Dear visitors, Namaste. This is my maiden blog and hence I would like to begin saluting the GURU THE BRAHMA and then follow it up with my composition on VEDAS. My blogs in future will be in both English and kannada languages.
ಗುರು ವಂದನೆ SALUTE TO THE GURU
"ಗುರು ಬ್ರಹ್ಮ, ಗುರು ವಿಷ್ಣುಃ , ಗುರುದೇವೋ ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ ."
Veda ವೇದ
ವೇದಾಷ್ಟಕಂ ಬ್ರಹ್ಮ ಮುರಾರಿ ಶಿವಾರ್ಪಿತ ವೇದಂ ಜನನಿಯ ಜಿಹ್ವೆಯ ಲೀಲೆಯೆ ವೇದಂ ಜನ್ಮಜ ಸೂತ್ರ
ನಿರೂಪಕ ವೇದಂ ತತ್ ಪ್ರಣಮಾಮಿ ಸದಾಪ್ರಿಯ
ವೇದಂ. 1
ಅಂಗಂ ವೇದಂ ಆತ್ಮಂ
ವೇದಂ ಪ್ರಖರಂ ವೇದಂ ನಿಖರಂ
ವೇದಂ ರಂಗ ತರಂಗವ ನಿರ್ಮಿಪ
ವೇದಂ ತತ್ ಪ್ರಣಮಾಮಿ
ಫಲಪ್ರದ ವೇದಂ. 2 ಬ್ರಹ್ಮಜ್ಞಾನ
ಪ್ರದಕ್ಷಿಣ ವೇದಂ ಸಕಲ ಜ್ನಾನಿಗಳ ಸುಲಕ್ಷಣ
ವೇದಂ ವ್ಯಾಸ ಮುನಿ ಪರಿಪೋಷಿತ
ವೇದಂ ತತ್ ಪ್ರಣಮಾಮಿ ಸದಾಕ್ರಿಯ
ವೇದಂ. 3
ವಸುಧೆಯ ವಿಸ್ಮಯ
ಕಾರಣ ವೇದಂ ಪಂಚ ಭೂತಗಳ ತೋರಣ
ವೇದಂ ಕರ್ಮ ಧರ್ಮ ಪರಿಪೋಷಕ
ವೇದಂ ತತ್ ಪ್ರಣಮಾಮಿ
ಚತುರ್ವಿಧ ವೇದಂ. 4 ಜ್ಞಾನ ದಿಗಂತವ
ಮೀಟಿದ ವೇದಂ ಮಾನವ ಸ್ಮೃತಿಯ
ಚಾಟಿದ ವೇದಂ ಪ್ರಾಣಂ ವೇದಂ ತ್ರಾಣಂ
ವೇದಂ ತತ್ಪ್ರಣಮಾಮಿ ಸುಲೇಪಿತ
ವೇದಂ. 5 |
ಜ್ಞಾನಾಮೃತವನೆ
ಹರಿಸುವ ವೇದಂ ಪಂಚಾಮೃತವನೆ
ಸವಿಸುವ ವೇದಂ ಕರ್ಣಕುಂಡಲವನೆ
ತಣಿಸುವ ವೇದಂ ತತ್ ಪ್ರಣಮಾಮಿ ಸುಗಂಧಿತ
ವೇದಂ. 6 ಅಖಂಡ ವೇದಂ ಅನಂತ
ವೇದಂ ಪ್ರಚಂಡ ಪಂಡಿತ ವಂದಿತ
ವೇದಂ ಸಕಲ ಸನ್ಮಾರ್ಗ
ಸುರೂಪಿತ ವೇದಂ ತತ್ ಪ್ರಣಮಾಮಿ ಸುರಕ್ಷಿತ
ವೇದಂ. 7 ಗೋಪುರ ವೇದಂ ನೂಪುರ
ವೇದಂ ಸಕಲ ಶಾಸ್ತ್ರ ಸುಶೋಭಿತ
ವೇದಂ ಧರ್ಮೋ ರಕ್ಷತಿ
ರಕ್ಷಿತ ವೇದಂ. ತತ್ ಪ್ರಣಮಾಮಿ
ಸುಭಾಷಿತ ವೇದಂ. 8 ವೇದಾಷ್ಟಕಮಿದಂ ಯಃ
ಪಠೇ ಭವ ಸನ್ನಿಧೌ, ಯೋಗಕ್ಷೇಮಂ ವಹಾಮ್ಯಮಂ. ಶೃಣ್ವಾ ನಿತ್ಯಂ ಶ್ರದ್ಧಾಭಕ್ತಿ
ಸಮನ್ವಿತಂ, ಲಭತೇ ದಿವ್ಯ ಜ್ಞಾನಂ ಅನವರತಂ. ಇತೀ ಡಾ. ಪ್ರಭಾಕರ
ವಿರಚಿತ ವೇದಾಷ್ಟಕಮಿದಂ ಜಗದರ್ಪಣಂ.
ರಚನೆ: ಡಾ. ಪ್ರಭಾಕರ ಬೆಲವಾಡಿ, ಸಂ. 11, ಚಿರಂಜೀವಿ,
ಲಕ್ಕಣ್ಣ ಬಡಾವಣೆ, ಸುಬ್ರಹ್ಮಣ್ಯಪುರ ರಸ್ತೆ, ಉತ್ತರಹಳ್ಳಿ, ಬೆಂಗಳೂರು -56 00 61 . ಮೊಬೈಲ್ : 9448488910 ಮತ್ತು 6360354326
|