಯಾಮಿ, ಧೂಪಮ್ ,ದೀಪಂ ದರ್ಶಯಾಮಿ,
ಫಲ ನೈವೇದ್ಯಂ ಸಮರ್ಪಯಾಮಿ.
ಯಾಂತು ದೇವ ಗಣಾ ಸರ್ವೇ, ಪೂಜಾಮಾದಾಯ ಪಾರ್ಥೀವೀಂ,
ಇಷ್ಟ ಕಾಮಾರ್ಥೆ ಸಿದ್ಯರ್ಥಂ, ಸ್ವರ್ಣ ಗೌರ್ಯೈ ನಮಃ, ಪುನರಾಗಮನಾಯ ಚ.
ಉಪಾಯನ ದಾನ (ಒಂದು ತಟ್ಟೆಯಲ್ಲಿ ಸ್ವಲ್ಪ ಒಳ್ಳೆಯ ಅಕ್ಕಿ, ವೀಳ್ಯೆದೆಲೆ, ಅಡಕೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ದಕ್ಷಿಣೆ ಇಟ್ಟು ಅದರ ಮೇಲೆ ತೆಂಗಿನಕಾಯಿ ಇಡುವುದು. ಇದರ ಮೇಲೆ ಒಂದು ಎಲೆ ಅಥವಾ ತಟ್ಟೆಯನ್ನು ಮುಚ್ಚಿ .ಬ್ರಾಹ್ಮಣರಿಗೆ ಕೊಡುವಾಗ ಮುಚ್ಚಿದ ತಟ್ಟೆ ಅಥವಾ ಎಲೆಯನ್ನು ತೆಗೆದು ತೋರಿಸುವುದು, ಅವರಿಗೆ ನಮಸ್ಕರಿಸಿ ದಾನ ಮಾಡುವುದು) (ಒಂದು ವೇಳೆ ಬ್ರಾಹ್ಮಣರು ಇಲ್ಲದಿದ್ದರೆ, ಮನೆಯಲ್ಲಿ ಹಿರಿಯರಿಗೆ ಅಥವಾ ಹತ್ತಿರದ ದೇವಸ್ಥಾನದಲ್ಲಿ ಕೊಡಬಹುದು)
ಶ್ರೀ ಮಂಗಳ ಗೌರಿ ವ್ರತ ಕಥೆ.
ಒಂದಾನೊಂದು ಕಾಲದಲ್ಲಿ ಒಂದು ಪ್ರದೇಶದಲ್ಲಿ ಒಬ್ಬ ರಾಜ ಮತ್ತು
ರಾಣಿಯರು ವಾಸಿಸುತ್ತಿದ್ದರು. ಅವರು ಮಹಾದೇವ ಶಿವನ ಮಹಾ ಭಕ್ತರಾಗಿದ್ದರು. ಅವರು ಶಿವನ ಅನುಗ್ರಹದಿಂದ
ಅತ್ಯಂತ ಸವಿನಯ ಹಾಗೂ ನ್ಯಾಯಯುತವಾಗಿ ಪ್ರಜೆಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಏಕೋ ಅವರ ನತದ್ರುಷ್ಥಕ್ಕೆ
ಅವರಿಗೆ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಇದರಿಂದ ಅವರು ಬಹಳ ವ್ಯಾಕುಲತೆಯಿಂದ ಜೀವಿಸುತ್ತಿದ್ದರು.
ಹಿಂದೆ ಅನೇಕ ಗುರುಕುಲಗಳಲ್ಲಿ ಶಿಷ್ಯರು ಮನೆ ಮನೆಗೆ ಹೋಗಿ ಭಿಕ್ಷೆಯನ್ನು
ಬೇಡಿ ತರುತ್ತಿದ್ದರು. ಇದೇ ರೀತಿಯಾಗಿ ಒಮ್ಮೆ ಒಬ್ಬ ಬಾಲಕನು ಭಿಕ್ಷೆಯನ್ನು ಬೇಡುತ್ತಾ ರಾಜನ ಅರಮನೆಗೆ ಬಂದನು. ವಾಡಿಕೆಯಂತೆ ಮಹಾರಾಣಿಯು
ತಾನೂ ಆ ಬಾಲಕನಿಗೆ ಭಿಕ್ಷೆ ನೀಡಲು ಮುಂದಾದಳು. ಆದರೆ ಆಶ್ಚರ್ಯವೆಂಬಂತೆ ಆ ಬಾಲಕ ಭಿಕ್ಷೆಯನ್ನು ನಿರಾಕರಿಸಿ
ಹೊರಟು ಬಿಟ್ಟನು. ಒಂದೆರಡು ದಿನ ಇದೇ ರೀತಿ ಆ ಬಾಲಕ ಭಿಕ್ಷೆಯನ್ನು ನಿರಾಕರಿಸಲು ರಾಣಿಗೆ ಬಹಳ ದುಃಖವಾಯಿತು.
ಆಕೆ ಈ ವಿಷಯವನ್ನು ರಾಜನಿಗೆ ತಿಳಿಸಿದಳು.
ಮಾರನೆಯ ದಿನ ರಾಣಿಯೊಂದಿಗೆ ಸ್ವತಃ
ರಾಜನೂ ಆ ಬಾಲಕನಿಗೆ ಭಿಕ್ಷೆ ನೀಡಲು ನಿಂತನು. ಆಗಲೂ ಆ ಬಾಲಕ ಸ್ವೀಕರಿಸದೇ ಇದ್ದದ್ದನ್ನು ಕಂಡು ರಾಜನು
ಆ ಬಾಲಕನಿಂದ ಕಾರಣವನ್ನು ಕೇಳಿದನು. ಅದಕ್ಕೆ ಉತ್ತರವಾಗಿ ಆ ಬಾಲಕ ರಾಜಾ ರಾಣಿಯರಿಗೆ ಮಕ್ಕಳಿಲ್ಲದಿರುವುದರಿಂದ
ತಾನು ಭಿಕ್ಷೆಯನ್ನು ಸ್ವೀಕರಿಸಿದರೆ ತನಗೆ ಅದೃಷ್ಥ ವಂಚನೆ ಆಗುತ್ತದೆಂದು ಅರುಹಿದ. ಇದರಿಂದ ಕುಪಿತಗೊಂಡ
ರಾಜನು, “ಎಲೈ ಬಾಲಕನೇ ಮಕ್ಕಳಿಲ್ಲದವರಿಂದ ಭಿಕ್ಷೆ ಸ್ವೀಕರಿಸಿದರೆ ಕೆಡಕಾಗುವುದೆಂದು
ನಿರ್ಣಯಿಸಲು ನೀನು ಯಾರು? ಇದನ್ನು ಕೇವಲ ಸದಾಶಿವನು ಮಾತ್ರ ನಿರ್ಣಯಿಸ ಬಲ್ಲನು ಎನ್ನುತ್ತಾ” ಬಾಲಕನನ್ನು
ಗದರಿಸಿ ಕಳುಹಿಸಿದನು.
ಆದರೂ ಕೆಲ ಸಮಯದ ನಂತರ ರಾಜನ ಕೋಪ
ಶಮನವಾಗುತ್ತಿದ್ದಂತೆ ನಿಧಾನವಾಗಿ ಯೋಚಿಸಿ, ತನ್ನ ತಪ್ಪಿನ ಅರಿವಾಗಿ, ಮಕ್ಕಳಿಲ್ಲದ ವಿಷಯ ಬಾಲಕನಿಗೆ
ಗೊತ್ತಿದ್ದರೂ, ಆತ ಏಕೆ ಅರಮನೆಗೆ ನಿತ್ಯ ಭಿಕ್ಷೆ ಬೇಡಲು ಬರುತ್ತಿದ್ದ ಎಂದು ಅನುಮಾನಗೊಂಡು, ಆತ
ಸ್ವತಃ ಸದಾಶಿವನೆ ತನ್ನನ್ನು ಪರೀಕ್ಷಿಸಲು ಬಾಲಕನ
ವೇಷದಲ್ಲಿ ಬಂದಿರಬಹುದು ಎಂದು ಗ್ರಹಿಸಿ, ಆ ಬಾಲಕನ ಬಳಿ ಹೋಗಿ ತಾನು ಮಾಡಿದ ತಪ್ಪನ್ನು ಮನ್ನಿಸಬೇಕೆಂದು
ಪ್ರಾರ್ಥಿಸಿದನು. ಆ ಬಾಲಕನನ್ನು ಮತ್ತೆ ಮರುದಿನ ತನ್ನ ಅರಮನೆಗೆ ಭಿಕ್ಷೆಗೆ ಬರುವಂತೆ ಬಿನ್ನವಿಸಿ,
ಆತ ಬಂದಾಗ ತಮ್ಮ ಬದಲು ಸಂತಾನ ಹೊಂದಿರುವ ತಮ್ಮ ಮಂತ್ರಿ ದಂಪತಿಗಳ ಹಸ್ತಗಳಿಂದ ಅಪಾರವಾದ ಭಿಕ್ಷೆಯನ್ನು
ದಯಪಾಲಿಸದನು. ಮುಂದುವರೆದಂತೆ ರಾಣೀ ಸಮೇತವಾಗಿ ಆ ಬಾಲಕನ ಪಾದಗಳಿಗೆ ನಮಸ್ಕರಿಸಿ, “ ಎಲೈ ಬಾಲಕನೇ,
ನೀನು ಖಂಡಿತಾ ವೇಷ ಮರೆಮಾಚಿ ಬಂದಿರುವ ಸದಾಶಿವನೇ, ಎಳ್ಳಷ್ಟು ಸಂಶಯವಿಲ್ಲ. ನಮ್ಮ ಅರಮನೆಗೆ ಬಂದ ನಿನ್ನನ್ನು
ಕಂಡು ನಮಗೆ ಅತೀವ ಆನಂದವಾಗಿದೆ. ಕ್ರುಪಾಳುವೆ ನಮಗೂ ಸಂತಾನ ಭಾಗ್ಯವನ್ನು ಕರುಣಿಸು” ಎಂದು ಬೇಡಿಕೊಂಡನು.
ಸದಾಶಿವನು ತನ್ನ ನೈಜ ರೂಪವನ್ನು
ತೋರುತ್ತಾ, ರಾಜನ ಪ್ರಾರ್ಥನೆಯನ್ನು ಮನ್ನಿಸುತ್ತಾ, “ಎಲೈ ರಾಜನೇ, ನಿನ್ನ ಬೇಡಿಕೆಯನ್ನು ಅನುಗ್ರಹಿಸುತ್ತೇನೆ.
ಆದರೆ, ನಿನಗೆ ಹುಟ್ಟುವ ಪುತ್ರನಿಗೆ ಕೇವಲ ಹದಿನಾರು ವರುಷಗಳ ವಯೋಭಾಗ್ಯ ಇರುತ್ತದೆ ಎನ್ನುತ್ತಾ ಪುತ್ರ
ಪ್ರಾಪ್ತಿರಸ್ತು” ಎಂದು ಆಶೀರ್ವದಿಸಿ ಅಂತರ್ದಾನನಾದನು.
ಕೆಲವು ದಿನಗಳ ನಂತರ ರಾಜನಿಗೆ ಪುತ್ರನು
ಜನಿಸಿದನು. ಅವನು ಸದಾಶಿವನ ಅನುಗ್ರಹದಿಂದ ಜನಿಸಿದವನಾದ್ದರಿಂದ ಚಂದ್ರಶೇಖರ ಎಂದು ನಾಮಕರಣ ಮಾಡಲಾಯಿತು.
ನೋಡು ನೋಡುತ್ತಲೇ ಚಂದ್ರಶೇಖರ ಬೆಳೆದು ಹದಿನೈದು ವರುಷದವನಾಗಿಬಿಟ್ಟನು. ಆಗ ರಾಜ ರಾಣಿಯರಿಗೆ ಸದಾಶಿವನ
ಮಾತು ಜ್ಞಾಪಕಕ್ಕೆ ಬಂದಿತು. ಅವರು ದೀರ್ಘವಾಗಿ ಆಲೋಚನೆ ಮಾಡಿ ಚಂದ್ರಶೇಖರನನ್ನು ಕಾಶಿ ಪಟ್ಟಣಕ್ಕೆ
ಕಳುಹಿಸಲು ನಿರ್ಧರಿಸಿದರು. ಕಾಶಿಯಲ್ಲಿ ನಿಧನರಾದವರಿಗೆ ಹುಟ್ಟು ಸಾವುಗಳ ಜೀವನ ಚಕ್ರದಿಂದ
ಮುಕ್ತಿ ದೊರೆತು ಮೋಕ್ಷ ಪ್ರಾಪ್ತಿಯಾಗುವುದೆಂದು ಪ್ರತೀತಿ ಇತ್ತು. ಈ ವಿಷಯವನ್ನು ತಿಳಿದ ಚಂದ್ರಶೇಖರನು,
ಸದಾಶಿವನ ಇಚ್ಛೆ ಎಂದು ಕಾಶಿ ಕ್ಷೇತ್ರಕ್ಕೆ ಪ್ರಯಾಣ
ಬೆಳೆಸಿದನು.
ಹೀಗೇ ಪ್ರಯಾಣಿಸುತ್ತಿರುವಾಗ ಆತನು
ಮಾರ್ಗದಲ್ಲಿ ಮತ್ತೊಂದು ರಾಜ ಸಂಸ್ಥಾನವನ್ನು ಪ್ರವೇಶಿಸಿದನು. ಅಲ್ಲಿ ಒಂದು ಕಡೆ ಕೆಲವು ಹೆಂಗೆಳಯರು
ಒಟ್ಟಿಗೆ ಕೂಡಿ ಬಹಳ ಶ್ರದ್ಧಾ ಭಕ್ತಿಯಿಂದ ಶ್ರೀ ಮಂಗಳ ಗೌರಿಯ ಪೂಜೆಯನ್ನು ಬಹು ವಿಜ್ರಂಭಣೆಯಿಂದ
ಆಚರಿಸುತ್ತಿದ್ದುದನ್ನು ನೋಡಿದನು. ಆ ಗುಂಪಿನಲ್ಲಿ ಆ ರಾಜ್ಯದ ರಾಜಕುಮಾರಿಯೂ ಇರುವುದು ಗಮನಕ್ಕೆ ಬಂದಿತು.
ಸನಿಹ ಹೋಗಿ ನಿಂತಾಗ, ಆ ರಾಜಕುಮಾರಿ ಎಲ್ಲರಿಗೂ ಹೆಮ್ಮೆಯಿಂದ, “ಈ ಮಂಗಳಗೌರಿ ಪೂಜೆಯನ್ನು ನಾನು ಸಂಪೂರ್ಣ
ದೈನ್ಯತೆಯಿಂದ ಮಾಡಿದ್ದೇನೆ. ಆದ್ದರಿಂದ ನಾನು ಯಾರನ್ನು ವರಿಸಿ ಮದುವೆಯಾಗುತ್ತೇನೋ ಆತನು ದೀರ್ಘ ಆಯಸ್ಸು
ಹೊಂದಿರುತ್ತಾನೆ ಮತ್ತು ತಾನು ದೀರ್ಘ ಸುಮಂಗಲೆಯಾಗುತ್ತೇನೆ” ಎಂದು ಕುಣಿಯುತ್ತಾ ಹೇಳುತ್ತಿದ್ದದ್ದು
ಕೇಳಿಸಿತು.
ಚಂದ್ರಶೇಖರ ಮತ್ತೆ ತನ್ನ ಪ್ರಯಾಣವನ್ನು
ಮುಂದುವರೆಸುತ್ತಾ ಮತ್ತೊಂದು ರಾಜ್ಯವನ್ನು ಪ್ರವೇಶಿಸಿದನು. ಅಲ್ಲಿ ಅವನು ಆ ರಾಜ್ಯದ ರಾಜಕುಮಾರನನ್ನು
ಭೇಟಿಯಾದನು. ಆ ರಾಜಕುಮಾರನ ಮದುವೆ ನಿಶ್ಚಿತವಾಗಿತ್ತು. ಮದುವೆಗೆ ಹೊರಡುವ ತಯಾರಿ ನಡೆದಿತ್ತು.
ಆದರೆ ಆ ರಾಜಕುಮಾರನಿಗೆ ಅಂದೇ ಆರೋಗ್ಯದಲ್ಲಿ ಏರುಪೇರು ಆಗಿ ಮದುವೆಗೆ ಹೊರಡುವುದು ಅನುಮಾನವಾಗಿತ್ತು.
ಆತ ನೂತನವಾಗಿ ಆಗಮಿಸಿದ್ದ ರಾಜಕುಮಾರ ಚಂದ್ರಶೇಕರನನ್ನು ವಿನಂತಿಸಿ, ಇಂದು ನನ್ನ ಬದಲಾಗಿ ನೀನು ಮದುವೆ
ಕಾರ್ಯಕ್ರಮಕ್ಕೆ ಪ್ರಯಾಣಿಸು, ನಾನು ಮುಂದಿನ ದಿನ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದನು.
ತತ್ಕ್ಷಣ ಒಪ್ಪದ ಚಂದ್ರಶೇಖರನು ಬಲಾತ್ಕಾರವಾಗಿ ಒಪ್ಪಿಕೊಳ್ಳಬೇಕಾಯಿತು. ಎಲ್ಲವೂ ಆ ಸದಾಶಿವನ ಆಟ ಎಂದುಕೊಂಡು
ಮದುವೆಯ ದಿಬ್ಬಣದೊಂದಿಗೆ ವರನ ಉಡುಗೆಯಲ್ಲಿ ಹೊರಟನು.
ಆಶ್ಚರ್ಯವೆಂಬಂತೆ ಅವರು ಪ್ರವೇಶಿಸಿದ್ದು
ತಾನು ಹಿಂದೆ ಹಾದುಹೋಗಿದ್ದ ರಾಜ್ಯವೇ ಅದಾಗಿತ್ತು ಮತ್ತು ತಾನು ಮಂಗಳಗೌರಿ ಪೂಜೆ ಮಾಡಿ ಕುಣಿದಾಡುತ್ತಿದ್ದ
ರಾಜಕುಮಾರಿಯೇ ವಧುವಾಗಿದ್ದಳು. ಅಂದಿನ ವಿಧಿಗಳೆಲ್ಲಾ ಮುಗಿದ ಮೇಲೆ, ಚಂದ್ರಶೇಖರನು ಆ ರಾಜಕುಮಾರಿಗೆ
ಎಲ್ಲಾ ವೃತ್ತಾಂತವನ್ನು ಅರುಹಿ, ತಾನು ಕೆಲವೇ ದಿನ ಬಾಳುವುದಾಗಿಯೂ ಮತ್ತು ಮದುವೆ ಮುಗಿದ ನಂತರ ಕಾಶಿಗೆ
ಪ್ರಯಾಣ ಮುಂದುವರೆಸುವುದಾಗಿ ತಿಳಿಸಿದನು. ಜೊತೆಗೆ, ನಾಳೆಯೇ ರಾಜಕುಮಾರಿಯನ್ನು ಮದುವೆ ಆಗುವ ರಾಜಕುವರನು
ಬರುತ್ತಿರುವುದಾಗಿಯೂ ತಿಳಿಸಿದನು.
ಅಂದು ರಾತ್ರಿ ರಾಜಕುಮಾರನು ಮಲಗಿರುವಾಗ
ಅವನ ಪಕ್ಕದಲ್ಲಿ ಘೋರ ಸರ್ಪವೊಂದು ಹರಿದಾಡುತ್ತಿರುವುದನ್ನು ರಾಜಭಟರು ರಾಜಕುಮಾರಿಯ ಗಮನಕ್ಕೆ ತಂದರು.
ತಕ್ಷಣ ಎಚ್ಚೆತ್ತ ರಾಜಕುಮಾರಿ ಓಡಿ ಬಂದು ತಾನೇ ಸ್ವತಃ ಧೈರ್ಯದಿಂದ ಆ ಹಾವನ್ನು ಹಿಡಿದು ದೂರ ಬಿಟ್ಟು
ಅದಕ್ಕೆ ತಾನು ಮಂಗಳ ಗೌರಿಯನ್ನು ಪೂಜಿಸಿ ತೆಗೆದಿಟ್ಟಿದ್ದ ಬೇಳೆ ಕಾಲುಗಳನ್ನು ಆ ಹಾವಿಗೆ ಉಣಿಸಿದಳು.
ಅದನ್ನು ತಿಂದ ನಂತರ ಆ ಹಾವು ತನ್ನ ಪ್ರಾಣವನ್ನು ಆಶ್ಚರ್ಯ ಎಂಬಂತೆ ತ್ಯಜಿಸಿತು. ಈ ರೀತಿಯಾಗಿ ಚಂದ್ರಶೇಖರನ ಪ್ರಾಣವೂ ಉಳಿಯಿತು. ಈ ಘಟನೆ ಸುದ್ದಿಯಾಗಬಾರದೆಂದು
ರಾಜಕುಮಾರಿ ಆ ಹಾವನ್ನು ತಾನು ಪೂಜೆಗೆ ಉಪಯೋಗಿಸಿದ್ದ ಕಳಶದ ಪಾತ್ರೆಯಲ್ಲಿ ಮುಚ್ಚಿಟ್ಟಳು.
ಮರುದಿನ ನಿಜವಾದ ವರನಾಗಿದ್ದ ರಾಜಕುಮಾರನು
ಬಂದಿದ್ದರಿಂದ ಆತನ ಕೈಗೆ ತನ್ನ ಕೈಯಲ್ಲಿ ಧರಿಸಿದ್ದ ರಾಜಕುಮಾರಿ ತೊಡಿಸಿದ್ದ ರಾಜಮುದ್ರೆ ಇರುವ ಉಂಗುರವನ್ನು
ತೊಡಿಸಿ, ಚಂದ್ರಶೇಖರನು ತನ್ನ ತಂದೆ ತಾಯಿಯ ಬಯಕೆಯಂತೆ ಕಾಶಿಯ ಪ್ರಯಾಣವನ್ನು ಮುಂದುವರೆಸಿದನು.
ಇತ್ತ ಮದುವೆಯ ಕಾರ್ಯಕ್ರಮ ಮುಂದುವರೆಯಲು,
, ಮಂಟಪಕ್ಕೆ ಬರುತ್ತಿರುವುದು ಮೊದಲೇ ನಿಶ್ಚಯವಾಗಿದ್ದ ರಾಜಕುಮಾರನೆಂದು ಅರಿತ ರಾಜಕುಮಾರಿಯು, ಆತನನ್ನು
ಮದುವೆಯಾಗಲು ನಿರಾಕರಿಸಿ, ತಾನು ಹಿಂದಿನ ದಿನ ಉಂಗುರ ತೊಡಿಸಿದ್ದ ಚಂದ್ರಶೇಖರನನ್ನೇ
ಮದುವೆಯಾಗುವುದಾಗಿ ತಿಳಿಸಿ ಮದುವೆ ಮಂಟಪದಿಂದ ಎದ್ದು ಬಿಟ್ಟಳು. ಆಕೆಯ ಇಚ್ಛೆಯೇ ಪರಮೇಚ್ಚೆ ಎಂದು
ಆ ರಾಜ್ಯದ ರಾಜರು ತಮ್ಮ ಸಮ್ಮತಿಯನ್ನು ವ್ಯಕ್ತ ಪಡಿಸಿದರು.
ಇದಾಗಿ ಒಂದು ವರುಷವೇ ಕಳೆದು ಹೋಯಿತು.
ಕಾಶಿಯಲ್ಲಿ ವಾಶಿಸಿ ಶಿವನ ಸೇವೆಯಲ್ಲಿ ತೊಡಗಿದ್ದ ಚಂದ್ರಶೇಖರನಿಗೆ ಆಶ್ಚರ್ಯವಾಯಿತು. ತಾನು ಹದಿನಾರು
ವಯಸ್ಸು ಮೀರಿದರೂ ಮೃತ್ಯು ತನ್ನ ಬಳಿ ಬಂದಿರಲಿಲ್ಲ. ಆತನಿಗೆ ನಡೆದ ಘಟನೆಗಳೆಲ್ಲಾ ಮರುಕಳಿಸಿತು.
ಅಂದು ಆ ರಾಜಕುಮಾರಿ ಕುಣಿಯುತ್ತಾ ಮಂಗಳ ಗೌರಿ ವ್ರತವನ್ನು ತಾನು ಮಾಡಿರುವುದರಿಂದ ತನ್ನನ್ನು ವರಿಸುವವನು
ದೀರ್ಘ ಆಯಸ್ಸು ಹೊಂದಿರುತ್ತಾನೆ ಎಂದು ಹೆಮ್ಮೆಯಿಂದ ಬೀಗಿದ್ದಳು. ಮುಂದೆ ತಾನು ಕಾಕತಾಳೀಯ ಅನ್ನುವಂತೆ
ಆಕೆಯ ಕೈಯಲ್ಲಿ ಮದುವೆಯ ಉಂಗುರವನ್ನು ಧಾರಣೆ ಮಾಡಿಸಿಕೊಂಡಿದ್ದೆ. ಬಹುಷಃ ಆಕೆಯ ಪೂಜಾ ನಿಷ್ಥೆಯೇ ಇಂದು
ತಾನು ಬದುಕಿರಲು ಬಲವಾದ ಕಾರಣ ಇರಬಹುದು. ಎಲ್ಲವೂ ಆ ಪಾರ್ವತೀ ಪರಮೇಶ್ವರರ ಆಶೀರ್ವಾದ ಎಂದು ಭಾವಿಸಿ,
ಕಾಶಿಯನ್ನು ತ್ಯಜಿಸಿ ಮತ್ತೆ ತನ್ನ ರಾಜ್ಯದ ಕಡೆ ಪ್ರಯಾಣ ಬೆಳೆಸಿದನು.
ಮರುಪ್ರಯಾಣದ ಸಮಯದಲ್ಲಿ ಆತ ಮತ್ತೆ
ಆ ರಾಜಕುವರಿಯ ರಾಜ್ಯವನ್ನು ಪ್ರವೇಶಿಸಿದನು. ಕುತೂಹಲದಿಂದ ವಿಚಾರಿಸಲಾಗಿ, ಆಕೆ ಅಂದು ಮದುವೆಯಾಗದೇ
ಚಂದ್ರಶೇಖರನೆ ತನ್ನ ಪತಿಯೆಂದು ಬಹಿರಂಗ ಪಡಿಸಿದ ವಿಷಯ ತಿಳಿಯಿತು. ಮತ್ತು ಅಂದಿನಿಂದ ಆಕೆ ನಿತ್ಯವೂ
ರಾಜಭವನದ ಮುಂದೆ ಹಾದು ಹೋದವರಿಗೆಲ್ಲಾ ಆಹಾರವನ್ನು ನೀಡುತ್ತಿದ್ದಾಳೆ ಅನ್ನುವ ಮಾತೂ ಕೇಳಿಬಂತು.
ಆತನಿಗೆ ಆಕೆಯ ದರ್ಶನ ಪಡೆಯಲು ಇದೊಳ್ಳೆ ಸದವಕಾಶ ಎಂದು ಅನಿಸಿ, ಮರುದಿನ ತಾನೂ ಆಹಾರ ಸ್ವೀಕರಿಸಲು
ರಾಜಭವನದ ಮುಂದೆ ನಿಂತನು. ದಿನನಿತ್ಯದಂತೆ ರಾಜಕುಮಾರಿಯು ಆಹಾರ ವಿತರಣೆ ಮಾಡುತ್ತಿದ್ದಳು. ಹೀಗೆ ಮಾಡಲು
ಆಕೆಗೆ ಒಂದು ಬಲವಾದ ನಂಬಿಕೆಯಿತ್ತು. ತಾನು ಮಂಗಳ ಗೌರಿ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿರುವುದರಿಂದ
ಮತ್ತು ಚಂದ್ರಶೇಖರನನ್ನು ಮನಸಾ ತನ್ನ ಪತಿಯೆಂದು ಭಾವಿಸಿರುವುದರಿಂದ, ಆತ ಜೀವಂತವಿರುತ್ತಾನೆ ಮತ್ತು
ಒಂದಲ್ಲಾ ಒಂದು ದಿನ ತನ್ನನ್ನು ನೋಡಲು ಬಂದೇ ಬರುತ್ತಾನೆ ಎಂಬುದು. ಸ್ವಲ್ಪ ಸಮಯದ ನಂತರ ಚಂದ್ರಶೇಖರನ
ಸರದಿ ಬಂತು. ತಲೆ ಬಾಗಿಸಿದ್ದ ಆತ ಆಹಾರ ಸಿಕ್ಕ ತಕ್ಷಣ ಕೊಂಚ ತಲೆ ಎತ್ತಿ ಆಕೆಯನ್ನು ನೋಡಲು, ಸೂಕ್ಷ್ಮಗ್ರಾಹಿಯಾದ
ಆಕೆ ಕೂಡಲೇ ಆತನನ್ನು ಗುರುತಿಸಿ ತನ್ನ ಅರಮನೆಗೆ ಸಂಭ್ರಮದಿಂದ ಕರೆದು ಕೊಂಡು ಹೋದಳು. ಆತನಿಗೆ ತನಗೆ
ಆತ ಅಂದು ಕೊಟ್ಟಿದ್ದ ಉಂಗುರವನ್ನು ತನ್ನ ಬೆರಳಲ್ಲಿ ಧರಿಸಿರುವುದನ್ನು ತೋರಿಸಿ, ತನ್ನ ಅಗಾಧವಾದ ನಂಬಿಕೆಯು
ಇಂದು ಫಲ ಕೊಟ್ಟಿದೆ ಎಂದು ತಂದೆ ತಾಯಿಗಳಿಗೆ ತಿಳಿಸಿ, ಅರಮನೆಯಲ್ಲಿ ಮತ್ತೊಂದು ಸಮ್ಮಿಲನದ ಸಮಾರಂಭವನ್ನು
ಏರ್ಪಡಿಸಿ ಆತನ ರಾಜ್ಯಕ್ಕೆ ಪ್ರಯಾಣ ಬೆಳೆಸಿ ದೀರ್ಘ ಸುಮಂಗಲೆಯಾಗಿ ಆನಂದದಿಂದ ಪಟ್ಟವನ್ನೇರಿ ಮಹಾರಾಣಿಯಾಗಿ
ಕೀರ್ತಿಯನ್ನು ಗಳಿಸಿದಳು.
ಇದೇ ರೀತಿಯಾಗಿ ಯಾರು ಕುವರಿಯರು
ಮತ್ತು ನೂತನ ವಧುವು ಮದುವೆಯಾದ ಮೊದಲ ಐದು ವರುಷಗಳ
ವರೆಗೆ ಶ್ರದ್ಧಾ ಭಕ್ತಿ ಸಮನ್ವಿತರಾಗಿ ಶ್ರಾವಣ ಮಾಸದ ಪ್ರತಿ ಮಂಗಳವಾರ ಶ್ರೀ ಮಂಗಳ ಗೌರಿ ವ್ರತ/ಪೂಜೆಯನ್ನು
ನೆರವೇರಿಸಿ, ಮುತ್ತೈದೆಯರನ್ನು ಕರೆದು ತನ್ನ ಶಕ್ತ್ಯಾನುಸಾರ ಅವರಿಗೆ ಆದರಿಸುತ್ತಾರೋ ಅವರಿಗೆ ಮಾಂಗಲ್ಯ
ಭಾಗ್ಯ, ದೀರ್ಘ ಸೌಮಾನ್ಗಲ್ಯ ಭಾಗ್ಯ, ಕೀರ್ತಿ ದೊರೆಯುವುದರಲ್ಲಿ ಸಂಶಯವಿಲ್ಲ ಎಂದು ಮೊದಲಿನಿಂದಲೂ
ಅನುಭವದ ಮಾತಾಗಿದ್ದು ಅನೂಚಾನವಾಗಿ ನಡೆದು ಕೊಂಡು ಬಂದಿದೆ.
ಇಲ್ಲಿಗೆ ಈ ಮಂಗಳ ಗೌರಿ ಕಥೆಯು ಮುಗಿಯಿತು.
ಮಂಗಳ ಗೌರಿಗೆ ಆರತಿಯನ್ನು ಮಾಡಿ, ನೈವೇದ್ಯವನ್ನು ಅರ್ಪಿಸಿ ಆಕೆಯನ್ನು ನಗು ಮುಖದಿಂದ ಬೀಳ್ಕೊಡಲು
ವಿಸರ್ಜನೆಯನ್ನು ಮಾಡುವುದು.
ಈ ಕಥೆಯನ್ನು ಸ್ವತಃ ಪಠಣ ಮಾಡುವುದು
ಉತ್ತಮ. ಮತ್ತೊಬ್ಬರ ಬಾಯಿಂದ ಅಥವಾ ಬೇರಾವುದೇ ಮಾಧ್ಯಮದಿಂದ ಶ್ರವಣ ಮಾಡುವುದು ಮಧ್ಯಮ.
ಆಕೆಯ ಅನುಗ್ರಹ ತಮ್ಮ ಮೇಲೆಲ್ಲಾ ಇರಲಿ ಎಂದು ಹಾರೈಸುತ್ತಾ, ಈ ಶ್ರೀ ಮಂಗಳ ಗೌರಿ ಪೂಜಾ ವಿಧಾನಕ್ಕೆ ನಾಂದಿ ಹೇಳುತ್ತಿದ್ದೇವೆ.
ಈ ಸಂಗ್ರಹಕ್ಕೆ ಅನೇಕ ಮೂಲಗಳಿಂದ
ಮಾಹಿತಿ ಪಡೆಯಲಾಗಿದೆ. ಎಲ್ಲರಿಗೂ ಕೃತಜ್ಞತೆಗಳು.